Tech Tips: ನೀವು ಎಷ್ಟು GB RAM ಫೋನ್ ಖರೀದಿಸಬೇಕು?: ಗೊಂದಲವಿದ್ದರೆ ಈ ಸ್ಟೋರಿ ಓದಿ

ನೀವು ಫೋನ್ ಅನ್ನು ಸಾಮಾನ್ಯವಾಗಿ ಕರೆಗಳು, ಮೆಸೇಜ್, ವೆಬ್ ಬ್ರೌಸಿಂಗ್, ಸಾಮಾಜಿಕ ಮಾಧ್ಯಮಕ್ಕಾಗಿ ಬಳಸುತ್ತಿದ್ದರೆ 4GB RAM ಹೊಂದಿರುವ ಫೋನ್ ಉತ್ತಮವಾಗಿರುತ್ತದೆ. ನಿಮ್ಮ ಫೋನ್‌ನಲ್ಲಿ ನೀವು ಗೇಮಿಂಗ್, ವಿಡಿಯೋ ಎಡಿಟಿಂಗ್‌ನಂತಹ ಮಲ್ಟಿಟಾಸ್ಕಿಂಗ್ ಮಾಡಲು ಬಯಸಿದರೆ, 6GB ನಿಂದ 8GB RAM ಹೊಂದಿರುವ ಸ್ಮಾರ್ಟ್‌ಫೋನ್ ಉತ್ತಮ

Tech Tips: ನೀವು ಎಷ್ಟು GB RAM ಫೋನ್ ಖರೀದಿಸಬೇಕು?: ಗೊಂದಲವಿದ್ದರೆ ಈ ಸ್ಟೋರಿ ಓದಿ
Smartphone
Follow us
Vinay Bhat
|

Updated on: May 21, 2024 | 12:06 PM

ಇಂದು ಸ್ಮಾರ್ಟ್​ಫೋನ್ (Smartphone) ಖರೀದಿಸುವಾಗ ಅನೇಕರು ಗೊಂದಲಕ್ಕೀಡಾಗುವುದು ನಾನು ಎಷ್ಟು GB RAM ಸ್ಮಾರ್ಟ್‌ಫೋನ್ ಖರೀದಿಸ ಬೇಕು ಎಂಬುದು. ಈ ಬಗ್ಗೆ ಅನೇಕರಿಗೆ ಐಡಿಯಾನೇ ಇರುವುದಿಲ್ಲ. ಕೆಲವರು ಅಗತ್ಯವೇ ಇಲ್ಲದೆ, ತಿಳಿಯದೆ ದೊಡ್ಡ RAM ಸ್ಮಾರ್ಟ್‌ಫೋನ್ ಖರೀದಿಸಿದರೆ ಇನ್ನೂ ಕೆಲವು ಗೇಮಿಂಗ್​ಗೆಂದು ಕಡಿಮೆ RAM ಇರುವ ಫೋನ್ ಆಯ್ಕೆ ಮಾಡಿಕೊಳ್ಳುತ್ತಾರೆ. ಬಳಿಕ ಸಮಯ ಕಳೆದಂತೆ ಸ್ಮಾರ್ಟ್​ಫೋನ್ ನಿಧಾನವಾಗುತ್ತದೆ. ಆದರೆ, ಫೋನ್ ಖರೀದಿಸುವ ಮುನ್ನ ಕೆಲ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡರೆ ಮುಂದಿನ ದಿನಗಳಲ್ಲಿ ಯಾವುದೇ ತೊಂದರೆ ಆಗುವುದಿಲ್ಲ. ಹಾಗಾದರೆ ನೀವು ಎಷ್ಟು GB RAM ಫೋನ್ ಖರೀದಿಸಬೇಕು?.

ಎಷ್ಟು GB RAM ಫೋನ್ ಖರೀದಿಸಬೇಕು?

  • ನೀವು ಫೋನ್ ಅನ್ನು ಸಾಮಾನ್ಯವಾಗಿ ಕರೆಗಳು, ಮೆಸೇಜ್, ವೆಬ್ ಬ್ರೌಸಿಂಗ್, ಸಾಮಾಜಿಕ ಮಾಧ್ಯಮಕ್ಕಾಗಿ ಬಳಸುತ್ತಿದ್ದರೆ 4GB RAM ಹೊಂದಿರುವ ಫೋನ್ ಉತ್ತಮವಾಗಿರುತ್ತದೆ.
  • ನಿಮ್ಮ ಫೋನ್‌ನಲ್ಲಿ ನೀವು ಗೇಮಿಂಗ್, ವಿಡಿಯೋ ಎಡಿಟಿಂಗ್‌ನಂತಹ ಮಲ್ಟಿಟಾಸ್ಕಿಂಗ್ ಮಾಡಲು ಬಯಸಿದರೆ, 6GB ನಿಂದ 8GB RAM ಹೊಂದಿರುವ ಸ್ಮಾರ್ಟ್‌ಫೋನ್ ಉತ್ತಮ ಆಯ್ಕೆಯಾಗಿದೆ.
  • ನೀವು ದೊಡ್ಡ ಮಟ್ಟದ ಗೇಮಿಂಗ್‌ಗಾಗಿ ಫೋನ್ ಬಳಸಲು ಬಯಸುತ್ತಿದ್ದರೆ ಅಲ್ಲದೆ, 4K ವಿಡಿಯೋ ಎಡಿಟಿಂಗ್ ಮಾಡುವವರಾಗಿದ್ದರೆ, 12GB RAM ಫೋನ್ ಉತ್ತಮವಾಗಿರುತ್ತದೆ.

ಸೈಬರ್ ವಂಚಕರ ಬಾಲ ಕತ್ತರಿಸಲು ಸರ್ಕಾರ ಪ್ಲಾನ್; 18 ಲಕ್ಷ ಮೊಬೈಲ್ ನಂಬರ್​ಗಳು ರದ್ದಾಗುವ ಸಾಧ್ಯತೆ

ಇದಲ್ಲದೇ ಫೋನ್‌ನ ವೇಗದಲ್ಲಿ ಪ್ರೊಸೆಸರ್ ಪ್ರಮುಖ ಪಾತ್ರ ವಹಿಸುತ್ತದೆ. ಉತ್ತಮ ಪ್ರೊಸೆಸರ್ ಕಡಿಮೆ RAM ನೊಂದಿಗೆ ಉತ್ತಮ ವೇಗವನ್ನು ನೀಡಲು ಸಹಾಯ ಮಾಡುತ್ತದೆ. ಫೋನ್‌ನ ಪ್ರೊಸೆಸರ್ ಹಳೆಯದಾಗಿದ್ದರೆ, ಹೆಚ್ಚಿನ RAM ಅಗತ್ಯವಾಗುತ್ತದೆ. ನೀವು ದೀರ್ಘಕಾಲದವರೆಗೆ ಫೋನ್ ಬಳಸುತ್ತಿದ್ದರೆ, 6 GB RAM ನಿಮಗೆ ಉತ್ತಮವಾಗಿರುತ್ತದೆ.

ಹೆಚ್ಚಿನ GB RAM ನ ಅನಾನುಕೂಲಗಳು

ಆದಾಗ್ಯೂ, ಹೆಚ್ಚು GB RAM ಹೊಂದಿರುವ ಫೋನ್‌ಗಳ ಬೆಲೆ ಇಂದು ದುಬಾರಿ ಆಗಿವೆ ಎಂಬುದನ್ನು ಗಮನಿಸಬೇಕು. ಅಲ್ಲದೆ, ಹೆಚ್ಚು GB RAM ಹೊಂದಿರುವ ಸ್ಮಾರ್ಟ್‌ಫೋನ್‌ಗಳ ಬ್ಯಾಟರಿ ತ್ವರಿತವಾಗಿ ಡಿಸ್ಚಾರ್ಜ್ ಆಗುತ್ತದೆ.

ಭಾರತಕ್ಕೆ ಬಂತು ಬಲಿಷ್ಠ ಬ್ಯಾಟರಿ, ಆಕರ್ಷಕ ಕ್ಯಾಮೆರಾದ ಹೊಸ ಸ್ಮಾರ್ಟ್​ಫೋನ್: ಯಾವುದು, ಬೆಲೆ ಎಷ್ಟು?

RAM ಜೊತೆಗೆ ಸ್ಮಾರ್ಟ್‌ಫೋನುಗಳಲ್ಲಿ ಹೆಚ್ಚು ಪ್ರಮುಖವಾದುದು ಅದರ ಡಿಸ್‌ಪ್ಲೇ. ಫೋನಿನ ಡಿಸ್‌ಪ್ಲೇಯಲ್ಲಿ ಏನಾದರೂ ಸ್ವಲ್ಪ ವ್ಯತ್ಯಾಸವಾದರೂ ಆ ಸ್ಮಾರ್ಟ್‌ಫೋನ್ ಉಪಯೋಗಕ್ಕೆ ಬರುವುದಿಲ್ಲ. ಆದರೂ, ಹೆಚ್ಚಿನವರು ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಗುಣಮಟ್ಟ ಹೇಗಿದೆ ಎಂಬುದನ್ನು ಪರಿಶೀಲೀಸದೇ ಮೊಬೈಲ್ ಖರೀದಿಸುತ್ತಿದ್ದಾರೆ. ಈಗಿನ ಡಿಜಿಟಲ್ ಯುಗದಲ್ಲಿ ಅನೇಕ ಫೋನ್‌ಗಳು ಲಭ್ಯವಿದ್ದು ಅವುಗಳ ಡಿಸ್‌ಪ್ಲೇ ಬದಲಾಗುತ್ತಲೇ ಇರುತ್ತದೆ. ಡಿಸ್‌ಪ್ಲೇ ವಿಷಯಕ್ಕೆ ಬಂದಾಗ ಇದಕ್ಕೆ ಸಂಬಂಧಿಸಿದ ಹಲವಾರು ಅಂಶಗಳತ್ತ ಕೂಡ ಗಮನ ಹರಿಸಬೇಕಾಗಿದೆ. ಪಿಕ್ಸೆಲ್, ರೆಸಲ್ಯೂಶನ್, ಪಿಪಿಐ ಹೀಗೆಯೇ ಇನ್ನಷ್ಟು ಅಂಶಗಳು ಪ್ರಾಧಾನ್ಯತೆಯನ್ನು ಪಡೆದುಕೊಳ್ಳುತ್ತವೆ. ಫೋನ್ ಗುಣಮಟ್ಟ, ಬೆಲೆಯನ್ನು ಈ ಡಿಸ್‌ಪ್ಲೇಗಳು ಆಧರಿಸಿವೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!