ಕೇಂದ್ರ ಸರ್ಕಾರವು ಇತ್ತಿಚೇಗೆ ಎಲ್ಲ ಆಂಡ್ರಾಯ್ಡ್ ಬಳಕೆದಾರರಿಗೆ ಮಹತ್ವದ ಎಚ್ಚರಿಕೆಯನ್ನು ನೀಡಿದೆ. ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-In) ಲಕ್ಷಾಂತರ ಆಂಡ್ರಾಯ್ಡ್ ಬಳಕೆದಾರರಿಗೆ ಹೊಸ ಭದ್ರತಾ ಎಚ್ಚರಿಕೆಯನ್ನು ನೀಡಿದೆ. ಅಷ್ಟಕ್ಕೂ ಭಾರತ ಸರ್ಕಾರ ನೀಡಿದ ಎಚ್ಚರಿಕೆ ಏನು? ನಿಮ್ಮ ಸೂಕ್ಷ್ಮ ಮಾಹಿತಿಯನ್ನು ಪಡೆಯಲು ಮತ್ತು ನಿಮ್ಮ ಫೋನ್‌ನಲ್ಲಿ ಅನಿಯಂತ್ರಿತ ಕೋಡ್ಗಳನ್ನು ತರುವ ಮೂಲಕ ಸೈಬರ್ ಕಳ್ಳರು ನಿಮ್ಮ ವೈಯಕ್ತಿಕ ಡೇಟಾಗಳನ್ನು ಪಡೆಯಲು ಹೊಸ ಯಂತ್ರವನ್ನು ಹುಡುಕ್ಕಿದ್ದಾರೆ.
CERT-In ನಿಂದ ನೀಡಿದ ಭದ್ರತಾ ಬುಲೆಟಿನ್ ಪ್ರಕಾರ, ಸೈಬರ್ ಕಳ್ಳರು ಫ್ರೇಮ್‌ವರ್ಕ್, ಸಿಸ್ಟಮ್, Google Play ಸಿಸ್ಟಮ್, RM ಘಟಕಗಳು, MediaTek ಘಟಕಗಳು, ಇಮ್ಯಾಜಿನೇಶನ್ ಘಟಕಗಳು, Qualcomm ಕಾಂಪೊನೆಂಟ್‌ಗಳು ಮತ್ತು Qualcomm ಕ್ಲೋಸ್-ಸೋರ್ಸ್ಡ್ ಕಾಂಪೊನೆಂಟ್‌ಗಳಲ್ಲಿ ಇದನ್ನು ಅಳವಡಿಸಿದ್ದಾರೆ. ಇದು Android ಆವೃತ್ತಿ 12, 12L, 13, ಮತ್ತು 14 ರ ಮೇಲೆ ಪರಿಣಾಮ ಬೀರುತ್ತವೆ.
ಇನ್ನು ನಮ್ಮ ಭಾರತದಲ್ಲಿ ಈ ಆವೃತ್ತಿ ಫೋನ್ಗಳನ್ನು ಬಳಕೆ ಮಾಡುವವರ ಸಂಖ್ಯೆ 10 ಮಿಲಿಯನ್‌ಗಿಂತಲೂ ಹೆಚ್ಚಿದೆ ಎಂದು ಹೇಳಲಾಗಿದೆ. Samsung, Realme, OnePlus, Xiaomi ಮತ್ತು Vivo ನಂತಹ ಬ್ರ್ಯಾಂಡ್‌ಗಳು ಈ ಸಮಸ್ಯೆ ಬಗ್ಗೆ ಕಾಳಜಿಯನ್ನು ವಹಿಸಬೇಕು ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಒಂದು ವೇಳೆ ಇಂತಹ ಸಮಸ್ಯೆಗಳು ಕಂಡು ಬಂದರೆ ತಕ್ಷಣ ಅದರ ಬಗ್ಗೆ ಎಚ್ಚರಿಕೆಯನ್ನು ವಹಿಸಿ ಎಂದು ಕೇಂದ್ರ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ಸಿಮ್ ಬದಲಾಯಿಸಲು, ನಂಬರ್ ಪೋರ್ಟ್ ಮಾಡಲು ಜುಲೈ 1ರಿಂದ ಹೊಸ ನಿಯಮ
ಇಂತಹ ಸೈಬರ್ ಕಳ್ಳಾಟದಿಂದ ಕಾಪಾಡಲು ಈಗಾಗಲೇ ಭದ್ರತಾ ಪ್ಯಾಚ್ ಬಿಡುಗಡೆ ಮಾಡಲಾಗಿದೆ. ಇದು ಇಂತಹ ಸಮಸ್ಯೆಗಳ ಬಗ್ಗೆ ಎಚ್ಚರಿಕೆಯನ್ನು ನೀಡುತ್ತದೆ. ಇದರ ಜತೆಗೆ ಹೆಚ್ಚಿನ ಫೋನ್ ಬ್ರ್ಯಾಂಡ್‌ಗಳಿಗೆ ಈ ಸಮಸ್ಯೆಗಳ ಕುರಿತು ಸೂಚನೆ ನೀಡುತ್ತದೆ. ಈ ತಂತ್ರದ ಬಗ್ಗೆ ಸೆಟ್ಟಿಂಗ್‌ಗಳು, ಸಿಸ್ಟಮ್ ಅಪ್‌ಡೇಟ್, ಸಾಫ್ಟ್ವೇರ್ಗಳಲ್ಲಿ ನವೀಕರಣದ ಮಾಡಲಾಗಿದೆ. ಈ ಬಗ್ಗೆ ನೀವು ಒಮ್ಮೆ ಪರಿಶೀಲನೆ ಮಾಡಬಹುದು. ಹಾಗೂ ಈ ಭದ್ರತಾ ಪ್ಯಾಚ್ ಅಕ್ರಮ ವೆಬ್‌ಸೈಟ್, ಲಿಂಕ್ಗಳನ್ನು ಓಪನ್ ಮಾಡದಂತೆ ಎಚ್ಚರಿಕೆಯನ್ನು ನೀಡುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ