ಎಮ್ ಜಿ ಮೋಟಾರ್ ಭಾರತೀಯ ಮಾರ್ಕೆಟ್​​ಗೆ ಸೂಕ್ತವೆನಿಸುವ ಇಲೆಕ್ಟ್ರಿಕ್ ಕಾರನ್ನು ಇನ್ನೆರಡು ವರ್ಷಗಳಲ್ಲಿ ಲಾಂಚ್ ಮಾಡಲಿದೆ

ಹೊಸ ಕಾರು ಜಾಗತಿಕ ವೇದಿಕೆಯ ಮೇಲೆ ಎಮ್ ಜಿ ಎಲೆಕ್ಟ್ರಿಕ್ ಕ್ರಾಸ್ಓವರ್ ಆಗಿದ್ದರೂ ಭಾರತೀಯ ಮಾರ್ಕೆಟ್ ಗೆ ಅನುಗುಣವಾಗಿ ಕಸ್ಟಮೈಸ್ ಮಾಡಲಾಗುವುದೆಂದು ಕಂಪನಿಯಿಂದ ಲಭ್ಯವಾಗಿರುವ ಮಾಹಿತಿ ತಿಳಿಸುತ್ತದೆ.

TV9kannada Web Team

| Edited By: shivaprasad.hs

Dec 14, 2021 | 8:21 AM

ಎಮ್ ಜಿ ಮೋಟಾರ್ ಭಾರತಕ್ಕೆ ಪ್ರವೇಶ ನೀಡಿ ಕೇವಲ ಎರಡು ವರ್ಷಗಳಾಯಿತಾದರೂ ಅದಾಗಲೇ ನಾಲ್ಕು ಮಾಡೆಲ್​ಗಳನ್ನು ರಸ್ತೆಗಿಳಿಸಿದೆ. ವಿದುಚ್ಛಾಲಿತ ಎಮ್ಜಿ ಜೆಡ್ಎಸ್ ಇವಿ ಅವುಗಳಲ್ಲಿ ಒಂದು. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಎಮ್ ಜಿ ಮೋಟಾರ್ ತನ್ನ ಎರಡನೇ ಇಲೆಕ್ಟ್ರಿಕ್ ಕಾರನ್ನು ಇನ್ನರೆಡು ವರ್ಷಗಳಲ್ಲಿ ಲಾಂಚ್ ಮಾಡಲು ಅಣಿಯಾಗುತ್ತಿದೆ. ಹೊಸ ಕಾರು ಜಾಗತಿಕ ವೇದಿಕೆಯ ಮೇಲೆ ಎಮ್ ಜಿ ಎಲೆಕ್ಟ್ರಿಕ್ ಕ್ರಾಸ್ಓವರ್ ಆಗಿದ್ದರೂ ಭಾರತೀಯ ಮಾರ್ಕೆಟ್ ಗೆ ಅನುಗುಣವಾಗಿ ಕಸ್ಟಮೈಸ್ ಮಾಡಲಾಗುವುದೆಂದು ಕಂಪನಿಯಿಂದ ಲಭ್ಯವಾಗಿರುವ ಮಾಹಿತಿ ತಿಳಿಸುತ್ತದೆ. ಅಂದಹಾಗೆ ಕಾರಿನ ಬೆಲೆ ರೂ 10-15 ಲಕ್ಷ ಆಗಿರಲಿದ್ದು 2023 ರ ಮಧ್ಯಭಾಗ ಭಾರತದಲ್ಲಿ ಲಾಂಚ್ ಆಗಲಿದೆ.

ಎಮ್ ಜಿ ಮೋಟಾರ್ ಇಂಡಿಯ ಅಧ್ಯಕ್ಷ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ರಾಜೀವ್ ಚಾಬಾ ಅವರು ಎರಡು ದಿನಗಳ ಹಿಂದೆ ಪಿಟಿಐನೊಂದಿಗೆ ಮಾತಾಡುವಾಗ, ‘ಎಸ್​ಯುವಿ ಆಸ್ಟರ್ ನಂತರ ನಾವು ಇವಿ ಬಗ್ಗೆ ಯೋಚನೆ ಮಾಡುತ್ತಿದ್ದೇವೆ, ಇಲೆಕ್ಟ್ರಿಕ್ ವಾಹನಗಳೇ ಮುಂದಿನ ಭವಿಷ್ಯ ಅನ್ನೋದನ್ನು ಭಾರತ ಸರ್ಕಾರ ಸ್ಪಷ್ಟಪಡಿಸಿದೆ. ಇದು ನಮ್ಮನ್ನು ಹೆಚ್ಚು ಉತ್ತೇಜಿತರನ್ನಾಗಿಸಿದೆ,’ ಎಂದಿದ್ದರು.

‘ನಾವು ಮುಂದಿನ ಹಣಕಾಸು ವರ್ಷದ ಅಂತ್ಯದ ವೇಳೆಗೆ ಇವಿಯನ್ನು ಲಾಂಚ್ ಮಾಡಲು ನಿರ್ಧರಿಸಿದ್ದೇವೆ. ಹೊಸ ಕಾರಿನ ಅಂದಾಜು ಬೆಲೆ, ರೂ.10 ಲಕ್ಷದಿಂದ 15 ಲಕ್ಷದವರೆಗೆ ಇರುತ್ತದೆ ಮತ್ತು ವೈಯಕ್ತಿಕ ವಿದ್ಯುತ್ ಚಲನಶೀಲತೆಯ ಸಮೂಹ ವಿಭಾಗವನ್ನು ಗುರಿಯಾಗಿಸಿರುತ್ತದೆ. ನಾವು ಅಭಿವೃದ್ಧಿಪಡಿಸಲಿರುವ ಕಾರು ವಾಸ್ತವದಲ್ಲಿ ಒಂದು ರೀತಿಯ ಕ್ರಾಸ್ಒವರ್ ಆಗಿದ್ದು, ಜಾಗತಿಕ ಪ್ಲಾಟ್​ಫಾರ್ಮ್​​ ಮೇಲೆ ಆಧಾರಗೊಂಡಿದೆ. ಭಾರತವೂ ಸೇರಿದಂತೆ ಎಲ್ಲಾ ಉದಯೋನ್ಮುಖ ಮಾರುಕಟ್ಟೆಗಳಿಗೆ ಸಮೂಹ ಮಾರುಕಟ್ಟೆಗಳಿಗೆ ಅದು ಇವಿ ಆಗಿರಲಿದೆ,’ ಎಂದು ಚಾಬಾ ಹೇಳಿದ್ದರು.

ಇದನ್ನೂ ಓದಿ:  ಆರೋಗ್ಯ ಸಿಬ್ಬಂದಿಗಳ ಜತೆ ಫೋಟೋ; ಸಿದ್ದರಾಮಯ್ಯ ನಗೆ ಚಟಾಕಿ ಹೇಗಿತ್ತು ವಿಡಿಯೋ ನೋಡಿ

Follow us on

Click on your DTH Provider to Add TV9 Kannada