- Kannada News Photo gallery Lava Yuva 3 A Latest Best Budget Smartphone Sale Start In India Today With Just Rs 6,799
ಕೇವಲ 6,799 ರೂ. ಗೆ ಬಿಡುಗಡೆಯಾದ ಲಾವಾ ಯುವ 3 ಇಂದಿನಿಂದ ಖರೀದಿಗೆ ಲಭ್ಯ
Lava Yuva 3 Sale: ಲಾವಾ ಯುವ 3 ನ 4GB RAM ಮತ್ತು 64GB ಸ್ಟೋರೇಜ್ ರೂಪಾಂತರದ ಬೆಲೆ 6,799 ರೂ. ಆಗಿದೆ. ಈ ಸ್ಮಾರ್ಟ್‌ಫೋನ್ ಅಮೆಜಾನ್, ಲಾವಾದ ರಿಟೇಲ್ ನೆಟ್‌ವರ್ಕ್ ಮತ್ತು ಲಾವಾ ಇ-ಸ್ಟೋರ್‌ನಲ್ಲಿ ಇಂದಿನಿಂದ ಲಭ್ಯವಿರುತ್ತದೆ. ಈ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ 13 ಮೆಗಾಪಿಕ್ಸೆಲ್ ಟ್ರಿಪಲ್ AI ಕ್ಯಾಮೆರಾ ಇದೆ. ಮುಂಭಾಗದಲ್ಲಿ 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.
Updated on: Feb 10, 2024 | 6:55 AM

ಭಾರತದಲ್ಲಿ ಅಪರೂಪಕ್ಕೆ ಆಕರ್ಷಕ ಬಜೆಟ್ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುವ ಪ್ರಸಿದ್ಧ ಲಾವಾ ಕಂಪನಿ ಮೊನ್ನೆಯಷ್ಟೆ ಕೈಗೆಟುಕುವ ಬೆಲೆಗೆ ಹೊಸ ಸ್ಮಾರ್ಟ್‌ಫೋನ್ ಲಾವಾ ಯುವ 3 (Lava Yuva 3) ಅನ್ನು ಬಿಡುಗಡೆ ಮಾಡಿತ್ತು. ಯುವಾ 3 6.5 ಇಂಚಿನ HD + ಪಂಚ್ ಹೋಲ್ ಡಿಸ್ಪ್ಲೇ ಹೊಂದಿದೆ. ಈ ಫೋನ್ ಇಂದಿನಿಂದ ದೇಶದಲ್ಲಿ ಮಾರಾಟ ಕಾಣಲಿದೆ.

ಲಾವಾ ಯುವ 3 ನ 4GB RAM ಮತ್ತು 64GB ಸ್ಟೋರೇಜ್ ರೂಪಾಂತರದ ಬೆಲೆ 6,799 ರೂ. ಆಗಿದೆ. ಅಂತೆಯೆ 4GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಬೆಲೆ 7,299 ರೂ. ಈ ಸ್ಮಾರ್ಟ್‌ಫೋನ್ ಅಮೆಜಾನ್, ಲಾವಾದ ರಿಟೇಲ್ ನೆಟ್‌ವರ್ಕ್ ಮತ್ತು ಲಾವಾ ಇ-ಸ್ಟೋರ್‌ನಲ್ಲಿ ಇಂದಿನಿಂದ ಲಭ್ಯವಿರುತ್ತದೆ.

ಲಾವಾ ಯುವ 3 ಸ್ಮಾರ್ಟ್‌ಫೋನ್ 6.5 ಇಂಚಿನ HD + ಪಂಚ್ ಹೋಲ್ ಡಿಸ್ಪ್ಲೇಯನ್ನು ಹೊಂದಿದೆ. ಇದರ ರೆಸಲ್ಯೂಶನ್ 720 * 1600 ಪಿಕ್ಸೆಲ್ಗಳು ಮತ್ತು ರಿಫ್ರೆಶ್ ದರ 90Hz ಆಗಿದೆ. ಈ ಸ್ಮಾರ್ಟ್‌ಫೋನ್ 4GB RAM ಅನ್ನು ಹೊಂದಿದೆ, ಇದನ್ನು ವರ್ಚುವಲ್ RAM ಮೂಲಕ 4GB ವರೆಗೆ ಹೆಚ್ಚಿಸಬಹುದು.

ಈ ಫೋನ್ನಲ್ಲಿ 64GB ಅಥವಾ 128GB ಸಂಗ್ರಹಣೆಯ ಆಯ್ಕೆ ಇದೆ. ಇದನ್ನು ಮೈಕ್ರೋ SD ಕಾರ್ಡ್ ಮೂಲಕ 512GB ವರೆಗೆ ವಿಸ್ತರಿಸಬಹುದು. ಯುವಾ 3 ಯುನಿಸಾಕ್ ಟಿ606 ಆಕ್ಟಾ ಕೋರ್ ಪ್ರೊಸೆಸರ್ ಹೊಂದಿದೆ. ಈ ಫೋನ್ 5000mAh ಬ್ಯಾಟರಿಯನ್ನು ಹೊಂದಿದ್ದು 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಕ್ಯಾಮೆರಾ ಸೆಟಪ್ ಬಗ್ಗೆ ಮಾತನಾಡುತ್ತಾ, ಈ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ 13 ಮೆಗಾಪಿಕ್ಸೆಲ್ ಟ್ರಿಪಲ್ AI ಕ್ಯಾಮೆರಾ ಇದೆ. ಮುಂಭಾಗದಲ್ಲಿ 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಆಂಡ್ರಾಯ್ಡ್ 13 ನಲ್ಲಿ ಕಾರ್ಯನಿರ್ವಹಿಸುತ್ತದೆ. ಕಂಪನಿಯು ಎರಡು ವರ್ಷಗಳವರೆಗೆ ಭದ್ರತಾ ನವೀಕರಣಗಳು ಮತ್ತು ಆಂಡ್ರಾಯ್ಡ್ 14 ಗೆ ಅಪ್‌ಗ್ರೇಡ್‌ಗಳನ್ನು ಕ್ಲೈಮ್ ಮಾಡುತ್ತದೆ.

ಉಳಿದಂತೆ ಈ ಫೋನ್ನಲ್ಲಿ ಭದ್ರತೆಗಾಗಿ ಫೇಸ್ ಅನ್‌ಲಾಕ್ ವೈಶಿಷ್ಟ್ಯ ನೀಡಲಾಗಿದೆ. ಯುವಾ 3 ಪ್ರೀಮಿಯಂ ಬ್ಯಾಕ್ ವಿನ್ಯಾಸದೊಂದಿಗೆ ಸೈಡ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G, Wi-Fi 802.11 b/g/n/ac, USB ಟೈಪ್ C ಪೋರ್ಟ್, ಬ್ಲೂಟೂತ್ V5.0, ಮತ್ತು ಆಡಿಯೋ ಜಾಕ್ 3.5mm ಸೇರಿವೆ.



















