Kannada News Technology Tecno Phantom X A dual front camera for selfie launched in India with just rs 25999
Tecno Phantom X: ಭಾರತದಲ್ಲಿ ಡ್ಯುಯಲ್-ಸೆಲ್ಪಿ ಕ್ಯಾಮೆರಾದ ಆಕರ್ಷಕ ಫೀಚರ್ನ ಹೊಸ ಫೋನ್ ಬಿಡುಗಡೆ
ಟೆಕ್ನೋ ಫ್ಯಾಂಟಮ್ X ಸ್ಮಾರ್ಟ್ಫೋನ್ನಲ್ಲಿ ವಿಶೇಷವಾಗಿ 48 ಮೆಗಾಪಿಕ್ಸೆಲ್ ಮತ್ತು 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಡ್ಯುಯಲ್-ಸೆಲ್ಪಿ ಕ್ಯಾಮೆರಾವನ್ನು ನೀಡಲಾಗಿದೆ. ಹಾಗೆಯೇ ಡಿಜಿಟಲ್ ಸಂಯೋಜನೆಯೊಂದಿಗೆ 20x ಜೂಮ್ ಸೇರಿವೆ.
ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೆಚ್ಚು ಬಜೆಟ್ ಬೆಲೆಯ ಮೊಬೈಲ್ಗಳಿಗೆ (Budget Smartphone) ಹೆಸರುವಾಸಿಯಾಗಿರುವ ಪ್ರಸಿದ್ಧ ಟೆಕ್ನೋ(Tecno) ಕಂಪನಿ ಈಗಾಗಲೇ ಹಲವು ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಭಾರತದಲ್ಲಿ ಟೆಕ್ನೋ ಫ್ಯಾಂಟಮ್ ಎಕ್ಸ್ (Tecno Phantom X) ಎಂಬ ಹೊಸ ಫೋನ್ ಬಿಡುಗಡೆ ಮಾಡಿ ಸುದ್ದಿಯಲ್ಲಿದೆ. ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಈ ಸ್ಮಾರ್ಟ್‌ಫೋನ್ ಮಧ್ಯಮ ಬೆಲೆಗೆ ಲಭ್ಯವಿದ್ದು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿರುವ ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿದೆ. ಹಾಗೆಯೆ 4,700mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಹಾಗಾದ್ರೆ ಈ ಫೋನಿನ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ ಎಂಬುದನ್ನು ನೋಡೋಣ.
ಟೆಕ್ನೋ ಫ್ಯಾಂಟಮ್ X ಸ್ಮಾರ್ಟ್‌ಫೋನ್ ಭಾರತದಲ್ಲಿ ಒಂದು ಮಾದರಿಯಲ್ಲಷ್ಟೆ ಬಿಡುಗಡೆ ಆಗಿದೆ. ಇದರ 8GB RAM ಮತ್ತು 256 GB ಇಂಟರ್ ಸ್ಟೋರೇಜ್ ಸಾಮರ್ಥ್ಯಕ್ಕೆ 25,999 ರೂ. ನಿಗದಿ ಮಾಡಲಾಗಿದೆ.
ಮೇ 4, 2022 ರಂದು ಈ ಸ್ಮಾರ್ಟ್‌ಫೋನ್ ತನ್ನ ಮೊದಲ ಮಾರಾಟವನ್ನು ಪ್ರಾರಂಭಿಸಲಿದೆ. ಖರೀದಿದಾರರು ಒಂದು-ಬಾರಿ ಸ್ಕ್ರೀನ್ ರಿಪ್ಲೇಸ್‌ಮೆಂಟ್ ಜೊತೆಗೆ ರೂ 2,999 ಮೌಲ್ಯದ ಕಾಂಪ್ಲಿಮೆಂಟರಿ ಬ್ಲೂಟೂತ್ ಸ್ಪೀಕರ್ ಅನ್ನು ಸಹ ಪಡೆಯುತ್ತಾರೆ.
ಈ ಸ್ಮಾರ್ಟ್‌ಫೋನ್ 1,080 x 2,340 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.7-ಇಂಚಿನ ಫುಲ್ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಅನ್ನು ಪಡೆದುಕೊಂಡಿದೆ. ಇದು ಸೂಪರ್ ಅಮೋಲೆಡ್ ಕರ್ವ್ ಡಿಸ್‌ಪ್ಲೇ ಆಗಿದೆ.
ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೊ G95 SoC ಪ್ರೊಸೆಸರ್ ಬಲ ಪಡೆದುಕೊಂಡಿದೆ. ಇದು ಆಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಬೇಕಾದಲ್ಲಿ ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಮೆಮೊರಿಯನ್ನು 512GB ವರೆಗೂ ವಿಸ್ತರಿಸಲು ಅವಕಾಶ ನೀಡಿದೆ.
ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್, ಎರಡನೆ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ 120 ಡಿಗ್ರಿ ಕ್ಷೇತ್ರವನ್ನು ಹೊಂದಿದೆ ಮತ್ತು ಮೂರನೇ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ.
ಟೆಕ್ನೋ ಫ್ಯಾಂಟಮ್ X ಸ್ಮಾರ್ಟ್ಫೋನ್ನಲ್ಲಿ ವಿಶೇಷವಾಗಿ 48 ಮೆಗಾಪಿಕ್ಸೆಲ್ ಮತ್ತು 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಡ್ಯುಯಲ್-ಸೆಲ್ಪಿ ಕ್ಯಾಮೆರಾವನ್ನು ನೀಡಲಾಗಿದೆ. ಹಾಗೆಯೇ ಡಿಜಿಟಲ್ ಸಂಯೋಜನೆಯೊಂದಿಗೆ 20x ಜೂಮ್ ಸೇರಿವೆ.
4,700mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ, ಎಲ್‌ಟಿಇ, ಜಿಪಿಎಸ್, ಎಫ್‌ಎಂ ರೇಡಿಯೋ, ಬ್ಲೂಟೂತ್ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಬೆಂಬಲಿಸುತ್ತದೆ.