Laptop Cleaning
ಇತ್ತೀಚಿನ ದಿನಗಳಲ್ಲಿ ಲ್ಯಾಪ್‌ಟಾಪ್‌ಗಳು (Laptops) ಬಹುತೇಕ ಎಲ್ಲರೂ ಹೊಂದಿರುವ ಪ್ರಮುಖ ಸಾಧನವಾಗಿದೆ. ಇದನ್ನು ಕಚೇರಿಯಿಂದ ಮನೆಗೆ- ಮನೆಯಿಂದ ಕಚೇರಿಗೆ ಸದಾ ಕೊಂಡೊಯ್ಯುತ್ತಾರೆ. ವಿದ್ಯಾರ್ಥಿಗಳು ಕೂಡ ಇಂದು ಲ್ಯಾಪ್‌ಟಾಪ್ ಬಳಸುತ್ತಾರೆ. ಲ್ಯಾಪ್ಟಾಪ್ನಲ್ಲಿ ಸ್ಕ್ರೀನ್ ಎಂಬುದು ತುಂಬಾ ಸೆನ್ಸಿಟಿವ್ ವಸ್ತು. ಸಣ್ಣದೊಂದು ಸ್ಕ್ರಾಚ್ ಅಥವಾ ರಾಸಾಯನಿಕಗಳ ಬಳಕೆಯು ಡಿಸ್ ಪ್ಲೇಯನ್ನು ಹಾನಿಗೊಳಿಸುತ್ತದೆ.
ಲ್ಯಾಪ್‌ಟಾಪ್ ಡಿಸ್ ಪ್ಲೇಯನ್ನು ಸ್ವಚ್ಛಗೊಳಿಸುವ ಸಂದರ್ಭ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದಿದ್ದರೆ ಸಾವಿರಾರು ರೂಪಾಯಿ ನಷ್ಟವಾಗಬಹುದು. ಲ್ಯಾಪ್‌ಟಾಪ್ ಅನ್ನು ಸ್ವಚ್ಛಗೊಳಿಸುವಾಗ ಕಾಳಜಿ ವಹಿಸಬೇಕಾದ ವಿಷಯಗಳ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ.
ಬರೋಬ್ಬರಿ 240W ಫಾಸ್ಟ್ ಚಾರ್ಜಿಂಗ್: ರಿಲೀಸ್ ಆಯಿತು ರಿಯಲ್ ಮಿ GT 5 ಸ್ಮಾರ್ಟ್ಫೋನ್
ಲ್ಯಾಪ್‌ಟಾಪ್ ಸ್ವಚ್ಛಗೊಳಿಸುವಾಗ ಹೀಗೆ ಮಾಡಬೇಡಿ:
- ಲ್ಯಾಪ್‌ಟಾಪ್ ಪರದೆಗಳನ್ನು ಸ್ವಚ್ಛಗೊಳಿಸಲು ರಾಸಾಯನಿಕಗಳನ್ನು ಬಳಸದಂತೆ ಅನೇಕ ತಜ್ಞರು ಶಿಫಾರಸು ಮಾಡುತ್ತಾರೆ. ಹಾಗೊಂದು ವೇಳೆ ನೀವು ಮಾಡಿದರೆ ಲ್ಯಾಪ್‌ಟಾಪ್ ಪರದೆ ಹಾಗೂ ಹಾರ್ಡ್‌ವೇರ್ ಹಾನಿಗೊಳಗಾಗಬಹುದು.
- ಸ್ಕ್ರೀನ್ನಿಂದ ಧೂಳನ್ನು ತೆಗೆದುಹಾಕಲು ಯಾವುದೇ ರೀತಿಯ ಸ್ಪ್ರೇ ಅನ್ನು ಬಳಸಬೇಡಿ. ಇದು ಲ್ಯಾಪ್‌ಟಾಪ್‌ನ ಹಾರ್ಡ್‌ವೇರ್ ಮೇಲೆ ಪರಿಣಾಂ ಬೀರುತ್ತದೆ.
- ಸ್ಕ್ರೀನ್ ಸ್ವಚ್ಛಗೊಳಿಸಲು ಆಲ್ಕೋಹಾಲ್ ಅಥವಾ ಯಾವುದೇ ರಾಸಾಯನಿಕಗಳನ್ನು ಬಳಸಬೇಡಿ. ಇತ್ತೀಚಿನ ದಿನಗಳಲ್ಲಿ ಎಲ್ಲಾ ಟಿವಿಗಳು ಮತ್ತು ಲ್ಯಾಪ್‌ಟಾಪ್‌ಗಳಲ್ಲಿ ಎಲ್‌ಸಿಡಿ ಪರದೆಗಳನ್ನು ಬಳಸಲಾಗುತ್ತದೆ. ರಾಸಾಯನಿಕಗಳು ಅದನ್ನು ಹಾನಿಗೊಳಿಸಬಹುದು.
ಸ್ವಚ್ಛಗೊಳಿಸುವುದು ಹೇಗೆ?:
- ಲ್ಯಾಪ್‌ಟಾಪ್ ಸ್ಕ್ರೀನ್ ಅನ್ನು ಸ್ವಚ್ಛಗೊಳಿಸಲು ಒಣ ಹತ್ತಿ ಬಟ್ಟೆ ಅಥವಾ ಮೈಕ್ರೋಫೈಬರ್ ಬಟ್ಟೆಯನ್ನು ಬಳಸಿ.
- ನೀವು ಉಪಯೋಗಿಸುವ ಬಟ್ಟೆ ಕೂಡ ಸ್ವಚ್ಛವಾಗಿರಬೇಕು. ಸ್ಕ್ರೀನ್ ಸ್ಕ್ರಾಚ್ ಆಗದಂತೆ ಬಟ್ಟೆಯಿಂದ ಒರಸಬೇಕು.
- ಡಿಸ್ ಪ್ಲೇಯನ್ನು ಶುಚಿಗೊಳಿಸುವಾಗ, ಒತ್ತಡ ಹೇರಬಾರದು ಮತ್ತು ಹಾನಿಯಾಗದಂತೆ ನಿಮ್ಮ ಕೈಗಳಿಂದ ಮೃದುವಾಗಿ ಉಜ್ಜಬೇಕು.
- ಸ್ಕ್ರೀನ್ ಕಲೆಯಾಗಿದ್ದರೆ, ಮೊದಲು ಒಣ ಬಟ್ಟೆಯಿಂದ ಸ್ವಚ್ಛಗೊಳಿಸಿ. ನಂತರ ನೀವು ಸ್ವಲ್ಪ ಒದ್ದೆಯಾದ ಬಟ್ಟೆಯಿಂದ ಸ್ಕ್ರೀನ್ ಅನ್ನು ಒರೆಸಬಹುದು. ಆದರೆ ಒಳಗೆ ನೀರು ಬರದಂತೆ ಎಚ್ಚರವಹಿಸಿ.
- ಪರದೆಯು ಇನ್ನೂ ಸ್ವಚ್ಛವಾಗದಿದ್ದರೆ, ಮೈಕ್ರೋಫೈಬರ್ ಬಟ್ಟೆಗೆ ಸ್ವಲ್ಪ ಸ್ಯಾನಿಟೈಸರ್ ಅನ್ನು ಅನ್ವಯಿಸಿ ಮತ್ತು ಅದನ್ನು ನಿಧಾನವಾಗಿ ಉಜ್ಜಿಕೊಳ್ಳಿ.
- ಇದು LCD ಪರದೆಯಾಗಿದ್ದರೆ, ಯಾವುದೇ ರೀತಿಯ ರಾಸಾಯನಿಕಗಳನ್ನು ಬಳಸಬೇಡಿ. ಹಾಗೆಯೆ ಲ್ಯಾಪ್‌ಟಾಪ್ ಸ್ಕ್ರೀನ್ ಅನ್ನು ವೃತ್ತಾಕಾರದ ಮೂಲಕ ಸ್ವಚ್ಛಗೊಳಿಸುವಾಗ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ