ಬಿಡುಗಡೆಗು ಮುನ್ನ ಸಾಕಷ್ಟು ಸದ್ದು ಮಾಡಿದ್ದ ನಥಿಂಗ್ (Nothing) ಕಂಪನಿ ಬಹುನಿರೀಕ್ಷಿತ ಸ್ಮಾರ್ಟ್ಫೋನ್ ನಥಿಂಗ್ ಫೋನ್ 2 (Nothing Phone 2) ಕೊನೆಗೂ ಅನಾವರಣಗೊಂಡಿದೆ. ಇದರ ಆರಂಭಿಕ ಬೆಲೆ 44,999 ರೂ. ಆಗಿದೆ. ಆದರೆ, ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ನಲ್ಲಿ (Flipkart) ಕಡಿಮೆ ಬೆಲೆಗೆ ಖರೀದಿ ಮಾಡಬಹುದು. ಮುಂದಿನ ತಲೆಮಾರಿನ ಈ ಫೋನ್ ಜುಲೈ 21 ರಿಂದ ಮಾರಾಟ ಕಾಣಲಿದ್ದು, ಖರೀದಿಗೆ ಮುಗಿ ಬೀಳುವುದು ಖಚಿತ ಎಂಬ ಮಾತು ಟೆಕ್ ಮೂಲಗಳಿಂದ ಬಂದಿದೆ. ಹಾಗಾದರೆ, ನಥಿಂಗ್ ಫೋನ್ 2 ಫೀಚರ್ಸ್ ಏನೇನಿದೆ?, ಇದರ ಬೆಲೆಯ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ನಥಿಂಗ್ ಫೋನ್ 2 ಒಟ್ಟು ಎರಡು ಸ್ಟೋರೇಜ್ ಆಯ್ಕೆ ಮೂಲಕ ಮಾರಾಟ ಕಾಣಲಿದೆ. ಇದರ 8GB RAM ಮತ್ತು 128GB ಸ್ಟೋರೇಜ್ ಮಾದರಿಗೆ 44,999 ರೂ. ಇದೆ. ಹಾಗೆಯೆ ಇದರ 12GB RAM + 256GB ವೇರಿಯೆಂಟ್ಗೆ 49,999 ರೂ. ನಿಗದಿ ಮಾಡಲಾಗಿದೆ. ಆದರೆ, 8GB RAM ಆಯ್ಕೆಯನ್ನು ನೀವು ಆಕ್ಸಿಸ್ ಬ್ಯಾಂಕ್ ಮತ್ತು ಹೆಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್ ಬಳಸಿಕೊಂಡು ಪಾವತಿಗಳನ್ನು ಮಾಡಿದರೆ ಇದು ಫ್ಲಿಪ್‌ಕಾರ್ಟ್ ಮೂಲಕ 41,999 ರೂಗಳಿಗೆ ಲಭ್ಯವಿರುತ್ತದೆ. ಇದರರ್ಥ ಬಳಕೆದಾರರು 3,000 ರೂಪಾಯಿಗಳ ದೊಡ್ಡ ರಿಯಾಯಿತಿಯನ್ನು ಪಡೆಯಬಹುದು. ಅಂತೆಯೆ 12GB RAM 46,999 ರೂ. ಗೆ ಫ್ಲಿಪ್ಕಾರ್ಟ್ನಲ್ಲಿ ಇದೇ ಆಫರ್ ಮೂಲಕ ಖರೀದಿಗೆ ಸಿಗಲಿದೆ.
Nothing Phone 1: ನಥಿಂಗ್ 1 ಸ್ಮಾರ್ಟ್ಫೋನ್ ಖರೀದಿಗೆ ವಿಶೇಷ ಡಿಸ್ಕೌಂಟ್
– ನಥಿಂಗ್ ಫೋನ್ (2) ಬಲಿಷ್ಠವಾದ ಪ್ರೊಸೆಸರ್ ಅನ್ನು ಒಳಗೊಂಡಿದೆ. ಇದು ಕಳೆದ ವರ್ಷ ಬಿಡುಗಡೆ ಆದ ಸ್ನಾಪ್ಡ್ರಾಗನ್ 8+ Gen 1 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುತ್ತದೆ. ಇತ್ತೀಚಿನ ದಿನಗಳಲ್ಲಿ ವೇಗವಾದ ಮತ್ತು ಅನೇಕ ದುಬಾರಿ ಫೋನ್‌ಗಳಲ್ಲಿ ಬಳಸಲಾಗುವ ಪ್ರೊಸೆಸರ್ ಇದಾಗಿದೆ.
– ಈ 5G ಫೋನ್ ದೀರ್ಘಾವಧಿಯ ಸಾಫ್ಟ್‌ವೇರ್ ಬೆಂಬಲವನ್ನು ಪಡೆದುಕೊಂಡಿದೆ. ಮೂರು ವರ್ಷಗಳ ಪ್ರಮುಖ ಆಂಡ್ರಾಯ್ಡ್ ಓಎಸ್ ಅಪ್‌ಗ್ರೇಡ್‌ಗಳನ್ನು ಮತ್ತು ನಾಲ್ಕು ವರ್ಷಗಳ ಭದ್ರತಾ ಪ್ಯಾಚ್‌ಗಳನ್ನು ನೀಡಲಾಗಿದೆ. Android 13 OS ನಲ್ಲಿ ರನ್ ಆಗುತ್ತಿದೆ.
– ಇದು 45W ವೇಗದ ವೈರ್ಡ್ ಚಾರ್ಜಿಂಗ್, 15W Qi ವೈರ್‌ಲೆಸ್ ಚಾರ್ಜಿಂಗ್ ಮತ್ತು 5W ರಿವರ್ಸ್ ವೈರ್‌ಲೆಸ್ ಚಾರ್ಜ್‌ಗೆ ಬೆಂಬಲದೊಂದಿಗೆ 4,700mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಬೇಸರದ ಸಂಗತಿ ಎಂದರೆ, ಕಂಪನಿಯು ಬಾಕ್ಸ್‌ನಲ್ಲಿ ಫೋನ್ ಜೊತೆಗೆ ಚಾರ್ಜರ್ ಅನ್ನು ನೀಡುವುದಿಲ್ಲ. ಆದ್ದರಿಂದ, ನಥಿಂಗ್ ಚಾರ್ಜರ್ಗಾಗಿ ಹೆಚ್ಚುವರಿ ಖರ್ಚು ಮಾಡಬೇಕಾಗುತ್ತದೆ.
– ನಥಿಂಗ್ ಫೋನ್ (2) 1,080×2,412 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.7 ಇಂಚಿನ ಫುಲ್ ಹೆಚ್‌ಡಿ ಪ್ಲಸ್ LTPO OLED ಡಿಸ್‌ಪ್ಲೇಯನ್ನು ಹೊಂದಿದೆ. ರಿಫ್ರೆಶ್ ದರವು ಸ್ವಯಂಚಾಲಿತವಾಗಿ 1Hz ಮತ್ತು 120Hz ನಡುವೆ ನೀಡಲಾಗಿದೆ. 240Hz ಟಚ್ ಸ್ಯಾಪ್ಲಿಂಗ್ ರೇಟ್ ಅನ್ನು ಒಳಗೊಂಡಿದೆ. ಇದಲ್ಲದೆ SGS ಲೋ ಬ್ಲೂ ಲೈಟ್ ಮತ್ತು HDR10+ ಪ್ರಮಾಣೀಕರಣವನ್ನು ಪಡೆದುಕೊಂಡಿದೆ.
– 1/1.56-ಇಂಚಿನ ಸೋನಿ IMX890 ಸೆನ್ಸಾರ್ನೊಂದಿಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಸೇರಿದಂತೆ ಹಿಂಭಾಗದಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಇದೆ. ಇದು ಮೃದುವಾದ ವಿಡಿಯೋಗಳಿಗಾಗಿ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಮತ್ತು ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಶನ್ (EIS) ಗೆ ಬೆಂಬಲವನ್ನು ಹೊಂದಿದೆ. 50-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾವು 1/2.76-ಇಂಚಿನ ಸ್ಯಾಮ್‌ಸಂಗ್ JN1 ಸೆನ್ಸಾರ್ನ EIS ಜೊತೆಗೆ ಬರುತ್ತದೆ. ಇದು 4K ಮಾದರಿಯಲ್ಲಿ ಸೆರೆಹಿಡಿಯುವ ಸಾಮರ್ಥ್ಯವನ್ನು ಹೊಂದಿದೆ. ಮುಂಭಾಗದಲ್ಲಿ 32 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ