Google Chrome: ಗೂಗಲ್ ಕ್ರೋಮ್ ಬಳಸುತ್ತಿರುವವರು ತಪ್ಪದೇ ಇಲ್ಲಿ ಗಮನಿಸಿ: ಸರ್ಕಾರದಿಂದ ಬಂದಿದೆ ಎಚ್ಚರಿಕೆ ಸಂದೇಶ
ಗೂಗಲ್ ಕ್ರೋಮ್ ಇತ್ತೀಚೆಗಷ್ಟೆ ತನ್ನ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಹೀಗಾಗಿ ಆದಷ್ಟು ಬೇಗ ಅಪ್ಡೇಟ್ ಮಾಡುವಂತೆ ಸೂಚಿಸಿದೆ. ಕ್ರೋಮ್ ತನ್ನ ವಿಂಡೋಸ್, ಮ್ಯಾಕ್ ಮತ್ತು ಲೈನಕ್ಸ್ ಬಳಕೆದಾರರಿಗೆ 96.0.4664.93 ಅಪ್ಡೇಟ್ ನೀಡಿದೆ.
ನೀವು ನಿಮ್ಮ ಕಂಪ್ಯೂಟರ್ನಲ್ಲಿ ಇಂಟರ್ನೆಟ್ ಮೂಲಕ ಗೂಗಲ್ ಕ್ರೋಮ್ (Google Chrome) ಬ್ರೌಸರ್ ಅನ್ನು ಬಳಸುತ್ತಿದ್ದರೆ ತಪ್ಪದೆ ಈ ಸ್ಟೋರಿ ಓದಿ. ಐಟಿ ಸಚಿವಾಲಯದ ಭಾಗವಾಗಿರುವ ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-In) ಗೂಗಲ್ ಕ್ರೋಮ್ ಇಂಟರ್ನೆಟ್ ಬ್ರೌಸರ್ ಬಳಕೆದಾರರಿಗೆ ಎಚ್ಚರಿಕೆಯನ್ನು ನೀಡಿದೆ. ಗೂಗಲ್ ಕ್ರೋಮ್ ಬ್ರೌಸರ್‌ನಲ್ಲಿ ಹಲವಾರು ದೋಷಗಳು ಕಂಡುಬಂದಿದ್ದು ಇದರಿಂದ ಹ್ಯಾಕರ್‌ಗಳು (Hacker) ನಿಮ್ಮ ಪಿಸಿ ಒಳಗಡೆ ಪ್ರವೇಶ ಪಡೆಯುವ ಸಾಧ್ಯತೆ ಇದೆ ಎಂದಿದೆ. ನಿಮ್ಮ ಡೇಟಾ ಖದಿಯುವ ಸಾಧ್ಯತೆ ಕೂಡ ಇದ್ದು, ಪಿಸಿಯಲ್ಲಿ ನಿಮಗೆ ತಿಳಿಯದಂತೆ ವೈರಸ್ ಅನ್ನು ಸೇರಿಸಬಹುದು ಎಂದು ಎಚ್ಚರಿಕೆ ನೀಡಿದೆ.
ಗೂಗಲ್ ಕ್ರೋಮ್ ಇತ್ತೀಚೆಗಷ್ಟೆ ತನ್ನ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಹೀಗಾಗಿ ಆದಷ್ಟು ಬೇಗ ಅಪ್ಡೇಟ್ ಮಾಡುವಂತೆ ಸೂಚಿಸಿದೆ. ಕ್ರೋಮ್ ತನ್ನ ವಿಂಡೋಸ್, ಮ್ಯಾಕ್ ಮತ್ತು ಲೈನಕ್ಸ್ ಬಳಕೆದಾರರಿಗೆ 96.0.4664.93 ಅಪ್ಡೇಟ್ ನೀಡಿದೆ.
ಗೂಗಲ್ ಕ್ರೋಮ್ನಲ್ಲಿ ಈರೀತಿಯ ದೋಷಗಳು ಕಂಡುಬರುವುದು ಇದೇ ಮೊದಲ ಬಾರಿಯೇನಲ್ಲ. ಕ್ರೋಮ್ ಒಳಗೊಂಡಿರುವ ಗಂಭೀರ ಭದ್ರತಾ ದೋಷವನ್ನು ಗೂಗಲ್ ಈ ಹಿಂದೆ ಕೂಡ ಒಪ್ಪಿಕೊಂಡಿತ್ತು. ಟೆಕ್ ದೈತ್ಯ ದೋಷವನ್ನು ಸರಿಪಡಿಸುವ ಸಲುವಾಗಿಯೇ ಪ್ರಮುಖ ಭದ್ರತಾ ಅಪ್‌ಡೇಟ್ ಅನ್ನು ಬಿಡುಗಡೆ ಮಾಡಿದ್ದು ಕ್ರೋಮ್ ಬಳಕೆದಾರರು ತಮ್ಮ ಬ್ರೌಸರ್ ಅನ್ನು ಈ ಅಪ್‌ಡೇಟ್ ಮಾಡುವಂತೆ ತಿಳಿಸಿದೆ.
ಗೂಗಲ್ ಈ ಭದ್ರತಾ ನ್ಯೂನತೆಯ ಕುರಿತು ಹೆಚ್ಚಿನ ವಿವರಗಳನ್ನು ತಿಳಿಸಿಲ್ಲ. ಗೂಗಲ್ ತನ್ನ ಕ್ರೋಮ್ ಬಳಕೆದಾರರ ಬೇಸ್ ಅನ್ನು ಇತ್ತೀಚಿನ ಆವೃತ್ತಿಗೆ ಅಪ್‌ಗ್ರೇಡ್ ಮಾಡಿದ್ದು ಈ ದೋಷಗಳು ಹೊಸ ಅಪ್‌ಗ್ರೇಡ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬುದು ದೃಢಪಟ್ಟ ನಂತರವೇ ಲೋಪದೋಷದ ಕುರಿತು ಇನ್ನಷ್ಟು ಮಾಹಿತಿಗಳನ್ನು ಗೂಗಲ್ ನೀಡಲಿದೆ ಎಂಬುದು ತಿಳಿದುಬಂದಿದೆ.
ಪ್ರೊಗ್ರಾಮ್ ಕಾರ್ಯಾಚರಣೆಯ ಸಮಯದಲ್ಲಿ ಡೈನಾಮಿಕ್ ಮೆಮೊರಿಯ ತಪ್ಪಾದ ಬಳಕೆಯಿಂದಾಗಿ ಇಂತಹ ಲೋಪದೋಷಗಳು ಉದ್ಭವಗೊಳ್ಳುತ್ತವೆ ಎಂಬುದು ಗೂಗಲ್ ತಿಳಿಸಿರುವ ಅಂಶವಾಗಿದೆ. ಕ್ಯಾಸ್ಪರ್ಸ್ಕಿಯು ತಿಳಿಸಿರುವಂತೆ ಮೆಮೊರಿಗೆ ಪಾಯಿಂಟರ್ ಅನ್ನು ಕ್ಲಿಯರ್ ಮಾಡದೇ ಇದ್ದರೆ ಮೆಮೊರಿ ಲೊಕೇಶನ್ ಅನ್ನು ಮುಕ್ತಗೊಳಿಸಿಕೊಂಡು ಹ್ಯಾಕರ್‌ಗಳು ಈ ದೋಷವನ್ನು ತಮಗೆ ಬೇಕಾದಂತೆ ಬಳಸಬಹುದು ಎಂಬ ಎಚ್ಚರಿಕೆಯನ್ನು ನೀಡಿದೆ. ಎಲ್ಲಾ ಕ್ರೋಮ್ ಬಳಕೆದಾರರು ತಮ್ಮ ಕ್ರೋಮ್ ಬ್ರೌಸರ್‌ಗಳನ್ನು ಅಪ್‌ಡೇಟ್ ಮಾಡುವ ಮೂಲಕ ದೋಷಗಳಿಗೆ ಹೊಸ ಭದ್ರತಾ ಫಿಕ್ಸ್ ಅನ್ನು ಅನ್ವಯಿಸಬೇಕು ಎಂದು ಗೂಗಲ್ ಎಚ್ಚರಿಸಿದೆ.
Infinix Note: ಇನ್ಫಿನಿಕ್ಸ್ನಿಂದ ಎರಡು ಬಜೆಟ್ ಬೆಲೆಯ ಆಕರ್ಷಕ ಸ್ಮಾರ್ಟ್ಫೋನ್ ಬಿಡುಗಡೆ: ಹೇಗಿದೆ?
(Google Chrome Government has issued a high severity warning for Google Chrome Internet browser users)