Kannada News Technology Vivo Y02 has been launched in India for budget users priced at Rs 8,999 Technology News in Kannada
Vivo Y02: ಬಜೆಟ್ ಬೆಲೆಗೆ ಬೊಂಬಾಟ್ ಸ್ಟಾರ್ಟ್ಫೋನ್ ಬಿಡುಗಡೆ ಮಾಡಿದ ವಿವೋ: ಎಷ್ಟು ರೂ.?
ವಿವೋ ಕಂಪನಿ ಇದೀಗ ತನ್ನ ವೈ ಸರಣಿಯಲ್ಲೇ ಮತ್ತೊಂದು ಹೊಸ ವಿವೋ ವೈ02 (Vivo Y02) ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಇದೊಂದು ಬಜೆಟ್ ಬೆಲೆಯ ಫೋನಾಗಿದ್ದು ಮೀಡಿಯಾಟೆಕ್ ಪ್ರೊಸೆಸರ್ ಅನ್ನು ನೀಡಲಾಗಿದೆ.
ಪ್ರಸಿದ್ಧ ವಿವೋ ಕಂಪನಿ ಜಾಗತಿಕ ಮಾರುಕಟ್ಟೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಒಂದರ ಹಿಂದೆ ಒಂದರಂತೆ ಹೊಸ ಹೊಸ ಸ್ಮಾರ್ಟ್ಫೋನುಗಳನ್ನು (Smartphone) ಬಿಡುಗಡೆ ಮಾಡುತ್ತಿದೆ. ಇತ್ತೀಚೆಗಷ್ಟೆ ವಿವೋY73t, ವಿವೋ Y52 5G ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಿದ್ದ ವಿವೋ ಕಂಪನಿ ಇದೀಗ ತನ್ನ ವೈ ಸರಣಿಯಲ್ಲೇ ಮತ್ತೊಂದು ಹೊಸ ವಿವೋ ವೈ02 (Vivo Y02) ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಇದೊಂದು ಬಜೆಟ್ ಬೆಲೆಯ ಫೋನಾಗಿದ್ದು ಮೀಡಿಯಾಟೆಕ್ ಪ್ರೊಸೆಸರ್ ಅನ್ನು ನೀಡಲಾಗಿದೆ. ಬಲಿಷ್ಠವಾದ 5,000mAh ಸಾಮರ್ಥ್ಯದ ಬ್ಯಾಟರಿ ಸೇರಿದಂತೆ ಅತ್ಯುತ್ತಮ ಫೀಚರ್ಗಳನ್ನು ಒಳಗೊಂಡಿದೆ. ಈ ಫೋನಿನ ಬೆಲೆ, ಫೀಚರ್ಸ್ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ವಿವೋ Y02 ಸ್ಮಾರ್ಟ್‌ಫೋನ್ ಸದ್ಯಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ಕೇವಲ ಒಂದು ಮಾದರಿಯಲ್ಲಷ್ಟೆ ಅನಾವರಣ ಮಾಡಲಾಗಿದೆ. ಇದರ 3GB RAM ಮತ್ತು 32GB ಇಂಟರ್ ಸ್ಟೋರೇಜ್ ಸಾಮರ್ಥ್ಯಕ್ಕೆ ಕೇವಲ 8,999 ರೂ. ನಿಗದಿ ಮಾಡಲಾಗಿದೆ.
ಈ ಫೋನ್ ವಿವೋ ಕಂಪನಿಯ ಅಧಿಕೃತ ವೆಬ್ಸೈಟ್ ಮತ್ತು ರಿಟೇಲ್ ಸ್ಟೋರ್ಗಳಲ್ಲಿ ಖರೀದಿಗೆ ಲಭ್ಯವಿದೆ. ಮುಂದಿನ ದಿನಗಳಲ್ಲಿ ಫ್ಲಿಪ್ಕಾರ್ಟ್ ಅಥವಾ ಅಮೆಜಾನ್ನಲ್ಲಿ ಮಾರಾಟ ಆಗುವ ನಿರೀಕ್ಷೆಯಿದೆ.
WhatsApp Update: ಬಳಕೆದಾರರು ಶಾಕ್: ಸದ್ದಿಲ್ಲದೆ ವಾಟ್ಸ್ಆ್ಯಪ್ನಲ್ಲಿ ಬರುತ್ತಿದೆ ಹೊಸ ಫೀಚರ್
Fake iPhone: ಮಾರುಕಟ್ಟೆಯಲ್ಲಿ ಭರ್ಜರಿ ಸೇಲ್ ಆಗುತ್ತಿದೆ ಡುಪ್ಲಿಕೇಟ್ ಐಫೋನ್ಗಳು: ಕಂಡುಹಿಡಿಯುವುದು ಹೇಗೆ?
Tech Tips: ಫೋನ್ ಪೇಯಲ್ಲಿ ನಿಮ್ಮ ಪಾಸ್ವರ್ಡ್ ಬದಲಾಯಿಸುವುದು ಹೇಗೆ?: ಇಲ್ಲಿದೆ ಮಾಹಿತಿ
ಈ ಸ್ಮಾರ್ಟ್‌ಫೋನ್ 720 x 1600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.51 ಇಂಚಿನ ಫುಲ್ ಹೆಚ್‌ಡಿ+ ಫುಲ್ ವೀವ್ ಡಿಸ್‌ಪ್ಲೇಯನ್ನು ಹೊಂದಿದೆ.
ಡಿಸ್ಪ್ಲೇಯಲ್ಲಿ ವಿಶೇಷವಾಗಿ ಕಣ್ಣಿನ ಪ್ರೊಟೆಕ್ಷನ್ ಫೀಚರ್ ನೀಡಲಾಗಿದೆ. ವಾಟರ್ಡ್ರಾಪ್ ಸ್ಟೈನ್ನ ಕಟೌಟ್ನಿಂದ ಆವೃತ್ತವಾಗಿದೆ.
ಬೆಲೆಗೆ ತಕ್ಕಂತೆ ಬಲಿಷ್ಠವಾದ ಮೀಡಿಯಾಟೆಕ್ ಹೀಲಿಯೊ P22 SoC ಪ್ರೊಸೆಸರ್ ಬಲವನ್ನು ಹೊಂದಿದ್ದು, ಆಂಡ್ರಾಯ್ಡ್ 12 ಗೋ ಎಡಿಷನ್ OS ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.
ವಿವೋ Y52 5G (2022) ಸ್ಮಾರ್ಟ್‌ಫೋನ್ ಹಿಂಭಾಗ 8 ಮೆಗಾಫಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. ಅಂತೆಯೆ ಮುಂಭಾಗ ಸೆಲ್ಫೀಗಾಗಿ 5 ಮೆಗಾಫಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದೆ. ಇದು ಫೇಸ್ ಬ್ಯೂಟಿ, ಟೈಮ್ ಲಾಪ್ಸ್ ಆಯ್ಕೆಯನ್ನು ಹೊಂದಿದೆ.
ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದ್ದು, ಇದಕ್ಕೆ ತಕ್ಕಂತೆ 10W ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4ಜಿ ಸಪೋರ್ಟ್ ಇದೆ.
ಉಳಿದಂತೆ ಹಾಟ್‌ಸ್ಪಾಟ್, ಡ್ಯುಯಲ್ ಸಿಮ್, ವೈ-ಫೈ 2.4, ಬ್ಲೂಟೂತ್ 5.0, ಜಿಪಿಎಸ್, ಎನ್‌ಎಫ್‌ಸಿ, ಯುಎಸ್‌ಬಿ-ಸಿ ಪೋರ್ಟ್ ಸೇರಿದಂತೆ ಇತ್ತೀಚೆಗಿನ ಎಲ್ಲ ಆಯ್ಕೆ ಅಳವಡಿಸಲಾಗಿದೆ.