ವಿವೋದ ಈ ಸ್ಮಾರ್ಟ್​ಫೋನ್ ಬೆಲೆಯಲ್ಲಿ ಬರೋಬ್ಬರಿ 10,000 ರೂ. ಇಳಿಕೆ

|

Updated on: Oct 21, 2023 | 2:45 PM

Vivo X90 Pro Price drop in India: ವಿವೋ ಕಂಪನಿ ಕಳೆದ ಏಪ್ರಿಲ್​ನಲ್ಲಿ ದೇಶದಲ್ಲಿ ರಿಲೀಸ್ ಮಾಡಿ ಈಗಲೂ ಟ್ರೆಡಿಂಗ್​ನಲ್ಲಿರುವ ವಿವೋ X90 ಪ್ರೊ ಬೆಲೆಯಲ್ಲಿ ಭರ್ಜರಿ ಇಳಿಕೆ ಮಾಡಿದೆ. ದುಬಾರಿ ಬೆಲೆಯ ಈ ಫೋನಿನ ಮೇಲೆ ಬರೋಬ್ಬರಿ 10,000 ರೂ. ಬೆಲೆ ಕಡಿತವಾಗಿದೆ. ಹಾಗಾದರೆ, ವಿವೋ X90 ಪ್ರೊ ನೂತನ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ?

ವಿವೋದ ಈ ಸ್ಮಾರ್ಟ್​ಫೋನ್ ಬೆಲೆಯಲ್ಲಿ ಬರೋಬ್ಬರಿ 10,000 ರೂ. ಇಳಿಕೆ
Vivo X90 Pro
Follow us on

ವಿವೋ ಕಂಪನಿಯ ಸ್ಮಾರ್ಟ್​ಫೋನ್​ಗಳು ಭಾರತದಲ್ಲಿ ಒಂದರ ಹಿಂದೆ ಒಂದರಂತೆ ಅನಾವರಣಗೊಳ್ಳುತ್ತಿದೆ. ಇದರ ಜೊತೆಗೆ ಕಂಪನಿ ಈಗಾಗಲೇ ಬಿಡುಗಡೆ ಮಾಡಿದ ಕೆಲವು ಫೋನುಗಳ ಬೆಲೆಯಲ್ಲಿ ಕೂಡ ಇಳಿಕೆ ಮಾಡುತ್ತಿದೆ. ಅದರಂತೆ ಇದೀಗ ವಿವೋ ಕಂಪನಿ ಕಳೆದ ಏಪ್ರಿಲ್​ನಲ್ಲಿ ದೇಶದಲ್ಲಿ ರಿಲೀಸ್ ಮಾಡಿ ಈಗಲೂ ಟ್ರೆಡಿಂಗ್​ನಲ್ಲಿರುವ ವಿವೋ X90 ಪ್ರೊ (Vivo X90 Pro) ಬೆಲೆಯಲ್ಲಿ ಭರ್ಜರಿ ಇಳಿಕೆ ಮಾಡಿದೆ. ದುಬಾರಿ ಬೆಲೆಯ ಈ ಫೋನಿನ ಮೇಲೆ ಬರೋಬ್ಬರಿ 10,000 ರೂ. ಬೆಲೆ ಕಡಿತವಾಗಿದೆ. ಹಾಗಾದರೆ, ವಿವೋ X90 ಪ್ರೊ ನೂತನ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ? ಎಂಬುದನ್ನು ನೋಡೋಣ.

ಭಾರತದಲ್ಲಿ ವಿವೋ X90 ಪ್ರೊ ನೂತನ ಬೆಲೆ

ಭಾರತದಲ್ಲಿ ವಿವೋ X90 ಪ್ರೊ ಮೂಲಬೆಲೆಯಲ್ಲಿ ಈಗ 10,000 ರೂ. ಕಡಿಮೆ ಮಾಡಲಾಗಿದೆ. ಈ ಹ್ಯಾಂಡ್‌ಸೆಟ್ ಪ್ರಸ್ತುತ ಏಕೈಕ ಮಾದರಿಯಲ್ಲಿ ಲಭ್ಯವಿದೆ. ಇದರ 12GB RAM + 256GB ಸ್ಟೋರೇಜ್ ರೂಪಾಂತರಕ್ಕಾಗಿ 74,999 ರೂ. ನಿಗದಿ ಮಾಡಲಾಗಿದೆ. ಬಿಡುಗಡೆಗೊಂಡಾಗ ಇದರ ಬೆಲೆ 84,999 ರೂ. ಇತ್ತು. ಇದು ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟ ಕಾಣುತ್ತಿದೆ.

Google Loan: ಸಣ್ಣ ವ್ಯಾಪಾರಿಗಳಿಗೆ ಗುಡ್​​ ನ್ಯೂಸ್​​, ಸಾಲ ನೀಡಲು ಮುಂದಾದ ಗೂಗಲ್ ಪೇ

ಇದನ್ನೂ ಓದಿ
ಬಟ್ಟೆ ಒಗೆದ ತಕ್ಷಣ ವಾಷಿಂಗ್ ಮಷೀನ್ ಮುಚ್ಚಳ ಹಾಕಬೇಡಿ: ಯಾಕೆ ನೋಡಿ
ವಾಟ್ಸ್​ಆ್ಯಪ್​ನಿಂದ ಬಂತು ಊಹಿಸಲಾಗದ ಫೀಚರ್: ಒಂದೆ ಆ್ಯಪ್​ನಲ್ಲಿ 2 ಅಕೌಂಟ್
ಒನ್​ಪ್ಲಸ್​ನ ಚೊಚ್ಚಲ ಮಡುಚುವ ಫೋನ್ ರಿಲೀಸ್: ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ
Tech Tips: ಮೊಬೈಲ್ ಬ್ಯಾಟರಿ ಹಾಳಾಗದಂತೆ ಎಚ್ಚರಿಕೆ ವಹಿಸುವುದು ಹೇಗೆ?

ವಿವೋ X90 ಪ್ರೊ ಫೀಚರ್ಸ್

ಡ್ಯುಯಲ್ ಸಿಮ್ (ನ್ಯಾನೋ) ವಿವೋ X90 ಪ್ರೊ ಸ್ಮಾರ್ಟ್​ಫೋನ್ ಆಂಡ್ರಾಯ್ಡ್ 13-ಆಧಾರಿತ FunTouch OS 13 ಮೂಲಕ ರನ್ ಆಗುತ್ತದೆ. 120Hz ರಿಫ್ರೆಶ್ ದರದೊಂದಿಗೆ 6.78-ಇಂಚಿನ (1,260x 2,800 ಪಿಕ್ಸೆಲ್‌ಗಳು) AMOLED 3D ಕರ್ವ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಆಕ್ಟಾ-ಕೋರ್ 4nm ಮೀಡಿಯಾ ಟೆಕ್ ಡೈಮೆನ್ಸಿಟಿ 9200 SoC ಜೊತೆಗೆ ವಿವೋದ V2 ಚಿಪ್, 12GB ವರೆಗಿನ LPDDR5 RAM ಮತ್ತು ಇಮ್ಮಾರ್ಟಲಿಸ್ G715 GPU ನಲ್ಲಿ ಕಾರ್ಯನಿರ್ವಹಿಸುತ್ತದೆ.

ಕ್ಯಾಮೆರಾ ವಿಚಾರಕ್ಕೆ ಬಂದರೆ, ವಿವೋ X90 ಪ್ರೊ ಹಿಂಬದಿ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. OIS (ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್) ಬೆಂಬಲದೊಂದಿಗೆ 50-ಮೆಗಾಪಿಕ್ಸೆಲ್ ಸೋನಿ IMX 989 ಪ್ರಾಥಮಿಕ ಕ್ಯಾಮೆರಾ ಇದೆ. ಹಾಗೆಯೆ 50-ಮೆಗಾಪಿಕ್ಸೆಲ್ ಸೋನಿ IMX 758 ಸಂವೇದಕ ಮತ್ತು 12-ಮೆಗಾಪಿಕ್ಸೆಲ್ ಸೋನಿ IMX 663 ಸಂವೇದಕವಿದೆ. ಮುಂಭಾಗದಲ್ಲಿ, ಇದು 32-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ವಿವೋ X90 ಪ್ರೊನಲ್ಲಿ ದೃಢೀಕರಣಕ್ಕಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕವಿದೆ. ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ರೇಟಿಂಗ್ ಅನ್ನು ಹೊಂದಿದೆ. ಇದು 120W ವೇಗದ ಚಾರ್ಜಿಂಗ್ ಬೆಂಬಲ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ 4,870mAh ಬ್ಯಾಟರಿಯಿಂದ ಬೆಂಬಲಿತವಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:43 pm, Sat, 21 October 23