Kannada News Technology Vivo a Chinese smartphone giant has launched its Vivo Y02s for budget price check specs
Vivo Y02s: ವಿವೋ ಕಂಪನಿಯಿಂ ಬಜೆಟ್ ಬೆಲೆಗೆ ಬಂಪರ್ ಫೀಚರ್ಸ್ನ ಹೊಸ ಫೋನ್ ಬಿಡುಗಡೆ
ಇದೀಗ ವಿವೋ ವೈ02ಎಸ್ (Vivo Y02s) ಫೋನ್ ಜಾಗತಿಕ ಮಾರುಕಟ್ಟೆಯಲ್ಲಿ ರಿಲೀಸ್ ಆಗಿದೆ. ಇದೊಂದು ಬಜೆಟ್ ಬೆಲೆಯ ಫೋನಾಗಿದ್ದರೂ ಆಕರ್ಷಕ ಫೀಚರ್ಗಳಿಂದ ಆವೃತ್ತವಾಗಿದೆ.
Vivo Y02s
Follow us on
ವಿವೋ (VIVO) ಕಂಪನಿ ಕೆಲ ಸಮಯದ ಬಳಿಕ ಇದೀಗ ಮತ್ತೆ ಮಾರುಕಟ್ಟೆಯಲ್ಲಿ ಒಂದರ ಹಿಂದೆ ಒಂದರಂತೆ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುತ್ತಿದೆ. ಕಳೆದ ಕೆಲವು ತಿಂಗಳುಗಳಿಂದ ಸೈಲೆಂಟ್ ಆಗಿದ್ದ ವಿವೋ ಕಳೆದ ಎರಡು ವಾರಗಳಿಂದ ಪುನಃ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೆ ವಿವೋY77e 5G, ವಿವೋ V25 ಪ್ರೊ ಸ್ಮಾರ್ಟ್ಫೋನ್ಗಳನ್ನು (Smartphone) ಅನಾವರಣ ಮಾಡಿದ್ದ ಕಂಪನಿ ಇದೀಗ ವಿವೋ ವೈ02ಎಸ್ (Vivo Y02s) ಫೋನ್ ಅನ್ನು ಜಾಗತಿಕ ಮಾರುಕಟ್ಟೆಯಲ್ಲಿ ರಿಲೀಸ್ ಮಾಡಿದೆ. ಇದೊಂದು ಬಜೆಟ್ ಬೆಲೆಯ ಫೋನಾಗಿದ್ದರೂ ಆಕರ್ಷಕ ಫೀಚರ್ಗಳಿಂದ ಆವೃತ್ತವಾಗಿದೆ. ಈ ಫೋನಿನ ಬೆಲೆ, ವಿಶೇಷತೆ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.
ವಿವೋ Y02s ಸ್ಮಾರ್ಟ್‌ಫೋನ್ ಭಾರತಕ್ಕೆ ಇನ್ನಷ್ಟೆ ಕಾಲಿಡಬೇಕಿದೆ. ಸದ್ಯಕ್ಕೆ ಫಿಲಿಪೈನ್ಸ್‌ನಲ್ಲಿ ಬಿಡುಗಡೆ ಆಗಿರುವ ಈ ಫೋನಿನ 3GB RAM + 32GB ಸ್ಟೋರೇಜ್ ಕಾನ್ಫಿಗರೇಶನ್ ಬೆಲೆ PHP 6,499, ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜು 9,250ರೂ. ಎನ್ನಬಹುದು.
ಈ ಫೋನಿನ ಫೀಚರ್ಸ್ ಬಗ್ಗೆ ನೋಡುವುದಾದರೆ ಇದು 720×1,600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.51 ಇಂಚಿನ ಹೆಚ್‌ಡಿ ಪ್ಲಸ್ ಡಿಸ್ ಪ್ಲೇ ಹೊಂದಿದೆ.
ಮೀಡಿಯಾಟೆಕ್ ಹಿಲಿಯೋ P35 SoC ಪ್ರೊಸೆಸರ್ ಬಲವನ್ನು ಪಡೆದುಕೊಂಡಿದ್ದು ಆಂಡ್ರಾಯ್ಡ್ 12 ಆಧಾರಿತ ಫನ್‌ಟಚ್ OS 12ನಲ್ಲಿ ಕಾರ್ಯನಿರ್ವಹಿಸಲಿದೆ. ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕವೂ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದು.
ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸಿಂಗಲ್ ರಿಯರ್ ಕ್ಯಾಮೆರಾವನ್ನು ನೀಡಲಾಗಿದೆ. ಇದು LED ಫ್ಲ್ಯಾಷ್‌ನೊಂದಿಗೆ ಜೋಡಿಸಲ್ಪಟ್ಟಿದೆ. ಇದಲ್ಲದೆ 5 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.
ಇದನ್ನೂ ಓದಿ
ವಿವೋ Y02s ಸ್ಮಾರ್ಟ್‌ಫೋನ್ ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 10W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, ವೈಫೈ, ಬ್ಲೂಟೂತ್ v5.0 ಸೇರಿದಂತೆ ಇತ್ತೀಚಿನ ಎಲ್ಲ ಆಯ್ಕೆ ನೀಡಲಾಗಿದೆ.