ಪ್ರಸಿದ್ಧ ವಿವೋ (Vivo) ಕಂಪನಿ ಜಾಗತಿಕ ಮಾರುಕಟ್ಟೆಯಲ್ಲಿ ಒಂದರ ಹಿಂದೆ ಒಂದರಂತೆ ಹೊಸ ಹೊಸ ಸ್ಮಾರ್ಟ್ಫೋನುಗಳನ್ನು (Smartphone) ಬಿಡುಗಡೆ ಮಾಡುತ್ತಿದೆ. ಇತ್ತೀಚೆಗೆ ತನ್ನ ವಿವೋ ವೈ ಸರಣಿಯಲ್ಲಿ ಬಜೆಟ್ ಬೆಲೆಗೆ ಆಕರ್ಷಕ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದ್ದ ಕಂಪನಿ ಇದೀಗ X ಸರಣಿಯತ್ತ ಮುಖ ಮಾಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ವಿವೋ ಕಂಪನಿ ಹೊಸದಾಗಿ X90 ಸರಣಿ (Vivo X90 Series) ಅಡಿಯಲ್ಲಿ ವಿವೋ X90 ಮತ್ತು ವಿವೋ X90 ಪ್ರೊ ಎಂಬ ಎರಡು ಸ್ಮಾರ್ಟ್‌ಫೋನ್ ಅನಾವರಣ ಮಾಡಿದೆ. ಸಾಕಷ್ಟು ಬಲಿಷ್ಠವಾಗಿರುವ ಈ ಫೋನ್ನಲ್ಲಿ ಅತ್ಯುತ್ತಮ ಕ್ಯಾಮೆರಾ, ಬ್ಯಾಟರಿ ಕೂಡ ನೀಡಲಾಗಿದೆ. ಈ ಸ್ಮಾರ್ಟ್ಫೋನ್ನ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ವಿವೋ X90 ಸದ್ಯಕ್ಕೆ ಮಲೇಷ್ಯಾದಲ್ಲಿ ಲಾಂಚ್ ಮಾಡಲಾಗಿದ್ದು, ಈ ಫೋನ್ 12GB RAM ಹಾಗೂ 256GB ROM ನ ಒಂದೇ ವೇರಿಯಂಟ್‌ನಲ್ಲಿ ಲಭ್ಯವಾಗುತ್ತಿದೆ. ಹಾಗೆಯೇ ಈ ಫೋನ್ ಮಲೇಷ್ಯಾದಲ್ಲಿ 70,000 ರೂ. ಗಳಲ್ಲಿ ಮಾರಾಟ ಕಾಣಲಿದೆ. ಮುಂದಿನ ತಿಂಗಳು ಭಾರತಕ್ಕೂ ಇದು ಕಾಲಿಡುವ ನಿರೀಕ್ಷೆಯಿದೆ. ಆದರೆ, ಬೆಲೆ ಬಹಿರಂಗಗೊಂಡಿಲ್ಲ. ಈ ಫೋನ್ ಖರೀದಿಯ ಮೇಲೆ ಬಳಕೆದಾರರು 1 ವರ್ಷದ ವಿಸ್ತೃತ ವಾರಂಟಿ ಪಡೆಯಬಹುದು. ಜೊತೆಗೆ 1 ವರ್ಷದ ಸ್ಕ್ರೀನ್ ಕ್ರ್ಯಾಕ್ ರಕ್ಷಣೆ ಮತ್ತು 1 ವರ್ಷದ ಬ್ಯಾಟರಿ ವಾರಂಟಿ ಸಹ ಲಭ್ಯವಿರುತ್ತದೆ ಎಂದು ಕಂಪನಿ ಹೇಳಿದೆ.
WhatsApp Ban: ಭಾರತದಲ್ಲಿ 36 ಲಕ್ಷಕ್ಕೂ ಅಧಿಕ ವಾಟ್ಸ್ಆ್ಯಪ್ ಖಾತೆ ಬ್ಯಾನ್ ಮಾಡಿದ ಮೆಟಾ: ಯಾಕೆ?
ವಿವೋ X90 ಸ್ಮಾರ್ಟ್‌ಫೋನ್ 2,800×1,260 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯದ 6.76 ಇಂಚಿನ ಕರ್ವ್ಡ FHD+ Q9 ಅಲ್ಟ್ರಾ-ವಿಷನ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, 120Hz ರಿಫ್ರೆಶ್ ರೇಟ್ ಆಯ್ಕೆ ನೀಡಲಿದೆ. ಬಲಿಷ್ಠವಾದ ಮೀಡಿಯಾ ಟೆಕ್ ಡೈಮೆನ್ಸಿಟಿ 9200 ಚಿಪ್‌ಸೆಟ್ ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದೆ. ಆಂಡ್ರಾಯ್ಡ್ 13 ಓಎಸ್ ಸಪೋರ್ಟ್ ಅನ್ನು ಪಡೆದಿದೆ. 50MP ಪ್ರಮುಖ ಕ್ಯಾಮೆರಾದ ಆಯ್ಕೆಯೊಂದಿಗೆ ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದೆ. 12MP ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಹಾಗೂ 12MP 2x ಪೋರ್ಟ್ರೇಟ್ ಲೆನ್ಸ್ ಕ್ಯಾಮೆರಾ ನೀಡಲಾಗಿದೆ. ಮುಂಭಾಗ ಸೆಲ್ಫಿಗಾಗಿ 32 MP ಕ್ಯಾಮೆರಾ ಅಳವಡಿಸಲಾಗಿದೆ. 4,810mAh ಸಾಮರ್ಥ್ಯದ ಬ್ಯಾಟರಿ ಆಯ್ಕೆಯ ಜೊತೆಗೆ 120W ಡ್ಯುಯಲ್ ಸೆಲ್ ಫ್ಲ್ಯಾಶ್ ಚಾರ್ಜಿಂಗ್ ಬೆಂಬಲ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಯಲ್ಲಿ 5G ಬೆಂಬಲ ಪಡೆದುಕೊಂಡಿದೆ.
ವಿವೋ X90 ಪ್ರೊ ಫೋನ್ ಕೂಡ ಭಾರತದ ಮಾರುಕಟ್ಟೆಯಲ್ಲಿ ಸದ್ಯದಲ್ಲೇ ಬಿಡುಗಡೆ ಆಗಲಿದೆ. ಇದರ ಕೊಂಚ ದುಬಾರಿ ಆಗಿದ್ದು 95,000 ರೂ. ಆಸುಪಾಸಿ ಇರಬಹುದು ಎನ್ನಲಾಗಿದೆ. ಇದು 6.78 ಇಂಚಿನ ಅಲ್ಟ್ರಾ ವಿಷನ್ AMOLED ಡಿಸ್‌ಪ್ಲೇಯನ್ನು ಪಡೆದಿದ್ದು, ಇದು 120Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿದೆ. ಇದರಲ್ಲಿ ಮೀಡಿಯಾ ಟೆಕ್ ಡೈಮೆನ್ಸಿಟಿ 9200 ಚಿಪ್‌ಸೆಟ್ ಪ್ರೊಸೆಸರ್ ನೀಡಲಾಗಿದೆ. ಆಂಡ್ರಾಯ್ಡ್ 13 ಓಎಸ್ ಸಪೋರ್ಟ್ ಅನ್ನು ಪಡೆದಿದೆ.
ಟ್ರಿಪಲ್ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿದೆ. ಸೆಕೆಂಡರಿ ಕ್ಯಾಮೆರಾವು 12 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿದ್ದು, ತೃತೀಯ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯವನ್ನು ಪಡೆದಿವೆ. ಸೆಲ್ಫಿ ಕ್ಯಾಮೆರಾವು 32 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. 4870mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದುಕೊಂಡಿದ್ದು, 120W ಸಾಮರ್ಥ್ಯದ ಫ್ಲಾಶ್ ಚಾರ್ಜ್ ಸೌಲಭ್ಯವನ್ನು ಪಡೆದಿದೆ. ಇದರೊಂದಿಗೆ 50W ಸಾಮರ್ಥ್ಯದಲ್ಲಿ ವಾಯರ್‌ಲೆಸ್ ಚಾರ್ಜಿಂಗ್ ಸಪೋರ್ಟ್ ಆಯ್ಕೆ ಪಡೆದಿಕೊಂಡಿದೆ. ಈ ಫೋನ್ ಕೂಡ 5G ಬೆಂಬಲ ಪಡೆದುಕೊಂಡಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ