Best Laptop 2021: 2021 ರಲ್ಲಿ ಬಿಡುಗಡೆ ಆಗಿ ದೂಳೆಬ್ಬಿಸಿದ ಲ್ಯಾಪ್​ಟಾಪ್​ಗಳು ಯಾವುವು?: ಇಲ್ಲದೆ ನೋಡಿ

Best Laptop Under Rs. 50,000: ಈಗಂತು ಹೆಚ್ಚಿನವರು ಮನೆಯಿಂದ ಕೆಲಸ ಮಾಡುತ್ತಿರುವುದರಿಂದ ಲ್ಯಾಪ್​ಟಾಪ್​ ತಯಾರಿಕೆ ಮಾಡುವ ಕಂಪನಿಗಳಿಗೆ ಬೇಡಿಕೆ ಕೂಡ ಹೆಚ್ಚಾಗಿದೆ. ಹಾಗಾದ್ರೆ ಈ ವರ್ಷ 50,000 ರೂ. ಒಳಗೆ ಬಿಡುಗಡೆ ಆದ ಅತ್ಯುತ್ತಮ ಲ್ಯಾಪ್​ಟಾಪ್​ಗಳು ಯಾವುವು ಎಂಬುದನ್ನು ನೋಡೋಣ.

Best Laptop 2021: 2021 ರಲ್ಲಿ ಬಿಡುಗಡೆ ಆಗಿ ದೂಳೆಬ್ಬಿಸಿದ ಲ್ಯಾಪ್​ಟಾಪ್​ಗಳು ಯಾವುವು?: ಇಲ್ಲದೆ ನೋಡಿ
Laptop
Follow us
TV9 Web
| Updated By: Vinay Bhat

Updated on: Dec 14, 2021 | 1:57 PM

ಹೊಸ ವರ್ಷಕ್ಕೆ (New Year 2022) ಇನ್ನೇನು ಕೆಲವೇ ದಿನಗಳಷ್ಟೆ ಬಾಕಿಯಿದೆ. ಈ ವರ್ಷ ಮಾರುಕಟ್ಟೆಗೆ ಅನೇಕ ಪ್ರಸಿದ್ಧ ಕಂಪನಿಯ ಲ್ಯಾಪ್​ಟಾಪ್​ಗಳು (Laptop) ಲಗ್ಗೆಯಿಟ್ಟಿವೆ. ಈಗಂತು ಹೆಚ್ಚಿನವರು ಮನೆಯಿಂದ ಕೆಲಸ ಮಾಡುತ್ತಿರುವುದರಿಂದ ಲ್ಯಾಪ್​ಟಾಪ್​ ತಯಾರಿಕೆ ಮಾಡುವ ಕಂಪನಿಗಳಿಗೆ ಬೇಡಿಕೆ ಕೂಡ ಹೆಚ್ಚಾಗಿದೆ. ಈ ಪೈಕಿ ಕೆಲವು ಸದ್ದಿಲ್ಲದೆ ಮಾಯವಾದರೆ, ಇನ್ನೂ ಕೆಲ ಲ್ಯಾಪ್​ಟಾಪ್​ಗಳು ಈಗಲೂ ಟ್ರೆಡ್​ನಲ್ಲಿದೆ. ಸಾಮಾನ್ಯವಾಗಿ ಹೆಚ್ಚು ಬ್ಯಾಟರಿ ಬ್ಯಾಕಪ್ ಒಳಗೊಂಡಿರುವ, ನಮ್ಮ ಕಚೇರಿ ಕೆಲಸಗಳಿಗೆ, ಮನೆಯಲ್ಲಿ ಮಕ್ಕಳಿಗೆ ಆನ್ಲೈನ್ ತರಗತಿಗಳಿಗೆ (Online Class), ಬಿಡುವಿನ ಸಮಯದಲ್ಲಿ ಗೇಮ್ ಆಡುವ ಸಲುವಾಗಿ, ಮೂವಿ ನೋಡಲು ಅನುಕೂಲಕರವಾದ ಒಂದು ಲ್ಯಾಪ್​ಟಾಪ್​ಗೆ ಹೆಚ್ಚು ಬೇಡಿಕೆ. ಹಾಗಾದ್ರೆ ಈ ವರ್ಷ 50,000 ರೂ. ಒಳಗೆ (Laptop Under 50,000) ಬಿಡುಗಡೆ ಆದ ಅತ್ಯುತ್ತಮ ಲ್ಯಾಪ್​ಟಾಪ್​ಗಳು ಯಾವುವು ಎಂಬುದನ್ನು ನೋಡೋಣ.

ಹೆಚ್​ಪಿ ಕ್ರೋಮ್​ಬುಕ್ ಎಕ್ಸ್ 360:ಒಳ್ಳೆಯ ಬ್ಯಾಟರಿ ಬ್ಯಾಕಪ್ ಜೊತೆಗೆ ಕ್ರೋಮ್ ಬುಕ್ x360 ಆಪ್ಷನ್ ಇರುವ ಲ್ಯಾಪ್​ಟಾಪ್​​ ಇದಾಗಿದೆ. ಇದರಲ್ಲಿ 9 ಗಂಟೆಗಳ ಕಾಲ ಬ್ಯಾಟರಿ ಬ್ಯಾಕಪ್ ಸಿಗಲಿದೆ ಎಂದು ಕಂಪನಿ ಹೇಳುತ್ತದೆ. ಇದರ ಉತ್ತಮ ಕಾರ್ಯನಿರ್ವಹಣೆಗೆ ಅನುಕೂಲವಾಗುವಂತೆ 1.1 GHz ಬೇಸ್ ಫ್ರಿಕ್ವೆನ್ಸಿ ಒಳಗೊಂಡಿರುವ Intel Celeron N4020 ಪ್ರೋಸಸರ್ ನೀಡಲಾಗಿದೆ. ಉತ್ತಮ ಶಬ್ದದ ಗುಣಮಟ್ಟ ಹಾಗೂ ಗೂಗಲ್ ಅಸಿಸ್ಟೆಂಟ್ ಒಳಗೊಂಡಿರುವ ಲ್ಯಾಪ್ಟಾಪ್ ಇದಾಗಿದೆ. ಕೇವಲ ಹತ್ತು ಸೆಕೆಂಡ್ ಒಳಗಾಗಿ ಸ್ವಿಚ್ ಆನ್ ಆಗುವ ಮೂಲಕ ಇಡೀ ದಿನದ ಉತ್ತಮ ಹಾಗೂ ವೇಗದ ಕಾರ್ಯ ನಿರ್ವಹಣೆಯಲ್ಲಿ ಅನುಕೂಲವಾಗುವ ಹಾಗೆ ಈ ಲ್ಯಾಪ್ಟಾಪ್ ಕೆಲಸ ಮಾಡಲಿದೆ. ಇದರಲ್ಲಿ ಡಿಜಿಟಲ್ ಮೈಕ್ರೋಫೋನ್ ಜೊತೆಗೆ, HP Truevision HD camera ಕೂಡ ಇರಲಿದ್ದು, ವಿಡಿಯೋ ಕಾಲಿಂಗ್ ಗಾಗಿ ಹೆಚ್ಚು ಅನುಕೂಲವಾಗಿದೆ. ಸುಮಾರು 360 ಡಿಗ್ರಿವರೆಗೆ ಲ್ಯಾಪ್ಟಾಪ್ ತಿರುಗಿಸಬಹುದಾದ ವೈಶಿಷ್ಟ್ಯ ಇದರಲ್ಲಿದೆ. ಇದರ ಬೆಲೆ 29,999 ರೂ. ಆಗಿದೆ.

ಆಸುಸ್‌ ಕ್ರೋಮ್‌ಬುಕ್‌ CX1101 HD: ಸೋಮವಾರವಷ್ಟೆ ಬಿಡುಗಡೆ ಆದ ಆಸುಸ್‌ ಕ್ರೋಮ್‌ಬುಕ್‌ CX1101 HD ಲ್ಯಾಪ್‌ಟಾಪ್‌ 1366×768 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯದ 11.6 ಇಂಚಿನ ಆಂಟಿ-ಗ್ಲೇರ್ LCD ಡಿಸ್‌ಪ್ಲೇಯನ್ನು ಹೊಂದಿದೆ.  ಇಂಟೆಲ್‌ Celeron N4020 ಡ್ಯುಯಲ್-ಕೋರ್ ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಈ ಲ್ಯಾಪ್‌ಟಾಪ್ Chrome OS ಅನ್ನು ರನ್ ಮಾಡುತ್ತದೆ. ಜೊತೆಗೆ ಈ ಲ್ಯಾಪ್‌ಟಾಪ್‌ 4GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದಿದೆ. ಇದಲ್ಲದೆ ಮೈಕ್ರೊ SD ಬಳಸಿಕೊಂಡು 2TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ. 3-ಸೆಲ್ 42Whr ಬ್ಯಾಟರಿಯನ್ನು ಹೊಂದಿದೆ. ಇದು 13 ಗಂಟೆಗಳವರೆಗೆ ಇರುತ್ತದೆ ಎಂದು ಕಂಪನಿ ಹೇಳುತ್ತದೆ. ಜೊತೆಗೆ USB-ಟೈಪ್ C ಮೂಲಕ 45W ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಡಿಸೆಂಬರ್ 15ರಿಂದ ಭಾರತೀಯ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಪ್ರತ್ಯೇಕವಾಗಿ ಲಭ್ಯವಿರುತ್ತದೆ. ಕ್ರೋಮ್ ಓಎಸ್ ಚಾಲಿತ ಲ್ಯಾಪ್‌ಟಾಪ್ 19,999 ರೂ.ಬೆಲೆಯನ್ನು ಹೊಂದಿದೆ.

ASUS VivoBook 14: ಇದು ಬಿಸಿನೆಸ್ ವ್ಯವಹಾರಗಳಿಗೆ ಬಳಕೆಯಾಗಬಲ್ಲ ಪ್ರೊಫೆಷನಲ್ ಲ್ಯಾಪ್ಟಾಪ್ ಎಂದು ಹೇಳಬಹುದು. ಇದರಲ್ಲಿ ಬಳಕೆಗಾಗಿ 256GB SSD ಸ್ಟೋರೇಜ್ ನೀಡಲಾಗಿದ್ದು, ಉತ್ತಮ ಕಾರ್ಯನಿರ್ವಹಣೆಗಾಗಿ, 4GB RAM ಕೂಡ ನೀಡಲಾಗಿದೆ. ಇದರ ತೂಕ 1.6 ಕೆಜಿ ಇರಲಿದ್ದು, ಕಚೇರಿ ಮತ್ತು ಬಿಜಿನೆಸ್ ಕೆಲಸಗಳಿಗೆ ಸುಲಭವಾಗಿ ಇದನ್ನು ಬಳಸಬಹುದು. ಇದರಲ್ಲಿ ಇಂಟಿಗ್ರೇಟೆಡ್ ಯು ಹೆಚ್ ಡಿ ಗ್ರಫಿಕ್ಸ್ ಕಾರ್ಡ್ ಕೂಡ ಬರಲಿದೆ. ಇದು 10ನೇ ಜನರೇಶನ್ ಕೋರ್ I3 ಪ್ರೋಸಸರ್ ಒಳಗೊಂಡಿದೆ. ಸಿಲ್ವರ್ ಬಣ್ಣದಲ್ಲಿ ಬರುವಂತಹ ಲ್ಯಾಪ್ಟಾಪ್ ಇದಾಗಿದ್ದು, ವಿಂಡೋಸ್ 11 ಆಪರೇಟಿಂಗ್ ಸಿಸ್ಟಂ ಆಧಾರದಲ್ಲಿ ಕೆಲಸ ಮಾಡುತ್ತದೆ.

ಹೆಚ್‌ಪಿ ಕ್ರೋಮ್‌ಬುಕ್‌ 14 ಇಂಚು: 50,000 ಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಲ್ಯಾಪ್‌ಟಾಪ್‌ಗಳಲ್ಲಿ ಹೆಚ್‌ಪಿ ಕ್ರೋಮ್‌ಬುಕ್‌ 14 ಇಂಚಿನ ಲ್ಯಾಪ್‌ಟಾಪ್‌ ಕೂಡ ಅತ್ಯುತ್ತಮ ಆಯ್ಕೆಯಾಗಿದೆ. ಇನ್ನು ಈ ಲ್ಯಾಪ್‌ಟಾಪ್‌ ಅಮೆಜಾನ್‌ನಲ್ಲಿ 27,990 ರೂ. ಗಳಿಗೆ ಲಭ್ಯವಾಗಲಿದೆ. ಈ ಲ್ಯಾಪ್‌ಟಾಪ್‌ 14 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಟಚ್ ಸ್ಕ್ರೀನ್ ಡಿಸ್ಪ್ಲೇ ಹೊಂದಿರುವ ತೆಳುವಾದ ಮತ್ತು ಹಗುರವಾದ ಲ್ಯಾಪ್ ಟಾಪ್ ಆಗಿದೆ. ಇನ್ನು ಈ ಲ್ಯಾಪ್‌ಟಾಪ್‌ ಇಂಟೆಲ್ ಸೆಲೆರಾನ್ ಎನ್ 4020 ಪ್ರೊಸೆಸರ್ ಹೊಂದಿದೆ. ಈ ಲ್ಯಾಪ್‌ಟಾಪ್‌ ನಲ್ಲಿ ಮೈಕ್ರೊ ಎಸ್ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ವಿಸ್ತರಿಸಬಹುದಾದ 64ಜಿಬಿ ಇಂಟರ್‌ ಸ್ಟೋರೇಜ್‌ ಹೊಂದಿದೆ.

ಲೆನೊವೊ V15 AMD 15.6 ಇಂಚು: ಲೆನೊವೊ V15 ಲ್ಯಾಪ್‌ಟಾಪ್‌ 1920 x 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 15.6 ಡಿಸ್ಪ್ಲೇಯನ್ನು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್‌ ಎಎಮ್‌ಡಿ ಅಥ್ಲಾನ್ ಗೋಲ್ಡ್ 3150 ಯು ಪ್ರೊಸೆಸರ್ ಹೊಂದಿದೆ. ಜೊತೆಗೆ ಈ ಲ್ಯಾಪ್‌ಟಾಪ್‌ 4GB RAM ಮತ್ತು 1TB HDD ಸ್ಟೋರೇಜ್‌ ಅನ್ನು ಹೊಂದಿದೆ. ಇದು 5.5 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಸದ್ಯ ಅಮೆಜಾನ್‌ನಲ್ಲಿ ಈ ಲ್ಯಾಪ್‌ಟಾಪ್ 29,990 ರೂ. ಗಳಿಗೆ ಲಭ್ಯವಿದೆ.

ಆಸುಸ್ ಕ್ರೋಮ್ ಬುಕ್ ಫ್ಲಿಪ್: ಆಸುಸ್ ಕ್ರೋಮ್ ಬುಕ್ ಫ್ಲಿಪ್ ಲ್ಯಾಪ್‌ಟಾಪ್‌ ಕೂಡ ಬಜೆಟ್‌ ಬೆಲೆಯಲ್ಲಿ ಲಭ್ಯವಾಗುವ ಲ್ಯಾಪ್‌ಟಾಪ್‌ ಆಗಿದೆ. ಇದು ಸೆಲೆರಾನ್ ಡ್ಯುಯಲ್-ಕೋರ್ ಪ್ರೊಸೆಸರ್‌ ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್‌ 11.6 ಇಂಚಿನ ಡಿಸ್‌ಪ್ಲೇ ಹೊಂದಿದೆ. ಇದು 4GB RAM ಮತ್ತು 64GB ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಜೊತೆಗೆ ಮೈಕ್ರೋ SD ಕಾರ್ಡ್ ಬಳಸಿ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ. ಇದು ಅಮೆಜಾನ್‌ನಲ್ಲಿ 24,999 ರೂ. ಬೆಲೆಯಲ್ಲಿ ಲಭ್ಯವಿದೆ.

ಲೆನೊವೊ ಐಡಿಯಾಪ್ಯಾಡ್ ಸ್ಲಿಮ್ 3: ಲೆನೊವೊ ಐಡಿಯಾಪ್ಯಾಡ್ ಸ್ಲಿಮ್ 3 1366×768 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 15.6-ಡಿಸ್‌ಪ್ಲೇಯನ್ನು ಹೊಂದಿದೆ. ಇದು ಇಂಟೆಲ್ ಸೆಲೆರಾನ್ N4020 ಪ್ರೊಸೆಸರ್ ಅನ್ನು ಬಳಸುತ್ತದೆ. ಇನ್ನು ಈ ಲ್ಯಾಪ್‌ಟಾಪ್‌ 4GB RAM ಮತ್ತು 256GB SSD ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಜೊತೆಗೆ ಇದು 35Wh ಬ್ಯಾಟರಿಯನ್ನು ಹೊಂದಿದ್ದು, ಒಂದು ಬಾರಿ ಚಾರ್ಜ್ ಮಾಡಿದರೆ 8 ಗಂಟೆಗಳವರೆಗೆ ಬಾಳಿಕೆ ಬರುತ್ತದೆ. ಅಮೆಜಾನ್‌ನಲ್ಲಿ ಈ ಲ್ಯಾಪ್‌ಟಾಪ್‌ 29,990 ರೂ. ಬೆಲೆಯಲ್ಲಿ ಲಭ್ಯವಿದೆ.

Flagship Smartphones 2022: ​ಫೋನ್ ಖರೀದಿಸುವ ಪ್ಲಾನ್​ನಲ್ಲಿದ್ದರೆ ಸ್ವಲ್ಪ ಕಾಯಿರಿ: 2022ಕ್ಕೆ ರಿಲೀಸ್ ಆಗಲಿದೆ ಹುಬ್ಬೇರಿಸುವ ಸ್ಮಾರ್ಟ್​ಫೋನ್

(2021 Yers affordable laptops go mainstream like Realme, Redmi HP Asus and Lenovo)

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್