Tech Tips: ನೀವುಕೂಡ ನಿಮ್ಮ ಮೊಬೈಲ್ ಅನ್ನು ಲ್ಯಾಪ್‌ಟಾಪ್ ಮೂಲಕ ಚಾರ್ಜ್ ಮಾಡುತ್ತೀರಾ?
ಕೆಲವು ಜನರು ಅಡಾಪ್ಟರ್ ಅನ್ನು ಮರೆತು ಬಿಟ್ಟು ಆಫೀಸ್ ಬಂದಿರುತ್ತಾರೆ. ಆಗ, ಚಾರ್ಜಿಂಗ್ ಕೇಬಲ್ ಇದ್ದರೂ ಸಹ, ಅಡಾಪ್ಟರ್ ಇಲ್ಲದ ಕಾರಣ ತಮ್ಮ ಮೊಬೈಲ್ ಫೋನ್‌ಗಳನ್ನು ಚಾರ್ಜ್ ಮಾಡಲು ಸಾಧ್ಯವಾಗುದಿಲ್ಲ. ಅಂತಹ ಸಂದರ್ಭ ಲ್ಯಾಪ್‌ಟಾಪ್ ಅಥವಾ ಪರ್ಸನಲ್ ಕಂಪ್ಯೂಟರ್‌ನಿಂದ ನಿಮ್ಮ ಮೊಬೈಲ್ ಫೋನ್ ಅನ್ನು ಚಾರ್ಜ್ ಮಾಡುವುದು ಸರಿಯೇ.

ಇಂದು ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತಿರುವವರ ಸಂಖ್ಯೆ ದುಪ್ಪಟ್ಟಾಗಿದೆ. ಜನರು ದಿನದ ಹೆಚ್ಚಿನ ಸಮಯ ಫೋನ್ ಅನ್ನು ತಮ್ಮೊಂದಿಗೆ ಕೊಂಡೊಯ್ಯುವ ಪ್ರಮುಖ ಸಾಧನಗಳಾಗಿವೆ. ಕೆಲವರು ಎರಡೆರಡು ಫೋನ್‌ಗಳನ್ನು ಉಪಯೋಗಿಸುತ್ತಿದ್ದು, ವೈಯಕ್ತಿಕ ಮತ್ತು ವೃತ್ತಿಪರ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಅನೇಕ ಜನರು ತಮ್ಮ ಲ್ಯಾಪ್‌ಟಾಪ್ ಅಥವಾ ಪರ್ಸನಲ್ ಕಂಪ್ಯೂಟರ್‌ನಲ್ಲಿರುವ USB ಪೋರ್ಟ್ ಬಳಸಿ ತಮ್ಮ ಮೊಬೈಲ್ ಫೋನ್‌ಗಳನ್ನು ಚಾರ್ಜ್ ಮಾಡುತ್ತಾರೆ. ಆಫೀಸ್ ಕೆಲಸ ಮಧ್ಯೆ ಇತರೆ ಪ್ಲಗ್ಗೆ ಮೊಬೈಲ್ ಅನ್ನು ಚಾರ್ಜ್ಗೆ ಹಾಕುವ ಬದಲು ಲ್ಯಾಪ್ಟಾಪ್ಗೆ ಕನೆಕ್ಟ್ ಮಾಡಿ ಚಾರ್ಜ್ ಫುಲ್ ಮಾಡುತ್ತಾರೆ. ಆದರೆ, ಹೀಗೆ ಮಾಡುವುದು ಸರಿಯೇ?.
ಲ್ಯಾಪ್‌ಟಾಪ್ ಬಳಸುವ ಜನರು ಹೆಚ್ಚಾಗಿ ತಮ್ಮ ಮೊಬೈಲ್ ಫೋನ್‌ಗಳನ್ನು ಅದರಿಂದಲೇ ಚಾರ್ಜ್ ಮಾಡುತ್ತಾರೆ. ಕೆಲವು ಜನರು ಅಡಾಪ್ಟರ್ ಅನ್ನು ಮರೆತು ಬಿಟ್ಟು ಆಫೀಸ್ ಬಂದಿರುತ್ತಾರೆ. ಆಗ, ಚಾರ್ಜಿಂಗ್ ಕೇಬಲ್ ಇದ್ದರೂ ಸಹ, ಅಡಾಪ್ಟರ್ ಇಲ್ಲದ ಕಾರಣ ತಮ್ಮ ಮೊಬೈಲ್ ಫೋನ್‌ಗಳನ್ನು ಚಾರ್ಜ್ ಮಾಡಲು ಸಾಧ್ಯವಾಗುದಿಲ್ಲ. ಅಂತಹ ಸಂದರ್ಭ ಲ್ಯಾಪ್‌ಟಾಪ್ ಅಥವಾ ಪರ್ಸನಲ್ ಕಂಪ್ಯೂಟರ್‌ನಿಂದ ನಿಮ್ಮ ಮೊಬೈಲ್ ಫೋನ್ ಅನ್ನು ಚಾರ್ಜ್ ಮಾಡುವುದು ಸರಿಯೇ.
ಸರಿಯಾದ ಮಾರ್ಗದ ಬಗ್ಗೆ ಹೇಳಬೇಕೆಂದರೆ, ಸ್ಮಾರ್ಟ್‌ಫೋನ್ ಅನ್ನು ಖಂಡಿತವಾಗಿಯೂ ಮೂಲ ಚಾರ್ಜರ್‌ನೊಂದಿಗೆ ಚಾರ್ಜ್ ಮಾಡಬೇಕು. ಆದರೆ, ಯಾರ ಬಳಿಯಾದರೂ ಮೂಲ ಮೊಬೈಲ್ ಚಾರ್ಜರ್ ಇಲ್ಲದಿದ್ದರೆ ಮತ್ತು ಫೋನ್ ಚಾರ್ಜ್ ಖಾಲಿಯಾಗುವ ಹಂತದಲ್ಲಿದ್ದರೆ, ತುರ್ತು ಪರಿಸ್ಥಿತಿಗೆ ಎಂದು ನೀವು ಲ್ಯಾಪ್‌ಟಾಪ್‌ನಿಂದ ಫೋನ್ ಅನ್ನು ಚಾರ್ಜ್ ಮಾಡಬಹುದು.
ಪದೇ ಪದೇ ಚಾರ್ಜ್ ಮಾಡುವ ಕಿರಿಕಿರಿ ಇಲ್ಲ: ಇಲ್ಲಿದೆ 7000mAh ಬ್ಯಾಟರಿಯ ಶಕ್ತಿಶಾಲಿ ಸ್ಮಾರ್ಟ್‌ಫೋನ್ಸ್
ಆದರೆ ಇದನ್ನು ನಿಯಮಿತವಾಗಿ ಮಾಡುವುದು ಸರಿಯಲ್ಲ. ಯಾರಾದರೂ ಲ್ಯಾಪ್‌ಟಾಪ್‌ನಿಂದ ತಮ್ಮ ಮೊಬೈಲ್ ಫೋನ್ ಅನ್ನು ಪದೇ ಪದೇ ಚಾರ್ಜ್ ಮಾಡಿದರೆ, ಅದು ಫೋನ್‌ನ ಬ್ಯಾಟರಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹೆಚ್ಚಿನ ಲ್ಯಾಪ್‌ಟಾಪ್‌ಗಳು ಚಾರ್ಜ್ ಮಾಡಲು ಬಳಸಬಹುದಾದ USB ಪೋರ್ಟ್‌ಗಳನ್ನು ಹೊಂದಿವೆ. ಹಾಗಂತೆ ಲ್ಯಾಪ್‌ಟಾಪ್‌ನಿಂದ ನಿಮ್ಮ ಫೋನ್ ಅನ್ನು ಪದೇ ಪದೇ ಚಾರ್ಜ್ ಮಾಡುವುದರಿಂದ ಚಾರ್ಜಿಂಗ್ ವೇಗಕ್ಕೆ ಹಾನಿಯಾಗಬಹುದು. ಲ್ಯಾಪ್‌ಟಾಪ್ USB ಪೋರ್ಟ್‌ಗಳು ಸಾಮಾನ್ಯವಾಗಿ ಫೋನ್ ಚಾರ್ಜರ್‌ಗಳಿಗಿಂತ ಕಡಿಮೆ ಶಕ್ತಿಶಾಲಿಯಾಗಿರುತ್ತವೆ. ಆದ್ದರಿಂದ ಫೋನ್ ಚಾರ್ಜ್ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು.
ಮೂಲ ಚಾರ್ಜರ್ ಇಲ್ಲದೆ ಫೋನ್ ಚಾರ್ಜ್ ಮಾಡುವುದರಿಂದ ಮುಖ್ಯವಾಗಿ ಲ್ಯಾಪ್‌ಟಾಪ್‌ನಿಂದ ಚಾರ್ಜ್ ಮಾಡಿದರೆ ಅಧಿಕ ಬಿಸಿಯಾಗುವ ಸಮಸ್ಯೆಗಳು ಉಂಟಾಗಬಹುದು. ಕೆಲವೊಮ್ಮೆ ಫೋನ್ ಬಿಸಿಯಾಗಬಹುದು ಮತ್ತು ಸ್ಫೋಟಗೊಳ್ಳಬಹುದು. ಆದರೆ, ಕೆಲವು ಲ್ಯಾಪ್‌ಟಾಪ್‌ನಲ್ಲಿರುವ USB ಪೋರ್ಟ್ ಸಾಮಾನ್ಯವಾಗಿ ಫೋನ್‌ಗಳನ್ನು ಚಾರ್ಜ್ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಫೋನ್‌ಗೆ ಸಂಪರ್ಕಿಸುವ ಮೂಲಕ ಅದನ್ನು ಚಾರ್ಜ್ ಮಾಡಬಹುದು. ಆದರೆ, ಈ ರೀತಿ ಚಾರ್ಜ್ ಮಾಡುವ ಮುನ್ನ ಲ್ಯಾಪ್‌ಟಾಪ್ ಪೋಸರ್ಟ್ನ ಸಾಮರ್ಥ್ಯ ಮತ್ತು ನಿಮ್ಮ ಮೊಬೈಲ್ ಚಾರ್ಜರ್ನ ಸಾಮರ್ಥ್ಯವನ್ನು ಗಮನಿಸುವುದು ಮುಖ್ಯ.
ಇನ್ನು ಕೆಲ ಜನರು ತಮ್ಮ ಫೋನ್ ಚಾರ್ಜರ್ ಹೊಂದಿಲ್ಲದಿದ್ದರೆ ಅಥವಾ ಅದನ್ನು ಮರೆತು ಬಿಟ್ಟಿದ್ದರೆ ಅವರು ತಮ್ಮ ಫೋನ್ ಫ್ರೆಂಡ್ ಮೊಬೈಲ್ ಚಾರ್ಜರ್ನಿಂದ ಅಥವಾ ಯಾವುದೊ ಕಂಪನಿಯ ಅಗ್ಗದ ಚಾರ್ಜರ್ ಅನ್ನು ಮಾರುಕಟ್ಟೆಯಿಂದ ತಂದು ಫೋನ್ ಅನ್ನು ಚಾರ್ಜ್ ಮಾಡಲು ಪ್ರಾರಂಭಿಸುತ್ತಾರೆ. ನೀವೂ ಸಹ ಆಗಾಗ ಬೇರೆಯವರ ಚಾರ್ಜರ್ ಮೂಲಕ ನಿಮ್ಮ ಮೊಬೈಲ್ ಅನ್ನು ಚಾರ್ಜ್ ಮಾಡುತ್ತಿದ್ದರೆ ಇದು ಬ್ಯಾಟರಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ