Asus Chromebook CX1101: ಆಸುಸ್ನಿಂದ ಕೇವಲ 19,999 ರೂ. ಗೆ ಹೊಸ ಲ್ಯಾಪ್‌ಟಾಪ್ ಬಿಡುಗಡೆ: ಇದರಲ್ಲಿದೆ ಆಕರ್ಷಕ ಫೀಚರ್ಸ್
ಆಸುಸ್ ಕ್ರೋಮ್‌ಬುಕ್ CX1101 HD ಲ್ಯಾಪ್‌ಟಾಪ್ 1366x768 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 11.6 ಇಂಚಿನ ಆಂಟಿ-ಗ್ಲೇರ್ LCD ಡಿಸ್‌ಪ್ಲೇಯನ್ನು ಹೊಂದಿದೆ. ವಿಶೇಷವಾಗಿ ಇದು ಮೆಟಲ್ ರೇಯ್ನ್ ಫೊರ್ಸ್ಡ್ ಹಿಂಗೀಸ್ ಅನ್ನು ಹೊಂದಿದೆ.
ಹೊಸ ವರ್ಷಕ್ಕೆ (New Year 2022) ಇನ್ನೇನು ಕೆಲವೇ ದಿನಗಳಷ್ಟೆ ಬಾಕಿಯಿದೆ. ಈಗಂತು ಹೆಚ್ಚಿನವರು ಮನೆಯಿಂದ ಕೆಲಸ ಮಾಡುತ್ತಿರುವುದರಿಂದ ಲ್ಯಾಪ್‌ಟಾಪ್ ತಯಾರಿಕೆ ಮಾಡುವ ಕಂಪನಿಗಳಿಗೆ ಬೇಡಿಕೆ ಕೂಡ ಹೆಚ್ಚಾಗಿದೆ. ಈ ವರ್ಷ ಮಾರುಕಟ್ಟೆಗೆ ಅನೇಕ ಪ್ರಸಿದ್ಧ ಕಂಪನಿಯ ಲ್ಯಾಪ್ಟಾಪ್ಗಳು (Laptop) ಲಗ್ಗೆಯಿಟ್ಟಿವೆ. ಇದೀಗ ವರ್ಷದ ಕೊನೆಯಲ್ಲಿ ಆಸುಸ್ ಕಂಪನಿ ತನ್ನ ಕ್ರೋಮ್‌ಬುಕ್ CX1101 (Asus Chromebook CX1101) ಹೆಸರಿನ ಹೊಸ ಕ್ರೋಮ್‌ಬುಕ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. 11.6-ಇಂಚಿನ ಡಿಸ್‌ಪ್ಲೇ, ಎಡ್ಜ್-ಟು-ಎಡ್ಜ್ ಸ್ಪಿಲ್-ರೆಸಿಸ್ಟೆಂಟ್ ಕೀಬೋರ್ಡ್, 180-ಡಿಗ್ರಿ ಲೇ-ಫ್ಲಾಟ್ ಮೆಟಲ್ ಬಲವರ್ಧಿತ ಹಿಂಜ್ ಅನ್ನು ಹೊಂದಿ ಸಾಕಷ್ಟು ವಿಶೇಷತೆಗಳಿಂದ ಕೂಡಿದೆ. ಅಲ್ಲದೆ ಅತಿಮ ಕಡಿಮೆ ಬೆಲೆಗೆ ಈ ಲ್ಯಾಪ್‌ಟಾಪ್ ಖರೀದಿಗೆ ಸಿಗುತ್ತಿದೆ.
ಆಸುಸ್ ಕ್ರೋಮ್‌ಬುಕ್ CX1101 HD ಲ್ಯಾಪ್‌ಟಾಪ್ 1366×768 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 11.6 ಇಂಚಿನ ಆಂಟಿ-ಗ್ಲೇರ್ LCD ಡಿಸ್‌ಪ್ಲೇಯನ್ನು ಹೊಂದಿದೆ. ಇಂಟೆಲ್ Celeron N4020 ಡ್ಯುಯಲ್-ಕೋರ್ ಪ್ರೊಸೆಸರ್ ಬಲವನ್ನು ಪಡೆದುಕೊಂಡಿರುವ ಈ ಲ್ಯಾಪ್‌ಟಾಪ್ Chrome OS ಅನ್ನು ರನ್ ಮಾಡುತ್ತದೆ. ಜೊತೆಗೆ ಈ ಲ್ಯಾಪ್‌ಟಾಪ್ 4GB RAM ಮತ್ತು 64GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದಿದೆ. ಇದಲ್ಲದೆ ಮೈಕ್ರೊ SD ಬಳಸಿಕೊಂಡು 2TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.
ವಿಶೇಷವಾಗಿ ಇದು ಮೆಟಲ್ ರೇಯ್ನ್ ಫೊರ್ಸ್ಡ್ ಹಿಂಗೀಸ್ ಅನ್ನು ಹೊಂದಿದೆ. ಇದು ಎಡ್ಜ್-ಟು-ಎಡ್ಜ್ ಸ್ಪಿಲ್-ರೆಸಿಸ್ಟೆಂಟ್ ಕೀಬೋರ್ಡ್ ಅನ್ನು ಒಳಗೊಂಡಿದೆ. ಈ ಕ್ರೋಮ್‌ಬುಕ್ US MIL-STD 810H ಪ್ರಮಾಣೀಕರಿಸಲ್ಪಟ್ಟಿದೆ. ಇದು Google ನ ಟೈಟಾನ್ C ಭದ್ರತಾ ಚಿಪ್‌ನೊಂದಿಗೆ ಅಂತರ್ನಿರ್ಮಿತವಾಗಿದೆ. ಅಲ್ಲದೆ ಟ್ರ್ಯಾಕ್‌ಪ್ಯಾಡ್ ಬಹು-ಗೆಸ್ಚರ್ ಬೆಂಬಲದೊಂದಿಗೆ ಬರುತ್ತದೆ. ಇದನ್ನು ನೀವು 180-ಡಿಗ್ರಿ ಕೋನದಲ್ಲಿ ತೆರೆಯಬಹುದು. CX1101 3-ಸೆಲ್ 42Whr ಬ್ಯಾಟರಿಯನ್ನು ಹೊಂದಿದೆ. ಇದು 13 ಗಂಟೆಗಳವರೆಗೆ ಇರುತ್ತದೆ ಎಂದು ಕಂಪನಿ ಹೇಳುತ್ತದೆ. ಜೊತೆಗೆ USB-ಟೈಪ್ C ಮೂಲಕ 45W ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ.
ಇನ್ನು ಈ ಲ್ಯಾಪ್‌ಟಾಪ್ ಎರಡು USB 3.2 ನೊಂದಿಗೆ ಬರುತ್ತದೆ. ಟೈಪ್-ಸಿ ಪೋರ್ಟ್‌ಗಳು, ಎರಡು ಯುಎಸ್‌ಬಿ 3.2 ಟೈಪ್-ಎ ಪೋರ್ಟ್‌ಗಳು, ಮೈಕ್ರೊ ಎಸ್‌ಡಿ ಕಾರ್ಡ್ ರೀಡರ್ ಮತ್ತು 3.5 ಎಂಎಂ ಆಡಿಯೊ ಜ್ಯಾಕ್ ಅನ್ನು ಬೆಂಬಲಿಸಲಿದೆ. ಈ ಲ್ಯಾಪ್‌ಟಾಪ್ ಇಂಟೆಲ್ HD ಗ್ರಾಫಿಕ್ಸ್ 600 ಗ್ರಾಫಿಕ್ಸ್ ಅನ್ನು ನೋಡಿಕೊಳ್ಳುತ್ತದೆ. ಈ ಲ್ಯಾಪ್‌ಟಾಪ್ ಅಂತರ್ನಿರ್ಮಿತ ಮೈಕ್ರೊಫೋನ್, Google ವಾಯ್ಸ್ ಅಸಿಸ್ಟೆಂಟ್ ಅನ್ನು ಬೆಂಬಲಿಸಲಿದೆ.
ಆಸುಸ್ ಕ್ರೋಮ್‌ಬುಕ್ CX1101 ಡಿಸೆಂಬರ್ 15ರಿಂದ ಭಾರತೀಯ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಪ್ರತ್ಯೇಕವಾಗಿ ಲಭ್ಯವಿರುತ್ತದೆ. ಕ್ರೋಮ್ ಓಎಸ್ ಚಾಲಿತ ಲ್ಯಾಪ್‌ಟಾಪ್ ಕೇವಲ 19,999 ರೂ. ಬೆಲೆಯನ್ನು ಹೊಂದಿದೆ. ಕ್ರೋಮ್‌ಬುಕ್ CX1101 ರಿಟೇಲ್ ಸೇಲ್‌ನಲ್ಲಿ 18,990 ರೂ.ಗಳ ವಿಶೇಷ ರಿಯಾಯಿತಿ ದರದಲ್ಲಿ ಸೇಳ್ ಕಾಣಲಿದೆ.
Best Laptop 2021: 2021 ರಲ್ಲಿ ಬಿಡುಗಡೆ ಆಗಿ ದೂಳೆಬ್ಬಿಸಿದ ಲ್ಯಾಪ್ಟಾಪ್ಗಳು ಯಾವುವು?: ಇಲ್ಲದೆ ನೋಡಿ
(Asus has launched its Chromebook lineup with the launch of the all-new Chromebook CX1 CX1101 in India)