Nokia 2780 Flip: ನೋಕಿಯಾದಿಂದ ಬಜೆಟ್ ಬೆಲೆಗೆ ಬಂಪರ್ ಫೋನ್ ಬಿಡುಗಡೆ: ಇದರ ಬೆಲೆ ಕೇವಲ…

ಮೊನ್ನೆಯಷ್ಟೆ ಭಾರತದಲ್ಲಿ ಮೊಟ್ಟ ಮೊದಲ 5G ಫೋನ್ ಬಿಡುಗಡೆ ಮಡಿದ್ದ ನೋಕಿಯಾ ಕಂಪನಿ ಇದೀಗ ಜಾಗತಿಕ ಮಾರುಕಟ್ಟೆಯಲ್ಲಿ ನೋಕಿಯಾ 2780 ಫ್ಲಿಪ್ (Nokia 2780 Flip) ಫೀಚರ್‌ ಫೋನ್ ರಿಲೀಸ್ ಮಾಡಿದೆ.

Nokia 2780 Flip: ನೋಕಿಯಾದಿಂದ ಬಜೆಟ್ ಬೆಲೆಗೆ ಬಂಪರ್ ಫೋನ್ ಬಿಡುಗಡೆ: ಇದರ ಬೆಲೆ ಕೇವಲ...
Nokia 2780 Flip
Follow us
TV9 Web
| Updated By: Vinay Bhat

Updated on:Nov 04, 2022 | 12:45 PM

ನೋಕಿಯಾ (Nokia) ಕಂಪನಿಯ ಫೋನ್​ಗಳಿಗೆ ಈಗ ಹಿಂದಿನಂತೆ ಬೇಡಿಕೆಯಿಲ್ಲ. ಶವೋಮಿ (Xiaomi), ಸ್ಯಾಮ್​ಸಂಗ್, ರಿಯಲ್ ಮಿ, ಒಪ್ಪೋ, ಒನ್​ಪ್ಲಸ್​ ನಂತಹ ಘಟಾನುಘಟಿ ಕಂಪನಿಗಳ ಸ್ಮಾರ್ಟ್​​ಫೋನ್ ಹೊಡೆತಕ್ಕೆ ಸಿಲುಕಿರುವ ನೋಕಿಯಾ ಅಪರೂಪಕ್ಕೆ ಮೊಬೈಲ್​ಗಳನ್ನು ಬಿಡುಗಡೆ ಮಾಡುತ್ತಿದೆ. ಮೊನ್ನೆಯಷ್ಟೆ ಭಾರತದಲ್ಲಿ ಮೊಟ್ಟ ಮೊದಲ 5G ಫೋನ್ ಬಿಡುಗಡೆ ಮಡಿದ್ದ ನೋಕಿಯಾ ಕಂಪನಿ ಇದೀಗ ಜಾಗತಿಕ ಮಾರುಕಟ್ಟೆಯಲ್ಲಿ ನೋಕಿಯಾ 2780 ಫ್ಲಿಪ್ (Nokia 2780 Flip) ಫೀಚರ್‌ ಫೋನ್ ರಿಲೀಸ್ ಮಾಡಿದೆ. ಡ್ಯುಯಲ್ ಸ್ಕ್ರೀನ್‌ ಹೊಂದಿರುವ ಈ ಫೋನ್​ನಲ್ಲಿ ಬಲವಾದ ಬ್ಯಾಟರಿ ನೀಡಲಾಗಿದೆ. ಇದರ ವಿನ್ಯಾಸಕ್ಕೆ ಜನರು ಮನಸೋತಿದ್ದಾರೆ. ಹಾಗಾದರೆ ನೋಕಿಯಾ 2660 ಫ್ಲಿಪ್ ಫೋನಿನ ಬೆಲೆ ಎಷ್ಟು?, ಏನು ವಿಶೇಷತೆ ಎಂಬುದನ್ನು ನೋಡೋಣ.

  • ನೋಕಿಯಾ 2780 ಫ್ಲಿಪ್ ಫೋನ್‌ ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ $89.99, ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜು 7,400ರೂ. ಎನ್ನಬಹುದು. ಇದು ಕೆಂಪು ಮತ್ತು ನೀಲಿ ಬಣ್ಣಗಳ ಆಯ್ಕೆಯಲ್ಲಿ ನೀಡಲಾಗುತ್ತದೆ.
  • ಈ ಫೋನ್‌ 2.7 ಇಂಚಿನ TFT ಡಿಸ್‌ಪ್ಲೇಯನ್ನು ಹೊಂದಿದೆ. ಇದರ ಹೊರಭಾಗದಲ್ಲಿ 1.77 ಇಂಚಿನ ಸೆಕೆಂಡರಿ ಡಿಸ್‌ಪ್ಲೇಯನ್ನು ನೀಡಲಾಗಿದೆ. ಟೈಂ, ಕಾಲರ್‌ ಐಡಿ ಮತ್ತು ನ್ಯೂ ಅಪ್ಡೇಟ್‌ಗಳು ಸೆಕೆಂಡರಿ ಡಿಸ್‌ಪ್ಲೇಯಲ್ಲಿ ಕಾಣಿಸುತ್ತದೆ.
  • ನೋಕಿಯಾ 2780 ಫ್ಲಿಪ್ ಫೋನ್‌ ಕ್ವಾಲ್ಕಾಮ್ 215 ಪ್ರೊಸೆಸರ್‌ ವೇಗವನ್ನು ಪಡೆದಿದ್ದು, KaiOS 3.1 ನಲ್ಲಿ ಕಾರ್ಯನಿರ್ವಹಿಸಲಿದೆ. ಇದು 1.3 GHz ನಲ್ಲಿ ಚಾಲನೆಯಲ್ಲಿರುವ ಕ್ವಾಡ್-ಕೋರ್ CPU ಮತ್ತು 150 Mbps ಗರಿಷ್ಠ ಡೌನ್‌ಲಿಂಕ್ ವೇಗದೊಂದಿಗೆ X5 LTE ಮೋಡೆಮ್ ಅನ್ನು ಒಳಗೊಂಡಿರುತ್ತದೆ.
  • 4GB RAM ಮತ್ತು 512MB ಇಂಟರ್‌ ಸ್ಟೋರೇಜ್‌ ಅನ್ನು ಒಳಗೊಂಡಿರುವ ಈ ಫೋನ್​ನ ಸೆಕೆಂಡರಿ ಸ್ಕ್ರೀನ್‌ ಮೇಲೆ ಎಲ್‌ಇಡಿ ಫ್ಲ್ಯಾಷ್‌ ಒಳಗೊಂಡಿರುವ 5 ಮೆಗಾಪಿಕ್ಸೆಲ್‌ ಸೆನ್ಸಾರ್‌ ಕ್ಯಾಮೆರಾವನ್ನು ಕೂಡ ನೀಡಲಾಗಿದೆ.
  • 1,450mAh ಸಾಮರ್ಥ್ಯದ ರಿಮೂವಬಲ್‌ ಬ್ಯಾಟರಿಯನ್ನು ಒಳಗೊಂಡಿದೆ. ಗೂಗಲ್ ಮ್ಯಾಪ್‌, ಯೂಟ್ಯೂಬ್ ಮತ್ತು ವೆಬ್ ಬ್ರೌಸರ್ ನೀಡಿರುವುದು ವಿಶೇಷ. ವೈಫೈ, MP3 ಮತ್ತು FM ರೇಡಿಯೋ ಬೆಂಬಲ ಕೂಡ ಪಡೆದುಕೊಂಡಿದೆ.

ಭಾರತಕ್ಕೆ ಬಂದಿದೆ ನೋಕಿಯಾ G60 5G:

ನೋಕಿಯಾ ಕಂಪನಿ ಭಾರತದಲ್ಲಿ ತನ್ನ ಮೊಟ್ಟ ಮೊದಲ 5G ಫೋನ್‌ ಬಿಡುಗಡೆ ಮಾಡಿದೆ. ಮಧ್ಯಮ ಬೆಲೆ ಹೊಂದಿರುವ ಈ ಫೋನಿನ ಹೆಸರು ನೋಕಿಯಾ G60 5G. ಇದರ 6GB RAM, 128GB ಸ್ಟೋರೇಜ್ ಆಯ್ಕೆಗೆ 29,999 ರೂ. ನಿಗದಿ ಮಾಡಲಾಗಿದೆ. 6.58 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಹೊಂದಿದೆ. ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್‌ ವೇಗದೊಂದಿಗೆ ಕಾರ್ಯನಿರ್ವಹಿಸಲಿದ್ದು ಆಂಡ್ರಾಯ್ಡ್‌ 12 OS ಅಳವಡಿಸಲಾಗಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯ ಪಡೆದುಕೊಂಡರೆ, ಎರಡನೇ ಕ್ಯಾಮೆರಾ 5 ಮೆಗಾಪಿಕ್ಸೆಲ್‌, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಡೆಪ್ತ್ ಸೆನ್ಸಾರ್, 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಅಳವಡಿಸಲಾಗಿದೆ. 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. ಇದಕ್ಕೆ ತಕ್ಕಂತೆ 20W ವೇಗದ ಚಾರ್ಜಿಂಗ್‌ ಬೆಂಬಲಿಸಲಿದೆ.

ಇದನ್ನೂ ಓದಿ
Image
Twitter Down: ಭಾರತದ ಕೆಲ ಕಡೆಗಳಲ್ಲಿ ಟ್ವಿಟರ್ ಡೌನ್: ಲಾಗಿನ್ ಮಾಡಲು ಜನರ ಪರದಾಟ
Image
Facebook India: ಭಾರತದ ಫೇಸ್‌ಬುಕ್ ಮುಖ್ಯಸ್ಥ ಅಜಿತ್ ಮೋಹನ್ ರಾಜೀನಾಮೆ
Image
WhatsApp New Features: ಮೂರು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಿದ WhatsApp, ಇಲ್ಲಿದೆ ನೋಡಿ
Image
ಮೊಬೈಲ್​ನಲ್ಲಿ ಈ ಬ್ಲೂಟೂತ್​ ಆ್ಯಪ್​ಗಳನ್ನು​ ಬಳಸುತ್ತಿದ್ದೀರಾ?; ಹಾಗಿದ್ದರೆ ಎಚ್ಚರ!

Published On - 12:45 pm, Fri, 4 November 22