Sell Old Phone: ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಮಾರಾಟ ಮಾಡಲು ಬಯಸುವಿರಾ?: ಹಾಗಾದ್ರೆ ಈ ತಪ್ಪು ಆಗದಿರಲಿ

ನಾವು ನಮ್ಮ ಸ್ಮಾರ್ಟ್‌ಫೋನ್‌ಗಳನ್ನು ಕಾಲಕಾಲಕ್ಕೆ ಅಪ್‌ಗ್ರೇಡ್ ಮಾಡುತ್ತಲೇ ಇರಬೇಕು. ಹೀಗಾಗಿ ನಾವು ನಮ್ಮ ಹಳೆಯ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಬೇಕಾಗುತ್ತದೆ, ಆದರೆ ಫೋನ್ ಮಾರಾಟ ಮಾಡುವಾಗ ಒಂದು ಸಣ್ಣ ತಪ್ಪು ನಿಮಗೆ ಭಾರೀ ನಷ್ಟವನ್ನುಂಟು ಮಾಡಬಹುದು. ಹಾಗಾದರೆ, ಫೋನ್ ಮಾರಾಟ ಮಾಡುವಾಗ ಏನೆಲ್ಲ ಮುನ್ನೆಚ್ಚರಿಕೆ ವಹಿಸಬೇಕು?, ಇಲ್ಲಿದೆ ಮಾಹಿತಿ

Sell Old Phone: ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಮಾರಾಟ ಮಾಡಲು ಬಯಸುವಿರಾ?: ಹಾಗಾದ್ರೆ ಈ ತಪ್ಪು ಆಗದಿರಲಿ
Smartphones
Edited By:

Updated on: Feb 14, 2025 | 10:12 AM

Sell Your Old Smart Phone: ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ನಮ್ಮ ಜೀವನದ ಅಗತ್ಯ ಭಾಗವಾಗಿದೆ. ಇದನ್ನು ಕರೆಗಳು ಅಥವಾ ಸಂದೇಶಗಳನ್ನು ಕಳುಹಿಸಲು ಮಾತ್ರ ಬಳಸಲಾಗುವುದಿಲ್ಲ. ಇದರ ಮೂಲಕ ನೀವು ಬ್ಯಾಂಕಿಂಗ್, ಟಿಕೆಟ್ ಬುಕಿಂಗ್, ಫುಡ್ ಆರ್ಡರ್, ರೈಡ್ ಬುಕಿಂಗ್, ಸಾಮಾಜಿಕ ಮಾಧ್ಯಮ, ಕಂಟೆಂಟ್ ಕ್ರಿಯೇಷನ್ ಮುಂತಾದ ಕೆಲಸಗಳನ್ನು ಸಹ ಮಾಡಬಹುದು. ಪ್ರತಿ ವರ್ಷ ಲಕ್ಷಾಂತರ ಫೋನ್‌ಗಳು ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತವೆ. ಪ್ರತಿ ಹೊಸ ಮಾದರಿಯೊಂದಿಗೆ ಕಂಪನಿಗಳು ತಮ್ಮ ಸ್ಮಾರ್ಟ್‌ಫೋನ್‌ಗಳ ತಂತ್ರಜ್ಞಾನವನ್ನು ಅಪ್‌ಗ್ರೇಡ್ ಮಾಡುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ನಾವು ನಮ್ಮ ಸ್ಮಾರ್ಟ್‌ಫೋನ್‌ಗಳನ್ನು ಕಾಲಕಾಲಕ್ಕೆ ಅಪ್‌ಗ್ರೇಡ್ ಮಾಡುತ್ತಲೇ ಇರಬೇಕು. ಹೀಗಾಗಿ ನಾವು ನಮ್ಮ ಹಳೆಯ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಬೇಕಾಗುತ್ತದೆ, ಆದರೆ ಫೋನ್ ಮಾರಾಟ ಮಾಡುವಾಗ ಒಂದು ಸಣ್ಣ ತಪ್ಪು ನಿಮಗೆ ಭಾರೀ ನಷ್ಟವನ್ನುಂಟು ಮಾಡಬಹುದು.

ಯಾವ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು?:

ನಮ್ಮ ಅನೇಕ ವೈಯಕ್ತಿಕ ಮಾಹಿತಿಗಳು ಸ್ಮಾರ್ಟ್‌ಫೋನ್‌ನಲ್ಲಿ ಇರುತ್ತವೆ. ಇದರಲ್ಲಿ ಬ್ಯಾಂಕಿಂಗ್ ವಿವರಗಳು, ಇ-ಮೇಲ್, SMS, ಕಾಂಟೆಕ್ಟ್, ಫೋಟೋಗಳು ಮತ್ತು ವಿಡಿಯೋಗಳು ಮತ್ತು ಪ್ರಮುಖ ದಾಖಲೆಗಳು ಸೇರಿವೆ. ಅಂತಹ ಪರಿಸ್ಥಿತಿಯಲ್ಲಿ, ಫೋನ್ ಮಾರಾಟ ಮಾಡುವ ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ನ ಡೇಟಾವನ್ನು ಸುರಕ್ಷಿತಗೊಳಿಸುವುದು ಬಹಳ ಮುಖ್ಯ. ನಿಮ್ಮ ಈ ಮಾಹಿತಿಯು ಸ್ಕ್ಯಾಮರ್‌ನ ಕೈಗೆ ಸಿಕ್ಕರೆ, ಅದು ನಿಮಗೆ ಸಮಸ್ಯೆಗಳನ್ನು ಉಂಟುಮಾಡಬಹುದು. ನಿಮ್ಮ ಫೋನ್‌ನ ಡೇಟಾವನ್ನು ಬ್ಯಾಕಪ್ ಮಾಡುವ ಮೂಲಕ, ನಿಮ್ಮ ಅಮೂಲ್ಯವಾದ ಡೇಟಾ ಸುರಕ್ಷಿತವಾಗಿ ಉಳಿಸಬಹುದು.

TRAI New Rule: ಟ್ರಾಯ್​ನಿಂದ ಹೊಸ ನಿಯಮ: ಟೆಲಿಕಾಂ ಸಂಸ್ಥೆ ಇದನ್ನು ನಿರ್ಲಕ್ಷಿಸಿದರೆ 10 ಲಕ್ಷ ದಂಡ

ಫ್ಯಾಕ್ಟರಿ ರೀಸೆಟ್ ಏಕೆ ಮಾಡಬೇಕು?:

ಫೋನ್ ಮಾರಾಟ ಮಾಡುವ ಮೊದಲು ಅದನ್ನು ಫ್ಯಾಕ್ಟರಿ ರೀಸೆಟ್ ಮಾಡುವುದು ಸಹ ಬಹಳ ಮುಖ್ಯ. ಫ್ಯಾಕ್ಟರಿ ರೀಸೆಟ್ ಮಾಡುವುದರಿಂದ, ಫೋನ್‌ನಲ್ಲಿರುವ ನಿಮ್ಮ ವೈಯಕ್ತಿಕ ಡೇಟಾ ಯಾರ ಕೈಗೂ ಹೋಗುವುದಿಲ್ಲ.

ಈ ವಿಷಯಗಳನ್ನು ನಿರ್ಲಕ್ಷಿಸಬೇಡಿ:

  • ನಿಮ್ಮ ಸ್ಮಾರ್ಟ್‌ಫೋನ್‌ನ ಡೇಟಾವನ್ನು ಬ್ಯಾಕಪ್ ಮಾಡಿ.
  • ಇದಲ್ಲದೆ, ಫೋನ್ ಅನ್ನು ಫ್ಯಾಕ್ಟರಿ ರೀಸೆಟ್ ಮಾಡಲು ಮರೆಯಬೇಡಿ.
  • ಇಷ್ಟೇ ಅಲ್ಲ, ನಿಮ್ಮ ಗೂಗಲ್ ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳಿಂದ ಲಾಗ್ ಔಟ್ ಮಾಡಿ.
  • ನಿಮ್ಮ ಫೋನ್‌ನಿಂದ ಮೆಮೊರಿ ಕಾರ್ಡ್ ಮತ್ತು ಸಿಮ್ ಕಾರ್ಡ್ ತೆಗೆದುಹಾಕಿ. ಇ -ಸಿಮ್ ಇದ್ದರೆ ಅದನ್ನು ಡಿಆ್ಯಕ್ಟಿವೇಟ್ ಮಾಡಿ.
  • ಫೋನ್‌ಗಳನ್ನು ಮಾರಾಟ ಮಾಡಲು ಹಲವು ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳು ಆನ್​ಲೈನ್​ನಲ್ಲಿ ಲಭ್ಯವಿದೆ. ನೀವು ಅದನ್ನು ತೆರೆದು ಬೆಲೆಗಳನ್ನು ಪರಿಶೀಲಿಸಬಹುದು.
  • ನಿಮ್ಮ ಸ್ಮಾರ್ಟ್‌ಫೋನ್ ಮಾರಾಟ ಮಾಡುವಾಗ, ಅದರ ಚಾರ್ಜರ್, ಬಾಕ್ಸ್ ಮತ್ತು ಬಿಲ್ ನೀಡಲು ಮರೆಯಬೇಡಿ.
  • ಇದಲ್ಲದೆ, ಯಾವುದೇ ಅಗತ್ಯ ಪರಿಕರಗಳಿದ್ದರೆ, ಅದನ್ನೂ ನೀಡಿ.
  • ನಿಮ್ಮಿಂದ ಫೋನ್ ಖರೀದಿಸುತ್ತಿರುವ ವ್ಯಕ್ತಿಯ ಗುರುತಿನ ಚೀಟಿಯನ್ನು ಕೇಳಿ ಮತ್ತು ರಶೀದಿಯನ್ನು ತೆಗೆದುಕೊಳ್ಳಲು ಮರೆಯಬೇಡಿ.
  • ಈ ರೀತಿಯಾಗಿ ನೀವು ನಿಮ್ಮ ಹಳೆಯ ಫೋನ್ ಅನ್ನು ಸುರಕ್ಷಿತವಾಗಿ ಮಾರಾಟ ಮಾಡಬಹುದು ಮತ್ತು ನೀವು ಹೊಸ ಸ್ಮಾರ್ಟ್‌ಫೋನ್‌ಗೆ ಅಪ್‌ಗ್ರೇಡ್ ಆಗಬಹುದು.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ