Tech Tips: ನೀವು ಆನ್​ಲೈನ್ ಶಾಪಿಂಗ್ ಮಾಡುತ್ತೀರಾ?: ಈ ಟ್ರಿಕ್ ಸಾವಿರಾರು ರೂಪಾಯಿ ಉಳಿಸುತ್ತದೆ

Amazon Discounts Tricks: ನೀವು ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೆಜಾನ್‌ನಿಂದ ಶಾಪಿಂಗ್ ಮಾಡುವವರಾಗಿದ್ದರೆ, ಈ ಮಾಹಿತಿಯು ನಿಮಗೆ ಬಹಳಷ್ಟು ಪ್ರಯೋಜನವನ್ನು ನೀಡುತ್ತದೆ. ಇಲ್ಲಿ ನಾವು ನಿಮಗೆ ಒಂದು ವಸ್ತುವನ್ನು ಖರೀದಿಸುವಾಗ ಸಾವಿರಾರು ರೂಪಾಯಿಗಳನ್ನು ಉಳಿಸುವುದು ಹೇಗೆ ಎಂದು ಹೇಳುತ್ತೇವೆ. ಈ ಮೂಲಕ ನೀವು ಬಂಪರ್ ರಿಯಾಯಿತಿ ಮತ್ತು ಕ್ಯಾಶ್‌ಬ್ಯಾಕ್ ಪಡೆಯುತ್ತೀರಿ.

Tech Tips: ನೀವು ಆನ್​ಲೈನ್ ಶಾಪಿಂಗ್ ಮಾಡುತ್ತೀರಾ?: ಈ ಟ್ರಿಕ್ ಸಾವಿರಾರು ರೂಪಾಯಿ ಉಳಿಸುತ್ತದೆ
Online Shopping
Follow us
|

Updated on: Feb 09, 2024 | 2:30 PM

ಇತ್ತೀಚಿನ ದಿನಗಳಲ್ಲಿ ಜನರು ಆನ್‌ಲೈನ್ ಶಾಪಿಂಗ್ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಮನೆಯಲ್ಲೇ ಕುಳಿತು ನಮಗೆ ಬೇಕಾದ ವಸ್ತುಗಳನ್ನು ಆರ್ಡರ್ ಮಾಡಬಹುದು, ಮಾರುಕಟ್ಟೆಯ ಒತ್ತಡವನ್ನು ಎದುರಿಸಬೇಕಾಗಿಲ್ಲ. ವಿಶೇಷ ಎಂದರೆ ನೀವು ಆನ್​ಲೈನ್​ನಲ್ಲಿ ಆರ್ಡರ್ ಮಾಡುವಾಗ ಅನೇಕ ರಿಯಾಯಿತಿ ಕೊಡುಗೆಗಳನ್ನು ಸಹ ಪಡೆಯಬಹುದು. ಇದರಿಂದ ಸಾಕಷ್ಟು ಹಣವೂ ಉಳಿತಾಯವಾಗುತ್ತದೆ. ಅದರಂತೆ ನೀವು ಅಮೆಜಾನ್​ನಿಂದ ಶಾಪಿಂಗ್ ಮಾಡುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಂಡರೆ, ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು.

ಖರೀದಿಸುವಾಗ ಗಮನ ಕೊಡಿ

ಕೆಲವರು ಆನ್​​ಲೈನ್​ನಲ್ಲಿ ತಮಗೆ ಬೇಕಾದ ವಸ್ತುವನ್ನು ಆಯ್ಕೆ ಮಾಡಿ ಹಣ ಪಾವತಿಸಿ ಬಿಡುತ್ತಾರೆ. ಆದರೆ, ಆ ಉತ್ಪನ್ನವನ್ನು ಖರೀದಿಸುವ ಮೊದಲು, ನೀವು ಅದರ ಮೇಲಿನ ಕೊಡುಗೆಗಳು ಮತ್ತು ಕೂಪನ್‌ಗಳನ್ನು ಪರಿಶೀಲಿಸಬೇಕು. ಇದಕ್ಕಾಗಿ ನೀವು ಅಮೆಜಾನ್ ಸರ್ಚ್​ನಲ್ಲಿ ಕ್ಲಿಪ್ ಕೂಪನ್ ಬರೆಯುವ ಮೂಲಕ ಹುಡುಕಬೇಕಾಗುತ್ತದೆ. ಅನೇಕ ರಿಯಾಯಿತಿ ಕೊಡುಗೆಗಳನ್ನು ನಿಮಗೆ ಇಲ್ಲಿ ತೋರಿಸಲಾಗುತ್ತದೆ. ಇದರ ಮೂಲಕ ನೀವು ಕ್ಯಾಶ್‌ಬ್ಯಾಕ್ ಮತ್ತು ಗಿಫ್ಟ್ ಕಾರ್ಡ್‌ನಂತಹ ಪ್ರಯೋಜನಗಳನ್ನು ಪಡೆಯಬಹುದು.

ಮನೆಯಲ್ಲಿರುವ ವಾಟರ್ ಹೀಟರ್ ರಾಡ್ ಕೆಲಸ ಮಾಡುತ್ತಿಲ್ಲವೇ?: ಸುಲಭವಾಗಿ ನೀವೇ ಸರಿಪಡಿಸಿ

ಕ್ಲಿಯರೆನ್ಸ್ ಸ್ಟೋರ್

ಅಮೆಜಾನ್​ನ ಸರ್ಚ್ ಲಿಸ್ಟ್​ನಲ್ಲಿ ಕ್ಲಿಯರೆನ್ಸ್ ಸ್ಟೋರ್ ಅನ್ನು ಟೈಪ್ ಮಾಡುವ ಮೂಲಕ ಹುಡುಕಿ. ಇಲ್ಲಿ ನೀವು ಪ್ರತಿ ವರ್ಗದ ವಸ್ತುಗಳ ಮೇಲೆ 50 ಪ್ರತಿಶತದಿಂದ 88 ಪ್ರತಿಶತದವರೆಗೆ ರಿಯಾಯಿತಿಗಳನ್ನು ಪಡೆಯುತ್ತೀರಿ. ಈ ಪಟ್ಟಿಯು ಎಲೆಕ್ಟ್ರಾನಿಕ್ ವಸ್ತುಗಳು, ಬಟ್ಟೆಗಳು, ಅಡಿಗೆ ವಸ್ತುಗಳು ಮತ್ತು ಪೀಠೋಪಕರಣಗಳು ಇತ್ಯಾದಿಗಳನ್ನು ಒಳಗೊಂಡಿದೆ.

ಪಾವತಿ ಮಾಡುವ ಮೊದಲು ಗಮನಿಸಿ

ನೀವು ಪಾವತಿ ಮಾಡುವಾಗೆಲ್ಲ, 4-5 ಪಾವತಿ ಆಯ್ಕೆಗಳನ್ನು ನೀಡಲಾಗುತ್ತದೆ. ಕಾರ್ಡ್, UPI, ಕ್ಯಾಶ್ ಆನ್ ಡೆಲಿವರಿ ಮುಂತಾದ ಪಾವತಿ ವಿಧಾನವನ್ನು ಅನುಸರಿಸಬಹುದು. ಇದರ ಮೇಲೆ ಕೂಪನ್ ಅನ್ನು ಅನ್ವಯಿಸುವ ಆಯ್ಕೆಯನ್ನು ನಿಮಗೆ ತೋರಿಸಲಾಗುತ್ತದೆ. ಈ ಆಯ್ಕೆಯನ್ನು ಕ್ಲಿಕ್ ಮಾಡಿ ಮತ್ತು ಅನ್ವಯವಾಗುವ ಕೂಪನ್ ಅನ್ನು ಹಾಕಿ. ನೀವು ಆನ್‌ಲೈನ್ ವಹಿವಾಟು ಮಾಡಿದಾಗ ಮಾತ್ರ ಕೂಪನ್‌ ಆಯ್ಕೆ ಇರುತ್ತದೆ ಎಂಬುದನ್ನು ನೆನಪಿನಲ್ಲಿಡಿ. ಕ್ಯಾಶ್-ಆನ್ ಡೆಲಿವರಿಯನ್ನು ಆಯ್ಕೆ ಮಾಡಿದರೆ, ಕೂಪನ್ ಕೊಡುಗೆಗಳನ್ನು ಪಡೆಯುವ ಸಾಧ್ಯತೆಗಳು ಕಡಿಮೆ.

ಇನ್​ಸ್ಟಾಗ್ರಾಮ್​ನಲ್ಲಿ ವೈರಲ್ ಆಗಲು ದಿನಕ್ಕೆ ಎಷ್ಟು ರೀಲ್ಸ್ ಹಾಕಬೇಕು?: ತಜ್ಞರ ಟಿಪ್ಸ್ ಇಲ್ಲಿದೆ

ಅಮೆಜಾನ್‌ನಿಂದ ಶಾಪಿಂಗ್ ಮಾಡುವಾಗ ಡಿಸ್ಕೌಂಟ್ ಪ್ರಯೋಜನವನ್ನು ಬಯಸಿದರೆ ನೀವು ಈ ಎರಡು ತಂತ್ರಗಳನ್ನು ಅನುಸರಿಸಬಹುದು. ಕೊಡುಗೆಗಳು ಮತ್ತು ರಿಯಾಯಿತಿಗಳು ಪ್ರತಿ ಬಾರಿಯೂ ಒಂದೇ ಆಗಿರುವುದಿಲ್ಲ ಇದು ದಿನದಿಂದ ದಿನಕ್ಕೆ ಬದಲಾಗುತ್ತಾ ಇರುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ