Tech Tips: ಕಾಲ್ ರಿಸೀವ್ ಮಾಡಿದಾಗ ಫೋನ್ ಅಟೋಮೆಟಿಕ್ ಆಗಿ ನಿಮ್ಮ ಧ್ವನಿಯಲ್ಲೇ ಮಾತಾಡುತ್ತೆ: ಹೇಗೆ ಗೊತ್ತೇ?

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 05, 2024 | 2:50 PM

ಸಾಮಾನ್ಯವಾಗಿ ಅಪರಿಚಿತ ಸಂಖ್ಯೆಯಿಂದ ಕರೆಯ ಮಾಲೀಕರ ಹೆಸರನ್ನು ತಿಳಿಯಲು ನಾವು ಟ್ರೂಕಾಲರ್ ಅನ್ನು ಬಳಸುತ್ತೇವೆ. ಆದರೆ ಈಗ ಈ ಟ್ರೂಕಾಲರ್ ಮೂಲಕ ನಿಮ್ಮ ಫೋನ್​ನಲ್ಲಿ ನೀವು ನಿಮ್ಮ ಧ್ವನಿಯಲ್ಲೇ ಅಟೋಮೆಟಿಕ್ ಆಗಿ ಮಾತನಾಡಬಹುದು.

Tech Tips: ಕಾಲ್ ರಿಸೀವ್ ಮಾಡಿದಾಗ ಫೋನ್ ಅಟೋಮೆಟಿಕ್ ಆಗಿ ನಿಮ್ಮ ಧ್ವನಿಯಲ್ಲೇ ಮಾತಾಡುತ್ತೆ: ಹೇಗೆ ಗೊತ್ತೇ?
ಸಾಂದರ್ಭಿಕ ಚಿತ್ರ
Follow us on

Truecaller AI Voice Assistant: ಕೃತಕ ಬುದ್ಧಿಮತ್ತೆ (AI) ಇಂದು ಅತ್ಯಂತ ಜನಪ್ರಿಯ ತಂತ್ರಜ್ಞಾನವಾಗಿದೆ. ಇದು ಮಕ್ಕಳಿಂದ ಹಿಡಿದು ವಯಸ್ಕರ ವರೆಗೆ ಕೆಲಸ ಮಾಡುವ ವಿಧಾನವನ್ನೇ ಬದಲಾಯಿಸಿದೆ. ಎಷ್ಟರ ಮಟ್ಟಿಗೆ ಎಂದರೆ, ನಿಮ್ಮ ಮೊಬೈಲ್​ಗೆ ಒಂದು ಕಾಲ್ ಬರುತ್ತಿದೆ ಎಂದುಕೊಳ್ಳಿ. ಆಗ ನೀವು ಕರೆ ಸ್ವೀಕರಿಸಿದಾಗ ನಿಮ್ಮ ಫೋನ್ ಸ್ವಯಂಚಾಲಿತವಾಗಿ ಕರೆ ಮಾಡಿದವರ ಜೊತೆ ನಿಮ್ಮ ಧ್ವನಿಯಲ್ಲೇ ಮಾತನಾಡುವ ಮಟ್ಟಿಗೆ ಬಂದು ನಿಂತಿದೆ. AI ಸಹಾಯದಿಂದ ಇದು ಸಾಧ್ಯವಾಗಿದೆ. ಇಂತಹ ಸಾಹಸ ಮಾಡಿರುವುದು ಟ್ರೂಕಾಲರ್.

ಸಾಮಾನ್ಯವಾಗಿ ಅಪರಿಚಿತ ಸಂಖ್ಯೆಯಿಂದ ಕರೆಯ ಮಾಲೀಕರ ಹೆಸರನ್ನು ತಿಳಿಯಲು ನಾವು ಟ್ರೂಕಾಲರ್ ಅನ್ನು ಬಳಸುತ್ತೇವೆ. ಆದರೆ ಈಗ ಈ ಟ್ರೂಕಾಲರ್ ಮೂಲಕ ನಿಮ್ಮ ಫೋನ್​ನಲ್ಲಿ ನೀವು ನಿಮ್ಮ ಧ್ವನಿಯಲ್ಲೇ ಅಟೋಮೆಟಿಕ್ ಆಗಿ ಮಾತನಾಡಬಹುದು.

ಟ್ರೂಕಾಲರ್ ತನ್ನ ಟ್ರೂಕಾಲರ್ ಅಸಿಸ್ಟೆಂಟ್ ಪರ್ಸನಲ್ ಸೌಂಡ್ ಎಂಬ ವೈಶಿಷ್ಟ್ಯವನ್ನು ನೀಡುತ್ತದೆ. ಈ ವೈಶಿಷ್ಟ್ಯದ ಅಡಿಯಲ್ಲಿ ನೀವು ನಿಮ್ಮ ಧ್ವನಿಯ ಡಿಜಿಟಲ್ ಆವೃತ್ತಿಯನ್ನು ರಚಿಸಬಹುದು. ನಂತರ ನಿಮ್ಮ ಡಿಜಿಟಲ್ ಧ್ವನಿಯನ್ನು Truecaller ಅಸಿಸ್ಟೆಂಟ್ ಬಳಸುತ್ತದೆ.

ಮೈಕ್ರೋಸಾಫ್ಟ್ ಸಹಯೋಗದೊಂದಿಗೆ ಮಾಡಿದ ವೈಶಿಷ್ಟ್ಯ:

ಇತರರೊಂದಿಗೆ ಸಂಭಾಷಣೆಗಳನ್ನು ಹೆಚ್ಚು ವೈಯಕ್ತೀಕರಿಸುವುದು ಇದರ ಉದ್ದೇಶವಾಗಿದೆ. ಇದರಿಂದ ಇನ್ನೊಂದು ಬದಿಯಲ್ಲಿ ಮಾತನಾಡುವ ವ್ಯಕ್ತಿಯು ಆರಾಮದಾಯಕವಾಗಿ ನಿಮ್ಮ ಮಾತುಗಳನ್ನು ಕೇಳಬಹುದು. ಈ ವೈಶಿಷ್ಟ್ಯವನ್ನು ಹೇಗೆ ಬಳಸಬಹುದು ಎಂಬುದನ್ನು ಕೆಳಗೆ ತಿಳಿಸಲಾಗಿದೆ.
ಮೈಕ್ರೋಸಾಫ್ಟ್ ಜೊತೆಗಿನ ಟ್ರೂಕಾಲರ್​ನ ಪಾಲುದಾರಿಕೆಯ ಭಾಗವಾಗಿ ವೈಯಕ್ತಿಕ ಧ್ವನಿ ವೈಶಿಷ್ಟ್ಯವನ್ನು ಅಭಿವೃದ್ಧಿಪಡಿಸಲಾಗಿದೆ. Microsoft Azure AI ಸ್ಪೀಚ್‌ನ ಹೊಸ ವೈಯಕ್ತಿಕ ಧ್ವನಿ ತಂತ್ರಜ್ಞಾನವನ್ನು ಅಪ್ಲಿಕೇಶನ್‌ಗೆ ತರಲು ಎರಡು ಕಂಪನಿಗಳು ಸಹಕರಿಸಿವೆ.

ನಿಮ್ಮ ಧ್ವನಿಯ ಡಿಜಿಟಲ್ ಆವೃತ್ತಿಯನ್ನು ಹೀಗೆ ರಚಿಸಿ:

ಬಳಕೆದಾರರು ಸ್ಟ್ಯಾಂಡರ್ಡ್ ಡಿಜಿಟಲ್ ಅಸಿಸ್ಟೆಂಟ್ ಧ್ವನಿಯನ್ನು ತಮ್ಮದೇ ಆದ ಧ್ವನಿಯೊಂದಿಗೆ ಬದಲಾಯಿಸಬಹುದು. ಇದರಿಂದಾಗಿ ಟ್ರೂಕಾಲರ್ ಅಸಿಸ್ಟೆಂಟ್ ಯಾರಿಗಾದರೂ ಕರೆಯಲ್ಲಿ ಮಾತನಾಡುವಾಗ, ಸಂಭಾಷಣೆಯು ನಿಮ್ಮ ಸ್ವಂತ ಧ್ವನಿಯಲ್ಲಿ ಕೇಳಿಸುತ್ತದೆ.

ವೈಯಕ್ತಿಕ ಧ್ವನಿ ವೈಶಿಷ್ಟ್ಯವನ್ನು ಬಳಸಲು, ಬಳಕೆದಾರರು ಟ್ರೂ ಕಾಲರ್ ಅಪ್ಲಿಕೇಶನ್‌ ನ ಇತ್ತೀಚಿನ ಆವೃತ್ತಿಯನ್ನು ಹೊಂದಿರಬೇಕು ಮತ್ತು ಟ್ರೂ ಕಾಲರ್ ಪ್ರೀಮಿಯಂ ಸದಸ್ಯರಾಗಿರಬೇಕು ಎಂಬುದು ನೆನಪಿರಲಿ. ಟ್ರೂ ಕಾಲರ್ ಪ್ರೀಮಿಯಂ ಚಂದಾದಾರಿಕೆಯ ಬೆಲೆ ತಿಂಗಳಿಗೆ 99 ರೂ. ಗಳಿಂದ ಪ್ರಾರಂಭವಾಗುತ್ತದೆ.

ಇದನ್ನೂ ಓದಿ: ವಾಟ್ಸ್​ಆ್ಯಪ್​ನಲ್ಲಿ ಇಂಟರ್ನೆಟ್ ಇಲ್ಲದೆ ಯಾವುದೇ ಫೈಲ್​ಗಳನ್ನು ಶೇರ್ ಮಾಡುವುದು ಹೇಗೆ ಗೊತ್ತೇ?

ಈ ರೀತಿಯ ಸೆಟ್ಟಿಂಗ್‌ಗಳನ್ನು ಮಾಡಿ:

ಧ್ವನಿಯನ್ನು ಹೊಂದಿಸುವ ವಿಧಾನವು ತುಂಬಾ ಸುಲಭವಾಗಿದೆ. ಅಪ್ಲಿಕೇಶನ್‌ನಲ್ಲಿ ಅಸಿಸ್ಟೆಂಟ್ ಸೆಟ್ಟಿಂಗ್‌ಗಳಿಗೆ ಹೋಗಿ ಮತ್ತು ನಿಮ್ಮ ಧ್ವನಿಯನ್ನು ರೆಕಾರ್ಡ್ ಮಾಡಲು ಮತ್ತು ಹೊಂದಿಸಲು ಸೂಚನೆಗಳನ್ನು ಅನುಸರಿಸಿ. ಇದರ ನಂತರ, ಕರೆ ಬಂದಾಗ AI ಅಸಿಸ್ಟೆಂಟ್ ನಿಮ್ಮ ಧ್ವನಿಯಲ್ಲಿ ಮಾತನಾಡುತ್ತದೆ ಮತ್ತು ಕರೆ ಮಾಡುವವರು ನಿಮ್ಮ ಧ್ವನಿಯಲ್ಲೇ ಕೇಳುತ್ತಾರೆ.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ