Kannada News Technology Vivo V23 5g Vivo has announced an attractive deal on Flipkart making the Vivo V23 5G
Vivo V23 5G: ಕಲರ್ ಚೇಂಜ್ ಆಗುವ ವಿವೋ V23 5G ಫೋನ್ ಬೆಲೆಯಲ್ಲಿ ಬಂಪರ್ ಡಿಸ್ಕೌಂಟ್: ಆಫರ್ ಮಿಸ್ ಮಾಡ್ಬೇಡಿ
Vivo V23 5G Price Cut: ವಿವೋ ಕಂಪನಿ ವಿವೋ V23 5G ಫೋನ್ ಬೆಲೆಯಲ್ಲಿ ಬಂಪರ್ ಡಿಸ್ಕೌಂಟ್ ಘೋಷಿಸಿದೆ. ಅತ್ಯಂತ ಕಡಿಮೆ ಬೆಲೆಗೆ ಈ ಫೋನನ್ನು ನಿಮ್ಮದಾಗಿಸಬಹುದು. ಈ ಫೋನ್ ಫ್ಲೋರೈಟ್ ಎಜಿ ಗ್ಲಾಸ್ ಬ್ಯಾಕ್ ಅನ್ನು ಹೊಂದಿದ್ದು, ಸೂರ್ಯನ ಬೆಳಕಿನಲ್ಲಿ ಅಲ್ಟ್ರಾ ವೈಲೆಟ್ ರೇಸ್ ಬಿದ್ದಾಗ ಕಲರ್ ಬದಲಾಯಿಸುತ್ತದೆ.
Vivo V23 5G
Follow us on
ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ವಿವೋ ಕಂಪನಿ ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿದೆ. ಈಗಾಗಲೇ ಹಲವು ಆಕರ್ಷಕ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಈ ವರ್ಷದ ಆರಂಭದಲ್ಲಿ ವಿವೋ ಭಾರತದಲ್ಲಿ ವಿವೋ ವಿ23 5ಜಿ (Vivo V23 5G) ಮತ್ತು ವಿವೋ ವಿ23 ಪ್ರೊ 5ಜಿ (Vivo V23 Pro 5G) ಎಂಬ ಎರಡು ಹೊಸ ಫೋನನ್ನು ಅನಾವರಣ ಮಾಡಿತ್ತು. ಇದೀಗ ಕಂಪನಿ ವಿವೋ V23 5G ಫೋನ್ ಬೆಲೆಯಲ್ಲಿ ಬಂಪರ್ ಡಿಸ್ಕೌಂಟ್ ಘೋಷಿಸಿದೆ. ಅತ್ಯಂತ ಕಡಿಮೆ ಬೆಲೆಗೆ ಈ ಫೋನನ್ನು ನಿಮ್ಮದಾಗಿಸಬಹುದು. ವಿಶೇಷ ಎಂದರೆ ಈ ಫೋನ್ ಫ್ಲೋರೈಟ್ ಎಜಿ ಗ್ಲಾಸ್ ಬ್ಯಾಕ್ ಅನ್ನು ಹೊಂದಿದ್ದು, ಸೂರ್ಯನ ಬೆಳಕಿನಲ್ಲಿ ಅಲ್ಟ್ರಾ ವೈಲೆಟ್ ರೇಸ್ ಬಿದ್ದಾಗ ಕಲರ್ ಬದಲಾಯಿಸುತ್ತದೆ. ಇದರ ಜೊತೆಗೆ ಬಲಿಷ್ಠವಾದ ಮೀಡಿಯಾಟೆಕ್ ಡೈಮೆನ್ಸಿಟಿ ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ. ಹಾಗಾದ್ರೆ ಈ ಫೋನಿಗೆ ಏನು ಆಫರ್ ಇದೆ ಎಂಬುದನ್ನು ನೋಡೋಣ.
ಭಾರತದಲ್ಲಿ ವಿವೋ V23 5G ಸ್ಮಾರ್ಟ್‌ಫೋನ್ ಒಟ್ಟು ಎರಡು ಮಾದರಿಯಲ್ಲಿ ಬಿಡುಗಡೆ ಆಗಿತ್ತು. ಇದರ 8GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಆಯ್ಕೆಗೆ 29,990 ರೂ. ಮತ್ತು 12GB RAM ಮತ್ತು 256GB ಸ್ಟೋರೇಜ್ ರೂಪಾಂತರದ ಬೆಲೆ 34,990 ರೂ. ಬೆಲೆ ನಿಗದಿ ಮಾಡಲಾಗಿತ್ತು.
ಇದೀಗ ಇದರ 8GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಆಯ್ಕೆ ಮೇಲೆ ಆಕರ್ಷಕ ರಿಯಾಯತಿ ಘೋಷಿಸಲಾಗಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ನಲ್ಲಿ ವಿವೋ V23 5G ಸ್ಮಾರ್ಟ್ಫೋನ್ಗೆ 5000 ರೂ. ಗಳ ಡಿಸ್ಕೌಂಟ್ ನೀಡಲಾಗಿದೆ. ಜೊತೆಗೆ HFDC ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಖರೀದಿಸಿದರೆ 1500 ರೂ. ಗಳ ರಿಯಾಯಿತಿ ಸಿಗಲಿದೆ.
ಈ ಫೋನ್ ಸ್ಟಾರ್‌ಡಸ್ಟ್ ಬ್ಲಾಕ್ ಮತ್ತು ಸನ್‌ಶೈನ್ ಗೋಲ್ಡ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಇದು ವಿವೋ ಕಂಪೆನಿಯ ಅಧಿಕೃತ ವೆಬ್‌ಸೈಟ್, ಫ್ಲಿಪ್‌ಕಾರ್ಟ್ ಮತ್ತು ಆಫ್‌ಲೈನ್ ರಿಟೇಲ್ ಸ್ಟೋರ್ ಮೂಲಕ ಖರೀದಿಸಲು ಲಭ್ಯವಿರುತ್ತವೆ.
ವಿವೋ V23 5G ಸ್ಮಾರ್ಟ್‌ಫೋನ್ 1,080×2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.44 ಇಂಚಿನ ಫುಲ್ HD+ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ.
ಇದನ್ನೂ ಓದಿ
ಇದು ಮೀಡಿಯಾಟೆಕ್ ಡೈಮೆನ್ಸಿಟಿ 920SoC ಪ್ರೊಸೆಸರ್ ಬಲವನ್ನು ಪಡೆದಿದ್ದು, ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.
ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್ f/1.89 ಲೆನ್ಸ್ ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ವೈಡ್ ಆಂಗಲ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್ f/2.4 ಅಪರ್ಚರ್ ಲೆನ್ಸ್ ಹೊಂದಿದೆ.
ಇದಲ್ಲದೆ ಈ ಫೋನ್ 50 ಮೆಗಾಪಿಕ್ಸೆಲ್ ಸೆನ್ಸಾರ್ ಮತ್ತು 8 ಮೆಗಾಪಿಕ್ಸೆಲ್ ವೈಡ್ ಆಂಗಲ್ ಸೆನ್ಸಾರ್ ಸಾಮರ್ಥ್ಯ ಡ್ಯುಯೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. 4,200mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 44W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.