ಅಮೇರಿಕಾ, ಜಪಾನ್, ಭಾರತ ಅಲ್ಲ: ಅತಿ ವೇಗದ ಮೊಬೈಲ್ ಇಂಟರ್ನೆಟ್ ಹೊಂದಿರುವ ದೇಶ ಯಾವುದು ಗೊತ್ತೇ?

ಅಂಕಿ ಅಂಶಗಳ ಪ್ರಕಾರ, ಅಮೆರಿಕ, ಜಪಾನ್, ಭಾರತ ಮತ್ತು ಜರ್ಮನಿಯಂತಹ ಪ್ರಮುಖ ದೇಶಗಳು ಈ ವಿಷಯದಲ್ಲಿ ವಿಶ್ವದ ಟಾಪ್ 10 ದೇಶಗಳಲ್ಲಿ ಸೇರ್ಪಡೆಗೊಂಡಿಲ್ಲ. ಈ ಪಟ್ಟಿಯಲ್ಲಿ ಏಷ್ಯಾದ ಐದು ದೇಶಗಳಿವೆ. ಗಲ್ಫ್ ರಾಷ್ಟ್ರಗಳು ಈ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳಲ್ಲಿವೆ. ಯುನೈಟೆಡ್ ಅರಬ್ ಎಮಿರೇಟ್ಸ್ ಅಂದರೆ UAE 441.89 Mbps ವೇಗದೊಂದಿಗೆ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಅಮೇರಿಕಾ, ಜಪಾನ್, ಭಾರತ ಅಲ್ಲ: ಅತಿ ವೇಗದ ಮೊಬೈಲ್ ಇಂಟರ್ನೆಟ್ ಹೊಂದಿರುವ ದೇಶ ಯಾವುದು ಗೊತ್ತೇ?
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 17, 2024 | 11:51 AM

ಇಂದು ಜಗತ್ತಿನಲ್ಲಿ ಸ್ಮಾರ್ಟ್​ಫೋನ್ ಹೊಂದಿರುವ ಪ್ರತಿಯೊಬ್ಬರು ಕೂಡ ಅದರ ಮೂಲಕ ಇಂಟರ್ನೆಟ್ ಉಪಯೋಗಿಸುತ್ತಾರೆ. ಹಾಗಾದರೆ ಜಗತ್ತಿನಲ್ಲೇ ಅತಿ ಹೆಚ್ಚು ಮೊಬೈಲ್ ಇಂಟರ್ನೆಟ್ ಸ್ಪೀಡ್ ಹೊಂದಿರುವ ದೇಶ ಯಾವುದು ಎಂಬುದು ನಿಮಗೆ ಗೊತ್ತಾ?. ಸ್ಪೀಡ್‌ಟೆಸ್ಟ್ ಗ್ಲೋಬಲ್ ಇಂಡೆಕ್ಸ್‌ನ ನವೆಂಬರ್ ಅಂಕಿ ಅಂಶಗಳ ಪ್ರಕಾರ, ಅಮೆರಿಕ, ಜಪಾನ್, ಭಾರತ ಮತ್ತು ಜರ್ಮನಿಯಂತಹ ಪ್ರಮುಖ ದೇಶಗಳು ಈ ವಿಷಯದಲ್ಲಿ ವಿಶ್ವದ ಟಾಪ್ 10 ದೇಶಗಳಲ್ಲಿ ಸೇರ್ಪಡೆಗೊಂಡಿಲ್ಲ. ಈ ಪಟ್ಟಿಯಲ್ಲಿ ಏಷ್ಯಾದ ಐದು ದೇಶಗಳಿವೆ. ಗಲ್ಫ್ ರಾಷ್ಟ್ರಗಳು ಈ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳಲ್ಲಿವೆ.

ಯುನೈಟೆಡ್ ಅರಬ್ ಎಮಿರೇಟ್ಸ್ ಅಂದರೆ UAE 441.89 Mbps ವೇಗದೊಂದಿಗೆ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಅದೇ ರೀತಿ, ಕತಾರ್ 358.27 Mbps ಮೊಬೈಲ್ ಇಂಟರ್ನೆಟ್ ವೇಗದೊಂದಿಗೆ ಎರಡನೇ ಸ್ಥಾನದಲ್ಲಿದೆ ಮತ್ತು ಕುವೈತ್ 263.59 Mbps ನೊಂದಿಗೆ ಮೂರನೇ ಸ್ಥಾನದಲ್ಲಿದೆ.

ಯುರೋಪಿಯನ್ ದೇಶ ಬಲ್ಗೇರಿಯಾ 172.49 Mbps ನೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಮೊಬೈಲ್‌ನಲ್ಲಿ ವೇಗದ ಇಂಟರ್ನೆಟ್ ಹೊಂದಿರುವ ವಿಷಯದಲ್ಲಿ ಡೆನ್ಮಾರ್ಕ್ ಐದನೇ ಸ್ಥಾನದಲ್ಲಿದೆ. ಈ ದೇಶದಲ್ಲಿ ಮೊಬೈಲ್ ಇಂಟರ್ನೆಟ್ ವೇಗ 162.22 Mbps ಆಗಿದೆ. ದಕ್ಷಿಣ ಕೊರಿಯಾ 148.34 Mbps ನೊಂದಿಗೆ ಆರನೇ ಸ್ಥಾನದಲ್ಲಿದೆ, ನೆದರ್ಲ್ಯಾಂಡ್ಸ್ 146.56 Mbps ನೊಂದಿಗೆ ಏಳನೇ ಸ್ಥಾನದಲ್ಲಿದೆ, ನಾರ್ವೆ (145.74 Mbps) ಎಂಟನೇ ಸ್ಥಾನದಲ್ಲಿ, ಚೀನಾ (139.58 Mbps) ಒಂಬತ್ತನೇ ಮತ್ತು ಲಕ್ಸೆಂಬರ್ಗ್ (134.14 Mbps) ಹತ್ತನೇ ಸ್ಥಾನದಲ್ಲಿದೆ. ಇದರ ನಂತರ ಸಿಂಗಾಪುರ (127.75 Mbps), ಅಮೇರಿಕಾ (124.61 Mbps), ಬಹ್ರೇನ್ (118.36 Mbps) ಮತ್ತು ಫಿನ್ಲ್ಯಾಂಡ್ (114.45 Mbps). ಈ ಪಟ್ಟಿಯಲ್ಲಿ ಜಪಾನ್ 51.95 Mbps ವೇಗದೊಂದಿಗೆ 59 ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: ನಿಮಗೆ ಕಾಲ್ ಬಂದಾಗ ನಿಮ್ಮ ಫೋನ್​ ಕರೆ ಮಾಡಿದವರ ಹೆಸರು ಹೇಳುತ್ತೆ: ಈ ಸೆಟ್ಟಿಂಗ್ಸ್ ಆನ್ ಮಾಡಿ

ಭಾರತದ ಸ್ಥಿತಿ ಹೇಗಿದೆ?:

ಈ ಪಟ್ಟಿಯಲ್ಲಿ ಭಾರತ 25ನೇ ಸ್ಥಾನದಲ್ಲಿದೆ. ದೇಶದಲ್ಲಿ ಮೊಬೈಲ್ ಇಂಟರ್ನೆಟ್ ವೇಗ 100.78 Mbps ಆಗಿದೆ. ಪಾಕಿಸ್ತಾನದಲ್ಲಿ ಇದರ ವೇಗ 20.89 Mbps ಮತ್ತು ಈ ಪಟ್ಟಿಯಲ್ಲಿ 97 ನೇ ಸ್ಥಾನದಲ್ಲಿದೆ. ಬಾಂಗ್ಲಾದೇಶವು 28.26 Mbps ವೇಗದೊಂದಿಗೆ 88 ನೇ ಸ್ಥಾನದಲ್ಲಿದೆ. ಆದಾಗ್ಯೂ, ಸ್ಥಿರ ಬ್ರಾಡ್‌ಬ್ಯಾಂಡ್ ವಿಷಯದಲ್ಲಿ ಭಾರತದ ಪರಿಸ್ಥಿತಿ ನೇಪಾಳಕ್ಕಿಂತ ಕೆಟ್ಟದಾಗಿದೆ. ಭಾರತದಲ್ಲಿ ಇದರ ವೇಗ 63.55 Mbps ಮತ್ತು ಇದು 91 ನೇ ಸ್ಥಾನದಲ್ಲಿದೆ. ನೇಪಾಳದಲ್ಲಿ ಸ್ಥಿರ ಬ್ರಾಡ್‌ಬ್ಯಾಂಡ್ ವೇಗ 70.94 Mbps ಮತ್ತು 87 ನೇ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಸಿಂಗಾಪುರವು 324.46 Mbps ವೇಗದೊಂದಿಗೆ ಮೊದಲ ಸ್ಥಾನದಲ್ಲಿದೆ.

ಇನ್ನು ದೆಹಲಿ, ಮುಂಬೈ ಮತ್ತು ನೋಯ್ಡಾದಂತಹ ನಗರಗಳಲ್ಲಿ ಹೆಚ್ಚಿನ ವೇಗದ ಇಂಟರ್ನೆಟ್ ಸಂಪರ್ಕದ ಸೌಲಭ್ಯವಿದೆ ಎಂದು ನೀವು ಭಾವಿಸಿದರೆ, ಅದು ತಪ್ಪು. ಓಕ್ಲಾ ವರದಿಯ ಪ್ರಕಾರ, ಭಾರತದಲ್ಲಿ ಅತಿ ವೇಗದ ಮೊಬೈಲ್ ಇಂಟರ್ನೆಟ್ ಸಂಪರ್ಕವು ಚೆನ್ನೈನಲ್ಲಿ ಲಭ್ಯವಿದೆ. ಇಲ್ಲಿ ದಾಖಲಾಗಿರುವ ಮೊಬೈಲ್ ಇಂಟರ್ನೆಟ್ ವೇಗ 51.07mbps ಆಗಿದೆ. ಈ ವಿಷಯದಲ್ಲಿ ಬೆಂಗಳೂರು ಎರಡನೇ ಸ್ಥಾನದಲ್ಲಿದ್ದು, ಹೈದರಾಬಾದ್ ನಗರ ಮೂರನೇ ಸ್ಥಾನದಲ್ಲಿದೆ.

ಬೆಂಗಳೂರಿನಲ್ಲಿ ಮೊಬೈಲ್ ಇಂಟರ್ನೆಟ್‌ನ ಸರಾಸರಿ ವೇಗ 42.50mbps ಆಗಿದ್ದರೆ ಹೈದರಾಬಾದ್‌ನಲ್ಲಿ ಜನರು ಸುಮಾರು 41.68mbps ಇಂಟರ್ನೆಟ್ ವೇಗವನ್ನು ಪಡೆಯುತ್ತಾರೆ. ದೇಶದ ರಾಜಧಾನಿ ದೆಹಲಿ ಐದನೇ ಸ್ಥಾನದಲ್ಲಿದೆ. ಓಕ್ಲಾ ವರದಿಯ ಪ್ರಕಾರ, ದೆಹಲಿಯಲ್ಲಿ ಇಂಟರ್ನೆಟ್ ವೇಗವು ಸುಮಾರು 32.39mbps ಆಗಿದೆ.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ
ಕ್ಲಾಸ್​ ನಡೆಯುವಾಗಲೇ 3ನೇ ಮಹಡಿಯಿಂದ ಹಾರಿದ ಕಾಲೇಜು ವಿದ್ಯಾರ್ಥಿ
ಕ್ಲಾಸ್​ ನಡೆಯುವಾಗಲೇ 3ನೇ ಮಹಡಿಯಿಂದ ಹಾರಿದ ಕಾಲೇಜು ವಿದ್ಯಾರ್ಥಿ
ಶ್ರೀರಾಮುಲು ಕಾಂಗ್ರೆಸ್ ಸೇರ್ತಾರಾ? ರಾಜಕೀಯ ಗುಟ್ಟು ಬಿಚ್ಚಿಟ್ಟ ಹಳೇ ಕುಚಿಕು
ಶ್ರೀರಾಮುಲು ಕಾಂಗ್ರೆಸ್ ಸೇರ್ತಾರಾ? ರಾಜಕೀಯ ಗುಟ್ಟು ಬಿಚ್ಚಿಟ್ಟ ಹಳೇ ಕುಚಿಕು
ವ್ಯಕ್ತಿತ್ವದಲ್ಲಿ ಉತ್ತಮ ಈ ತ್ರಿವಿಕ್ರಮ: ಗೆಲುವಿನ ಸೂಚನೆ ಕೊಟ್ಟ ಬಿಗ್ ಬಾಸ್
ವ್ಯಕ್ತಿತ್ವದಲ್ಲಿ ಉತ್ತಮ ಈ ತ್ರಿವಿಕ್ರಮ: ಗೆಲುವಿನ ಸೂಚನೆ ಕೊಟ್ಟ ಬಿಗ್ ಬಾಸ್
ಶ್ರೀರಾಮುಲು ಕಾಂಗ್ರೆಸ್​ಗೆ ಕಳುಹಿಸಲು ಅವರೇ ಪ್ರಯತ್ನಿಸ್ತಿರಬಹುದು: ಡಿಕೆಶಿ
ಶ್ರೀರಾಮುಲು ಕಾಂಗ್ರೆಸ್​ಗೆ ಕಳುಹಿಸಲು ಅವರೇ ಪ್ರಯತ್ನಿಸ್ತಿರಬಹುದು: ಡಿಕೆಶಿ
9 ವಿಕೆಟ್ ಕಬಳಿಸಿ ದಾಖಲೆ ಬರೆದ ಸಿದ್ಧಾರ್ಥ್ ದೇಸಾಯಿ
9 ವಿಕೆಟ್ ಕಬಳಿಸಿ ದಾಖಲೆ ಬರೆದ ಸಿದ್ಧಾರ್ಥ್ ದೇಸಾಯಿ