Tech Tips: ನಿಮ್ಮ ಲವ್ವರ್ ಫೋನ್ ದಿನವಿಡೀ ಬ್ಯುಸಿ ಬರುತ್ತಾ?: ಕಾಲ್ ಹಿಸ್ಟರಿ ತೆಗೆಯುವ ಟ್ರಿಕ್ ಇಲ್ಲಿದೆ ನೋಡಿ

|

Updated on: Feb 10, 2024 | 11:34 AM

How to Check Call History: ಪ್ರೀತಿ ಎಂಬ ಮಾಯಾಜಾಲಕ್ಕೆ ಸಿಲುಕಿ ಮೋಸ ಹೋಗುವವರ ಸಂಖ್ಯೆ ಇಂದು ಹೆಚ್ಚಾಗುತ್ತಿದೆ. ಇದರ ನಡುವೆ ಇನ್ನೇನು ಕೆಲವೇ ದಿನಗಳಲ್ಲಿ ಪ್ರೇಮಿಗಳ ದಿನ ಕೂಡ ಬರುತ್ತಿದೆ. ಇಂಥ ಸಂದರ್ಭದಲ್ಲಿ ನೀವು ಹುಷಾರಾಗಿರಬೇಕು. ನಿಮ್ಮ ಲವ್ವರ್ ಮೇಲೆ ನಿಮಗೆ ಅನುಮಾನವಿದ್ದರೆ ಈ ಟ್ರಿಕ್ ಮೂಲಕ ಅವರ ಕಾಲ್ ಹಿಸ್ಟರಿಯನ್ನು ಪಡೆದುಕೊಳ್ಳಬಹುದು.

Tech Tips: ನಿಮ್ಮ ಲವ್ವರ್ ಫೋನ್ ದಿನವಿಡೀ ಬ್ಯುಸಿ ಬರುತ್ತಾ?: ಕಾಲ್ ಹಿಸ್ಟರಿ ತೆಗೆಯುವ ಟ್ರಿಕ್ ಇಲ್ಲಿದೆ ನೋಡಿ
Call History
Follow us on

ಇಂದು ಟೆಕ್ನಾಲಜಿ (Technology) ಎಷ್ಟು ಮುಂದುವರೆದಿದೆ ಎಂದರೆ ಎಲ್ಲ ಮಾಹಿತಿಯನ್ನು ಕ್ಷಣಾರ್ಧದಲ್ಲಿ ನಾವು ತಿಳಿಯಬಹುದು. ಎಲ್ಲಿಯ ವರೆಗೆ ಎಂದರೆ ನಿಮ್ಮ ಗೆಳೆಯ-ಗೆಳತಿ, ಗಂಡ-ಹೆಂಡತಿ, ಲವ್ವರ್ ಫೋನ್​ನಲ್ಲಿ ಯಾರೊಂದಿಗೆ ಎಷ್ಟು ಸಮಯ ಮಾತನಾಡಿದ್ದಾರೆ ಎಂಬುದನ್ನು ಕಂಡುಹಿಡಿಯಬಹುದು. ನಿಮ್ಮವರು ನಿಮಗೆ ಸಮಯ ನೀಡದೇ ಇದ್ದರೆ ಮತ್ತು ಬೇರೆಯವರೊಂದಿಗೆ ಗಂಟೆಗಟ್ಟಲೆ ಫೋನ್‌ನಲ್ಲಿ ಮಾತನಾಡುತ್ತಿದ್ದರೆ ಅವರು ಯಾರೊಂದಿಗೆ ಮಾತನಾಡಿದ್ದಾರೆ ಎಂಬುದನ್ನು ತಿಳಿಯಬಹುದು. ಇದಕ್ಕೆ ಒಂದು ಸಿಂಪಲ್ ಟ್ರಿಕ್ ಇದೆ. ಈ ಕುರಿತ ಮಾಹಿತಿ ಇಲ್ಲಿದೆ.

ನಿಮ್ಮವರ ಕಾಲ್ ಹಿಸ್ಟರಿ ಪಡೆಯುವ ವಿಧಾನವನ್ನು ಇಲ್ಲಿ ನಾವು ನಿಮಗೆ ತಿಳಿಸುತ್ತೇವೆ. ಇದರ ಮೂಲಕ ಅವರು ಫೋನ್‌ನಲ್ಲಿ ಯಾರೊಂದಿಗೆಲ್ಲ ಮಾತನಾಡಿದ್ದಾರೆ ಎಂಬುದನ್ನು ಪರಿಶೀಲಿಸಬಹುದು. ಆದರೆ, ಇದು ಜಿಯೋ ಸಿಮ್​ನಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ. ಯಾರ ಬಳಿ ಜಿಯೋ ಸಿಮ್ ಇದೆ ಅವರ ಕಾಲ್ ಹಿಸ್ಟರಿ ಮಾತ್ರ ತಿಳಿದುಕೊಳ್ಳಬಹುದು. ಜಿಯೋ ಸಿಮ್ ಬಳಸುವವರಿಗೆ ಮಾತ್ರ ಈ ಟ್ರಿಕ್ ಕೆಲಸ ಮಾಡುತ್ತದೆ.

ನೀವು ಆನ್​ಲೈನ್ ಶಾಪಿಂಗ್ ಮಾಡುತ್ತೀರಾ?: ಈ ಟ್ರಿಕ್ ಸಾವಿರಾರು ರೂಪಾಯಿ ಉಳಿಸುತ್ತದೆ

  • ನೀವು ಆಂಡ್ರಾಯ್ಡ್ ಬಳಕೆದಾರರು ಆಗಿದ್ದಲ್ಲಿ ಪ್ಲೇ ಸ್ಟೋರ್ ಅಥವಾ ಆ್ಯಪಲ್ ಬಳಸುತ್ತಿದ್ದರೆ ಆ್ಯಪ್ ಸ್ಟೋರ್​ನಿಂದ ಮೈ ಜಿಯೋ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕು.
  • ಇನ್​ಸ್ಟಾಲ್ ಮಾಡಿದ ನಂತರ ನಿಮ್ಮ ಜಿಯೋ ಸಂಖ್ಯೆಯ ಮೂಲಕ ಸೈನ್ ಇನ್ ಮಾಡಬೇಕು. ನಂತರ ಕೆಳಗೆ ನೀಡಲಾದ ಹಂತಗಳನ್ನು ಅನುಸರಿಸಿ.
  • ಈಗ ಅಪ್ಲಿಕೇಶನ್‌ನಲ್ಲಿ ನಿಮ್ಮ ಸಂಖ್ಯೆ ಗೋಚರಿಸುವ ಸ್ಥಳದ ಮೇಲೆ ಕ್ಲಿಕ್ ಮಾಡಿ ಮತ್ತು ಖಾತೆಯನ್ನು ಬದಲಾಯಿಸುವ ಆಯ್ಕೆಯನ್ನು ಆರಿಸಿ.
  • ಈಗ ನೀವು ಯಾರ ಕಾಲ್ ಹಿಸ್ಟರಿ ಬೇಕೋ ಅವರ ಜಿಯೋ ಸಂಖ್ಯೆಯನ್ನು ನಮೂದಿಸಿ.
  • ಆದರೆ, ಇಲ್ಲಿ ಮತ್ತೊಂದು ಟ್ವಿಸ್ಟ್ ಇದೆ. ಹೀಗೆ ಫೋನ್ ನಂಬರ್ ಹಾಕುವಾಗ ಆ ಫೋನ್ ಅನ್ನು ನಿಮ್ಮೊಂದಿಗೆ ಸ್ವಲ್ಪ ಸಮಯ ಇರಬೇಕಾಗುತ್ತಿದೆ. ಅದರಲ್ಲಿ ಸ್ವೀಕರಿಸಿದ ಓಟಿಪಿ ಅನ್ನು ಅಪ್ಲಿಕೇಶನ್‌ನಲ್ಲಿ ನಮೂದಿಸಬೇಕು.
  • ಈಗ ನೀವು ಮೆನುಗೆ ಹೋಗಿ ಸ್ಟೇಟ್​ಮೆಂಟ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
  • ನೀವು ಇದನ್ನು ಮಾಡಿದ ತಕ್ಷಣ, ಕೆಲ ಆಯ್ಕೆಗಳು ನಿಮಗೆ ಗೋಚರಿಸುತ್ತವೆ.
  • 7 ದಿನಗಳು, 15 ದಿನಗಳು, 30 ದಿನಗಳು ಹಾಗೂ ಕಸ್ಟಮ್ ಡೇಟ್ ಆಯ್ಕೆ ಇರುತ್ತದೆ. ಇದರಲ್ಲಿ ನಿಮಗೆ ಬೇಕಾಗಿರುವುದನ್ನು ಸೆಲೆಕ್ಟ್ ಮಾಡಿ ಮತ್ತು ವೀವ್ ಸ್ಟೇಟ್​ಮೆಂಟ್ ಆಯ್ಕೆಯನ್ನು ಒತ್ತಿರಿ.
  • ಈಗ ಮೇಲ್ಬಾಗದಲ್ಲಿರುವ ಯೂಸೇಜ್ ಚಾರ್ಜೆಸ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. ನಂತರ ವಾಯ್ಸ್ ಹಾಗೂ ಕ್ಲಿಕ್ ಹಿಯರ್ ಸೆಲೆಕ್ಟ್ ಮಾಡಿದರೆ ಕಾಲ್ ಹಿಸ್ಟರಿ ಸಿಗುತ್ತದೆ.
  • ಈ ಟ್ರಿಕ್ ಅನ್ನು ಯಾವುದೇ ಜಿಯೋ ಸಂಖ್ಯೆ ಮೂಲಕ ಪ್ರಯತ್ನಿಸಬಹುದು. ಆದರೆ, ಓಟಿಪಿ ನಮೋದಿಸಬೇಕಷ್ಟೆ.

ಗಮನಿಸಿ: ಈ ಸುದ್ದಿ ಕೇವಲ ಮಾಹಿತಿಗಾಗಿ ಮಾತ್ರ ಆಗಿದೆ. ಯಾರ ಗೌಪ್ಯತೆಯನ್ನೂ ಅಡ್ಡಿ ಪಡಿಸುವ ಉದ್ದೇಶಕ್ಕಾಗಿ ಅಲ್ಲ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ