AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tech Tips: ಯೂಟ್ಯೂಬ್‌ನಲ್ಲಿ 15,000 ವೀವ್ಸ್​ಗೆ ಎಷ್ಟು ಹಣ ಸಿಗುತ್ತೆ?: ಇಲ್ಲಿದೆ ನೋಡಿ ಅಂಕಿಅಂಶ

YouTube Money Tips: ಯೂಟ್ಯೂಬ್ ನಲ್ಲಿ ಹಣ ಗಳಿಸುವುದು ಕೇವಲ ವೀಕ್ಷಣೆಗಳ ಸಂಖ್ಯೆಯನ್ನು ಆಧರಿಸಿರುವುದಿಲ್ಲ, ಬದಲಾಗಿ ಹಲವಾರು ಅಂಶಗಳ ಮೇಲೂ ಅವಲಂಬಿತವಾಗಿರುತ್ತದೆ. ಪ್ರಮುಖ ಅಂಶವೆಂದರೆ CPM (Cost Per Mille), ಇದು ಜಾಹೀರಾತುದಾರರು ಪ್ರತಿ ಸಾವಿರ ವೀಕ್ಷಣೆಗಳಿಗೆ ಎಷ್ಟು ಪಾವತಿಸುತ್ತಾರೆ ಎಂಬುದು.

Tech Tips: ಯೂಟ್ಯೂಬ್‌ನಲ್ಲಿ 15,000 ವೀವ್ಸ್​ಗೆ ಎಷ್ಟು ಹಣ ಸಿಗುತ್ತೆ?: ಇಲ್ಲಿದೆ ನೋಡಿ ಅಂಕಿಅಂಶ
Youtube Money
ಪ್ರೀತಿ ಭಟ್​, ಗುಣವಂತೆ
| Edited By: |

Updated on: Oct 03, 2025 | 10:25 AM

Share

ಬೆಂಗಳೂರು (ಅ. 03): ಇಂದು, ಯೂಟ್ಯೂಬ್ (Youtube) ಕೇವಲ ಮನರಂಜನೆಯ ತಾಣವಾಗಿ ಉಳಿದಿಲ್ಲ, ಬದಲಾಗಿ ಜನರ ಪ್ರಮುಖ ಆದಾಯದ ಮೂಲವೂ ಆಗಿದೆ. ಲಕ್ಷಾಂತರ ರೂಪಾಯಿ ಗಳಿಸುವ ಆಶಯದೊಂದಿಗೆ ಅನೇಕ ಜನರು ವಿಡಿಯೋಗಳನ್ನು ರಚಿಸಿ ಅಪ್‌ಲೋಡ್ ಮಾಡುತ್ತಾರೆ. ಆದರೆ ಅನೇಕರಿಗೆ ಇರುವ ಪ್ರಶ್ನೆಯೆಂದರೆ: 15,000 ವೀಕ್ಷಣೆಗಳಿಗೆ ಯೂಟ್ಯೂಬ್ ಎಷ್ಟು ಪಾವತಿಸುತ್ತದೆ? ಎಂಬುದು. ಇದನ್ನು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು.

ಯೂಟ್ಯೂಬ್ ನಲ್ಲಿ ಹಣ ಗಳಿಸುವುದು ಕೇವಲ ವೀಕ್ಷಣೆಗಳ ಸಂಖ್ಯೆಯನ್ನು ಆಧರಿಸಿರುವುದಿಲ್ಲ, ಬದಲಾಗಿ ಹಲವಾರು ಅಂಶಗಳ ಮೇಲೂ ಅವಲಂಬಿತವಾಗಿರುತ್ತದೆ. ಪ್ರಮುಖ ಅಂಶವೆಂದರೆ CPM (Cost Per Mille), ಇದು ಜಾಹೀರಾತುದಾರರು ಪ್ರತಿ ಸಾವಿರ ವೀಕ್ಷಣೆಗಳಿಗೆ ಎಷ್ಟು ಪಾವತಿಸುತ್ತಾರೆ ಎಂಬುದು. CPM ಗಳು ದೇಶಗಳು ಮತ್ತು ವಿಡಿಯೋ ವರ್ಗಗಳಲ್ಲಿ ಬದಲಾಗುತ್ತವೆ. ಉದಾಹರಣೆಗೆ, US, ಕೆನಡಾ ಮತ್ತು ಯುರೋಪಿಯನ್ ದೇಶಗಳಲ್ಲಿ, CPM ಗಳು ಭಾರತಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿವೆ.

ಮತ್ತೊಂದು ಪ್ರಮುಖ ಅಂಶವೆಂದರೆ ನೀವು ಆಯ್ಕೆ ಮಾಡುವ ವಿಷಯ. ತಂತ್ರಜ್ಞಾನ, ಹಣಕಾಸು ಮತ್ತು ಶಿಕ್ಷಣದಂತಹ ಕ್ಷೇತ್ರಗಳಲ್ಲಿನ ಜಾಹೀರಾತುಗಳು ಹೆಚ್ಚು ದುಬಾರಿಯಾಗಿರುತ್ತವೆ, ಇದು ಹೆಚ್ಚಿನ ಆದಾಯಕ್ಕೆ ಕಾರಣವಾಗುತ್ತದೆ. ಅದೇ ಸಮಯದಲ್ಲಿ, ಸಂಗೀತ ಅಥವಾ ಮನರಂಜನಾ ವಿಡಿಯೋಗಳು ಸಾಮಾನ್ಯವಾಗಿ ಕಡಿಮೆ CPM ಗಳನ್ನು ಹೊಂದಿರುತ್ತವೆ.

ಇದನ್ನೂ ಓದಿ
Image
ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಲಿವೆ ಈ 6 ಕೂಲ್ ಸ್ಮಾರ್ಟ್‌ಫೋನ್‌ಗಳು
Image
ಫ್ಲಿಪ್‌ಕಾರ್ಟ್‌ ಬಿಗ್ ಬಿಲಿಯನ್ ಡೇಸ್ ಸೇಲ್ ಇಂದು ಕೊನೇ ದಿನ
Image
ಯಾವುದೇ ಕಾರಣಕ್ಕೂ ನಿಮ್ಮ ಫೋನ್ ಅನ್ನು ಶೇ. 100 ಚಾರ್ಜ್ ಮಾಡಬೇಡಿ
Image
7000mAh ಬ್ಯಾಟರಿ, 50MP ಕ್ಯಾಮೆರಾ: ಧೂಳೆಬ್ಬಿಸಲು ಬಂತು ಹೊಸ ಫೋನ್

ಭಾರತೀಯ ಪ್ರೇಕ್ಷಕರಿಗೆ, ಭಾರತದಲ್ಲಿ CPM ಗಳು ಸಾಮಾನ್ಯವಾಗಿ  ರೂ. 20 ರಿಂದ 150 ರೂ. ರವರೆಗೆ ಇರುತ್ತವೆ. ಇದರರ್ಥ ಪ್ರತಿ 1,000 ವೀಕ್ಷಣೆಗಳಿಗೆ, ಒಬ್ಬ ಯೂಟ್ಯೂಬರ್ ಸರಿಸುಮಾರು 0 ರಿಂದ 150 ರೂ. ಗಳಿಸಬಹುದು. ಹೀಗಾಗಿ, ಒಂದು ವಿಡಿಯೋ 15,000 ವೀಕ್ಷಣೆಗಳನ್ನು ಪಡೆದರೆ, ಅದು ರೂ. 300 ರಿಂದ ರೂ. 2,250 ರವರೆಗೆ ಗಳಿಸಬಹುದು.

Upcoming Smartphones: ಒಂದಲ್ಲ.. ಎರಡಲ್ಲ: ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಲಿವೆ ಈ 6 ಕೂಲ್ ಸ್ಮಾರ್ಟ್‌ಫೋನ್‌ಗಳು

ಆದಾಗ್ಯೂ, ಇದು ಕೇವಲ ಅಂದಾಜು ಮಾತ್ರ. ವಿಡಿಯೋ ಹಣಕಾಸು, ವ್ಯವಹಾರ ಅಥವಾ ತಂತ್ರಜ್ಞಾನದಂತಹ ಹೆಚ್ಚಿನ ಸಂಭಾವನೆ ಪಡೆಯುವ ಕೆಟಗರಿಗೆ ಸಂಬಂಧಿಸಿದ್ದರೆ ಮತ್ತು ಪ್ರೇಕ್ಷಕರು ಪ್ರೀಮಿಯಂ ಸ್ಥಳಗಳಲ್ಲಿದ್ದರೆ, ಗಳಿಕೆಗಳು ಹೆಚ್ಚಿರಬಹುದು. ಆದಾಗ್ಯೂ, ವೀವ್ಸ್ ಕಡಿಮೆ ಜಾಹೀರಾತುಗಳು ಅಥವಾ ಮನರಂಜನೆಯನ್ನು ಹೊಂದಿರುವ ಸೆಕ್ಷನ್​ನಿಂದ ಬಂದಿದ್ದರೆ, ಗಳಿಕೆಗಳು ತುಂಬಾ ಕಡಿಮೆ ಇರುತ್ತದೆ.

ಗೂಗಲ್ ಆಡ್ಸೆನ್ಸ್ ಯೂಟ್ಯೂಬ್ ಆದಾಯದ ಪ್ರಮುಖ ಮೂಲವಾಗಿದ್ದರೂ, ಅದು ಏಕೈಕ ಮೂಲವಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುವುದು ಸಹ ಮುಖ್ಯವಾಗಿದೆ. ಪ್ರಾಯೋಜಕತ್ವಗಳು, ಮಾರ್ಕೆಟಿಂಗ್ ಮತ್ತು ಬ್ರ್ಯಾಂಡ್ ಪ್ರಚಾರದ ಮೂಲಕ ಕಂಟೆಂಟ್ ಕ್ರಿಯೇಟರ್ಸ್ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು. ಕಡಿಮೆ ವೀವ್ಸ್ ಹೊರತಾಗಿಯೂ, ಯೂಟ್ಯೂಬರ್‌ಗಳು ಉತ್ತಮ ಬ್ರ್ಯಾಂಡ್ ಡೀಲ್‌ಗಳನ್ನು ಪಡೆದುಕೊಳ್ಳುವ ಮೂಲಕ ಲಕ್ಷಗಟ್ಟಲೆ ರೂಪಾಯಿಗಳನ್ನು ಗಳಿಸುತ್ತಿರುವುದನ್ನು ಇಂದು ನಾವು ನೋಡಬಹುದು.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ