ಬಜೆಟ್ ಪ್ರಿಯರನ್ನು ದಂಗಾಗಿಸಿದ ಹೊಸ ಟೆಕ್ನೋ ಸ್ಪಾರ್ಕ್ 20C ಸ್ಮಾರ್ಟ್​ಫೋನ್: ಎಷ್ಟು ಬೆಲೆ ನೋಡಿ

|

Updated on: Nov 28, 2023 | 3:22 PM

Tecno Spark 20C Phone Launched: ಟೆಕ್ನೋ ಕಂಪನಿ ಸದ್ದಿಲ್ಲದೆ ತನ್ನ ಹೊಸ ಟೆಕ್ನೋ ಸ್ಪಾರ್ಕ್ 20C ಸ್ಮಾರ್ಟ್​ಫೋನ್ ಅನ್ನು ಅನಾವರಣ ಮಾಡಿದೆ. ಬಜೆಟ್ ಪ್ರಿಯರಿಗಾಗಿ ಈ ಫೋನ್ ಬಿಡುಗಡೆ ಮಾಡಲಾಗಿದ್ದು, ಇದರ ಖಚಿತ ಬೆಲೆ ಬಹಿರಂಗವಾಗಿಲ್ಲ. ಈ ಫೋನ್​ನಲ್ಲಿ 6.6-ಇಂಚಿನ HD+ ಡಿಸ್ಪ್ಲೇ ಜೊತೆಗೆ ಪಂಚ್-ಹೋಲ್ ಕಟೌಟ್ ನೀಡಲಾಗಿದೆ.

ಬಜೆಟ್ ಪ್ರಿಯರನ್ನು ದಂಗಾಗಿಸಿದ ಹೊಸ ಟೆಕ್ನೋ ಸ್ಪಾರ್ಕ್ 20C ಸ್ಮಾರ್ಟ್​ಫೋನ್: ಎಷ್ಟು ಬೆಲೆ ನೋಡಿ
Tecno Spark 20C
Follow us on

ಟೆಕ್ ಮಾರುಕಟ್ಟೆಯಲ್ಲಿ ಅಪರೂಪಕ್ಕೆ ಬಜೆಟ್ ಬಲೆಗೆ ಆಕರ್ಷಕ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡುವ ಪ್ರಸಿದ್ಧ ಟೆಕ್ನೋ ಕಂಪನಿ ಸದ್ದಿಲ್ಲದೆ ಹೊಸ ಟೆಕ್ನೋ ಸ್ಪಾರ್ಕ್ 20C (Tecno Spark 20C) ಫೋನನ್ನು ರಿಲೀಸ್ ಮಾಡಿದೆ. ಬಜೆಟ್ ಪ್ರಿಯರಿಗಾಗಿ ಈ ಫೋನ್ ಬಿಡುಗಡೆ ಮಾಡಲಾಗಿದ್ದು, ವಿಶಿಷ್ಟ ವಿನ್ಯಾಸದೊಂದಿಗೆ ಬರುತ್ತದೆ. ಈ ಫೋನ್ 6.6-ಇಂಚಿನ HD+ ಡಿಸ್ಪ್ಲೇಯನ್ನು ಹೊಂದಿದೆ ಮತ್ತು ಆಂಡ್ರಾಐ್ಡ್ 13 OS ನಲ್ಲಿ ಕಾರ್ಯನಿರ್ವಹಿಸುತ್ತದೆ. ಟೆಕ್ನೋ ಅಧಿಕೃತ ವೆಬ್​ಸೈಟ್​ನಲ್ಲಿ ಈ ಫೋನ್ ಲಭ್ಯವಿದ್ದು, ಇದರ ಬೆಲೆ, ಫೀಚರ್ಸ್ ಕುರಿತ ಮಾಹಿತಿ ಇಲ್ಲಿದೆ.

ಟೆಕ್ನೋ ಸ್ಪಾರ್ಕ್ 20C ಬೆಲೆ ಎಷ್ಟು?:

ಟೆಕ್ನೋ ಸ್ಪಾರ್ಕ್ 20C ಸ್ಮಾರ್ಟ್​ಫೋನ್​ ಖಚಿತ ಬೆಲೆ ಬಹಿರಂಗವಾಗಿಲ್ಲ. ಆದರೆ, ವರದಿಗಳ ಪ್ರಕಾರ ಈ ಹ್ಯಾಂಡ್‌ಸೆಟ್‌ನ ಬೆಲೆ ಸುಮಾರು $130 (ಭಾರತದಲ್ಲಿ ಅಂದಾಜು 10,900 ರೂ.) ಇರಬಹುದು. ಈ ಫೋನ್ ಗ್ರಾವಿಟಿ ಬ್ಲ್ಯಾಕ್, ಮಿಸ್ಟರಿ ವೈಟ್, ಆಲ್ಪೆಂಗ್ಲೋ ಗೋಲ್ಡ್ ಮತ್ತು ಮ್ಯಾಜಿಕ್ ಸ್ಕಿನ್ ಬಣ್ಣಗಳಲ್ಲಿ ಬರುತ್ತದೆ.

iPhone 16: ಈಗಷ್ಟೇ ತಯಾರಾಗುತ್ತಿರುವ ಐಫೋನ್ 16 ಫೀಚರ್ಸ್ ಬಗ್ಗೆ ಹೊರಬಿತ್ತು ಶಾಕಿಂಗ್ ಸುದ್ದಿ

ಇದನ್ನೂ ಓದಿ
ತಕ್ಷಣವೇ ಹೀಗೆ ಮಾಡಿ: ಇಲ್ಲವಾದರೆ ನಿಮ್ಮ ಗೂಗಲ್ ಖಾತೆ ಡಿಲೀಟ್ ಆಗುತ್ತೆ
ಕಡಿಮೆ ಬೆಲೆಯಲ್ಲಿ ಸೂಪರ್ 5G ಸ್ಮಾರ್ಟ್​ಫೋನ್ ಬೇಕೇ?: ಇಲ್ಲಿದೆ ನೋಡಿ
ಐಕ್ಯೂ 11 ಸ್ಮಾರ್ಟ್​ಫೋನ್ ಬೆಲೆಯಲ್ಲಿ ಬರೋಬ್ಬರಿ 13,000 ರೂ. ರಿಯಾಯಿತಿ
25,000 ರೂ. ಒಳಗಿನ ಟಾಪ್ 5 ಟ್ರೆಂಡಿಂಗ್ ಸ್ಮಾರ್ಟ್​ಫೋನ್​ಗಳು ಇಲ್ಲಿದೆ ನೋಡಿ

ಟೆಕ್ನೋ ಸ್ಪಾರ್ಕ್ 20C ಫೀಚರ್ಸ್:

ಡಿಸ್‌ಪ್ಲೇ : ಟೆಕ್ನೋ ಸ್ಪಾರ್ಕ್ 20C ಸ್ಮಾರ್ಟ್​ಫೋನ್ 6.6-ಇಂಚಿನ HD+ ಡಿಸ್ಪ್ಲೇ ಜೊತೆಗೆ ಪಂಚ್-ಹೋಲ್ ಕಟೌಟ್, 90Hz ರಿಫ್ರೆಶ್ ರೇಟ್, 720 X 1612 ಪಿಕ್ಸೆಲ್‌ಗಳ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ ಬರುತ್ತದೆ.

ಪ್ರೊಸೆಸರ್ : ಈ ಹ್ಯಾಂಡ್‌ಸೆಟ್ 2.2GHz ವೇಗದೊಂದಿಗೆ ಆಕ್ಟಾ-ಕೋರ್ ಮೀಡಿಯಾ ಟೆಕ್ ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಆದಾಗ್ಯೂ, ಚಿಪ್ಸೆಟ್ ಹೆಸರನ್ನು ಬಹಿರಂಗ ಪಡಿಸಿಲ್ಲ.

ಓಎಸ್ : ಈ ಫೋನ್ ಕಸ್ಟಮ್ ಸ್ಕಿನ್‌ನೊಂದಿಗೆ ಆಂಡ್ರಾಯ್ಡ್ 13 ಓಎಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

ಕ್ಯಾಮೆರಾಗಳು : ಟೆಕ್ನೋ ಸ್ಪಾರ್ಕ್ ಎಲ್ಇಡಿ ಫ್ಲ್ಯಾಷ್ ಮತ್ತು ಎಐ ಸೆಕೆಂಡ್ ಲೆನ್ಸ್​ನೊಂದಿಗೆ 50MP ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಚಾಟ್‌ಗಳಿಗಾಗಿ 8MP ಮುಂಭಾಗದ ಕ್ಯಾಮೆರಾ ಇದೆ.

ಸಂಪರ್ಕ : 4G, ಡ್ಯುಯಲ್-ಬ್ಯಾಂಡ್ Wi-Fi, ಬ್ಲೂಟೂತ್, GPS, ಮತ್ತು ಚಾರ್ಜ್ ಮಾಡಲು USB ಟೈಪ್-C ಪೋರ್ಟ್ ಇದೆ.

RAM ಮತ್ತು ಸಂಗ್ರಹಣೆ : ಈ ಫೋನ್ ಎರಡು ಮಾದರಿಗಳಲ್ಲಿ ಬರುತ್ತದೆ: 4GB RAM + 128GB ಸಂಗ್ರಹಣೆ ಮತ್ತು 8GB RAM + 128GB ಸಂಗ್ರಹ. ಎರಡೂ ಮಾದರಿಗಳು 8GB ವರ್ಚುವಲ್ RAM ನೊಂದಿಗೆ ಬರುತ್ತವೆ.

ಬ್ಯಾಟರಿ : 18W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿ ಇದೆ. ಭದ್ರತೆಗಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ನೀಡಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:21 pm, Tue, 28 November 23