ಮೆಟಾ ಒಡೆತನದ ವಾಟ್ಸ್ಆ್ಯಪ್ (WhatsApp) ಇಂದು ಲಕ್ಷಾಂತರ ಬಳಕೆದಾರರ ಅತ್ಯಗತ್ಯ ಅಪ್ಲಿಕೇಶನ್ ಆಗಿದೆ. ಈ ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ಮೂಲಕ, ನೀವು ನಿಮ್ಮ ಸ್ನೇಹಿತರೊಂದಿಗೆ ಚಾಟ್ ಮಾಡಬಹುದು. ಕಚೇರಿ ಕೆಲಸದಿಂದ ಹಿಡಿದು ವೈಯಕ್ತಿಕ ಸಂಭಾಷಣೆಯವರೆಗೂ ವಾಟ್ಸ್ಆ್ಯಪ್ ಮೂಲಕವೇ ನಡೆಯುತ್ತದೆ. ಆದಾಗ್ಯೂ, ಕೆಲವೊಮ್ಮೆ ನೀವು ಈ ಆ್ಯಪ್ನಿಂದ ವಿರಾಮ ತೆಗೆದುಕೊಳ್ಳಲು ಬಯಸುತ್ತೀರಿ ಮತ್ತು ಯಾವುದೇ ಮೆಸೇಜ್ಗಳು ಬರಬಾರದು ಎಂದು ಬಯಸುತ್ತೀರಿ. ಸಾಮಾನ್ಯವಾಗಿ ಹೀಗೆ ಮಾಡಲು ನೀವು ನಿಮ್ಮ ಫೋನ್‌ನ ಮೊಬೈಲ್ ಡೇಟಾ ಅಥವಾ ಇಂಟರ್ನೆಟ್ ಅನ್ನು ಆಫ್ ಮಾಡುತ್ತೀರಿ. ಆದರೆ, ಹೀಗೆ ಮಾಡುವುದರಿಂದ ನೀವು ಇತರ ಅಪ್ಲಿಕೇಶನ್‌ಗಳನ್ನು ಸಹ ಬಳಸಲು ಸಾಧ್ಯವಾಗುವುದಿಲ್ಲ.
ಆದರೆ, ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗಾಗಿ ರಹಸ್ಯ ವೈಶಿಷ್ಟ್ಯವನ್ನು ಒದಗಿಸಲಾಗಿದೆ. ಇದನ್ನು ಬಳಸಿಕೊಂಡು ಬಳಕೆದಾರರು ಬಳಸಲು ಇಷ್ಟವಿಲ್ಲದ ಅಪ್ಲಿಕೇಶನ್ ಅನ್ನು ಆಫ್ ಮಾಡಬಹುದು. ಈ ರಹಸ್ಯ ವೈಶಿಷ್ಟ್ಯವನ್ನು ಬಳಸಿಕೊಂಡು, ನೀವು ವಾಟ್ಸ್ಆ್ಯಪ್ನಲ್ಲಿ ಬರುವ ಸಂದೇಶಗಳನ್ನು ಆಫ್ ಮಾಡಬಹುದು. ಜೊತೆಗೆ ಫೋನ್‌ನಲ್ಲಿ ಅಡೆತಡೆಗಳಿಲ್ಲದೆ ವಿಡಿಯೋಗಳು ಅಥವಾ ಇತರ OTT ಅಪ್ಲಿಕೇಶನ್‌ಗಳನ್ನು ಬಳಸಲು ಸಾಧ್ಯವಾಗುತ್ತದೆ. ಇದಕ್ಕಾಗಿ ನೀವು ವಾಟ್ಸ್ಆ್ಯಪ್ನ ಡೇಟಾ ಬಳಕೆಯನ್ನು ನಿರ್ಬಂಧಿಸಬೇಕಾಗುತ್ತದೆ.
OTP ಹೇಳಿ ನಿಮ್ಮ ಖಾತೆಯಿಂದ ಹಣ ಖಾಲಿಯಾದರೆ, ಇದು ಬ್ಯಾಂಕ್ ತಪ್ಪಲ್ಲ: ಹಣವನ್ನು ಹಿಂಪಡೆಯೋದು ಹೇಗೆ?
ಈ ರೀತಿಯ ಡೇಟಾವನ್ನು ನಿರ್ಬಂಧಿಸಿ:
ಬಳಕೆದಾರರ ಫೋನ್‌ನಲ್ಲಿ ಬಳಸಲಾದ ಆಪರೇಟಿಂಗ್ ಸಿಸ್ಟಮ್ ಅನ್ನು ಅವಲಂಬಿಸಿ ಈ ಸೆಟ್ಟಿಂಗ್‌ಗಳು ಕಾರ್ಯನಿರ್ವಹಿಸುತ್ತವೆ ಎಂಬುದನ್ನು ದಯವಿಟ್ಟು ಗಮನಿಸಿ. ಸ್ಟಾಕ್ ಆಂಡ್ರಾಯ್ಡ್ 14 ಬಳಕೆದಾರರು ಈ ವೈಶಿಷ್ಟ್ಯವನ್ನು ಪಡೆಯುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಅವರು ಅಪ್ಲಿಕೇಶನ್ನ ಬ್ಯಾಕ್ಗ್ರೌಂಡ್ ಡೇಟಾ ಪ್ರವೇಶವನ್ನು ಮಾತ್ರ ನಿಲ್ಲಿಸಲು ಸಾಧ್ಯವಾಗುತ್ತದೆ. ಆಗ ಆ್ಯಪ್ ಓಪನ್ ಮಾಡಿದ ತಕ್ಷಣ ಮತ್ತೆ ವಾಟ್ಸ್ಆ್ಯಪ್ನಲ್ಲಿ ಸಂದೇಶಗಳು ಬರಲಾರಂಭಿಸುತ್ತವೆ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ