ನಂಬರ್ ಒನ್ ಟೆಲಿಕಾಂ ಸಂಸ್ಥೆ ರಿಲಯನ್ಸ್ ಜಿಯೋಗೆ (Reliance Jio) ದೇಶದ ಸಾಕಷ್ಟು ಮಂದಿ ಬಳಕೆದಾರರಿದ್ದಾರೆ. ಇತರೆ ಟೆಲಿಕಾಂ ಕಂಪನಿಗಳಿಗೆ ಹೋಲಿಸಿದರೆ ಜಿಯೋ ಕಡಿಮೆ ಬೆಲೆಗೆ ಡೇಟಾ, ಅನಿಯಮಿತ ಕರೆ ಆಫರ್ ನೀಡುತ್ತಿದೆ. ಹೀಗಾಗಿ ಅನೇಕರು ಜಿಯೋ ಕಡೆ ವಾಲುತ್ತಿದ್ದಾರೆ. ನೀವು ಕೂಡ ನಿಮ್ಮ ಮೊಬೈಲ್ ಸಂಖ್ಯೆಯನ್ನು ಜಿಯೋಗೆ ಪೋರ್ಟ್ ಮಾಡಲು ಬಯಸಿದರೆ, ಮನೆಯಲ್ಲಿ ಕುಳಿತು ಅರ್ಜಿ ಸಲ್ಲಿಸಬಹುದು. ಇದರ ಪ್ರಕ್ರಿಯೆಯು ತುಂಬಾ ಸುಲಭ, ನೀವೂ ಅನುಸರಿಸಬಹುದು. ಆದಾಗ್ಯೂ, ಡಾಕ್ಯುಮೆಂಟ್ ಪರಿಶೀಲನೆಗಳು ಅಥವಾ ಬಯೋಮೆಟ್ರಿಕ್‌ಗಳಿಗಾಗಿ ನೀವು ಒಮ್ಮೆ ಜಿಯೋ ಸ್ಟೋರ್‌ಗೆ ಭೇಟಿ ನೀಡಬೇಕಾಗುತ್ತದೆ. ಆದರೆ, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಯಾವುದೇ ಏಜೆಂಟ್ ಅಥವಾ ಥರ್ಡ್ ಪಾರ್ಟಿ ಅಪ್ಲಿಕೇಶನ್ ಅಗತ್ಯವಿಲ್ಲ.
ವೈಫೈ ಪಾಸ್‌ವರ್ಡ್ ಮರೆತಿರುವಿರಾ? ಚಿಂತಿಸಬೇಕಾಗಿಲ್ಲ, ಈ ರೀತಿ ಕ್ಷಣಾರ್ಧದಲ್ಲಿ ತಿಳಿಯಿರಿ
ಗಮನಿಸಿ : ನೀವು ಹೊಸ ಸಿಮ್ ಪಡೆಯಲು ಬಯಸಿದರೆ, ನೀವು ಅಂಗಡಿಗೆ ಭೇಟಿ ನೀಡಬೇಕು. ಅಲ್ಲದೆ, ಹೊಸ ಸಿಮ್‌ನ ಪ್ರಕ್ರಿಯೆಯು ಸಂಪೂರ್ಣವಾಗಿ ವಿಭಿನ್ನವಾಗಿರುತ್ತದೆ, ಏಕೆಂದರೆ ಹೊಸ ಸಿಮ್ ನೀಡುವ ನಿಯಮಗಳನ್ನು ಸರ್ಕಾರವು ಬದಲಾಯಿಸಿದೆ. ಇದರೊಂದಿಗೆ, ಪ್ರತಿ ಗ್ರಾಹಕನಿಗೆ KYC ಕಡ್ಡಾಯವಾಗಿದೆ.
ನೀವು ಫೋನ್‌ನಲ್ಲಿ *121# ಅಥವಾ *#99# ನಂತಹ USSD ಸೇವೆಗಳನ್ನು ಬಳಸುತ್ತಿದ್ದರೆ ಮುಂದಿನ ಆದೇಶದವರೆಗೆ ಈ ಸೇವೆಯನ್ನು ಟೆಲಿಕಾಂ ಇಲಾಖೆ ನಿಷೇಧಿಸುತ್ತಿದೆ. ಏಪ್ರಿಲ್ 15 ರಿಂದ USSD ಆಧಾರಿತ ಕರೆ ಫಾರ್ವರ್ಡ್ ಮಾಡುವುದನ್ನು ನಿಲ್ಲಿಸುವಂತೆ ದೂರಸಂಪರ್ಕ ಇಲಾಖೆ (DoT) ಟೆಲಿಕಾಂ ಕಂಪನಿಗಳಿಗೆ ನಿರ್ದೇಶನ ನೀಡಿದೆ. ಮುಂದಿನ ಆದೇಶದವರೆಗೆ ಇದನ್ನು ಸ್ಥಗಿತಗೊಳಿಸಲಾಗುತ್ತಿದೆ. ಆದಾಗ್ಯೂ, ಕರೆ ಫಾರ್ವರ್ಡ್ ಮಾಡಲು ಗ್ರಾಹಕರಿಗೆ ಪರ್ಯಾಯ ಆಯ್ಕೆಗಳನ್ನು ಮಾಡಬಹುದು.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ