AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೈಬರ್ ವಂಚಕರ ಬಾಲ ಕತ್ತರಿಸಲು ಸರ್ಕಾರ ಪ್ಲಾನ್; 18 ಲಕ್ಷ ಮೊಬೈಲ್ ನಂಬರ್​ಗಳು ರದ್ದಾಗುವ ಸಾಧ್ಯತೆ

Cyber crime and Telcos: ದೇಶದಲ್ಲಿ ಹೆಚ್ಚುತ್ತಿರುವ ಆನ್ಲೈನ್ ಹಣಕಾಸು ವಂಚನೆ ಪ್ರಕರಣಗಳನ್ನು ನಿಯಂತ್ರಿಸಲು ಸರ್ಕಾರ ಯೋಜಿಸಿದ್ದು, ವಂಚಕರು ಬಳಸುವ ಮೊಬೈಲ್ ಸೆಟ್ ಮತ್ತು ನಂಬರ್​ಗಳನ್ನು ಪತ್ತೆ ಮಾಡಿ ರದ್ದುಗೊಳಿಸುವಂತೆ ಟೆಲಿಕಾಂ ಕಂಪನಿಗಳಿಗೆ ಸೂಚಿಸಲಾಗಿದೆ. ತನಿಖೆ ವೇಳೆ ಸಾವಿರಾರು ಸಿಮ್​ಗಳನ್ನು ಒಂದು ಮೊಬೈಲ್ ಹ್ಯಾಂಡ್​ಸೆಟ್​​ಗಳಲ್ಲಿ ಬಳಸಿರುವ ಅನೇಕ ನಿದರ್ಶನಗಳು ಸಿಕ್ಕಿವೆ. ಇಂಥ 28 ಸಾವಿರ ಹ್ಯಾಂಡ್​ಸೆಟ್​​ಗಳನ್ನು ಡಿಸೇಬಲ್ ಮಾಡಲಾಗಿದೆ. ಇದರಲ್ಲಿ ಬಳಸಲಾದ 20 ಲಕ್ಷ ಮೊಬೈಲ್ ನಂಬರ್​ಗಳನ್ನು ವೆರಿಫೈ ಮಾಡಲಾಗುತ್ತಿದೆ. ವೆರಿಫಿಕೇಶನ್​ನಲ್ಲಿ ವಿಫಲವಾಗುವ ಸಿಮ್​ಗಳನ್ನು ಡಿಸ್​ಕನೆಕ್ಟ ಮಾಡಲಾಗುತ್ತದೆ.

ಸೈಬರ್ ವಂಚಕರ ಬಾಲ ಕತ್ತರಿಸಲು ಸರ್ಕಾರ ಪ್ಲಾನ್; 18 ಲಕ್ಷ ಮೊಬೈಲ್ ನಂಬರ್​ಗಳು ರದ್ದಾಗುವ ಸಾಧ್ಯತೆ
ಮೊಬೈಲ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 20, 2024 | 2:31 PM

Share

ನವದೆಹಲಿ, ಮೇ 20: ಸೈಬರ್ ಕ್ರೈಮ್ ಇತ್ಯಾದಿ ಆನ್​ಲೈನ್ ವಂಚನೆಗಳಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ. ಅದರ ಭಾಗವಾಗಿ ಟೆಲಿಕಾಂ ಕಂಪನಿಗಳು ಬರೋಬ್ಬರಿ 18 ಲಕ್ಷ ಮೊಬೈಲ್ ಕನೆಕ್ಷನ್​ಗಳನ್ನು ಕಡಿತಗೊಳಿಸುವ (disconnect) ಸಾಧ್ಯತೆ ಇದೆ. ಮೊಬೈಲ್ ಕನೆಕ್ಷನ್​ಗಳನ್ನು ದುರ್ಬಳಕೆ ಮಾಡಿಕೊಂಡು ಜನರು ವಂಚಿಸುತ್ತಿರುವ ಬಗ್ಗೆ ಬಹಳಷ್ಟು ಪ್ರಕರಣಗಳು ತನಿಖೆ ವೇಳೆ ಬೆಳಕಿಗೆ ಬಂದಿವೆ. ಈ ಹಿನ್ನೆಲೆಯಲ್ಲಿ ದುರ್ಬಳಕೆಯಾಗಿರಬಹುದಾದ ಮೊಬೈಲ್ ಕನೆಕ್ಷನ್​ಗಳನ್ನು ರದ್ದುಗೊಳಿಸುವಂತೆ ಟೆಲಿಕಾಂ ಆಪರೇಟರ್​ಗಳಿಗೆ ಸರ್ಕಾರ ಸೂಚಿಸಿದೆ ಎಂದು ಎಕನಾಮಿಕ್ ಟೈಮ್ಸ್ ಪತ್ರಿಕೆಯ ವರದಿಯಲ್ಲಿ ತಿಳಿಸಲಾಗಿದೆ.

‘ಸಮಗ್ರ ತನಿಖೆ ವೇಳೆ, ಒಂದೇ ಹ್ಯಾಂಡ್​ಸೆಟ್​ನಲ್ಲಿ ಸಾವಿರಾರು ಮೊಬೈಲ್ ಕನೆಕ್ಷನ್ಸ್ ಬಳಸಿರುವ ಹಲವು ನಿದರ್ಶನಗಳು ಬೆಳಕಿಗೆ ಬಂದಿದ್ದವು,’ ಎಂದು ಅಧಿಕಾರಿಯೊಬ್ಬರು ತಮಗೆ ಮಾಹಿತಿ ಕೊಟ್ಟಿದ್ದಾರೆ ಈ ವರದಿಯಲ್ಲಿ ಹೇಳಲಾಗಿದೆ.

ಈ ವರದಿ ಪ್ರಕಾರ ಮೇ 9ರಂದು ಕೇಂದ್ರ ದೂರ ಸಂಪರ್ಕ ಇಲಾಖೆ 28,220 ಮೊಬೈಲ್ ಹ್ಯಾಂಡ್​ಸೆಟ್​ಗಳನ್ನು ಡಿಸ್​ಕನೆಕ್ಟ್ ಮಾಡುವಂತೆ ಟೆಲಿಕಾಂ ಕಂಪನಿಗಳಿಗೆ ಸೂಚಿಸಿತ್ತು. ಅಲ್ಲದೇ ಈ ಹ್ಯಾಂಡ್​ಸೆಟ್​ಗಳಿಂದ ಬಳಸಲಾಗುತ್ತಿದ್ದ ಇಪತ್ತು ಲಕ್ಷ ಸಿಮ್​ಗಳನ್ನು ರೀವೆರಿಫಿಕೇಶನ್​ಗೆ ಒಳಪಡಿಸಲು ಸೂಚಿಸಿತ್ತು.

ಇದನ್ನೂ ಓದಿ: ಬ್ರಿಟನ್​ನಲ್ಲಿ ದಿಕ್ಕಾಪಾಲಾಗುತ್ತಿದೆ ‘ಬೇಬಿ ಬೂಮರ್ಸ್’ ಆಸ್ತಿ; ಇದು ಪಿತ್ರಾರ್ಜಿತ ಆಸ್ತಿ ತೆರಿಗೆ ತಂದ ಫಜೀತಿ

ಇಂತಹ ಪ್ರಕರಣಗಳಲ್ಲಿ ಸಿಮ್​ಗಳು ಯಶಸ್ವಿಯಾಗಿ ವೆರಿಫೈ ಆಗುವುದು ಶೇ. 10 ಮಾತ್ರ ಎಂಬುದು ಅಧಿಕಾರಿಗಳ ಅನಿಸಿಕೆ. ಅದರಂತೆ ನೋಡಿದರೆ, ಈಗ ಕಣ್ಗಾವಲಿನಲ್ಲಿರುವ 20 ಲಕ್ಷ ಸಿಮ್​ಗಳಲ್ಲಿ ಶೇ. 10ರಷ್ಟು ಮೊಬೈಲ್ ಕನೆಕ್ಷನ್ಸ್ ಮಾತ್ರ ವೆರಿಫೈ ಆಗಬಹುದು. ಇನ್ನುಳಿದವುಗಳ ವೆರಿಫಿಕೇಶನ್ ಆಗದೇ ಹೋಗಬಹುದು. ಅಂದರೆ 18 ಲಕ್ಷದಷ್ಟು ಮೊಬೈಲ್ ನಂಬರ್​ಗಳನ್ನು ಡಿಸ್​ಕನೆಕ್ಟ್ ಮಾಡಬಹುದು.

‘ಹದಿನೈದು ದಿನದಲ್ಲಿ ಟೆಲಿಕಾಂ ಕಂಪನಿಗಳು ಈ ನಂಬರ್​ಗಳ ರೀವೆರಿಫಿಕೇಶನ್ ಪೂರ್ಣಗೊಳಿಸಲಿದ್ದಾರೆ. ಅದಾದ ಬಳಿಕ ವೆರಿಫೈ ಆಗದ ನಂಬರ್​ಗಳನ್ನು ಡಿಸ್​ಕನೆಕ್ಟ್ ಮಾಡಲಾಗುವುದು,’ ಎಂದು ಅಧಿಕಾರಿಗಳು ಹೇಳಿದ್ದಾರೆ ವರದಿಯಲ್ಲಿ ತಿಳಿಸಲಾಗಿದೆ.

ನ್ಯಾಷನಲ್ ಸೈಬರ್​ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ ಪ್ರಕಾರ 2023ರಲ್ಲಿ ಆನ್​ಲೈನ್​ನಲ್ಲಿ ಆಗಿರುವ ಹಣಕಾಸು ವಂಚನೆಯಲ್ಲಿ ಜನರು 10,319 ಕೋಟಿ ರೂ ಕಳೆದುಕೊಂಡಿದ್ದಾರೆ. ಆ ವರ್ಷ ಸುಮಾರು ಏಳು ಲಕ್ಷ ಸಮೀಪದಷ್ಟು ದೂರುಗಳು ದಾಖಲಾಗಿರುವುದು ಗೊತ್ತಾಗಿದೆ.

ಇದನ್ನೂ ಓದಿ: ಆಧಾರ್ ದುರ್ಬಳಕೆ; ಕಾದಿದೆ ಕಠಿಣ ಶಿಕ್ಷೆ; ಯಾವ್ಯಾವ ಅಪರಾಧಕ್ಕೆ ಯಾವ ಶಿಕ್ಷೆ, ಇಲ್ಲಿದೆ ಪಟ್ಟಿ

ವಂಚಕರ ತಂತ್ರ ಹೇಗಿರುತ್ತೆ ನೋಡಿ…!

ವಂಚಕರು ಸಿಮ್ ಕಾರ್ಡ್​ಗಳನ್ನು ಬಹಳ ಚಾಣಾಕ್ಷ್ಯತನದಿಂದ ನಿರ್ವಹಿಸುತ್ತಾರೆ. ಒಂದು ಟೆಲಿಕಾಂ ಸರ್ಕಲ್​ನ ಸಿಮ್ ಕಾರ್ಡ್ ಅನ್ನು ಬೇರೆ ಟೆಲಿಕಾಂ ಸರ್ಕಲ್​ನಲ್ಲಿ ಬಳಸಬಹುದು. ಉದಾಹರಣೆಗೆ, ಮಧ್ಯಪ್ರದೇಶ ಸರ್ಕಲ್​ನ ಸಿಮ್ ಕಾರ್ಡ್ ಅನ್ನು ಬೆಂಗಳೂರಿನಲ್ಲಿ ಬಳಸಬಹುದು.

ವಂಚಕರು ಒಂದು ಸಿಮ್ ಕಾರ್ಡ್ ಅನ್ನು ಬೇರೆ ಬೇರೆ ಹ್ಯಾಂಡ್​ಸೆಟ್​ಗಳಿಗೆ ಹಾಕಿ ಬಳಸುತ್ತಾರೆ. ಒಂದೇ ಮೊಬೈಲ್ ಹ್ಯಾಂಡ್​ಸೆಟ್​ನಿಂದ ವಂಚಕ ಕರೆ ಹೋಗುತ್ತಿದ್ದರೆ ಬೇಗ ಪತ್ತೆಯಾಗಬಹುದು ಎಂಬ ಕಾರಣಕ್ಕೆ ಈ ದೂರ್ತರು ಸಿಮ್ ಕಾರ್ಡ್ ಮತ್ತು ಹ್ಯಾಂಡ್​ಸೆಟ್​ಗಳನ್ನು ಅದಲುಬದಲು ಮಾಡುತ್ತಲೇ ಇರುತ್ತಾರೆ. ಉದಾಹರಣೆಗೆ ಒಂದು ಹ್ಯಾಂಡ್​ಸೆಟ್​ನಿಂದ ಒಂದಷ್ಟು ಮೊಬೈಲ್ ಕರೆಗಳು ಹೋದ ಬಳಿಕ ಸಿಮ್ ತೆಗೆದು ಬೇರೆ ಹ್ಯಾಂಡ್​ಸೆಟ್​ಗೆ ಹಾಕಿ ಕರೆ ಮಾಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್