Tech Tips: ಚಾಟ್ ಓಪನ್ ಮಾಡದೆ ವಾಟ್ಸ್​ಆ್ಯಪ್​ನಲ್ಲಿ ಮೆಸೇಜ್ ಓದುವ ಟ್ರಿಕ್ ನಿಮಗೆ ಗೊತ್ತೇ?

ವಾಟ್ಸ್​ಆ್ಯಪ್​ನಲ್ಲಿ ಆ್ಯಪ್ ತೆರೆಯದೆ ಚಾಟ್ ಅನ್ನು ಓದಬಹುದು. ಇದಕ್ಕೆ ಕೆಲವೊಂದು ಟ್ರಿಕ್​ಗಳಿವೆ. ಹಾಗಂತ ಇದಕ್ಕಾಗಿ ನೀವು ಯಾವುದೇ ಥರ್ಡ್ ಪಾರ್ಟಿ ಆ್ಯಪ್ ಇನ್​ಸ್ಟಾಲ್ ಮಾಡಿಕೊಳ್ಳಬೇಕಾಗಿಲ್ಲ. ಸಾಮಾನ್ಯವಾಗಿ ನೋಟಿಫಿಕೇಶನ್ ಪ್ಯಾನೆಲ್​ನಲ್ಲಿ ಈ ಮೆಸೇಜ್ ಒದಬಹುದು. ಆದರೆ, ಇಲ್ಲಿ ತೀರಾ ಉದ್ದವಿದ್ದ ಮೆಸೇಜ್ ಓದಲು ಸಾಧ್ಯವಿಲ್ಲ. ಬದಲಾಗಿ...

Tech Tips: ಚಾಟ್ ಓಪನ್ ಮಾಡದೆ ವಾಟ್ಸ್​ಆ್ಯಪ್​ನಲ್ಲಿ ಮೆಸೇಜ್ ಓದುವ ಟ್ರಿಕ್ ನಿಮಗೆ ಗೊತ್ತೇ?
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 17, 2024 | 12:13 PM

ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ ಇಂದು ವಿಶ್ವದಲ್ಲಿ ಸುಮಾರು 2 ಬಿಲಿಯನ್​ ಬಳಕೆದಾರರನ್ನು ಹೊಂದಿದೆ. ಪ್ರತಿ ತಿಂಗಳು ಒಂದಲ್ಲ ಒಂದು ಹೊಸ ಹೊಸ ಫೀಚರ್​ಗಳನ್ನು ಬಿಡುಗಡೆ ಮಾಡುತ್ತಿರುವ ವಾಟ್ಸ್​ಆ್ಯಪ್​ನಲ್ಲಿ ಇನ್ನಷ್ಟು ಅಚ್ಚರಿಯ ಆಯ್ಕೆಗಳು ಬರಲಿಕ್ಕಿದೆ. ವಾಟ್ಸ್​ಆ್ಯಪ್ ಹೊಸ ಅಪ್ಡೇಟ್​​ಗಳನ್ನು ಬಿಡುಗಡೆ ಮಾಡುತ್ತಿದ್ದಂತೆ ಅದಕ್ಕೆ ಸಂಬಂಧಿಸಿದಂತೆ ಇತರೆ ಥರ್ಡ್ ಪಾರ್ಟಿ ಆ್ಯಪ್​ಗಳು ಕೂಡ ಹುಟ್ಟಿಗೊಳ್ಳುತ್ತವೆ. ಈಗಾಗಲೇ ಡಿಲೀಟ್ ಆಗಿರುವ ಮೆಸೇಜ್ ಅನ್ನು ನೋಡುವಂತಹ ಆಯ್ಕೆ, ಡಿಪಿ ಯಾರು ನೋಡಿದ್ದಾರೆಂದು ತಿಳಿಯಲು ಹೀಗೆ ಕೆಲ ಥರ್ಡ್ ಪಾರ್ಟಿ ಆ್ಯಪ್ ಮೂಲ ವಾಟ್ಸ್​ಆ್ಯಪ್​ನ ಕೆಲ ಟ್ರಿಕ್ ತಿಳಿದುಕೊಳ್ಳಬಹುದು. ಅದರಂತೆ ವಾಟ್ಸ್​ಆ್ಯಪ್​ನಲ್ಲಿ ಚಾಟ್ ಓಪನ್ ಮಾಡದೇ ಮೆಸೇಜ್ ಓದುವುದು ಹೇಗೆ ಎಂಬುದಕ್ಕೂ ಒಂದು ಟ್ರಿಕ್ ಇದೆ.

ವಾಟ್ಸ್​ಆ್ಯಪ್​ನಲ್ಲಿ ಆ್ಯಪ್ ತೆರೆಯದೆ ಚಾಟ್ ಅನ್ನು ಓದಬಹುದು. ಇದಕ್ಕೆ ಕೆಲವೊಂದು ಟ್ರಿಕ್​ಗಳಿವೆ. ಹಾಗಂತ ಇದಕ್ಕಾಗಿ ನೀವು ಯಾವುದೇ ಥರ್ಡ್ ಪಾರ್ಟಿ ಆ್ಯಪ್ ಇನ್​ಸ್ಟಾಲ್ ಮಾಡಿಕೊಳ್ಳಬೇಕಾಗಿಲ್ಲ. ಸಾಮಾನ್ಯವಾಗಿ ನೋಟಿಫಿಕೇಶನ್ ಪ್ಯಾನೆಲ್​ನಲ್ಲಿ ಈ ಮೆಸೇಜ್ ಒದಬಹುದು. ಆದರೆ, ಇಲ್ಲಿ ತೀರಾ ಉದ್ದವಿದ್ದ ಮೆಸೇಜ್ ಓದಲು ಸಾಧ್ಯವಿಲ್ಲ. ಬದಲಾಗಿ ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ಕೆಲವೊಂದು ಸೆಟ್ಟಿಂಗ್​ಗಳನ್ನು ಬದಲಾವಣೆ ಮಾಡಿಕೊಳ್ಳುವ ಮೂಲಕ ವಾಟ್ಸ್​ಆ್ಯಪ್ ಚಾಟ್ ಅನ್ನು ತೆರೆಯದೆ ಓದಬಹುದು. ಅದು ಆಂಡ್ರಾಯ್ಡ್ ಸ್ಮಾರ್ಟ್​ಫೋನ್​ನಲ್ಲಿ ಹೇಗೆ ಎಂಬುದಕ್ಕೆ ಇಲ್ಲಿದೆ ನೋಡಿ ಟ್ರಿಕ್.

ಆಂಡ್ರಾಯ್ಡ್ ಸ್ಮಾರ್ಟ್​ಫೋನ್​ನಲ್ಲಿ ಮೈನ್ ಸ್ಕ್ರೀನ್​ನಲ್ಲಿರುವ ಹೋಮ್ ಪೇಜ್ ಅನ್ನು ಲಾಂಗ್ ಪ್ರೆಸ್ ಮಾಡಿ

ಈಗ ಅಲ್ಲಿ ಕಾಣಿಸುವ Widgets ಆಯ್ಕೆ ಮೇಲೆ ಒತ್ತಿರಿ

ನಂತರ ಮೈನ್ ಸ್ಕ್ರೀನ್​ನಲ್ಲಿ ಎಲ್ಲ Widgets ಕಾಣಿಸುತ್ತದೆ. ಇದರಲ್ಲಿ ವಾಟ್ಸ್​ಆ್ಯಪ್ ಆಯ್ಕೆ ಮಾಡಿ

ವಾಟ್ಸ್​ಆ್ಯಪ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ಮೈನ್ ಸ್ಕ್ರೀನ್​ನಲ್ಲಿ ಕಾಣಿಸುತ್ತದೆ

ನಂತರ ಡನ್ ಆಯ್ಕೆಯನ್ನು ಒತ್ತಿರಿ. ಈ ಸಂದರ್ಭ ಬೇಕಾದಲ್ಲಿ ಫುಲ್ ಸ್ಕ್ರೀನ್ ವರೆಗೂ ಸೆಲೆಕ್ಟ್ ಮಾಡಬಹುದು.

ಈ ಸೆಟ್ಟಿಂಗ್ ನಂತರ ಸ್ಕ್ರಾಲ್ ಮಾಡುವ ಮೂಲಕ ವಾಟ್ಸ್​ಆ್ಯಪ್ ತೆರೆಯದೆ ಮೆಸೇಜ್ ಓದಬಹುದು

ಯಾವುದೇ ಕಾರಣಕ್ಕೂ ಮೆಸೇಜ್ ಮೇಲೆ ಕ್ಲಿಕ್ ಮಾಡಬೇಡಿ, ಮಾಡಿದರೆ ವಾಟ್ಸ್​ಆ್ಯಪ್ ಓಪನ್ ಆಗಿ ನೇರವಾಗಿ ಚಾಟ್​ಗೆ ಪ್ರವೇಶಿಸುತ್ತದೆ.

ಇದನ್ನೂ ಓದಿ: ಅಮೇರಿಕಾ, ಜಪಾನ್, ಭಾರತ ಅಲ್ಲ: ಅತಿ ವೇಗದ ಮೊಬೈಲ್ ಇಂಟರ್ನೆಟ್ ಹೊಂದಿರುವ ದೇಶ ಯಾವುದು ಗೊತ್ತೇ?

ಒಂದೇ ಸ್ಮಾರ್ಟ್​ಫೋನ್​ನಲ್ಲಿ ಎರಡು ಅಕೌಂಟ್ ಹೇಗೆ?:

ವಾಟ್ಸ್​ಆ್ಯಪ್ ತನ್ನ ಬಳಕೆದಾರರಿಗೆ ಒಂದೇ ಅಪ್ಲಿಕೇಶನ್‌ನಲ್ಲಿ ಎರಡು ಪ್ರತ್ಯೇಕ ವಾಟ್ಸ್​ಆ್ಯಪ್​ ಖಾತೆಗಳನ್ನು ತೆರೆಯುವ ಆಯ್ಕೆ ಕೂಡ ನೀಡಿದೆ. ಅಂದರೆ ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ಎರಡು ಸಿಮ್​ಗಳಿದ್ದರೆ ಈ ಎರಡೂ ಸಿಮ್​ಗೆ ಒಂದೇ ಮೊಬೈಲ್​ನಲ್ಲಿ ಎರಡು ವಾಟ್ಸ್​ಆ್ಯಪ್​ ಅಕೌಂಟ್ ತೆರೆಯಬಹುದು. ಸದ್ಯ ವಾಟ್ಸ್​ಆ್ಯಪ್​ ಈ ಫೀಚರ್ ಅನ್ನು ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ನೀಡಿದೆ. ಐಒಎಸ್ ಆ್ಯಪಲ್ ಬಳಕೆದಾರರಿಗೆ ಸಿಗುವಂತೆ ಕಾರ್ಯ ನಿರ್ವಹಿಸುತ್ತಿದ್ದು, ಕೆಲವೇ ದಿನಗಳಲ್ಲಿ ಬರುವ ನಿರೀಕ್ಷೆ ಇದೆ.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ
ಕ್ಲಾಸ್​ ನಡೆಯುವಾಗಲೇ 3ನೇ ಮಹಡಿಯಿಂದ ಹಾರಿದ ಕಾಲೇಜು ವಿದ್ಯಾರ್ಥಿ
ಕ್ಲಾಸ್​ ನಡೆಯುವಾಗಲೇ 3ನೇ ಮಹಡಿಯಿಂದ ಹಾರಿದ ಕಾಲೇಜು ವಿದ್ಯಾರ್ಥಿ
ಶ್ರೀರಾಮುಲು ಕಾಂಗ್ರೆಸ್ ಸೇರ್ತಾರಾ? ರಾಜಕೀಯ ಗುಟ್ಟು ಬಿಚ್ಚಿಟ್ಟ ಹಳೇ ಕುಚಿಕು
ಶ್ರೀರಾಮುಲು ಕಾಂಗ್ರೆಸ್ ಸೇರ್ತಾರಾ? ರಾಜಕೀಯ ಗುಟ್ಟು ಬಿಚ್ಚಿಟ್ಟ ಹಳೇ ಕುಚಿಕು
ವ್ಯಕ್ತಿತ್ವದಲ್ಲಿ ಉತ್ತಮ ಈ ತ್ರಿವಿಕ್ರಮ: ಗೆಲುವಿನ ಸೂಚನೆ ಕೊಟ್ಟ ಬಿಗ್ ಬಾಸ್
ವ್ಯಕ್ತಿತ್ವದಲ್ಲಿ ಉತ್ತಮ ಈ ತ್ರಿವಿಕ್ರಮ: ಗೆಲುವಿನ ಸೂಚನೆ ಕೊಟ್ಟ ಬಿಗ್ ಬಾಸ್
ಶ್ರೀರಾಮುಲು ಕಾಂಗ್ರೆಸ್​ಗೆ ಕಳುಹಿಸಲು ಅವರೇ ಪ್ರಯತ್ನಿಸ್ತಿರಬಹುದು: ಡಿಕೆಶಿ
ಶ್ರೀರಾಮುಲು ಕಾಂಗ್ರೆಸ್​ಗೆ ಕಳುಹಿಸಲು ಅವರೇ ಪ್ರಯತ್ನಿಸ್ತಿರಬಹುದು: ಡಿಕೆಶಿ
9 ವಿಕೆಟ್ ಕಬಳಿಸಿ ದಾಖಲೆ ಬರೆದ ಸಿದ್ಧಾರ್ಥ್ ದೇಸಾಯಿ
9 ವಿಕೆಟ್ ಕಬಳಿಸಿ ದಾಖಲೆ ಬರೆದ ಸಿದ್ಧಾರ್ಥ್ ದೇಸಾಯಿ
ಮುಡಾ ಹಗರಣದಲ್ಲಿ ಕ್ಲೀನ್​ಚಿಟ್; ಸಿಎಂ ರಿಯಾಕ್ಷನ್ ಇದು
ಮುಡಾ ಹಗರಣದಲ್ಲಿ ಕ್ಲೀನ್​ಚಿಟ್; ಸಿಎಂ ರಿಯಾಕ್ಷನ್ ಇದು
ರಥೋತ್ಸವದ ವೇಳೆ ವಿಟ್ಲದಲ್ಲಿ ದೇವರ ಮೂರ್ತಿ, ಅರ್ಚಕರಿಗೆ ಬಡಿದ ಡ್ರೋನ್​
ರಥೋತ್ಸವದ ವೇಳೆ ವಿಟ್ಲದಲ್ಲಿ ದೇವರ ಮೂರ್ತಿ, ಅರ್ಚಕರಿಗೆ ಬಡಿದ ಡ್ರೋನ್​
ಜಿಂಕೆಯ ವೇಗ, ಹದ್ದಿನ ಕಣ್ಣು... ನಿತೀಶ್ ಕುಮಾರ್ ರೆಡ್ಡಿ ಸೂಪರ್ ಕ್ಯಾಚ್
ಜಿಂಕೆಯ ವೇಗ, ಹದ್ದಿನ ಕಣ್ಣು... ನಿತೀಶ್ ಕುಮಾರ್ ರೆಡ್ಡಿ ಸೂಪರ್ ಕ್ಯಾಚ್