ಪೇಮೆಂಟ್ನಲ್ಲಿ ಯುಪಿಐನೇ ಕಿಂಗ್; ನವೆಂಬರ್ನಲ್ಲಿ 1,548 ಕೋಟಿ ಮುಟ್ಟಿದ ಯುಪಿಐ ವಹಿವಾಟು
UPI transactions on November 2024: ಭಾರತದಲ್ಲಿ ಹಣ ಪಾವತಿ ಕಾರ್ಯವನ್ನು ಸುಲಭ ಹಾಗೂ ಪರಿಣಾಮಕಾರಿ ಮಾಡಿಸಿದ ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ ದಿನೇದಿನೇ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿದೆ. ಎನ್ಪಿಸಿಐ ದತ್ತಾಂಶದ ಪ್ರಕಾರ ನವೆಂಬರ್ ತಿಂಗಳೊಂದರಲ್ಲಿ 1,548 ಕೋಟಿ ಟ್ರಾನ್ಸಾಕ್ಷನ್ಗಳು ಯುಪಿಐನಿಂದ ಆಗಿವೆ. ಅಕ್ಟೋಬರ್ 31ರಂದು 64.4 ಕೋಟಿ ಸಂಖ್ಯೆಯಲ್ಲಿ ಟ್ರಾನ್ಸಾಕ್ಷನ್ಗಳಾಗಿವೆ. ಇದು ಸಾರ್ವಕಾಲಿಕ ದಾಖಲೆಯಾಗಿದೆ.
ನವದೆಹಲಿ, ಡಿಸೆಂಬರ್ 3: ಯುಪಿಐ ಮೂಲಕ ನಡೆಯುತ್ತಿರುವ ವಹಿವಾಟು ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿದೆ. ಎನ್ಪಿಸಿಐ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ನವೆಂಬರ್ ತಿಂಗಳಲ್ಲಿ ಯುಪಿಐ ಆಧಾರಿತವಾಗಿ ಆಗಿರುವ ಒಟ್ಟು ವಹಿವಾಟುಗಳ ಸಂಖ್ಯೆ 15.48 ಬಿಲಿಯನ್ ಎನ್ನಲಾಗಿದೆ. ಅಂದರೆ, ಒಂದೇ ತಿಂಗಳಲ್ಲಿ ಯುಪಿಐ ಮೂಲಕ 1,548 ಕೋಟಿ ಟ್ರಾನ್ಸಾಕ್ಷನ್ಗಳು ನವೆಂಬರ್ನಲ್ಲಿ ನಡೆದಿವೆ. ಕಳೆದ ವರ್ಷದ ನವೆಂಬರ್ಗೆ ಹೋಲಿಸಿದರೆ ಈ ಬಾರಿ ವಹಿವಾಟು ಸಂಖ್ಯೆಯಲ್ಲಿ ಶೇ 38ರಷ್ಟು ಏರಿಕೆ ಆಗಿದೆ. 1,548 ಕೋಟಿ ಯುಪಿಐ ವಹಿವಾಟಿನ ಒಟ್ಟು ಮೌಲ್ಯ 21.55 ಲಕ್ಷ ಕೋಟಿ ರೂ.
ನವೆಂಬರ್ ತಿಂಗಳಲ್ಲಿ ನಿತ್ಯವೂ ಸರಾಸರಿಯಾಗಿ 51.6 ಕೋಟಿ ಯುಪಿಐ ವಹಿವಾಟುಗಳು ಆಗುತ್ತಿವೆ. ಈ ವಹಿವಾಟು ಮೌಲ್ಯ ನಿತ್ಯ 71,840 ಕೋಟಿ ರೂ ಆಗಿದೆ.
ಎನ್ಪಿಸಿಐ ದತ್ತಾಂಶದ ಪ್ರಕಾರ ಐಎಂಪಿಎಸ್ ಟ್ರಾನ್ಸಾಕ್ಷನ್ ಸಂಖ್ಯೆ ನವೆಂಬರ್ನಲ್ಲಿ 40.8 ಕೋಟಿ ಇದೆ. ಇವುಗಳ ಒಟ್ಟು ಮೌಲ್ಯ 5.58 ಲಕ್ಷ ಕೋಟಿ ರೂ ಇದೆ.
ಇದನ್ನೂ ಓದಿ: ಹಬ್ಬದ ಸೀಸನ್ ಮುಗಿದರೂ ಕಾರುಗಳಿಗೆ ನಿಲ್ಲದ ಬೇಡಿಕೆ; ನವೆಂಬರ್ನಲ್ಲಿ 3,50,000 ಕಾರುಗಳ ಮಾರಾಟ
ಫಾಸ್ಟ್ಯಾಗ್ ಟ್ರಾನ್ಸಾಕ್ಷನ್ಗಳ ಸಂಖ್ಯೆ 34.5 ಕೋಟಿಯಿಂದ 35.9 ಕೋಟಿಗೆ ಏರಿದೆ. ಆಧಾರ್ ಚಾಲಿತ ಪೇಮೆಂಟ್ ಸಿಸ್ಟಂನಿಂದ ಆದ ಟ್ರಾನ್ಸಾಕ್ಷನ್ಗಳ ಸಂಖ್ಯೆ 9.2 ಕೋಟಿ ಆಗಿದೆ.
ಅಕ್ಟೋಬರ್ ತಿಂಗಳಲ್ಲಿ ಯುಪಿಐ ಸಾರ್ವಕಾಲಿಕ ದಾಖಲೆಗಳನ್ನು ಬರೆದಿತ್ತು. ಆ ತಿಂಗಳು ನಡೆದ ಒಟ್ಟು ವಹಿವಾಟು ಸಂಖ್ಯೆ 1,658 ಕೋಟಿ. ಒಟ್ಟು ವಹಿವಾಟು ಮೌಲ್ಯ 23.5 ಲಕ್ಷ ಕೋಟಿ ರೂ. 2016ರಲ್ಲಿ ಯುಪಿಐ ಆರಂಭವಾದಾಗಿನಿಂದ ಒಂದು ತಿಂಗಳಲ್ಲಿ ದಾಖಲಾದ ಅತಿಹೆಚ್ಚು ವಹಿವಾಟಾಗಿದೆ.
ಮರ್ಚಂಟ್ ಟ್ರಾನ್ಸಾಕ್ಷನ್ನಲ್ಲೂ ಯುಪಿಐ ಹೊಸ ದಾಖಲೆ
ಯುಪಿಐ ಅಥವಾ ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ನಿಂದ ಅಕ್ಟೋಬರ್ ತಿಂಗಳಲ್ಲಿ 10 ಬಿಲಿಯನ್ ಅಥವಾ 1,000 ಕೋಟಿ ಸಂಖ್ಯೆಯ ಮರ್ಚಂಟ್ ಟ್ರಾನ್ಸಾಕ್ಷನ್ಗಳಾಗಿವೆ. ಅಂದರೆ ಅಷ್ಟು ಪ್ರಮಾಣದಲ್ಲಿ ಗ್ರಾಹಕರಿಂದ ವರ್ತಕರಿಗೆ ಹಣದ ಪಾವತಿ ಆಗಿದೆ. ಹಬ್ಬದ ಸೀಸನ್ನಿಂದ ಇಷ್ಟು ದೊಡ್ಡ ಪ್ರಮಾಣದಲ್ಲಿ ವಾಣಿಜ್ಯಾತ್ಮಕ ವಹಿವಾಟುಗಳು ನಡೆದಿದೆ.
ಇದನ್ನೂ ಓದಿ: ನವೆಂಬರ್ನಲ್ಲಿ ಭಾರತದಲ್ಲಿ ಕಲ್ಲಿದ್ದಲು ಉತ್ಪಾದನೆ 90.62 ಮಿಲಿಯನ್ ಟನ್; ಶೇ. 7.2ರಷ್ಟು ಉತ್ಪಾದನೆ ಹೆಚ್ಚಳ
ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಮೊಬೈಲ್ ವ್ಯಾಲಟ್ ಇತ್ಯಾದಿ ಪರ್ಯಾಯ ಪೇಮೆಂಟ್ ಸಿಸ್ಟಂಗಳಿಗಿಂತ ಯುಪಿಐನಲ್ಲೇ ಅತಿಹೆಚ್ಚು ವಹಿವಾಟುಗಳು ಆಗಿವೆ.
ಅಕ್ಟೋಬರ್ 31, ದೀಪಾವಳಿ ದಿನದಂದು 644 ಮಿಲಿಯನ್ ಸಂಖ್ಯೆಯಷ್ಟು ಯುಪಿಐ ಟ್ರಾನ್ಸಾಕ್ಷನ್ ಆಗಿದೆ. ಅಂದರೆ ಆ ಒಂದೇ ದಿನದಲ್ಲಿ 64 ಕೋಟಿಗೂ ಅಧಿಕ ಸಂಖ್ಯೆಯ ಯುಪಿಐ ವಹಿವಾಟು ಆಗಿದೆ. ಅದು ಯಾವುದೇ ದಿನದಲ್ಲಿ ಕಂಡ ಅತಿಹೆಚ್ಚು ಸಂಖ್ಯೆಯ ವಹಿವಾಟು ಎನಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ