Tech Tips: ವಾಟ್ಸ್ಆ್ಯಪ್ನಲ್ಲಿ ಇಂಟರ್ನೆಟ್ ಇಲ್ಲದೆ ಯಾವುದೇ ಫೈಲ್‌ಗಳನ್ನು ಶೇರ್ ಮಾಡುವುದು ಹೇಗೆ ಗೊತ್ತೇ?
ವಾಟ್ಸ್ಆ್ಯಪ್ನ ಮಾತೃ ಸಂಸ್ಥೆ ಮೆಟಾ ಈ ಹೊಸ ಫೀಚರ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದರ ಅಡಿಯಲ್ಲಿ, ವಾಟ್ಸ್ಆ್ಯಪ್ ಮೂಲಕ ಕುಟುಂಬ ಮತ್ತು ಸ್ನೇಹಿತರಿಗೆ ಯಾವುದೇ ಮೀಡಿಯಾ ಫೈಲ್ ಅನ್ನು ಕಳುಹಿಸಲು ಜನರಿಗೆ ಡೇಟಾ ಅಗತ್ಯವಿಲ್ಲ. ಈ ವೈಶಿಷ್ಟ್ಯವು ಐಫೋನ್ನ AirDrop ಫೈಲ್ ಹಂಚಿಕೆ ವೈಶಿಷ್ಟ್ಯದಂತೆ ಕಾರ್ಯನಿರ್ವಹಿಸುತ್ತದೆ.
WhatsApp New Feature: ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್ ಅನ್ನು ಇಂದು ಕೋಟ್ಯಾಂತರ ಜನರು ಉಪಯೋಗಿಸುತ್ತಿದ್ದಾರೆ. ಇದರ ಬಳಕೆಗೆ ಇಂಟರ್ನೆಟ್ ಬೇಕೇ ಬೇಕು. ನೀವು ಯಾವುದೇ ವಿಡಿಯೋ, ಫೋಟೋ ಅಥವಾ ಏನೇ ಫೈಲ್ ಅನ್ನು ವಾಟ್ಸ್ಆ್ಯಪ್ ಮೂಲಕ ಮತ್ತೊಂದು ಫೋನ್‌ಗೆ ಕಳುಹಿಸಲು ಬಯಸಿದರೆ, ಖಂಡಿತವಾಗಿಯೂ ಇಂಟರ್ನೆಟ್ ಅಗತ್ಯವಿದೆ. ಆದರೆ ಶೀಘ್ರದಲ್ಲೇ ವಾಟ್ಸ್ಆ್ಯಪ್ ಮಹತ್ವದ ಫೀಚರ್ ಒಂದು ಬಿಡುಗಡೆ ಮಾಡಲಿದೆ. ಇದರ ಮೂಲಕ ಎರಡು ಸ್ಮಾರ್ಟ್‌ಫೋನ್‌ಗಳ ನಡುವೆ ಫೈಲ್‌ಗಳನ್ನು ವರ್ಗಾಯಿಸಲು ನಿಮಗೆ ಇಂಟರ್ನೆಟ್ ಅಗತ್ಯವಿಲ್ಲ.
ವಾಟ್ಸ್ಆ್ಯಪ್ನ ಮಾತೃ ಸಂಸ್ಥೆ ಮೆಟಾ ಈ ಹೊಸ ಫೀಚರ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದರ ಅಡಿಯಲ್ಲಿ, ವಾಟ್ಸ್ಆ್ಯಪ್ ಮೂಲಕ ಕುಟುಂಬ ಮತ್ತು ಸ್ನೇಹಿತರಿಗೆ ಯಾವುದೇ ಮೀಡಿಯಾ ಫೈಲ್ ಅನ್ನು ಕಳುಹಿಸಲು ಜನರಿಗೆ ಡೇಟಾ ಅಗತ್ಯವಿಲ್ಲ. ಈ ವೈಶಿಷ್ಟ್ಯವು ಐಫೋನ್ನ AirDrop ಫೈಲ್ ಹಂಚಿಕೆ ವೈಶಿಷ್ಟ್ಯದಂತೆ ಕಾರ್ಯನಿರ್ವಹಿಸುತ್ತದೆ.
Wabitinfo ಪ್ರಕಾರ, ವಾಟ್ಸ್ಆ್ಯಪ್ iOS ಅಪ್ಲಿಕೇಶನ್‌ಗಾಗಿ ಹೊಸ ಫೈಲ್ ಹಂಚಿಕೆ ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದೆ. ವಾಟ್ಸ್ಆ್ಯಪ್ ನ ಈ ಹೊಸ ವೈಶಿಷ್ಟ್ಯದ ಮೂಲಕ, ವಾಟ್ಸ್ಆ್ಯಪ್ ಖಾತೆಯಲ್ಲಿ ಡಾಕ್ಯುಮೆಂಟ್‌ಗಳು, ಫೋಟೋಗಳು, ವಿಡಿಯೋಗಳು ಮತ್ತು ಇತರ ಫೈಲ್‌ಗಳನ್ನು ಹಂಚಿಕೊಳ್ಳುವುದು ಸುಲಭವಾಗುತ್ತದೆ.
iOS ಗಾಗಿ ವಾಟ್ಸ್ಆ್ಯಪ್ ಬೀಟಾ ಆವೃತ್ತಿ 24.15.10.70 ಅಪ್‌ಡೇಟ್‌ನಲ್ಲಿ ಈ ಹೊಸ ವೈಶಿಷ್ಟ್ಯವನ್ನು ಗುರುತಿಸಲಾಗಿದೆ. ಈ ವೈಶಿಷ್ಟ್ಯವು ಆಂಡ್ರಾಯ್ಡ್ನಲ್ಲಿ ಹತ್ತಿರದ ಸಾಧನ ಪತ್ತೆಹಚ್ಚುವಿಕೆಯ ಬದಲಿಗೆ QR ಕೋಡ್ ಮೂಲಕ ಫೈಲ್‌ಗಳನ್ನು ವರ್ಗಾಯಿಸುತ್ತದೆ. ವಾಟ್ಸ್ಆ್ಯಪ್ ನ ಹೊಸ ಫೈಲ್ ಹಂಚಿಕೆ ವೈಶಿಷ್ಟ್ಯವನ್ನು ಪ್ರಸ್ತುತ ಪರೀಕ್ಷಿಸಲಾಗುತ್ತಿದೆ. ಈ ಆಯ್ಕೆ ಬಂದರೆ ಫೈಲ್‌ಗಳನ್ನು ಪರಸ್ಪರ ಹಂಚಿಕೊಳ್ಳುವುದನ್ನು ಸುಲಭಗೊಳಿಸುತ್ತದೆ. ಅನೇಕ ಬಾರಿ ಮೊಬೈಲ್ ನೆಟ್‌ವರ್ಕ್‌ಗಳು ಕಾರ್ಯನಿರ್ವಹಿಸುವು ಪರಿಸ್ಥಿತಿಯಲ್ಲಿ, ವಾಟ್ಸ್ಆ್ಯಪ್ ನ ಹೊಸ ವೈಶಿಷ್ಟ್ಯವು ಫೈಲ್ ಹಂಚಿಕೆಯನ್ನು ಹೆಚ್ಚು ಸುಲಭಗೊಳಿಸುತ್ತದೆ.
ವರದಿಯ ಪ್ರಕಾರ, ಬಳಕೆದಾರರು ಆಂಡ್ರಾಯ್ಡ್ ಅಥವಾ ಐಒಎಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಫೈಲ್‌ಗಳನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ನೀವು ಯಾರೊಂದಿಗೆ ಫೈಲ್ ಅನ್ನು ಹಂಚಿಕೊಳ್ಳುತ್ತೀರೋ ಆ ವ್ಯಕ್ತಿ ಆಂಡ್ರಾಯ್ಡ್ ಬಳಕೆದಾರರಾಗಿರಲಿ ಅಥವಾ ಐಒಎಸ್ ಬಳಕೆದಾರರಾಗಿರಲಿ ಯಾವುದೇ ಸಮಸ್ಯೆ ಇರುವುದಿಲ್ಲ. ವಾಟ್ಸ್ಆ್ಯಪ್ ತನ್ನ ಬಳಕೆದಾರರ ಗೌಪ್ಯತೆಗೆ ಹೆಸರುವಾಸಿಯಾಗಿದೆ, ಆದ್ದರಿಂದ ಇಬ್ಬರು ಜನರ ನಡುವಿನ ಫೈಲ್ ವರ್ಗಾವಣೆಯನ್ನು ಸಹ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಲಾಗುತ್ತದೆ.
ಇದನ್ನೂ ಓದಿ: ಬಿಎಸ್ಎನ್ಎಲ್ 5 ಅದ್ಭುತ ಯೋಜನೆಗಳು: ಬೆಲೆ 100 ರೂಪಾಯಿಗಳಿಗಿಂತ ಕಡಿಮೆ
ವಾಟ್ಸ್ಆ್ಯಪ್ನಲ್ಲಿ GB ಫೈಲ್‌ಗಳನ್ನು ಕ್ಷಣಾರ್ಧದಲ್ಲಿ ಸೆಂಡ್ ಮಾಡೋದು ಹೇಗೆ?:
ವಾಟ್ಸ್ಆ್ಯಪ್ನಲ್ಲಿ ನೀವು ದೊಡ್ಡದಾದ ಫೈಲ್‌ಗಳನ್ನು ಹಂಚಿಕೊಳ್ಳಲು ಸಾಧ್ಯವಿದೆ. ಅಧಿಕ ಗಾತ್ರದ ಎಂಬಿ ಅಥವಾ ಜಿಬಿ ಗಾತ್ರದ ಫೈಲ್‌ಗಳನ್ನು ಗೂಗಲ್ ಡ್ರೈವ್‌ನಲ್ಲಿ ಅಪ್‌ಲೋಡ್ ಮಾಡಿ ಆ ಲಿಂಕ್ ಅನ್ನು ವಾಟ್ಸ್ಆ್ಯಪ್ನಲ್ಲಿ ರಿಸೀವರ್‌ನೊಂದಿಗೆ ಶೇರ್ ಮಾಡಿಕೊಳ್ಳಬಹುದು. ಇದರಿಂದ ದೊಡ್ಡಗಾತ್ರದ ಫೈಲ್‌ಗಳನ್ನ ಹಂಚಿಕೊಳ್ಳಬಹುದಾಗಿದೆ.
ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ