Tech Tips: ಇಂಟರ್ನೆಟ್ ಹೈ-ಸ್ಪೀಡ್ ಆಗಬೇಕಾದ್ರೆ ಮೊಬೈಲ್​ನಲ್ಲಿರುವ ಸಿಮ್ ಅನ್ನು ಜಸ್ಟ್ ಹೀಗೆ ಮಾಡಿ

ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ಕೇವಲ ಇಂಟರ್ನೆಟ್ ಸಮಸ್ಯೆ ಮಾತ್ರವಲ್ಲ ನೆಟ್​ವರ್ಕ್​ ತೊಂದರೆ ಅನುಭವಿಸುತ್ತಿದ್ದರೂ ಈ ಟ್ರಿಕ್ ಸಹಾಯ ಮಾಡಲಿದೆ. ಇದಕ್ಕೆ ನೀವು ನಿಮ್ಮ ಸ್ಮಾರ್ಟ್‌ಫೋನ್‌ನ ಸಿಮ್ ಕಾರ್ಡ್ ಬಳಕೆಯ ವಿಧಾನವನ್ನು ಬದಲಾಯಿಸಬೇಕಾಗುತ್ತದೆ. ಸ್ಮಾರ್ಟ್​ಫೋನ್ ಉಪಯೋಗಿಸುವ ಎಲ್ಲರಿಗೂ ಮೊದಲನೇ ಸಿಮ್ ಮತ್ತು ಎರಡನೇ ಸಿಮ್ ಎಂಬ ಒಂದು ಟ್ರೇ ಇರುವುದು ನೋಡಿರುತ್ತೀರಿ.

Tech Tips: ಇಂಟರ್ನೆಟ್ ಹೈ-ಸ್ಪೀಡ್ ಆಗಬೇಕಾದ್ರೆ ಮೊಬೈಲ್​ನಲ್ಲಿರುವ ಸಿಮ್ ಅನ್ನು ಜಸ್ಟ್ ಹೀಗೆ ಮಾಡಿ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 19, 2024 | 10:50 AM

ಇಂದಿನ ವೇಗದ ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಹೈಸ್ಪೀಡ್ ಇಂಟರ್ನೆಟ್ ಅಗತ್ಯವಿದೆ. ಆನ್‌ಲೈನ್ ವಿಡಿಯೋ ಸ್ಟ್ರೀಮಿಂಗ್‌ನಿಂದಾಗಿ, ಬಳಕೆದಾರರಲ್ಲಿ ಹೆಚ್ಚಿನ ವೇಗದ ಇಂಟರ್ನೆಟ್‌ಗೆ ಬೇಡಿಕೆ ವೇಗವಾಗಿ ಹೆಚ್ಚುತ್ತಿದೆ. ಇದಕ್ಕಾಗಿ, ಬಳಕೆದಾರರು ತಮ್ಮ ಮನೆಗಳಲ್ಲಿ ಫೈಬರ್ ಸಂಪರ್ಕಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಅದೇ ಸಮಯದಲ್ಲಿ, ನೀವು ನಿಮ್ಮ ಫೋನ್‌ನಲ್ಲಿಯೇ ಇಂಟರ್ನೆಟ್ ಅನ್ನು ಬಳಸಿದರೆ, ನೀವು ಹಲವಾರು ಬಾರಿ ನಿಧಾನಗತಿಯ ಇಂಟರ್ನೆಟ್ ವೇಗದ ತೊಂದರೆ ಎದುರಿಸಿರಬಹುದು. ಇಂದು ನಾವು ನಿಮಗೆ ಕೆಲವು ಉಪಯುಕ್ತ ತಂತ್ರಗಳ ಮೂಲಕ ನಿಮ್ಮ ಫೋನ್‌ನ ಇಂಟರ್ನೆಟ್ ವೇಗ ಹೆಚ್ಚಿಸುವುದು ಹೇಗೆ ಎಂಬುದನ್ನು ಹೇಳುತ್ತೇವೆ.

ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ಕೇವಲ ಇಂಟರ್ನೆಟ್ ಸಮಸ್ಯೆ ಮಾತ್ರವಲ್ಲ ನೆಟ್​ವರ್ಕ್​ ತೊಂದರೆ ಅನುಭವಿಸುತ್ತಿದ್ದರೂ ಈ ಟ್ರಿಕ್ ಸಹಾಯ ಮಾಡಲಿದೆ. ಇದಕ್ಕೆ ನೀವು ನಿಮ್ಮ ಸ್ಮಾರ್ಟ್‌ಫೋನ್‌ನ ಸಿಮ್ ಕಾರ್ಡ್ ಬಳಕೆಯ ವಿಧಾನವನ್ನು ಬದಲಾಯಿಸಬೇಕಾಗುತ್ತದೆ. ಸ್ಮಾರ್ಟ್​ಫೋನ್ ಉಪಯೋಗಿಸುವ ಎಲ್ಲರಿಗೂ ಮೊದಲನೇ ಸಿಮ್ ಮತ್ತು ಎರಡನೇ ಸಿಮ್ ಎಂಬ ಒಂದು ಟ್ರೇ ಇರುವುದು ನೋಡಿರುತ್ತೀರಿ. ಈಗ ನೀವು ಮೊದಲನೇ ಸಿಮ್ ಟ್ರೇ ನಲ್ಲಿ ಯಾವ ಸಿಮ್ ಕಾರ್ಡ್ ಇದೆ ಮತ್ತು ಎರಡನೇ ಟ್ರೇನಲ್ಲಿ ಯಾವ ಸಿಮ್ ಕಾರ್ಡ್ ಇದೆ ಎಂಬುದನ್ನು ಪರಿಶೀಲಿಸಬೇಕು.

ನೀವು ಮೊದಲನೇ ಸಿಮ್ ಟ್ರೇನಲ್ಲಿ ಇಟ್ಟಿರುವ ಸಿಮ್ ಕೇವಲ ಕಾಲ್​ಗಳಿಗೆ ಮಾತ್ರ ಮತ್ತು ಎರಡನೇ ಸಿಮ್ ಟ್ರೇನಲ್ಲಿ ಇರುವ ಸಿಮ್ ಇಂಟರ್ನೆಟ್​ಗಾಗಿ ಮಾತ್ರ ಎಂದು ಉಪಯೋಗಿಸುತ್ತಿದ್ದರೆ ಅದು ದೊಡ್ಡ ತಪ್ಪು. ನಿಮ್ಮ ಸ್ಮಾರ್ಟ್​ಫೋನ್​ನ ಇಂಟರ್ನೆಟ್ ವೇಗವನ್ನು ಹೆಚ್ಚಿಸಲು ಬಯಸಿದರೆ ಮೊದಲಿಗೆ ನೀವು ನಿಮ್ಮ ಸಿಮ್ ಕಾರ್ಡ್​ಗಳನ್ನು ವಿನಿಮಯ ಮಾಡಿಕೊಳ್ಳಬೇಕಾಗುತ್ತದೆ. ಹೇಗೆಂದರೆ, ಇಂಟರ್ನೆಟ್ ಬಳಕೆಯ ಸಿಮ್ ಕಾರ್ಡ್ ಅನ್ನು ಮೊದಲನೇ ಸಿಮ್ ಟ್ರೇನಲ್ಲಿ ಮತ್ತು ಇನ್ನೊಂದು ಸಿಮ್ ಕಾರ್ಡ್ ಎರಡನೇ ಟ್ರೇನಲ್ಲಿ ಹಾಕಬೇಕು. ಹೀಗೆ ಮಾಡಿದರೆ ನಿಮ್ಮ ಇಂಟರ್ನೆಟ್ ವೇಗ ಹೆಚ್ಚಾಗುತ್ತದೆ.

ಜ್ಞರು ಹೇಳುವ ಪ್ರಕಾರ, ಸಿಮ್ ಟ್ರೇ ಒಂದರಲ್ಲಿ ಡೇಟಾ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ನಿಮ್ಮ ಕರೆ ಸಿಮ್ ಟ್ರೇ ಒಂದರಲ್ಲಿ ಮತ್ತು ಡೇಟಾ ಸಿಮ್ ಟ್ರೇ ಎರಡರಲ್ಲಿ ಇದ್ದರೆ, ನೀವು ಅದನ್ನು ಡೇಟಾ ಸಿಮ್ ಟ್ರೇ ಒಂದಕ್ಕೆ ಬದಲಾಯಿಸಬೇಕು. ಈ ರೀತಿ ಮಡುವುದರಿಂದ ನಿಮ್ಮ ಫೋನ್​ನಲ್ಲಿ ಇಂಟರ್ನೆಟ್ ವೇಗವು ಅಧಿಕವಾಗುತ್ತದೆ. ಅಂತೆಯೆ ಇಂಟರ್‌ನೆಟ್ ಬಳಸುವ ಸಿಮ್ ನೆಟ್‌ವರ್ಕ್ APN ಅನ್ನು ಬದಲಾಯಿಸಿ ಕೂಡ ನೆಟ್‌ವರ್ಕ್ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು.

ಇದನ್ನೂ ಓದಿ: ಹೊಸ DND ಆ್ಯಪ್: ಕೋಟಿಗಟ್ಟಲೆ ಮೊಬೈಲ್ ಬಳಕೆದಾರರಿಗೆ ಬಿಗ್ ರಿಲೀಫ್ ನೀಡಿದ TRAI

ಇನ್ನು ಕೆಲ ಸಿಂಪಲ್ ಟ್ರಿಕ್ ಮೂಲಕವೂ ಇಂಟರ್ನೆಟ್ ಸ್ಪೀಡ್ ಹೆಚ್ಚಿಸಬಹುದು. ಇದಕ್ಕಾಗಿ ವಿವಿಧ ಅ್ಯಪ್​ಗಳಲ್ಲಿನ ಸ್ಟೋರೆಜ್​ಗಳನ್ನು (Clear Cache) ತೆಗೆದುಹಾಕಿ, ಆದಷ್ಟು ತಮ್ಮ ಮೊಬೈಲ್ ಫೋನ್​ನಲ್ಲಿ ಸ್ಟೋರೆಜ್ ಖಾಲಿ ಇರುವಂತೆ ನೋಡಿಕೊಳ್ಳಿ. ಆಗ ಮೊಬೈಲ್ ಜೊತೆಗೆ ಇಂಟರ್ನೆಟ್ ಕೂಡ ವೇಗವಾಗುತ್ತದೆ. ಉಪಯೋಗವಿಲ್ಲದ ಆ್ಯಪ್​ಗಳನ್ನು ತೆಗೆದುಹಾಕಿ, ಇದರಿಂದ ನಿಮ್ಮ ಮೊಬೈಲ್​ನಲ್ಲಿ ಸಾಕಷ್ಟು ಸ್ಟೋರೆಜ್ ಲಭ್ಯವಾಗಲಿದೆ. ಮುಖ್ಯವಗಿ ನಿಮ್ಮ ನೆಟ್‌ವರ್ಕ್ ಸಂಪರ್ಕ LTE ನಲ್ಲಿ ಇದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಿ.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ
ಕ್ಲಾಸ್​ ನಡೆಯುವಾಗಲೇ 3ನೇ ಮಹಡಿಯಿಂದ ಹಾರಿದ ಕಾಲೇಜು ವಿದ್ಯಾರ್ಥಿ
ಕ್ಲಾಸ್​ ನಡೆಯುವಾಗಲೇ 3ನೇ ಮಹಡಿಯಿಂದ ಹಾರಿದ ಕಾಲೇಜು ವಿದ್ಯಾರ್ಥಿ
ಶ್ರೀರಾಮುಲು ಕಾಂಗ್ರೆಸ್ ಸೇರ್ತಾರಾ? ರಾಜಕೀಯ ಗುಟ್ಟು ಬಿಚ್ಚಿಟ್ಟ ಹಳೇ ಕುಚಿಕು
ಶ್ರೀರಾಮುಲು ಕಾಂಗ್ರೆಸ್ ಸೇರ್ತಾರಾ? ರಾಜಕೀಯ ಗುಟ್ಟು ಬಿಚ್ಚಿಟ್ಟ ಹಳೇ ಕುಚಿಕು
ವ್ಯಕ್ತಿತ್ವದಲ್ಲಿ ಉತ್ತಮ ಈ ತ್ರಿವಿಕ್ರಮ: ಗೆಲುವಿನ ಸೂಚನೆ ಕೊಟ್ಟ ಬಿಗ್ ಬಾಸ್
ವ್ಯಕ್ತಿತ್ವದಲ್ಲಿ ಉತ್ತಮ ಈ ತ್ರಿವಿಕ್ರಮ: ಗೆಲುವಿನ ಸೂಚನೆ ಕೊಟ್ಟ ಬಿಗ್ ಬಾಸ್
ಶ್ರೀರಾಮುಲು ಕಾಂಗ್ರೆಸ್​ಗೆ ಕಳುಹಿಸಲು ಅವರೇ ಪ್ರಯತ್ನಿಸ್ತಿರಬಹುದು: ಡಿಕೆಶಿ
ಶ್ರೀರಾಮುಲು ಕಾಂಗ್ರೆಸ್​ಗೆ ಕಳುಹಿಸಲು ಅವರೇ ಪ್ರಯತ್ನಿಸ್ತಿರಬಹುದು: ಡಿಕೆಶಿ
9 ವಿಕೆಟ್ ಕಬಳಿಸಿ ದಾಖಲೆ ಬರೆದ ಸಿದ್ಧಾರ್ಥ್ ದೇಸಾಯಿ
9 ವಿಕೆಟ್ ಕಬಳಿಸಿ ದಾಖಲೆ ಬರೆದ ಸಿದ್ಧಾರ್ಥ್ ದೇಸಾಯಿ
ಮುಡಾ ಹಗರಣದಲ್ಲಿ ಕ್ಲೀನ್​ಚಿಟ್; ಸಿಎಂ ರಿಯಾಕ್ಷನ್ ಇದು
ಮುಡಾ ಹಗರಣದಲ್ಲಿ ಕ್ಲೀನ್​ಚಿಟ್; ಸಿಎಂ ರಿಯಾಕ್ಷನ್ ಇದು
ರಥೋತ್ಸವದ ವೇಳೆ ವಿಟ್ಲದಲ್ಲಿ ದೇವರ ಮೂರ್ತಿ, ಅರ್ಚಕರಿಗೆ ಬಡಿದ ಡ್ರೋನ್​
ರಥೋತ್ಸವದ ವೇಳೆ ವಿಟ್ಲದಲ್ಲಿ ದೇವರ ಮೂರ್ತಿ, ಅರ್ಚಕರಿಗೆ ಬಡಿದ ಡ್ರೋನ್​
ಜಿಂಕೆಯ ವೇಗ, ಹದ್ದಿನ ಕಣ್ಣು... ನಿತೀಶ್ ಕುಮಾರ್ ರೆಡ್ಡಿ ಸೂಪರ್ ಕ್ಯಾಚ್
ಜಿಂಕೆಯ ವೇಗ, ಹದ್ದಿನ ಕಣ್ಣು... ನಿತೀಶ್ ಕುಮಾರ್ ರೆಡ್ಡಿ ಸೂಪರ್ ಕ್ಯಾಚ್