Tech Tips: ನಿಮ್ಮ ಫೋನ್ ಬಗ್ಗೆ ನಿಮಗೆ ಗೊತ್ತಿಲ್ಲದ ರಹಸ್ಯಗಳು: ಈ ಸೀಕ್ರೆಟ್ ಕೋಡ್‌ಗಳ ಮೂಲಕ ತಿಳಿಯಿರಿ

|

Updated on: Nov 25, 2023 | 2:56 PM

Smartphone Tips: ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂನೊಂದಿಗೆ ಕಾರ್ಯನಿರ್ವಹಿಸುವ ಸ್ಮಾರ್ಟ್​ಫೋನ್ ಬಗ್ಗೆ ಅನೇಕರಿಗೆ ಗೊತ್ತಿಲ್ಲದ ಹಲವು ವಿಷಯಗಳಿವೆ. ಕೆಲವು ಕೋಡ್‌ಗಳ ಆಧಾರದ ಮೇಲೆ ಫೋನ್‌ನಲ್ಲಿ ಆಸಕ್ತಿದಾಯಕ ವಿಷಯಗಳನ್ನು ಪಡೆಯಬಹುದು.

Tech Tips: ನಿಮ್ಮ ಫೋನ್ ಬಗ್ಗೆ ನಿಮಗೆ ಗೊತ್ತಿಲ್ಲದ ರಹಸ್ಯಗಳು: ಈ ಸೀಕ್ರೆಟ್ ಕೋಡ್‌ಗಳ ಮೂಲಕ ತಿಳಿಯಿರಿ
Smartphone Codes
Follow us on

ಇಂದು ಪ್ರತಿಯೊಬ್ಬರಿಗೂ ಸ್ಮಾರ್ಟ್‌ಫೋನ್ (Smartphone) ಅನಿವಾರ್ಯ ಎಂಬಂತಾಗಿದೆ. ಒಂದೇ ಮನೆಯಲ್ಲಿ ಎರಡಕ್ಕಿಂತ ಹೆಚ್ಚು ಫೋನ್ ಇದ್ದೇ ಇರುತ್ತದೆ. ಬ್ಯಾಂಕ್ ಕೆಲಸದಿಂದ ಹಿಡಿದು, ಫ್ಲೈಟ್ ಟಿಕೆಟ್, ಸಿನಿಮಾ ಟಿಕೆಟ್ ಬುಕ್ಕಿಂಗ್ ವರೆಗೆ ಎಲ್ಲಾ ರೀತಿಯ ಕೆಲಸಗಳನ್ನು ಸ್ಮಾರ್ಟ್​ಫೋನ್ ಮೂಲಕವೇ ಮಾಡಬಹುದು. ನಿಮ್ಮ ಅಂಗೈಯಲ್ಲಿರುವ ಈ ಗ್ಯಾಜೆಟ್ ಈಗ ಜಗತ್ತನ್ನು ಆಳುತ್ತಿದೆ. ಆದರೆ, ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂನೊಂದಿಗೆ ಕಾರ್ಯನಿರ್ವಹಿಸುವ ಸ್ಮಾರ್ಟ್​ಫೋನ್ ಬಗ್ಗೆ ಅನೇಕರಿಗೆ ಗೊತ್ತಿಲ್ಲದ ಹಲವು ವಿಷಯಗಳಿವೆ. ಕೆಲವು ಕೋಡ್‌ಗಳ ಆಧಾರದ ಮೇಲೆ ಫೋನ್‌ನಲ್ಲಿ ಆಸಕ್ತಿದಾಯಕ ವಿಷಯಗಳನ್ನು ಪಡೆಯಬಹುದು. ಹಾಗಾದರೆ ಆ ಕೋಡ್‌ಗಳು ಯಾವುವು..?

  • *#*#4636#*#*: ನಿಮ್ಮ ಸ್ಮಾರ್ಟ್​ಫೋನ್‌ನ ಸಂಪೂರ್ಣ ವಿವರಗಳನ್ನು ತಿಳಿಯಲು ಫೋನ್‌ನಲ್ಲಿ ಈ ಕೋಡ್ ಅನ್ನು ನಮೂದಿಸಿ. ಈ ಕೋಡ್ ಮೂಲಕ ಬ್ಯಾಟರಿ, ವೈಫೈ ಮಾಹಿತಿ, ಆಪ್ಸ್ ಬಳಕೆಗೆ ಸಂಬಂಧಿಸಿದ ವಿವರಗಳನ್ನು ತಿಳಿದುಕೊಳ್ಳಬಹುದು.
  • ಕರೆಗಳು ಅಥವಾ ಸಂದೇಶಗಳನ್ನು ಮತ್ತೊಂದು ಸಂಖ್ಯೆಗೆ ಡೈವರ್ಟ್ ಮಾಡಲಾಗಿದೆಯೇ ಎಂದು ತಿಳಿಯಲು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಕೋಡ್ ಲಭ್ಯವಿದೆ. *#21# ಕೋಡ್ ಸಹಾಯದಿಂದ ಇದನ್ನು ಮಾಡಬಹುದು.
  • ನಿಮ್ಮ ಕರೆಗಳು ಮತ್ತು ಸಂದೇಶಗಳನ್ನು ಇತರ ಸಂಖ್ಯೆಗಳಿಗೆ ಫಾರ್ವರ್ಡ್ ಮಾಡಿದರೆ, ##002# ಕೋಡ್ ಅನ್ನು ನಮೂದಿಸುವ ಮೂಲಕ ನೀವು ಅದನ್ನು ರದ್ದುಗೊಳಿಸಬಹುದು. ಈ ಕೋಡ್ ಅನ್ನು ನಮೂದಿಸುವುದರಿಂದ ಈ ಕರೆಗಳನ್ನು ತಕ್ಷಣವೇ ನಿಷ್ಕ್ರಿಯಗೊಳಿಸಲಾಗುತ್ತದೆ.
  • *43# ಕೋಡ್ ಸಹಾಯದಿಂದ ನಿಮ್ಮ ಫೋನ್‌ನಲ್ಲಿ ಕಾಲ್ ವೈಟಿಂಗ್ ಸೇವೆಯನ್ನು ಸಕ್ರಿಯಗೊಳಿಸಬಹುದು.
  • ನಿಮ್ಮ ಫೋನ್‌ನ IMEI ಸಂಖ್ಯೆಯನ್ನು ತಿಳಿಯಲು, ನೀವು *#06# ಕೋಡ್ ಅನ್ನು ನಮೂದಿಸಬೇಕು. ಈ ಕೋಡ್ ಅನ್ನು ನಮೂದಿಸುವ ಮೂಲಕ ನಿಮ್ಮ ಫೋನ್‌ನ IMEI ಸಂಖ್ಯೆಯ ಜೊತೆಗೆ ನೀವು ಸಂಪೂರ್ಣ ವಿವರಗಳನ್ನು ಪಡೆಯಬಹುದು.

ಗಮನಿಸಿ: ಕೆಲವು ವೆಬ್‌ಸೈಟ್‌ಗಳಲ್ಲಿ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಮೇಲಿನ ವಿವರಗಳನ್ನು ಒದಗಿಸಲಾಗಿದೆ. ಆದರೆ ಈ ಕೋಡ್‌ಗಳನ್ನು ಸರಿಯಾಗಿ ಬೆಂಬಲಿಸದ ಫೋನ್‌ಗಳು ತಾಂತ್ರಿಕ ಹಾನಿಯ ಅಪಾಯವನ್ನು ಎದುರಿಸುತ್ತವೆ ಎಂಬುದನ್ನು ಗಮನಿಸಬೇಕು.

ಇದನ್ನೂ ಓದಿ
ಅದ್ಭುತ ಕ್ಯಾಮೆರಾ: ಹಾನರ್​ನಿಂದ 100, 100 ಪ್ರೊ ಸ್ಮಾರ್ಟ್​ಫೋನ್ ಬಿಡುಗಡೆ
ಗೂಗಲ್ ಪೇಯಿಂದ ಎಚ್ಚರಿಕೆ: ಈ ಆ್ಯಪ್ ಬಳಸುತ್ತಿದ್ದರೆ ತಕ್ಷಣ ಡಿಲೀಟ್ ಮಾಡಿ
ಭಾರತಕ್ಕೆ ಬಂತು ಸ್ಯಾಮ್​ಸಂಗ್​ನ ಬಜೆಟ್ ಬೆಲೆಯ ಬಂಪರ್ ಸ್ಮಾರ್ಟ್​ಫೋನ್
AI ಅನ್ನು ಅಭಿವೃದ್ಧಿಪಡಿಸಲು ಭಾರತೀಯ ಸರ್ಕಾರಕ್ಕೆ ಸಹಾಯ ಮಾಡಲಿರುವ ಗೂಗಲ್

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ