ODI Double Century List: ಏಕದಿನ ಕ್ರಿಕೆಟ್​ನಲ್ಲಿ ದ್ವಿಶತಕ ಸಿಡಿಸಿದ 12 ಬ್ಯಾಟರ್​ಗಳ ಪಟ್ಟಿ ಇಲ್ಲಿದೆ

ODI Double Century List: ಏಕದಿನ ಕ್ರಿಕೆಟ್​ನಲ್ಲಿ ಇದುವರೆಗೆ 12 ಬ್ಯಾಟರ್​ಗಳು ಡಬಲ್ ಸೆಂಚುರಿ ಬಾರಿಸಿದ್ದಾರೆ. ಈ ಪಟ್ಟಿಯಲ್ಲಿ ಇದೀಗ ಶ್ರೀಲಂಕಾದ ಯುವ ಆರಂಭಿಕ ಆಟಗಾರ ಪಾತುಮ್ ನಿಸ್ಸಂಕಾ ಹನ್ನೆರಡನೇ ಸ್ಥಾನದಲ್ಲಿದ್ದಾರೆ. ಇದಕ್ಕೂ ಮುನ್ನ ದ್ವಿಶತಕ ಬಾರಿಸಿದ ಬ್ಯಾಟರ್​ಗಳ ಸಂಪೂರ್ಣ ಪಟ್ಟಿ ಈ ಕೆಳಗಿನಂತಿದೆ...

TV9 Web
| Updated By: ಝಾಹಿರ್ ಯೂಸುಫ್

Updated on:Feb 10, 2024 | 7:56 AM

ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಅಫ್ಘಾನಿಸ್ತಾನ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ತಂಡದ ಆರಂಭಿಕ ಆಟಗಾರ ಪಾತುಮ್ ನಿಸ್ಸಂಕಾ ಭರ್ಜರಿ ಡಬಲ್ ಸೆಂಚುರಿ ಸಿಡಿಸಿ ಮಿಂಚಿದ್ದಾರೆ. ಇದರೊಂದಿಗೆ ಏಕದಿನ ಕ್ರಿಕೆಟ್​ನಲ್ಲಿ ದ್ವಿಶತಕ ಬಾರಿಸಿದ ವಿಶ್ವದ 12ನೇ ಬ್ಯಾಟರ್ ಎಂಬ ಹಿರಿಮೆಗೆ ನಿಸ್ಸಂಕಾ ಪಾತ್ರರಾಗಿದ್ದಾರೆ.

1 / 14
ವಿಶೇಷ ಎಂದರೆ ಏಕದಿನ ಕ್ರಿಕೆಟ್​ನಲ್ಲಿ ಮೊದಲ ಡಬಲ್ ಸೆಂಚುರಿ ಮೂಡಿಬಂದಿದ್ದು ಮಹಿಳಾ ಆಟಗಾರ್ತಿಯಿಂದ. ಅಂದರೆ ಸಚಿನ್ ತೆಂಡೂಲ್ಕರ್​ಗಿಂತಲೂ ಮೊದಲೇ ಆಸ್ಟ್ರೇಲಿಯಾ ಆಟಗಾರ್ತಿ ಏಕದಿನ ಕ್ರಿಕೆಟ್​ನಲ್ಲಿ ಡಬಲ್ ಸೆಂಚುರಿ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. ಹಾಗಿದ್ರೆ ಏಕದಿನ ಕ್ರಿಕೆಟ್​ನಲ್ಲಿ ದ್ವಿಶತಕ ಬಾರಿಸಿದ ಬ್ಯಾಟರ್​ಗಳು ಯಾರೆಲ್ಲಾ ನೋಡೋಣ....

2 / 14
1- ಮೆಲಿಂಡಾ ಕ್ಲಾರ್ಕ್ (ಆಸ್ಟ್ರೇಲಿಯಾ): 1997 ರಲ್ಲಿ ಆಸ್ಟ್ರೇಲಿಯಾದ ಮಾಜಿ ಆಟಗಾರ್ತಿ ಮೆಲಿಂಡಾ ಕ್ಲಾರ್ಕ್​ ಅವರು ಡೆನ್ಮಾರ್ಕ್​ ವಿರುದ್ಧ ದ್ವಿಶತಕ ಸಿಡಿಸಿದ್ದರು. ಇದು ಏಕದಿನ ಕ್ರಿಕೆಟ್ ಇತಿಹಾಸದ ಮೊದಲ ಡಬಲ್ ಸೆಂಚುರಿಯಾಗಿತ್ತು. ಅಂದು ಅಜೇಯ 229 ರನ್​ ಬಾರಿಸುವ ಮೂಲಕ ಮೆಲಿಂಡಾ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದರು.

3 / 14
2- ಸಚಿನ್ ತೆಂಡೂಲ್ಕರ್ (ಭಾರತ): 2010 ರಲ್ಲಿ ಸೌತ್ ಆಫ್ರಿಕಾ ವಿರುದ್ಧ ಅಜೇಯ 200 ರನ್ ಬಾರಿಸುವ ಮೂಲಕ ಸಚಿನ್ ಪುರುಷರ ಏಕದಿನ ಕ್ರಿಕೆಟ್​ನಲ್ಲಿ ಮೊದಲ ದ್ವಿಶತಕ ಬಾರಿಸಿದ ಬ್ಯಾಟ್ಸ್​ಮನ್ ಎನಿಸಿಕೊಂಡರು. ಅಲ್ಲದೆ ಈ ಸಾಧನೆಗೈದ 2ನೇ ಪ್ಲೇಯರ್ ಎಂಬ ದಾಖಲೆ ಬರೆದರು.

4 / 14
3- ವೀರೇಂದ್ರ ಸೆಹ್ವಾಗ್ (ಭಾರತ): 2011 ರಲ್ಲಿ ಸೆಹ್ವಾಗ್ ವೆಸ್ಟ್ ಇಂಡೀಸ್ ವಿರುದ್ಧ 219 ರನ್​ ಬಾರಿಸುವ ಮೂಲಕ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದು ಹೊಸ ಇತಿಹಾಸ ನಿರ್ಮಿಸಿದರು.

5 / 14
4- ರೋಹಿತ್ ಶರ್ಮಾ (ಭಾರತ): 2013 ರಲ್ಲಿ ಆಸ್ಟ್ರೇಲಿಯಾ ವಿರುದ್ಧ 209 ರನ್ ಬಾರಿಸಿದ ರೋಹಿತ್ ಶರ್ಮಾ, 2017 ರಲ್ಲಿ ಶ್ರೀಲಂಕಾ ವಿರುದ್ಧ ಅಜೇಯ 208 ರನ್​​ ಬಾರಿಸಿ ಮಿಂಚಿದ್ದರು. ಇದಾದ ಬಳಿಕ 2014 ರಲ್ಲಿ ಶ್ರೀಲಂಕಾ ವಿರುದ್ಧ 264 ರನ್​ ಸಿಡಿಸಿ ಹೊಸ ಇತಿಹಾಸ ನಿರ್ಮಿಸಿದರು. ಅಂದರೆ ಏಕದಿನ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಬಾರಿಸಿದ ಹಾಗೂ ಅತ್ಯಧಿಕ ದ್ವಿಶತಕ ಸಿಡಿಸಿದ ದಾಖಲೆ ಹಿಟ್​ಮ್ಯಾನ್ ಹೆಸರಿನಲ್ಲಿದೆ.

6 / 14
5- ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್): 2015 ರಲ್ಲಿ ಗೇಲ್ ಝಿಂಬಾಬ್ವೆ ವಿರುದ್ಧ 215 ರನ್​ ಬಾರಿಸುವ ಮೂಲಕ ದ್ವಿಶತಕದ ಸರದಾರರ ಪಟ್ಟಿಗೆ ಎಂಟ್ರಿ ಕೊಟ್ಟಿದ್ದರು.

7 / 14
6- ಮಾರ್ಟಿನ್ ಗಪ್ಟಿಲ್ (ನ್ಯೂಝಿಲೆಂಡ್): 2015 ರಲ್ಲೇ ನ್ಯೂಝಿಲೆಂಡ್​ನ ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್ ವೆಸ್ಟ್ ಇಂಡೀಸ್ ವಿರುದ್ಧ ಅಜೇಯ 237 ರನ್​ ಬಾರಿಸಿ ಹೊಸ ದಾಖಲೆ ಬರೆದಿದ್ದರು.

8 / 14
7- ಫಖರ್ ಝಮಾನ್ (ಪಾಕಿಸ್ತಾನ್): 2018 ರಲ್ಲಿ ಪಾಕ್ ತಂಡದ ಆರಂಭಿಕ ಆಟಗಾರ ಫಖರ್ ಝಮಾನ್ ಜಿಂಬಾಬ್ವೆ ವಿರುದ್ಧ ಅಜೇಯ 210 ರನ್​ ಬಾರಿಸಿ ಡಬಲ್ ಸೆಂಚುರಿ ಸಿಡಿಸಿದ ಸಾಧಕರ ಪಟ್ಟಿಯಲ್ಲಿ ಸ್ಥಾನ ಪಡೆದರು.

9 / 14
8- ಅಮೆಲಿಯಾ ಕೆರ್ (ನ್ಯೂಝಿಲೆಂಡ್): 2018 ರಲ್ಲಿ ಕಿವೀಸ್​ ತಂಡದ ಅಮೆಲಿಯಾ ಐರ್ಲೆಂಡ್ ವಿರುದ್ಧ ಅಜೇಯ 232 ರನ್​ ಬಾರಿಸಿ ದ್ವಿಶತಕ ಸಿಡಿಸಿದ 2ನೇ ಮಹಿಳಾ ಆಟಗಾರ್ತಿ ಎನಿಸಿಕೊಂಡರು.

10 / 14
9- ಇಶಾನ್ ಕಿಶನ್ (ಭಾರತ): ಟೀಮ್ ಇಂಡಿಯಾದ ಯುವ ಆರಂಭಿಕ ಆಟಗಾರ ಇಶಾನ್ ಕಿಶನ್ 2022 ರಲ್ಲಿ ಬಾಂಗ್ಲಾದೇಶ್ ವಿರುದ್ಧ 210 ರನ್​ ಬಾರಿಸುವ ಮೂಲಕ ಡಬಲ್ ಸೆಂಚುರಿ ಸರದಾರರ ಪಟ್ಟಿಗೆ ಎಂಟ್ರಿಕೊಟ್ಟಿದ್ದರು.

11 / 14
10- ಶುಭ್​ಮನ್ ಗಿಲ್ (ಭಾರತ): 2023 ರಲ್ಲಿ ಭಾರತ ತಂಡದ ಯುವ ಬ್ಯಾಟರ್ ಶುಭ್​ಮನ್ ಗಿಲ್ ನ್ಯೂಝಿಲೆಂಡ್ ವಿರುದ್ಧ 208 ರನ್ ಸಿಡಿಸುವ ಮೂಲಕ ದ್ವಿಶತಕ ಬಾರಿಸಿದ 10ನೇ ಆಟಗಾರ ಎನಿಸಿಕೊಂಡರು.

12 / 14
11- ಗ್ಲೆನ್ ಮ್ಯಾಕ್ಸ್​ವೆಲ್ (ಆಸ್ಟ್ರೇಲಿಯಾ): 2023ರ ಏಕದಿನ ವಿಶ್ವಕಪ್​ನಲ್ಲಿ ಅಫ್ಘಾನಿಸ್ತಾನ್ ವಿರುದ್ಧ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ದ ಗ್ಲೆನ್ ಮ್ಯಾಕ್ಸ್​ವೆಲ್ ಅಜೇಯ 201 ರನ್ ಬಾರಿಸಿ ದ್ವಿಶತಕ ಸರದಾರರ ಪಟ್ಟಿಗೆ ಎಂಟ್ರಿ ಕೊಟ್ಟಿದ್ದರು.

13 / 14
12- ಪಾತುಮ್ ನಿಸ್ಸಂಕಾ (ಶ್ರೀಲಂಕಾ): ಫೆಬ್ರವರಿ 9, 2024 ರಂದು ಅಫ್ಘಾನಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಪಾತುಮ್ ನಿಸ್ಸಂಕಾ 139 ಎಸೆತಗಳಲ್ಲಿ 8 ಸಿಕ್ಸ್ ಹಾಗೂ 20 ಫೋರ್​ಗಳೊಂದಿಗೆ ಅಜೇಯ 210 ರನ್ ಬಾರಿಸಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್​ನಲ್ಲಿ ದ್ವಿಶತಕ ಸಿಡಿಸಿದ 12ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

14 / 14

Published On - 7:54 am, Sat, 10 February 24

Follow us