Oppo Reno 8T 5G: ಬೆರಗುಗೊಳಿಸುವ 108MP ಕ್ಯಾಮೆರಾ: ಭಾರತದಲ್ಲಿ ಒಪ್ಪೋ ರೆನೋ 8T ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಎಷ್ಟು?

ಇದೀಗ ಒಪ್ಪೋ ರೆನೋ 8ಟಿ 5ಜಿ (Oppo Reno 8T 5G) ಅಂತಿಮವಾಗಿ ರಿಲೀಸ್ ಆಗಿದೆ. ಇದರಲ್ಲಿ ಬೆರಗುಗೊಳಿಸುವ 108 ಮೆಗಾಫಿಕ್ಸೆಲ್​ನ ಆಕರ್ಷಕ ಕ್ಯಾಮೆರಾ ನೀಡಲಾಗಿದ್ದು ಟೆಕ್ ಪ್ರಿಯರಂತು ಫುಲ್ ಫಿದಾ ಆಗಿದ್ದಾರೆ.

Oppo Reno 8T 5G: ಬೆರಗುಗೊಳಿಸುವ 108MP ಕ್ಯಾಮೆರಾ: ಭಾರತದಲ್ಲಿ ಒಪ್ಪೋ ರೆನೋ 8T ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಎಷ್ಟು?
Oppo Reno 8T 5G
Follow us
TV9 Web
| Updated By: Vinay Bhat

Updated on:Feb 04, 2023 | 2:40 PM

ಕಳೆದ ವರ್ಷ ಭಾರತದಲ್ಲಿ ಬಿಡುಗಡೆ ಆಗಿ ಈಗಲೂ ಧೂಳೆಬ್ಬಿಸುತ್ತಿರುವ ಒಪ್ಪೋ ರೆನೊ 8 ಸರಣಿಯ (Oppo Reno 8 Series) ಸ್ಮಾರ್ಟ್​​ಫೋನ್​ನ ಮತ್ತೊಂದು ಹೊಸ ಮೊಬೈಲ್ ಇದೀಗ ದೇಶದಲ್ಲಿ ಅನಾವರಣಗೊಂಡಿದೆ. ಈ ಹಿಂದೆ ಭಾರತದಲ್ಲಿ ಒಪ್ಪೋ ರೆನೋ 8 ಮತ್ತು ರೆನೋ 8 ಪ್ರೊ (Oppo Reno 8, Oppo Reno 8 Pro) ಲಾಂಚ್ ಆಗಿದ್ದವು. ಇದೀಗ ಒಪ್ಪೋ ರೆನೋ 8ಟಿ 5ಜಿ (Oppo Reno 8T 5G) ಅಂತಿಮವಾಗಿ ರಿಲೀಸ್ ಆಗಿದೆ. ಇದರಲ್ಲಿ ಬೆರಗುಗೊಳಿಸುವ 108 ಮೆಗಾಫಿಕ್ಸೆಲ್​ನ ಆಕರ್ಷಕ ಕ್ಯಾಮೆರಾ ನೀಡಲಾಗಿದ್ದು ಟೆಕ್ ಪ್ರಿಯರಂತು ಫುಲ್ ಫಿದಾ ಆಗಿದ್ದಾರೆ. ಹಾಗಾದ್ರೆ ಈ ಫೋನಿನ ಬೆಲೆ ಎಷ್ಟು?, ಏನೆಲ್ಲ ವಿಶೇಷತೆಗಳಿವೆ?, ಯಾವಾಗ ಖರೀದಿಗೆ ಲಭ್ಯ? ಎಂಬ ವಿಚಾರವನ್ನು ನೋಡೋಣ.

ಬೆಲೆ ಎಷ್ಟು?:

ಒಪ್ಪೋ ರೆನೋ 8T 5G ಸ್ಮಾರ್ಟ್‌ಫೋನ್‌ ಭಾರತದಲ್ಲಿ ಸದ್ಯಕ್ಕೆ ಒಂದು ಮಾದರಿಯಲ್ಲಷ್ಟೆ ಬಿಡುಗಡೆ ಆಗಿದೆ. ಇದರ 8GB RAM ಮತ್ತು 128GB ಸ್ಟೋರೇಜ್ ರೂಪಾಂತರಕ್ಕೆ 29,999ರೂ. ನಿಗದಿ ಮಾಡಲಾಗಿದೆ. ಇದು ಇದೇ ಫೆಬ್ರವರಿ 10 ರಿಂದ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್, ಒಪ್ಪೋ ಸ್ಟೋರ್ ಮತ್ತು ಇತರ ರಿಟೇಲ್‌ ಸ್ಟೋರ್‌ಗಳ ಮೂಲಕ ಸೇಲ್‌ ಕಾಣಲಿದೆ. ಮೊದಲ ಸೇಲ್ ಪ್ರಯುಕ್ತ ಆಫರ್ ನೀಡಲಾಗಿದ್ದು ಈ ಸ್ಮಾರ್ಟ್‌ಫೋನ್‌ ಅನ್ನು ಕೋಟಕ್ ಬ್ಯಾಂಕ್, ಎಚ್‌ಡಿಎಫ್‌ಸಿ, ಯೆಸ್ ಬ್ಯಾಂಕ್ ಮತ್ತು ಎಸ್‌ಬಿಐ ಕಾರ್ಡ್‌ಗಳ ಮೂಲಕ ಖರೀದಿಸುವ ಗ್ರಾಹಕರು ಶೇ. 10 ರಷ್ಟು ತ್ವರಿತ ರಿಯಾಯಿತಿಯನ್ನು ಪಡೆದುಕೊಳ್ಳಬಹುದು.

ಇದನ್ನೂ ಓದಿ
Image
Tech Tips: ನೀವು ಸ್ಮಾರ್ಟ್​ಫೋನ್​ನಲ್ಲಿರುವ mAadhaar ಆ್ಯಪ್ ಬಳಸಿದ್ದೀರಾ?: ಇದರ ಪ್ರಯೋಜನವೇನು?
Image
Fake App: ಪ್ಲೇ ಸ್ಟೋರ್​ನಿಂದ ಅಪಾಯಕಾರಿ ಆ್ಯಪ್​ಗಳನ್ನು ಕಿತ್ತೆಸೆದ ಗೂಗಲ್: ಇನ್​ಸ್ಟಾಲ್ ಮಾಡಿದ್ರೆ ತಕ್ಷಣ ಡಿಲೀಟ್ ಮಾಡಿ
Image
Coca-Cola Smartphone: ಫೆ. 10ಕ್ಕೆ ಕೋಕಾ-ಕೋಲಾ ಕಂಪನಿಯ ಚೊಚ್ಚಲ ಮೊಬೈಲ್ ರಿಲೀಸ್: ಏನು ಫೀಚರ್ಸ್?
Image
Cyber Crime: ಫಾಸ್ಟ್ಯಾಗ್ ರಿಚಾರ್ಜ್ ಮಾಡುವಾಗ ಒಂದು ಲಕ್ಷ ಕಳೆದುಕೊಂಡ ಉಡುಪಿಯ ವ್ಯಕ್ತಿ: ತಪ್ಪಿಯೂ ಹೀಗೆ ಮಾಡಬೇಡಿ

Budget 2023: ಬಿಎಸ್​ಎನ್​ಎಲ್ 5ಜಿ ನೆಟ್ವರ್ಕ್ ಅಭಿವೃದ್ಧಿಗೆ 53 ಸಾವಿರ ಕೋಟಿ ರೂ

ಏನು ಫೀಚರ್ಸ್:

ಒಪ್ಪೋ ರೆನೋ 8T 5G ಸ್ಮಾರ್ಟ್‌ಫೋನ್‌ 6.7 ಇಂಚಿನ ಮೈಕ್ರೋ-ಕರ್ವ್ಡ್ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. 120Hz ರಿಫ್ರೆಶ್ ರೇಟ್​ನಿಂದ ಕೂಡಿದ್ದು ಡ್ರ್ಯಾಗನ್‌ಟ್ರೈಲ್‌-ಸ್ಟಾರ್‌2 ಪ್ರೊಟೆಕ್ಷನ್‌ ಕೂಡ ನೀಡಲಾಗಿದೆ. ಬಲಿಷ್ಠವಾದ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 695 5G SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 13 ಆಧಾರಿತ ColorOS 13 ನಲ್ಲಿ ಕಾರ್ಯನಿರ್ವಹಿಸಲಿದೆ.

ಈ ಫೋನಿನ ಮುಖ್ಯ ಹೈಲೇಟ್ ಕ್ಯಾಮೆರಾ ಆಗಿದ್ದು, ಇದು ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್​ನಲ್ಲಿದೆ. ಇದು ಫೋಟೋಗ್ರಫಿಗೆ ಅತ್ಯುತ್ತಮವಾಗಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಈ ಕ್ಯಾಮೆರಾದಲ್ಲಿ HDR, ಬೊಕೆ ಫ್ಲೇರ್ ಪೋರ್ಟ್ರೇಟ್ ಮತ್ತು ಡ್ಯುಯಲ್-ವ್ಯೂ ವಿಡಿಯೋದಂತಹ ಫೀಚರ್ಸ್‌ಗಳನ್ನು ನೀಡಲಾಗಿದೆ.

ಒಪ್ಪೋ ರೆನೋ 8T 5G ಸ್ಮಾರ್ಟ್‌ಫೋನ್‌ 4,800mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದಕ್ಕೆ ತಕ್ಕಂತೆ 67W ಸೂಪರ್‌ವೂಕ್‌ ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಕಂಪನಿ ಹೇಳುವ ಪ್ರಕಾರ ಈ ಫೋನ್‌ ಅನ್ನು ನೀವು ಕೇವಲ 45 ನಿಮಿಷಗಳಲ್ಲಿ 0 ರಿಂದ 100% ಬ್ಯಾಟರಿ ಚಾರ್ಜ್‌ ಮಾಡಬಹುದಾಗಿದಂತೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ ಬೆಂಬಕ ಪಡೆದುಕೊಂಡಿದೆ. ಉಳಿದಂತೆ ವೈ-ಫೈ 5 ಮತ್ತು ಬ್ಲೂಟೂತ್ 5.1 ವಾಯರ್‌ಲೆಸ್ ಸಂಪರ್ಕವನ್ನು ಪಡೆದುಕೊಂಡಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:39 pm, Sat, 4 February 23

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ