Reliance Digital: ಹಿಂದೆಂದೂ ಇರದ ಆಫರ್: 24,999 ರೂ. ಬೆಲೆಯ ಈ ಫೋನ್ ಕೇವಲ 12,999 ರೂ. ಗೆ ಮಾರಾಟ

Oppo A17 Offer: ರಿಲಯನ್ಸ್ ಡಿಜಿಟಲ್​ನಲ್ಲಿ (Reliance Digital) ನಡೆಯುತ್ತಿರುವ ಮೊಬೈಲ್ ಡೇಸ್ ಸೇಲ್​ನಲ್ಲಿ ಬಂಪರ್ ಆಫರ್ ನೀಡಲಾಗಿದೆ. ಇತ್ತೀಚೆಗಷ್ಟೆ ಬಿಡುಗಡೆ ಆದ ಒಪ್ಪೋ ಕಂಪನಿಯ ಒಪ್ಪೋ ಎ17 ಫೋನ್ ಶೇ. 50 ರಷ್ಟು ಡಿಸ್ಕೌಂಟ್ ಪಡೆದುಕೊಂಡಿದೆ.

Reliance Digital: ಹಿಂದೆಂದೂ ಇರದ ಆಫರ್: 24,999 ರೂ. ಬೆಲೆಯ ಈ ಫೋನ್ ಕೇವಲ 12,999 ರೂ. ಗೆ ಮಾರಾಟ
Oppo A17
Follow us
TV9 Web
| Updated By: Vinay Bhat

Updated on:Nov 05, 2022 | 12:33 PM

ನೀವು ಹೊಸ ಸ್ಮಾರ್ಟ್​ಫೋನ್ ಖರೀದಿಸುವ ಯೋಜನೆಯಲ್ಲಿದ್ದರೆ ಇಲ್ಲೊಂದು ಅತ್ಯುತ್ತಮ ಆಫರ್ ಇದೆ. ಮಧ್ಯಮ ಬೆಲೆಯ ಈ ಮೊಬೈಲ್ ಅನ್ನು ನೀವು ಬಜೆಟ್ ಬೆಲೆಗೆ ಖರೀದಿಸಬಹುದು. ರಿಲಯನ್ಸ್ ಡಿಜಿಟಲ್​ನಲ್ಲಿ (Reliance Digital) ನಡೆಯುತ್ತಿರುವ ಮೊಬೈಲ್ ಡೇಸ್ ಸೇಲ್​ನಲ್ಲಿ ಬಂಪರ್ ಆಫರ್ ನೀಡಲಾಗಿದೆ. ವಿವೋ, ರಿಯಲ್ ಮಿ, ಒಪ್ಪೋ, ಮೋಟೋ, ರೆಡ್ಮಿ ಸೇರಿದಂತೆ ಅನೇಕ ಸ್ಮಾರ್ಟ್​ಫೋನ್​ಗಳು (Smartphones) ಆಕರ್ಷಕ ರಿಯಾಯಿತಿ ದರಕ್ಕೆ ಮಾರಾಟ ಆಗುತ್ತಿದೆ. ಮುಖ್ಯವಾಗಿ ಇತ್ತೀಚೆಗಷ್ಟೆ ಬಿಡುಗಡೆ ಆದ ಒಪ್ಪೋ ಕಂಪನಿಯ ಒಪ್ಪೋ ಎ17 (Oppo A17) ಫೋನ್ ಶೇ. 50 ರಷ್ಟು ಡಿಸ್ಕೌಂಟ್ ಪಡೆದುಕೊಂಡಿದೆ. ಇಷ್ಟೇ ಅಲ್ಲದೆ ಕ್ಯಾಶ್​ಬ್ಯಾಕ್ ಆಫರ್ ಮೂಲಕ ಮತ್ತಷ್ಟು ಕಡಿಮೆ ಬೆಲೆಗೆ ಈ ಫೋನನ್ನು ನಿಮ್ಮದಾಗಿಸಬಹುದು. ಹಾಗದರೆ ಒಪ್ಪೋ A17 ಸ್ಮಾರ್ಟ್‌ಫೋನ್‌ ಎಷ್ಟು ರೂ. ಗೆ ಮಾರಾಟ ಆಗುತ್ತಿದೆ?, ಇದರಲ್ಲಿ ಏನೆಲ್ಲ ಫೀಚರ್ಸ್ ಇದೆ? ಎಂಬುದನ್ನು ನೋಡೋಣ.

ಒಪ್ಪೋ A17 ಸ್ಮಾರ್ಟ್‌ಫೋನ್​ನ 4GB RM + 64GB ಸ್ಟೋರೇಜ್ ಆಯ್ಕೆಯ ಮೂಲ ಬೆಲೆ ಭಾರತದಲ್ಲಿ 24,999 ರೂ. ಇದೆ. ಆದರೀಗ ರಿಲಯನ್ಸ್ ಡಿಜಿಟಲ್​ನಲ್ಲಿ ನಡೆಯುತ್ತಿರುವ ಮೊಬೈಲ್ ಡೇಸ್ ಸೇಲ್​ನಲ್ಲಿ ಇದು ಶೇ. 50 ರಷ್ಟು ರಿಯಾಯಿತಿ ಪಡೆದುಕೊಂಡು ಕೇವಲ 12,499 ರೂ. ಗೆ ಮಾರಾಟ ಆಗುತ್ತಿದೆ. ಜೊತೆಗೆ ಮೊಬಿಕ್​ವಿಕ್ ವಾಲೆಟ್ ಮೂಲಕ 1000 ರೂ. ಗಳ ಮತ್ತಷ್ಟು ಡಿಸ್ಕೌಂಟ್ ಪಡೆಯಬಹುದು. ಈ ಫೋನ್‌ ಲೇಕ್ ಬ್ಲೂ ಮತ್ತು ಮಿಡ್ನೈಟ್ ಬ್ಲಾಕ್ ಕಲರ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವುದೆ.

ಈ ಸ್ಮಾರ್ಟ್‌ಫೋನ್‌ 720 x 1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.56 ಇಂಚಿನ ಹೆಚ್‌ಡಿ ಪ್ಲಸ್‌ LCD ಡಿಸ್‌ಪ್ಲೇ ಹೊಂದಿದೆ. ಡಿಸ್‌ಪ್ಲೇ 60Hz ರಿಫ್ರೆಶ್ ರೇಟ್​ನಿಂದ ಕೂಡಿದೆ. ಮೀಡಿಯಾ ಟೆಕ್ ಹೆಲಿಯೊ G35 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 12 ಬೆಂಬಲವನ್ನು ಪಡೆದಿದೆ. ಹಾಗೆಯೇ 4GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ.

ಇದನ್ನೂ ಓದಿ
Image
ಟ್ವಿಟರ್​ಗೆ ಪ್ರತಿ ದಿನ 40 ಲಕ್ಷ ಡಾಲರ್ ನಷ್ಟ; ಸಿಬ್ಬಂದಿ ವಜಾ ಸಮರ್ಥಿಸಿದ ಎಲಾನ್​ ಮಸ್ಕ್
Image
Reliance JIO: 56GB ಡೇಟಾ, ಅನ್ಲಿಮಿಟೆಡ್ ಕರೆ: ಇದು ಜಿಯೋ ಕಂಪನಿಯ ಬಂಪರ್ ಆಫರ್
Image
ಭಾರತದಲ್ಲಿ ಟ್ವಿಟರ್ ಉದ್ಯೋಗಿಗಳ ವಜಾ ಆರಂಭಿಸಿದ ಎಲಾನ್ ಮಸ್ಕ್
Image
Tech Tips: ಇನ್​ಸ್ಟಾಗ್ರಾಮ್​ನಲ್ಲಿ ಸ್ಟೋರಿಗಳನ್ನು ಕೆಲವೇ ಜನರಿಗೆ ಕಾಣುವಂತೆ ಮಾಡುವುದು ಹೇಗೆ?: ಇಲ್ಲಿದೆ ಟ್ರಿಕ್

ಒಪ್ಪೋ A17 ಸ್ಮಾರ್ಟ್‌ಫೋನ್‌ ಡ್ಯುಯಲ್ ರಿಯರ್‌ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಡೆಪ್ತ್ ಸೆನ್ಸಾರ್‌ ಹೊಂದಿದೆ. ಇದಲ್ಲದೆ ವಿಡಿಯೋ ಕರೆಗಳು ಹಾಗೂ ಸೆಲ್ಫಿಗಾಗಿ 5 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇನ್ನು ಕ್ಯಾಮೆರಾ ಫೀಚರ್ಸ್‌ಗಳಲ್ಲಿ AI, 360 ಡಿಗ್ರಿ ಫಿಲ್ ಲೈಟ್, ಪೋರ್ಟ್ರೇಟ್ ರಿಟೌಚಿಂಗ್, HDR ಅನ್ನು ಒಳಗೊಂಡಿದೆ.

ದೀರ್ಘ ಸಮಯ ಬಾಳಿಕೆ ಬರುವ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು ಸೂಪರ್ ಪವರ್ ಸೇವಿಂಗ್ ಮೋಡ್ ಮತ್ತು ಸೂಪರ್ ನೈಟ್‌ಟೈಮ್ ಸ್ಟ್ಯಾಂಡ್‌ಬೈ ಅನ್ನು ಪಡೆದುಕೊಂಡದೆ. 3.5mm ಹೆಡ್​ಫೋನ್ ಜ್ಯಾಕ್ ನೀಡಲಾಗಿದ್ದು, ಸೈಡ್ ಮೌಂಟೆಡ್ ಫಿಂಗರ್​ಪ್ರಿಂಟ್ ಸೆನ್ಸಾರ್ ಅಳವಡಿಸಲಾಗಿದೆ.

Published On - 12:32 pm, Sat, 5 November 22

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್