WhatsApp Tricks: ವಾಟ್ಸ್ಆ್ಯಪ್​​ನಲ್ಲಿರುವ ಈ ಅಚ್ಚರಿ ಫೀಚರ್ ಬಳಸಿದ್ದೀರಾ?: ಇಲ್ಲಿದೆ ನೋಡಿ

| Updated By: Vinay Bhat

Updated on: Nov 05, 2022 | 2:51 PM

Tech Tips: ವಾಟ್ಸ್​ಆ್ಯಪ್​ನಲ್ಲಿ ಯಾವುದೇ ಥರ್ಡ್​ ಪಾರ್ಟಿ ಆ್ಯಪ್​ಗಳನ್ನು ಬಳಸದೆ ನೀವು ಒಬ್ಬರಿಗೆ ಫೋಟೋ ಅಥವಾ ವಿಡಿಯೋವೊಂದನ್ನು ಕಳುಹಿಸಿದಾಗ, ಅದನ್ನು ಅವರು ಓಪನ್ ಮಾಡಿ ನೋಡಿದ ತಕ್ಷಣ ಡಿಲೀಟ್ ಆಗುವಂತಹ ಆಯ್ಕೆ ನೀಡಲಾಗಿದೆ.

WhatsApp Tricks: ವಾಟ್ಸ್ಆ್ಯಪ್​​ನಲ್ಲಿರುವ ಈ ಅಚ್ಚರಿ ಫೀಚರ್ ಬಳಸಿದ್ದೀರಾ?: ಇಲ್ಲಿದೆ ನೋಡಿ
WhatsApp
Follow us on

ವಿಶ್ವದಲ್ಲಿ ಕೋಟ್ಯಾಂತರ ಮಂದಿ ಬಳಕೆದಾರರನ್ನು ಹೊಂದಿರುವ ಮೆಟಾ (Meta) ಒಡೆತನದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​ಆ್ಯಪ್ (WhatsApp) ಹೊಸ ಹೊಸ ಅಪ್ಡೇಟ್ ಅನ್ನು ನೀಡುತ್ತಲೇ ಇದೆ. ಇದಕ್ಕೆ ತಕ್ಕಂತೆ ಅನೇಕ ಟ್ರಿಕ್​ಗಳು ಕೂಡ ಹುಟ್ಟಿಕೊಳ್ಳುತ್ತಾ ಇರುತ್ತವೆ. ಈಗಾಗಲೇ ವಾಟ್ಸ್​ಆ್ಯಪ್​ನಲ್ಲಿ ಡಿಲೀಟ್ ಆದ ಮೆಸೇಜ್​ಗಳನ್ನು ಓದಲು, ಡಿಪಿ ಯಾರು ನೋಡಿದ್ದಾರೆಂದು ತಿಳಿಯಲು ಹೀಗೆ ಹೆಚ್ಚಿನ ಆಯ್ಕೆಗಳನ್ನು ತಿಳಿಯಲು ಬೇರೆ ಬೇರೆ ಥರ್ಡ್​ ಪಾರ್ಟಿ ಆ್ಯಪ್​ಗಳಿವೆ (Third Party App). ಅಂತೆಯೆ ನೀವು ಒಬ್ಬರಿಗೆ ಫೋಟೋ ಅಥವಾ ವಿಡಿಯೋವೊಂದನ್ನು ಕಳುಹಿಸಿದಾಗ, ಅದನ್ನು ಅವರು ಓಪನ್ ಮಾಡಿ ನೋಡಿದ ತಕ್ಷಣ ಡಿಲೀಟ್ ಆಗಿ ಬಿಡುವ ಆಯ್ಕೆ ಕೂಡ ವಾಟ್ಸ್​ಆ್ಯಪ್​ನಲ್ಲಿದೆ. ಇದಕ್ಕೆ ನೀವು ಯಾವುದೇ ಥರ್ಡ್ ಪಾರ್ಟಿ ಆ್ಯಪ್​​ಗಳನ್ನು ಡೌನ್​ಲೋಡ್ ಮಾಡುವ ಅವಶ್ಯಕತೆಯಿಲ್ಲ. ಬದಲಾಗಿ ಈ ಆಯ್ಕೆ ಸ್ವತಃ ವಾಟ್ಸ್​ಆ್ಯಪ್​ನಲ್ಲಿಯೇ ಇದೆ.

ವಾಟ್ಸ್​ಆ್ಯಪ್​ನಲ್ಲಿ View Once Feature ಎಂಬ ಸೌಲಭ್ಯ ಆ್ಯಂಡ್ರಾಯ್ಡ್ ಹಾಗೂ ಐಓಎಸ್ ಎರಡೂ ಬಳಕೆದಾರರಿಗೆ ಲಭ್ಯವಾಗುತ್ತಿದೆ. ಇದರಲ್ಲಿ ಫೋಟೋ ಅಥವಾ ವಿಡಿಯೋವನ್ನು ಓಪನ್ ಮಾಡಿ ನೋಡಿದ ತಕ್ಷಣ ಅದು ಮಾಯವಾಗುವುದು ಮಾತ್ರವಲ್ಲದೆ, ಇವು ಫೋನ್ ಮೆಮೊರಿಯಲ್ಲಿ ಎಲ್ಲಿಯೂ ಸ್ಟೋರ್ ಕೂಡ ಆಗದಿರುವುದು ವಿಶೇಷವಾಗಿದೆ. ವಾಟ್ಸ್​ಆ್ಯಪ್ ಪರಿಚಯಿಸಿರುವ ಈ ಸಿಂಗಲ್ ವೀವಿಂಗ್ ಆಯ್ಕೆಯನ್ನು ಈಗಾಗಲೇ ಅನೇಕರು ಮೆಚ್ಚಿಕೊಂಡಿದ್ದಾರೆ. ವಾಟ್ಸ್​ಆ್ಯಪ್​ ಕೆಲ ತಿಂಗಳ ಹಿಂದಷ್ಟೆ ಈ ಆಯ್ಕೆಯನ್ನು ಪರಿಚಯಿಸಿತ್ತು.

ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದರೆ, ಉದಾಹರಣೆಗೆ ನೀವು ನಿಮ್ಮ ಸ್ನೇಹಿತರ ಚಾಟ್ ಬಾಕ್ಸ್ ಓಪನ್ ಮಾಡಿ ಫೋಟೋ ಅಥವಾ ವಿಡಿಯೋ ಕಳುಹಿಸ ಬೇಕೆಂದಿದ್ದರೆ, ಐಕಾನ್ ಮೇಲೆ ಕ್ಲಿಕ್ ಮಾಡುತ್ತೀರಿ. ಆಗ ಫೋಟೋ ಅಥವಾ ವಿಡಿಯೋ ಸೆಲಕ್ಟ್ ಮಾಡಿ ಸೆಂಡ್ ಬಟನ್ ಪ್ರೆಸ್ ಮಾಡುವ ಪಕ್ಕದಲ್ಲೇ ವೀವ್ ಒನ್ಸ್ ಮೋಡ್ ಆಯ್ಕೆ ಇರುತ್ತದೆ. ಅದನ್ನು ಪ್ರೆಸ್ ಮಾಡಿ ಕಳುಹಿಸಿದರೆ, ನೀವು ಸೆಂಡ್ ಮಾಡಿದ ಫೈಲ್ ಅನ್ನು ಅವರಿಗೆ ಒಮ್ಮೆಗೆ ಮಾತ್ರ ಓಪನ್ ಮಾಡಲು ಸಾಧ್ಯವಾಗುತ್ತಿದೆ.

ಇದನ್ನೂ ಓದಿ
Tech Tips: ಮೊಬೈಲ್​ಗೆ ಸಿಮ್ ಕಾರ್ಡ್ ಹಾಕುವಾಗ ಈ ಟ್ರಿಕ್ ಮಾಡಿ: ನಿಮ್ಮ ಇಂಟರ್ನೆಟ್ ಹೈ-ಸ್ಪೀಡ್ ಆಗಿರುತ್ತದೆ
Reliance Digital: ಹಿಂದೆಂದೂ ಇರದ ಆಫರ್: 24,999 ರೂ. ಬೆಲೆಯ ಈ ಫೋನ್ ಕೇವಲ 12,999 ರೂ. ಗೆ ಮಾರಾಟ
ಟ್ವಿಟರ್​ಗೆ ಪ್ರತಿ ದಿನ 40 ಲಕ್ಷ ಡಾಲರ್ ನಷ್ಟ; ಸಿಬ್ಬಂದಿ ವಜಾ ಸಮರ್ಥಿಸಿದ ಎಲಾನ್​ ಮಸ್ಕ್
Reliance JIO: 56GB ಡೇಟಾ, ಅನ್ಲಿಮಿಟೆಡ್ ಕರೆ: ಇದು ಜಿಯೋ ಕಂಪನಿಯ ಬಂಪರ್ ಆಫರ್

ಈ View Once Feature ತನ್ನದೇ ಆದ ಕೆಲ ಅನುಕೂಲತೆಗಳೊಂದಿಗೆ ಕೆಲ ಅನಾನುಕೂಲಗಳನ್ನು ಸಹ ಹೊಂದಿದೆ. ಚಾಟ್ ಒಂದನ್ನು ಓಪನ್ ಮಾಡಿದ ತಕ್ಷಣ ಅದು ಚಾಟ್ ಬಾಕ್ಸ್ ನಿಂದ ಮಾಯವಾಗುವುದು ಈ ಫೀಚರ್​ನ ಅತ್ಯಂತ ಕುತೂಹಲಕಾರಿ ವಿಷಯವಾಗಿದೆ. ಈ ಚಾಟ್ ಅಥವಾ ಇದರಲ್ಲಿನ ಫೋಟೋ, ವಿಡಿಯೋ ಫೋನಿನಲ್ಲಿ ಎಲ್ಲಿಯೂ ಸೇವ್ ಆಗಿರುವುದಿಲ್ಲ ಹಾಗೂ ಇದನ್ನು ನೀವು ಮತ್ತೊಬ್ಬರಿಗೆ ಫಾರ್ವರ್ಡ್ ಕೂಡ ಮಾಡಲಾಗುವುದಿಲ್ಲ ಎಂಬುದು ಬೇಸರದ ಸಂಗತಿ.

ಇನ್ನು ವಾಟ್ಸ್​ಆ್ಯಪ್​​ನಲ್ಲಿ ಮುಂದೆ ಸಾಲು ಸಾಲು ಅಪ್ಡೇಟ್​ಗಳು ಬರಲು ತಯಾರಾಗಿದೆ. ವಾಟ್ಸ್​ಆ್ಯಪ್​ ತನ್ನ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಮೆಸೇಜ್ ವಿಥ್ ಯುವರ್​ಸೆಲ್ಫ್ ಎಂಬ ಹೊಸ ಫೀಚರ್ ಅನ್ನು ಪರಿಚಯಿಸುವ ಬಗ್ಗೆ ಕೆಲಸ ಮಾಡುತ್ತಿದೆ. ಸದ್ಯಕ್ಕೆ ಬೀಟಾ ವರ್ಷನ್​ನಲ್ಲಿ ಈ ಆಯ್ಕೆ ಕಾಣಿಸಿಕೊಂಡಿದೆ. ವಾಟ್ಸ್​ಆ್ಯಪ್​ನಲ್ಲಿ ನಿಮಗೆ ನೀವೇ ಮೆಸೇಜ್ ಮಾಡಲು ಈಗಲು ಸಾಧ್ಯವಿದೆ. ಆದರೆ, ಅದು ಗ್ರೂಪ್ ಒಂದನ್ನು ರಚಿಸಿ ನೀವೊಬ್ಬರೆ ಆ ಗ್ರೂಪ್​ನ ಸದಸ್ಯರಾಗಿ ಮೆಸೇಜ್ ಮಾಡಬಹುದು. ಆದರೀಗ ವಾಟ್ಸ್​ಆ್ಯಪ್ ನೀಡಲಿರುವ ಈ ಹೊಸ ಆಯ್ಕೆಯಲ್ಲಿ ಕಾಂಟೆಕ್ಟ್​ ಲಿಸ್ಟ್​ನಲ್ಲಿ ಬೇರೆಯವರ ನಂಬರ್ ಜೊತೆ ನಿಮ್ಮ ನಂಬರ್ ಕೂಡ ಕಾಣಲಿದೆ. ಆ ನಂಬರ್ ಮೇಲೆ ಕ್ಲಿಕ್ ಮಾಡಿದರೆ ಚಾಟ್ ಬಾಕ್ಸ್ ಕೂಡ ತೆರೆಯಲಿದ್ದು ಆಗ ನಿಮಗೆ ನೀವೇ ಮಸೇಜ್ ಮಾಡಬಹುದಾಗಿದೆ.

Published On - 2:51 pm, Sat, 5 November 22