Tech Tips: ನಿಮಗೆ ಕಾಲ್ ಬಂದಾಗ ನಿಮ್ಮ ಫೋನ್​ ಕರೆ ಮಾಡಿದವರ ಹೆಸರು ಹೇಳುತ್ತೆ: ಈ ಸೆಟ್ಟಿಂಗ್ಸ್ ಆನ್ ಮಾಡಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 16, 2024 | 3:14 PM

ನಿಮ್ಮ ಮೊಬೈಲ್​ಗೆ ಕಾಲ್ ಬಂದ ತಕ್ಷಣ ಅದು ಯಾರದ್ದು ಎಂದು ಸ್ವತಃ ನಿಮ್ಮ ಫೋನ್ ಹೇಳುತ್ತದೆ. ಫೋನ್ ಕರೆ ಮಾಡಿದವರ ಹೆಸರನ್ನು ನಿಮ್ಮ ಮೊಬೈಲ್ ಉಚ್ಚರಿಸುತ್ತದೆ. ಈ ರೀತಿ ಮಾಡಲು ಸ್ಮಾರ್ಟ್​ಫೋನ್​ನಲ್ಲಿ ಏನು ಸೆಟ್ಟಿಂಗ್ಸ್ ಮಾಡಬೇಕು ಎಂದು ನಾವು ಹೇಳುತ್ತೇವೆ. ನೀವು ಪ್ರಮುಖ ಕೆಲಸಗಳಲ್ಲಿ ಸಿಲುಕಿಕೊಂಡಿದ್ದರೆ, ಚಾಲನೆ ಮಾಡುವಾಗ ಅಥವಾ ಸ್ನಾನ ಮಾಡುವಾಗ ಈ ಫೀಚರ್ ತುಂಬಾ ಉಪಯುಕ್ತವಾಗಲಿದೆ.

Tech Tips: ನಿಮಗೆ ಕಾಲ್ ಬಂದಾಗ ನಿಮ್ಮ ಫೋನ್​ ಕರೆ ಮಾಡಿದವರ ಹೆಸರು ಹೇಳುತ್ತೆ: ಈ ಸೆಟ್ಟಿಂಗ್ಸ್ ಆನ್ ಮಾಡಿ
ಸಾಂದರ್ಭಿಕ ಚಿತ್ರ
Follow us on

ಕೆಲವು ಬಾರಿ ನಾವು ನಮ್ಮ ಸ್ಮಾರ್ಟ್​​ಫೋನ್ ಅನ್ನು ದೂರವಿಟ್ಟು ಏನಾದರು ಅಗತ್ಯ ಕೆಲಸದಲ್ಲಿ ಬ್ಯುಸಿ ಇರುತ್ತೇವೆ. ಆಗ ಯಾರಾದರೂ ಕರೆ ಮಾಡುತ್ತಾರೆ. ಯಾರ ಕಾಲ್ ಎಂದು ಇಂಪಾರ್ಟೆಂಟ್ ಕೆಲಸವನ್ನು ಬಿಟ್ಟು ಅಲ್ಲಿಗೆ ಹೋಗಿ ನೋಡಿದರೆ ಅದು ಮಾರ್ಕೆಟಿಂಗ್ ಕಾಲ್ ಆಗಿರುತ್ತದೆ. ಈ ಸಂದರ್ಭ ಕೆಟ್ಟ ಕೋಪ ಬರುತ್ತದೆ. ಆದರೆ, ಇಂತಹ ಪರಿಸ್ಥಿತಿಯಲ್ಲಿ ಸ್ವತಃ ನಿಮ್ಮ ಸ್ಮಾರ್ಟ್​ಫೋನ್ ಕಾಲ್ ಯಾರದ್ದು ಎಂದು ಹೇಳಿದರೆ ಸುಲಭ ಎಂದು ನೀವು ಯೋಚಿಸಿರಬಹುದು. ನಿಮ್ಮ ಯೋಚನೆಯನ್ನು ಕಾರ್ಯರೂಪಕ್ಕೆ ತರಲು ಸ್ಮಾರ್ಟ್​​ಫೋನ್​ನಲ್ಲೇ ಒಂದು ಟ್ರಿಕ್ ಇದೆ.

ನಿಮ್ಮ ಮೊಬೈಲ್​ಗೆ ಕಾಲ್ ಬಂದ ತಕ್ಷಣ ಅದು ಯಾರದ್ದು ಎಂದು ಸ್ವತಃ ನಿಮ್ಮ ಫೋನ್ ಹೇಳುತ್ತದೆ. ಫೋನ್ ಕರೆ ಮಾಡಿದವರ ಹೆಸರನ್ನು ನಿಮ್ಮ ಮೊಬೈಲ್ ಉಚ್ಚರಿಸುತ್ತದೆ. ಈ ರೀತಿ ಮಾಡಲು ಸ್ಮಾರ್ಟ್​ಫೋನ್​ನಲ್ಲಿ ಏನು ಸೆಟ್ಟಿಂಗ್ಸ್ ಮಾಡಬೇಕು ಎಂದು ನಾವು ಹೇಳುತ್ತೇವೆ. ನೀವು ಪ್ರಮುಖ ಕೆಲಸಗಳಲ್ಲಿ ಸಿಲುಕಿಕೊಂಡಿದ್ದರೆ, ಚಾಲನೆ ಮಾಡುವಾಗ ಅಥವಾ ಸ್ನಾನ ಮಾಡುವಾಗ ಈ ಫೀಚರ್ ತುಂಬಾ ಉಪಯುಕ್ತವಾಗಲಿದೆ.

ನಿಮ್ಮ ಫೋನ್​ನಲ್ಲಿ ನೇರವಾಗಿ ಈ ಆಯ್ಕೆಯನ್ನು ನೀಡಲಾಗಿಲ್ಲ. ಬದಲಾಗಿ ಪ್ಲೇ ಸ್ಟೋರ್ ಅಥವಾ ಆ್ಯಪ್ ಸ್ಟೋರ್​ನಿಂದ ಥರ್ಡ್ ಪಾರ್ಟಿ ಅಪ್ಲಿಕೇಶನ್ ಟ್ರೂಕಾಲರ್​ನಲ್ಲಿ ಈ ಅದ್ಭುತ ವೈಶಿಷ್ಟ್ಯಗಳು ಲಭ್ಯವಿದೆ. ಇದನ್ನು ಸಕ್ರಿಯಗೊಳಿಸಿದ ನಂತರ, ನೀವು ಕರೆ ಸ್ವೀಕರಿಸಿದಾಗ, ರಿಂಗ್‌ಟೋನ್ ಬದಲಿಗೆ ಕರೆ ಮಾಡಿದವರ ಹೆಸರನ್ನು ಕೇಳುತ್ತೀರಿ. ನಿಮಗೆ ಯಾರು ಕರೆ ಮಾಡುತ್ತಿದ್ದಾರೆಂದು ಫೋನ್ ನಿಮಗೆ ತಿಳಿಸುತ್ತದೆ.

ಇದನ್ನೂ ಓದಿ: ಭಾರತದಲ್ಲಿ ಮೊಬೈಲ್ ಸಂಪರ್ಕವಿಲ್ಲದ ಹಳ್ಳಿಗಳು ಎಷ್ಟಿದೆ ಗೊತ್ತೇ?: ಇಲ್ಲಿದೆ ಶಾಕಿಂಗ್ ವಿಚಾರ

ನೀವು ಈ ಹಂತಗಳನ್ನು ಅನುಸರಿಸಬೇಕು:

– ನಿಮ್ಮ ಫೋನ್‌ನಲ್ಲಿ ಟ್ರೂಕಾಲರ್ ಅಪ್ಲಿಕೇಶನ್ ಅನ್ನು ಇನ್​ಸ್ಟಾಲ್ ಮಾಡಿ ಮತ್ತು ಅದನ್ನು ತೆರೆಯಿರಿ.

– ನಂತರ, ಖಾತೆಯನ್ನು ರಚಿಸಿ ಮತ್ತು ಲಾಗಿನ್ ಮಾಡಿ. ಬಳಿಕ ಮೇಲಿನ ಮೂಲೆಯಲ್ಲಿರುವ ಪ್ರೊಫೈಲ್ ಫೋಟೋವನ್ನು ಟ್ಯಾಪ್ ಮಾಡಿ.

– ಈಗ ನೀವು ಸೆಟ್ಟಿಂಗ್‌ಗಳ ಐಕಾನ್ ಅನ್ನು ಸೆಲೆಕ್ಟ್ ಮಾಡಬೇಕು.

– ಸೆಟ್ಟಿಂಗ್‌ಗಳಿಂದ ಕರೆಗಳ ಆಯ್ಕೆಗೆ ಹೋದ ನಂತರ, ನೀವು ಕೆಳಗೆ ಸ್ಕ್ರಾಲ್ ಮಾಡಬೇಕು ಮತ್ತು ಫೋನ್ ಕರೆಗಳ ವಿಭಾಗದಲ್ಲಿ, ಫೋನ್ ಕರೆಗಳನ್ನು ಅನೌನ್ಸ್ ಮಾಡುವ ಆಯ್ಕೆಯನ್ನು ಕಾಣಬಹುದು.

– ಈಗ ನೀವು ಅನೌನ್ಸ್ ಫೋನ್ ಕಾಲ್ ಮುಂದೆ ಗೋಚರಿಸುವ ಟಾಗಲ್ ಅನ್ನು ಆನ್ ಮಾಡಿ.

ಇದನ್ನು ಮಾಡಿದ ನಂತರ, ನಿಮಗೆ ಯಾರಾದರು ಕರೆ ಮಾಡಿದಾಗ ಯಾರ ಕಾಲ್ ಮಾಡುತ್ತಿದ್ದಾರೆಂದು ಅಪ್ಲಿಕೇಶನ್ ತಿಳಿಸುತ್ತದೆ. ಒಂದು ವೇಳೆ ಆನೌನ್ ನಂಬರ್ ಅಂದರೆ ಯಾರದ್ದಾದರೂ ನಂಬರ್ ಸೇವ್ ಆಗದೇ ಇದ್ದು, ಅವರು ಕರೆ ಮಾಡಿದಾಗ ಅವರ ಸಂಖ್ಯೆಯನ್ನು ಕೂಡ ಇದು ಘೋಷಿಸಲು ಪ್ರಾರಂಭಿಸುತ್ತದೆ. ಇದಲ್ಲದೆ, ನೀವು ಗೂಗಲ್ ಅಸಿಸ್ಟೆಂಟ್‌ನ ಸಹಾಯವನ್ನು ಸಹ ತೆಗೆದುಕೊಳ್ಳಬಹುದು. ಇದಕ್ಕಾಗಿ Ok Google Incoming Call Announcement ಎಂದು ಹೇಳಬಹುದು.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ