ಟ್ರಂಪ್​ಗೆ ಟ್ವಿಟರ್ ಬಳಕೆ ಹಕ್ಕು ಮರುನೀಡಬೇಕೇ? ಸಮೀಕ್ಷೆ ಆರಂಭಿಸಿದ ಎಲಾನ್ ಮಸ್ಕ್

| Updated By: Rakesh Nayak Manchi

Updated on: Nov 20, 2022 | 9:19 AM

ಟ್ವಿಟರ್ ಬಳಕೆಯ ಹಕ್ಕನ್ನು ಡೊನಾಲ್ಡ್ ಟ್ರಂಪ್ ಅವರಿಗೆ ಮರುನೀಡಬೇಕೇ ಎಂಬ ಸಮೀಕ್ಷೆಯನ್ನು ಟ್ವಿಟರ್ ಮಾಲಿಕ ಎಲಾನ್ ಮಸ್ಕ್ ಅವರು ಆರಂಭಿಸಿದ್ದು, ಶೇ 50ಕ್ಕೂ ಹೆಚ್ಚು ಮತಗಳು ಟ್ರಂಪ್ ಪರವಾಗಿ ಬಂದಿವೆ.

ಟ್ರಂಪ್​ಗೆ ಟ್ವಿಟರ್ ಬಳಕೆ ಹಕ್ಕು ಮರುನೀಡಬೇಕೇ? ಸಮೀಕ್ಷೆ ಆರಂಭಿಸಿದ ಎಲಾನ್ ಮಸ್ಕ್
ಎಲೋನ್ ಮಸ್ಕ್ ಮತ್ತು ಡೊನಾಲ್ಡ್ ಟ್ರಂಪ್
Follow us on

ಸ್ಯಾನ್ ಫ್ರಾನ್ಸಿಸ್ಕೋ: ಪ್ರಭಾವಿ ವ್ಯಕ್ತಿಯೂ ಆಗಿರುವ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರಿಗೆ ಸಾಮಾಜಿಕ ಜಾಲತಾಣ ಟ್ವಿಟರ್​ ಬಳಕೆಯ ಹಕ್ಕನ್ನು ಮರು ನೀಡುವ ಬಗ್ಗೆ ಇತ್ತೀಚೆಗೆ ಟ್ವಿಟರ್ ಅನ್ನು ಖರೀದಿಸಿದ ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್‌ನ CEO ಆಗಿರುವ ಎಲಾನ್ ಮಸ್ಕ್ (Elon Musk) ಅವರು ಸಮೀಕ್ಷೆಯನ್ನು ಆರಂಭಿಸಿದ್ದಾರೆ. “ಮಾಜಿ ಅಧ್ಯಕ್ಷ ಟ್ರಂಪ್ ಅನ್ನು ಮರುಸ್ಥಾಪಿಸಿ” ಎಂದು ಹೇಳಿ ಹೌದು ಅಥವಾ ಇಲ್ಲ ಎಂಬ ಆಯ್ಕೆಯನ್ನು ನೀಡಿದ್ದಾರೆ. ಶುಕ್ರವಾರ ಆರಂಭಿಸಿದ ಈ ಸಮೀಕ್ಷೆಯಲ್ಲಿ ನೆಟ್ಟಿಗರಿಗೆ ಹೌದು ಅಥವಾ ಇಲ್ಲ ಎಂದು ಮತ ಚಲಾಯಿಸಲು ಅವಕಾಶವಿದೆ. ಈ ಮತ ಚಲಾವಣೆಗೆ ಸುಮಾರು 11 ಮಿಲಿಯನ್ ಪ್ರತಿಕ್ರಿಯೆಗಳು ಬಂದಿದ್ದು, 52.3 ಪ್ರತಿಶತ ಮತಗಳು ಮಾಜಿ ಅಧ್ಯಕ್ಷರ ಪರವಾಗಿವೆ.

ಅವರು ಈ ಹಿಂದೆ ಇದೇ ರೀತಿಯ ಸಮೀಕ್ಷೆಗಳನ್ನು ಮಾಡಿದ್ದಾರೆ, ಕಳೆದ ವರ್ಷ ತನ್ನ ಎಲೆಕ್ಟ್ರಿಕ್ ಕಾರ್ ಕಂಪನಿ ಟೆಸ್ಲಾದಲ್ಲಿ ಷೇರುಗಳನ್ನು ಮಾರಾಟ ಮಾಡಬೇಕೆ ಎಂದು ಅನುಯಾಯಿಗಳನ್ನು ಕೇಳಿದರು. ಆ ಸಮೀಕ್ಷೆಯ ನಂತರ, ಅವರು 1 ಬಿಲಿಯನ್‌ ಅಮೆರಿಕನ್ ಡಾಲರ್​ಗಿಂತಲೂ ಹೆಚ್ಚಿನ ಷೇರುಗಳನ್ನು ಮಾರಾಟ ಮಾಡಿದರು. ಅಲ್ಲದೆ, ಶುಕ್ರವಾರ ಮಸ್ಕ್ ಅವರು ಹಾಸ್ಯನಟ ಕ್ಯಾಥಿ ಗ್ರಿಫಿನ್ ಸೇರಿದಂತೆ ಈ ಹಿಂದೆ ನಿಷೇಧಿತ ಖಾತೆಗಳನ್ನು ಮರುಸ್ಥಾಪಿಸಿದರು.

ಅತ್ಯಂತ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಟ್ರಂಪ್ ಅವರು ಟ್ವಿಟರ್​ನಲ್ಲಿ 88 ದಶಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಟ್ವಿಟರ್​ನಲ್ಲಿ ಕೆಲವೊಂದು ವಿವಾದಾತ್ಮಕ ಪೋಸ್ಟ್​ಗಳನ್ನು ಹಂಚಿಕೊಂಡ ಹಿನ್ನೆಲೆ ಟ್ವಿಟರ್​ನಿಂದ ಬ್ಯಾನ್ ಮಾಡಲಾಗಿತ್ತು. ನಂತರ ಟ್ರಂಪ್ ಅವರು ಟ್ರೂತ್ ಸೋಷಿಯಲ್‌ ಅನ್ನು ಪ್ರಾರಂಭಿಸಿದ್ದರು.

ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್‌ನ ಸಿಇಒ ಆಗಿರುವ ಮಸ್ಕ್ ಅವರು ಒಂದು ತಿಂಗಳ ಹಿಂದೆ 44 ಶತಕೋಟಿಗೆ ಟ್ವಿಟರ್​ ಅನ್ನು ಖರೀದಿಸಿದರು. ಅಲ್ಲಿಂದೀಚೆಗೆ ಅವರು ಟ್ವಿಟರ್‌ನ 7,500 ಸಿಬ್ಬಂದಿಗಳಲ್ಲಿ ಅರ್ಧದಷ್ಟು ಜನರನ್ನು ವಜಾಗೊಳಿಸಿದರು, ಮನೆಯಿಂದ ಕೆಲಸ ಮಾಡುವ ನೀತಿಯನ್ನು ರದ್ದುಗೊಳಿಸಿದರು. ಕಂಪನಿಯನ್ನು ಕೂಲಂಕಷವಾಗಿ ಪರಿಶೀಲಿಸುವ ಅವರ ಪ್ರಯತ್ನಗಳು ಹಿನ್ನಡೆ ಮತ್ತು ವಿಳಂಬಗಳನ್ನು ಎದುರಿಸಿದವು.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:18 am, Sun, 20 November 22