Tecno Spark 8T: ಭಾರತದಲ್ಲಿ ಇಂದು ಬಿಡುಗಡೆ ಆಗಲಿದೆ ಕುತೂಹಲ ಕೆರಳಿಸಿರುವ ಟೆಕ್ನೋ ಸ್ಪಾರ್ಕ್ 8T ಸ್ಮಾರ್ಟ್‌ಫೋನ್: ಬೆಲೆ ಎಷ್ಟು?
Tecno Spark 8T Launching Today: ಟೆಕ್ನೋ ಸ್ಪಾರ್ಕ್ 8T (Tecno Spark 8T) ಸ್ಮಾರ್ಟ್‌ಫೋನ್ ಇಂದು ಅಧಿಕೃತವಾಗಿ ಭಾರತದಲ್ಲಿ ಅನಾವರಣಗೊಳ್ಳಲಿದೆ. ದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದ್ದು, ಎರಡನೇ ಕ್ಯಾಮೆರಾವು ಉತ್ತಮ ಸೆನ್ಸಾರ್ ಸಪೋರ್ಟ್ ಪಡೆದಿರಲಿದೆ.
ಸ್ಮಾರ್ಟ್‌ಫೋನ್ (Smartphone) ಮಾರುಕಟ್ಟೆಯಲ್ಲಿ ಹೆಚ್ಚು ಬಜೆಟ್ ಬೆಲೆಯ ಮೊಬೈಲ್ಗಳಿಗೆ (Budget Smartphone) ಹೆಸರುವಾಸಿಯಾಗಿರುವ ಪ್ರಸಿದ್ಧ ಟೆಕ್ನೋ (Tecno) ಕಂಪನಿ ಈಗಾಗಲೇ ಹಲವು ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ತನ್ನ ಹೊಸ ಟೆಕ್ನೋ ಸ್ಪಾರ್ಕ್ 8T (Tecno Spark 8T) ಸ್ಮಾರ್ಟ್ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಇಂದು ಡಿ. 15 ರಂದು ಅಧಿಕೃತವಾಗಿ ಭಾರತದಲ್ಲಿ ಈ ಫೋನ್ ಅನಾವರಣಗೊಳ್ಳಲಿದೆ. ಈ ಸ್ಮಾರ್ಟ್‌ಫೋನ್ ಡ್ರಾಪ್ ನಾಚ್ ಡಿಸ್ಪ್ಲೇಯನ್ನು ಹೊಂದಿರಲಿದ್ದು, ಕ್ವಾಡ್ ಎಲ್ಇಡಿ ಫ್ಲ್ಯಾಷ್ ಯೂನಿಟ್ ಜೊತೆಗೆ ಡ್ಯುಯಲ್ ಕ್ಯಾಮೆರಾ (Camera) ರಚನೆಯನ್ನು ಪಡೆದಿರಲಿದೆ. ಹಾಗೆಯೇ ಈ ಫೋನ್ ನಾಲ್ಕು ಆಕರ್ಷಕ ಬಣ್ಣಗಳಲ್ಲಿ ಕಾಣಿಸಿಕೊಳ್ಳಲಿದೆಯಂತೆ. ಆದರೆ ಟೆಕ್ನೋ ಸ್ಪಾರ್ಕ್ 8T ಸ್ಮಾರ್ಟ್ಫೋನಿನ ಬೆಲೆಯನ್ನು ಕಂಪನಿ ಇನ್ನೂ ಬಹಿರಂಗ ಪಡಿಸಿಲ್ಲ.
ಏನು ವಿಶೇಷತೆ?: ಟೆಕ್ನೋ ಸ್ಪಾರ್ಕ್ 8T ಸ್ಮಾರ್ಟ್‌ಫೋನ್ 1080 x 2408 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.6 ಇಂಚಿನ ಪೂರ್ಣ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 20:9 ಅನುಪಾತವನ್ನು ಒಳಗೊಂಡಿದ್ದು, 401ppi ಪಿಕ್ಸಲ್ ಸಾಂದ್ರತೆಯನ್ನು ಹೊಂದಿದೆ. ಜೊತೆಗೆ 500 nits ಬ್ರೈಟ್ನೆಸ್ ಸಾಮರ್ಥ್ಯವನ್ನು ಪಡೆದಿದೆ.
ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೋ G35 SoC ಪ್ರೊಸೆಸರ್ ಬಲವನ್ನು ಪಡೆದಿರಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಸಪೋರ್ಟ್ ಸಹ ನೀಡಲಾಗಿದೆ. ಜೊತೆಗೆ 4GB RAM ವೇರಿಯಂಟ್ ಆಯ್ಕೆಯನ್ನು ಹೊಂದಿದೆ. ಇದಲ್ಲದೆ ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾದ ಆಯ್ಕೆ ಇರಲಿದೆ.
ಆಕರ್ಷಕವಾದ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಅಪ್ ಅನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದ್ದು, ಎರಡನೇ ಕ್ಯಾಮೆರಾವು ಉತ್ತಮ ಸೆನ್ಸಾರ್ ಸಪೋರ್ಟ್ ಪಡೆದಿರಲಿದೆ. ಇದಲ್ಲದೆ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಎಲ್ಇಡಿ ಫ್ಲ್ಯಾಷ್‌ನೊಂದಿಗೆ ಜೋಡಿಸಲಾಗಿರುತ್ತದೆ.
ಟೆಕ್ನೋ ಸ್ಪಾರ್ಕ್ 8T ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಉತ್ತಮ ಸಾಮರ್ಥ್ಯದ ಚಾರ್ಜಿಂಗ್ ಸೌಲಭ್ಯ ನೀಡಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ VoLTE, ವೈ-ಫೈ, ಬ್ಲೂಟೂತ್ ವಿ 5.0, ಜಿಪಿಎಸ್ ಸೇರಿದಂತೆ ಇತ್ತೀಚಿಎಗಿನ ಪ್ರಮುಖ ಆಯ್ಕೆ ನೀಡಲಾಗಿದೆ.
ಆದರೆ, ಈ ಸ್ಮಾರ್ಟ್‌ಫೋನ್‌ನ ಬೆಲೆಯನ್ನು ಕಂಪನಿಯು ಇನ್ನೂ ಘೋಷಿಸಿಲ್ಲ. ಇನ್ನು ಈ ಫೋನ್ ನಾಲ್ಕು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ ಎಂಬುದು ತಿಳಿದುಬಂದಿದೆ. ಅವು ಕ್ರಮವಾಗಿ ಅಟ್ಲಾಂಟಿಕ್ ಬ್ಲೂ, ಕೋಕೋ ಗೋಲ್ಡ್, ಐರಿಸ್ ಪರ್ಪಲ್ ಮತ್ತು ಟರ್ಕೋಯಿಸ್ ಸಯಾನ್ ಬಣ್ಣದಿಂದ ಕೂಡಿದೆ.
Best Laptop 2021: 2021 ರಲ್ಲಿ ಬಿಡುಗಡೆ ಆಗಿ ದೂಳೆಬ್ಬಿಸಿದ ಲ್ಯಾಪ್ಟಾಪ್ಗಳು ಯಾವುವು?: ಇಲ್ಲದೆ ನೋಡಿ
(Tecno Spark 8T Tecno company new Budget smartphone set to launch today Here is the specifications)