AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

TRAI New Rule: ಟ್ರಾಯ್​ನಿಂದ ಹೊಸ ನಿಯಮ: ಟೆಲಿಕಾಂ ಸಂಸ್ಥೆ ಇದನ್ನು ನಿರ್ಲಕ್ಷಿಸಿದರೆ 10 ಲಕ್ಷ ದಂಡ

TRAI ಪ್ರಕಾರ, ಟೆಲಿಕಾಂ ಆಪರೇಟರ್‌ಗಳು ನಕಲಿ ಕರೆಗಳು ಮತ್ತು ಸಂದೇಶಗಳ ನಿಯಮಗಳನ್ನು ಉಲ್ಲಂಘಿಸಿದರೆ, ಮೊದಲ ಉಲ್ಲಂಘನೆಗೆ 2 ಲಕ್ಷ ರೂ. ಮತ್ತು ಎರಡನೇ ಉಲ್ಲಂಘನೆಗೆ 5 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಇದಾದ ನಂತರ, ಪ್ರತಿ ನಿಯಮ ಉಲ್ಲಂಘನೆಗೆ 10 ಲಕ್ಷ ರೂ. ದಂಡ ವಿಧಿಸಲಾಗುತ್ತದೆ.

TRAI New Rule: ಟ್ರಾಯ್​ನಿಂದ ಹೊಸ ನಿಯಮ: ಟೆಲಿಕಾಂ ಸಂಸ್ಥೆ ಇದನ್ನು ನಿರ್ಲಕ್ಷಿಸಿದರೆ 10 ಲಕ್ಷ ದಂಡ
Trai Telecom Company
ಮಾಲಾಶ್ರೀ ಅಂಚನ್​
| Updated By: Vinay Bhat|

Updated on: Feb 13, 2025 | 12:17 PM

Share

TRAI ಅಂದರೆ ಭಾರತೀಯ ದೂರಸಂಪರ್ಕ ಪ್ರಾಧಿಕಾರವು ಅನಗತ್ಯ ಕರೆಗಳು ಮತ್ತು ಎಸ್​ಎಮ್​ಎಸ್​​ಗಳ ಮೇಲೆ ಕ್ರಮ ಕೈಗೊಳ್ಳುವತ್ತ ಮತ್ತೊಂದು ದೊಡ್ಡ ಹೆಜ್ಜೆ ಇಟ್ಟಿದೆ. ನಕಲಿ ಕರೆಗಳು ಮತ್ತು ಸಂದೇಶಗಳಿಗೆ ಸಂಬಂಧಿಸಿದಂತೆ TRAI ಬುಧವಾರ ಹೊಸ ನಿಯಮಗಳನ್ನು ಹೊರಡಿಸಿದೆ. ಇದರ ಪ್ರಕಾರ, ಅನಗತ್ಯ ಕರೆಗಳ ಸಂಖ್ಯೆಯ ಬಗ್ಗೆ ಸರಿಯಾದ ಮಾಹಿತಿ ನೀಡದಿದ್ದರೆ 2 ಲಕ್ಷ ರೂ. ಗಳಿಂದ 10 ಲಕ್ಷ ರೂ. ಗಳವರೆಗೆ ದಂಡ ವಿಧಿಸಲು ಅವಕಾಶವಿದೆ. ಟೆಲಿಕಾಂ ಕಂಪನಿಗಳು ಪದೇ ಪದೇ ನಿಯಮಗಳನ್ನು ಉಲ್ಲಂಘಿಸಿದರೆ, ಅವರಿಗೆ ದಂಡ ಈ ವಿಧಿಸಲಾಗುತ್ತದೆ.

TRAI ನ ಹೊಸ ಯೋಜನೆ ಏನು?:

ಸರಾಸರಿ ಕರೆಗಳ ಸಂಖ್ಯೆ, ಕಡಿಮೆ ಕರೆಯ ಅವಧಿ ಮತ್ತು ಒಳಬರುವ-ಹೊರಹೋಗುವ ಕರೆಗಳ ಅನುಪಾತದಂತಹ ನಿಯತಾಂಕಗಳನ್ನು ಆಧರಿಸಿ ಕರೆ ಮತ್ತು SMS ಮಾದರಿಗಳನ್ನು ವಿಶ್ಲೇಷಿಸಲು TRAI ಎಲ್ಲಾ ಟೆಲಿಕಾಂ ಆಪರೇಟರ್‌ಗಳಿಗೆ ಕಡ್ಡಾಯಗೊಳಿಸಿದೆ. ಇದು ನೈಜ ಸಮಯದಲ್ಲಿ ಸ್ಪ್ಯಾಮರ್‌ಗಳನ್ನು ಗುರುತಿಸಲು ಸಹಾಯ ಮಾಡುತ್ತದೆ.

ನಕಲಿ ಕರೆಗಳ ವಿರುದ್ಧ ಕ್ರಮ ಕೈಗೊಳ್ಳುವ ಚಿಂತನೆಯಲ್ಲಿದೆ ಸರ್ಕಾರ:

ಅನಗತ್ಯ ಕರೆಗಳು ಮತ್ತು ಸಂದೇಶಗಳ ಕುರಿತು ಟೆಲಿಕಾಂ ಕಂಪನಿಗಳು ಸರ್ಕಾರಕ್ಕೆ ಸರಿಯಾದ ಮಾಹಿತಿಯನ್ನು ನೀಡುತ್ತಿಲ್ಲ ಎಂಬ ದೂರುಗಳು ಬಂದ ನಂತರ ಸರ್ಕಾರವು ಈ ಕ್ರಮ ಕೈಗೊಂಡಿದೆ. ಸರ್ಕಾರವು ನಕಲಿ ಕರೆಗಳು ಮತ್ತು ಸಂದೇಶಗಳ ವಿರುದ್ಧ ಕಟ್ಟುನಿಟ್ಟಾಗಿ ವ್ಯವಹರಿಸುತ್ತಿದೆ. ಕೇಂದ್ರ ಗೃಹ ಸಚಿವಾಲಯದಿಂದ ದೂರಸಂಪರ್ಕ ಇಲಾಖೆಯವರೆಗೆ, ಎಲ್ಲರೂ ನಕಲಿ ಕರೆಗಳು ಮತ್ತು ಸಂದೇಶಗಳ ಬಗ್ಗೆ ಕ್ರಮ ಕೈಗೊಳ್ಳುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.

Tech Tips: ನೀವುಕೂಡ ನಿಮ್ಮ ಮೊಬೈಲ್ ಅನ್ನು ಲ್ಯಾಪ್‌ಟಾಪ್ ಮೂಲಕ ಚಾರ್ಜ್ ಮಾಡುತ್ತೀರಾ?

ನಕಲಿ ಕರೆಗಳಿಗೆ ಎಷ್ಟು ದಂಡ?:

TRAI ಪ್ರಕಾರ, ಟೆಲಿಕಾಂ ಆಪರೇಟರ್‌ಗಳು ನಕಲಿ ಕರೆಗಳು ಮತ್ತು ಸಂದೇಶಗಳ ನಿಯಮಗಳನ್ನು ಉಲ್ಲಂಘಿಸಿದರೆ, ಮೊದಲ ಉಲ್ಲಂಘನೆಗೆ 2 ಲಕ್ಷ ರೂ. ಮತ್ತು ಎರಡನೇ ಉಲ್ಲಂಘನೆಗೆ 5 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಇದಾದ ನಂತರ, ಪ್ರತಿ ನಿಯಮ ಉಲ್ಲಂಘನೆಗೆ 10 ಲಕ್ಷ ರೂ. ದಂಡ ವಿಧಿಸಲಾಗುತ್ತದೆ.

ಹೊಸ ನಿಯಮವು 60 ದಿನಗಳಲ್ಲಿ ದೇಶಾದ್ಯಂತ ಜಾರಿಗೆ ಬರಲಿದೆ:

TRAI ನ ಹೊಸ ನಿಯಮಗಳನ್ನು 30 ಮತ್ತು 60 ದಿನಗಳಲ್ಲಿ ಜಾರಿಗೆ ತರಲಾಗುವುದು. ಈ ನಿಯಮವನ್ನು ಎರಡು ಹಂತಗಳಲ್ಲಿ ತರಲಿದೆ. ಮಾರ್ಚ್ ಅಂತ್ಯದ ವೇಳೆಗೆ TRAI ಯ ಹೊಸ ನಿಯಮಗಳು ದೇಶಾದ್ಯಂತ ಅನ್ವಯ ಆಗಲಿದೆ. ಇದರ ನಂತರ, ನಕಲಿ ಕರೆಗಳು ಮತ್ತು ಸಂದೇಶಗಳನ್ನು ಸ್ವೀಕರಿಸುವ ವೇಗ ನಿಧಾನವಾಗಬಹುದು ಎಂದು ನಂಬಲಾಗಿದೆ.

ನಕಲಿ ಕರೆಗಳು ಮತ್ತು ಸಂದೇಶಗಳ ಬಗ್ಗೆ ದೂರು ನೀಡುವುದು ಹೇಗೆ?:

ಅನಗತ್ಯ ಕರೆಗಳು ಮತ್ತು ಸ್ಕ್ಯಾಮರ್‌ಗಳ ವಿರುದ್ಧ ದೂರುಗಳನ್ನು ದಾಖಲಿಸಲು TRAI ಚಂದಾದಾರರಿಗೆ ಹೆಚ್ಚಿನ ಅಧಿಕಾರವನ್ನು ನೀಡಿದೆ. ಹೊಸ ನಿಯಮಗಳು ಜಾರಿಗೆ ಬಂದ ನಂತರ, ಅನಗತ್ಯ ಕರೆಗಳು ಮತ್ತು SMS ಗಳನ್ನು ವರದಿ ಮಾಡಲು ಚಂದಾದಾರರಿಗೆ ಏಳು ದಿನಗಳ ಕಾಲಾವಕಾಶವಿರುತ್ತದೆ. ಪ್ರಸ್ತುತ, ಮೂರು ದಿನಗಳ ಮಿತಿಯನ್ನು ನೀಡಲಾಗಿದೆ. 140 ಮತ್ತು 160 ನಂತಹ ಪೂರ್ವಪ್ರತ್ಯಯಗಳನ್ನು ಹೊಂದಿರುವ ಸಂಖ್ಯೆಗಳಿಂದ ಕರೆ ಮಾಡುವ ಮೊಬೈಲ್‌ಗಳ ಬಗ್ಗೆ ಬಳಕೆದಾರರು ದೂರು ನೀಡಬಹುದು. ದೂರು ದಾಖಲಿಸಲು ಡೋಂಟ್ ಡಿಸ್ಟರ್ಬ್ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳುವ ಅಗತ್ಯವಿಲ್ಲ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ