Dual Sim: ಶಾಕಿಂಗ್: ಸದ್ಯದಲ್ಲೇ ಅಂತ್ಯವಾಗಲಿದೆ ಡ್ಯುಯೆಲ್ ಸಿಮ್ ಯುಗ: ಯಾಕೆ ಗೊತ್ತೇ?

Technology News: ಇಂದು ಡ್ಯುಯೆಲ್ ಸಿಮ್‌ಗಳನ್ನು ಬಳಸುವ ವಿಧಾನಕ್ಕೆ ಜನರು ಒಗ್ಗಿ ಹೋಗಿದ್ದಾರೆ. ಆದರೆ, ಸದ್ಯದಲ್ಲೇ ಡ್ಯುಯಲ್ ಸಿಮ್ ಟ್ರೆಂಡ್​ಗೆ ಫುಲ್ ಸ್ಟಾಪ್ ಬೀಳಲಿದೆ ಎಂದೇ ಹೇಳಲಾಗುತ್ತಿದೆ. ಇದಕ್ಕೆ ಇತ್ತೀಚಿನ ಬೆಳವಣಿಗೆಗಳೇ ಸಾಕ್ಷಿ.

Dual Sim: ಶಾಕಿಂಗ್: ಸದ್ಯದಲ್ಲೇ ಅಂತ್ಯವಾಗಲಿದೆ ಡ್ಯುಯೆಲ್ ಸಿಮ್ ಯುಗ: ಯಾಕೆ ಗೊತ್ತೇ?
Dual Sim
Follow us
| Updated By: Vinay Bhat

Updated on:Dec 05, 2022 | 1:29 PM

ಈ ಹಿಂದೆ ಒಂದು ಫೋನ್​ಗೆ ಒಂದೇ ಸಿಮ್ ಕಾರ್ಡ್ (Sim Card) ಎಂಬ ಕಾಲವಿತ್ತು. ಆದರೆ ಯಾವಾಗ ಡ್ಯುಯಲ್ ಸಿಮ್ ಫೋನ್​ಗಳು (Phones) ಮಾರುಕಟ್ಟೆಗೆ ಲಗ್ಗೆಯಿಟ್ಟವೋ ಎಲ್ಲವೂ ಬದಲಾಯಿತು. ಗ್ರಾಹಕರು ತಮ್ಮ ಅನುಕೂಲಕ್ಕಾಗಿ ಎರಡು ಸಿಮ್ ಕಾರ್ಡ್‌ಗಳನ್ನು ಪಡೆದುಕೊಂಡರು. ಆಗ ಟೆಲಿಕಾಂ ಕಂಪನಿಗಳು ಕಡಿಮೆ ಬೆಲೆಗೆ ಸೇವೆಗಳನ್ನು ನೀಡುತ್ತಿದ್ದ ಕಾರಣ ಒಂದಕ್ಕಿಂತ ಹೆಚ್ಚು ಸಿಮ್ ಬಳಕೆ ಜೋರಾಗಿ ನಡೆಯುತ್ತಿತ್ತು. ಒಮ್ಮೆ ವ್ಯಾಲಿಡಿಟಿ ರಿಚಾರ್ಜ್ ಪ್ಲಾನ್ ಹಾಕಿಸಿಕೊಂಡರೆ ವರ್ಷ ಪೂರ್ತಿ ಯಾವುದೇ ಟೆನ್ಶನ್ ಇರುತ್ತಿರಲಿಲ್ಲ. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಎರಡು ಸಿಮ್‌ಗಳನ್ನು ಬಳಸುವ ವಿಧಾನಕ್ಕೆ ಒಗ್ಗಿ ಹೋಗಿದ್ದ ಜನರು ಇಂದು ಪುನಃ ಒಂದು ಸಿಮ್​ ಕಾರ್ಡ್ ಬಳಕೆಗೆ ಮರಳುತ್ತಿದ್ದಾರೆ. ವರದಿಯ ಪ್ರಕಾರ, ಸದ್ಯದಲ್ಲೇ ಡ್ಯುಯೆಲ್ ಸಿಮ್ (Dual Sim) ಟ್ರೆಂಡ್​ಗೆ ಫುಲ್ ಸ್ಟಾಪ್ ಬೀಳಲಿದೆ ಎಂದು ಹೇಳಲಾಗಿದೆ. ಇದಕ್ಕೆ ಇತ್ತೀಚಿನ ಬೆಳವಣಿಗೆಗಳೇ ಸಾಕ್ಷಿ.

ಈ ಹಿಂದೆ ಒಂದು ಸಿಮ್ ಆ್ಯಕ್ಟಿವ್ ಆಗಿರಲು ಪದೇ ಪದೇ ರಿಚಾರ್ಜ್ ಮಾಡುವ ಅಗತ್ಯವಿರಲಿಲ್ಲ. ಒಮ್ಮೆ ವ್ಯಾಲಿಡಿಟಿ ರಿಚಾರ್ಜ್ ಮಾಡಿದರೆ ಅದು ವರ್ಷಗಳ ಕಾಲ ಆ್ಯಕ್ಟಿವ್ ಆಗಿರುತ್ತಿತ್ತು. ಆದರೆ, ಕಳೆದ ಕೆಲ ವರ್ಷಗಳಿಂದ ಈ ನಿಯಮದಲ್ಲಿ ಸಂಪೂರ್ಣ ಬದಲಾಗಿದ್ದು ಸಿಮ್ ಆ್ಯಕ್ಟಿವ್ ಇರಬೇಕು ಎಂದರೆ ಮಾಸಿಕ ಆಧಾರದ ಮೇಲೆ ರಿಚಾರ್ಜ್ ಮಾಡಬೇಕಾದ ಅವಶ್ಯಕತೆಯಿದೆ. ಹೀಗಾಗಿ ಎರಡು ಸಿಮ್ ಇರುವವರು ಒಂದು ಸಿಮ್ ಕಾರ್ಡ್‌ಗೆ ಬ್ಯಾಲೆನ್ಸ್ ಹಾಕಿ ಮತ್ತೊಂದು ಸಿಮ್​ಗೂ ಡೇಟಾ, ವ್ಯಾಲಿಡಿಟಿ, ಬ್ಯಾಲೆನ್ಸ್ ಇರುವಂತಹ ಪ್ಲಾನ್ ಹಾಕಬೇಕಾಗಿದೆ. ಮಾಡಿಲ್ಲ ಎಂದಾದರೆ ಟೆಲಿಕಾಂ ಕಂಪನಿಗಳು ಗ್ರಾಹಕರಿಗೆ ಕರೆ ಮಾಡಿ ನೀವು ರಿಚಾರ್ಜ್ ಮಾಡದಿದ್ದರೆ ನಿಮ್ಮ ಸಂಪರ್ಕವನ್ನು ಕಡಿತ ಗೊಳಿಸುವುದಾಗಿ ತಿಳಿಸುತ್ತಾರೆ. ಹೀಗಾಗಿ ಎರಡೂ ಸಿಮ್​ಗಳನ್ನು ರೀಚಾರ್ಜ್ ಮಾಡಲೇ ಬೇಕಾದ ಒತ್ತಡಕ್ಕೆ ಬಳಕೆದಾರರು ಸಿಲುಕಿಕೊಂಡಿದ್ದಾರೆ.

ಅತ್ತ ಟೆಲಿಕಾಂ ಕಂಪನಿಗಳು ತಿಂಗಳ ವ್ಯಾಲಿಡಿಟಿ ಯೋಜನೆಯನ್ನು ಕೂಡ ಹೆಚ್ಚಿಸಿವೆ. ಇದರಿಂದ ಎರಡು ಸಿಮ್ ಬಳಕೆ ಮಾಡುತ್ತಿರುವ ಗ್ರಾಹಕರಿಗೆ ಹೊರೆಯಾಗಿದೆ. ಪ್ರಸ್ತುತ, ಬಹುತೇಕ ಎಲ್ಲಾ ಟೆಲಿಕಾಂ ಕಂಪನಿಗಳಲ್ಲಿ ಒಂದೇ ಮಾದರಿಯ ರೀಚಾರ್ಜ್ ಯೋಜನೆಗಳು ಇರುವುದರಿಂದ ಅನೇಕರು ಒಂದೇ ಸಿಮ್ ಅನ್ನು ಬಳಸಲು ಮುಂದಾಗುತ್ತಿದ್ದಾರೆ. ಇದರ ಪರಿಣಾಮವಾಗಿ ಈ ವರ್ಷದ ಏಪ್ರಿಲ್‌ನಲ್ಲಿ ಸುಮಾರು 70 ಲಕ್ಷ ಜನರು ಸಿಮ್ ಬಳಸುವುದನ್ನೇ ನಿಲ್ಲಿಸಿದ್ದಾರೆ. ಇವುಗಳಲ್ಲಿ ವೊಡಾಫೋನ್-ಐಡಿಯಾ ಮೊದಲ ಸ್ಥಾನದಲ್ಲಿದ್ದರೆ, ಭಾರ್ತಿ ಏರ್ಟೆಲ್ ದ್ವಿತೀಯ ಸ್ಥಾನದಲ್ಲಿದೆ.

ಇದನ್ನೂ ಓದಿ
Image
WhatsApp Update: ಬಳಕೆದಾರರು ಶಾಕ್: ಸದ್ದಿಲ್ಲದೆ ವಾಟ್ಸ್​ಆ್ಯಪ್​ನಲ್ಲಿ ಬರುತ್ತಿದೆ ಹೊಸ ಫೀಚರ್
Image
Fake iPhone: ಮಾರುಕಟ್ಟೆಯಲ್ಲಿ ಭರ್ಜರಿ ಸೇಲ್ ಆಗುತ್ತಿದೆ ಡುಪ್ಲಿಕೇಟ್ ಐಫೋನ್​ಗಳು: ಕಂಡುಹಿಡಿಯುವುದು ಹೇಗೆ?
Image
Tech Tips: ಫೋನ್ ಪೇಯಲ್ಲಿ ನಿಮ್ಮ ಪಾಸ್​ವರ್ಡ್ ಬದಲಾಯಿಸುವುದು ಹೇಗೆ?: ಇಲ್ಲಿದೆ ಮಾಹಿತಿ
Image
Redmi Note 11S: ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ 108MP ಕ್ಯಾಮೆರಾದ ಈ ಸ್ಮಾರ್ಟ್​ಫೋನ್ ಬೆಲೆಯಲ್ಲಿ ಕಡಿತ

Smartphones: ಡಿಸೆಂಬರ್​ನಲ್ಲಿ ಬಿಡುಗಡೆ ಆಗಲಿರುವ ಟಾಪ್ ಸ್ಮಾರ್ಟ್​ಫೋನ್​ಗಳ ಪಟ್ಟಿ ಇಲ್ಲಿದೆ ನೋಡಿ

ರಿಚಾರ್ಜ್ ದರದಲ್ಲಿ ಇನ್ನಷ್ಟು ಹೆಚ್ಚಳ:

ಟೆಲಿಕಾಂ ಕಂಪನಿಗಳು ಶೀಘ್ರದಲ್ಲೇ ತಮ್ಮ ಪ್ರಿಪೇಯ್ಡ್ ರಿಚಾರ್ಜ್ ಯೋಜನೆಗಳ ಬೆಲೆಗಳನ್ನು ಹೆಚ್ಚಳ ಮಾಡಲಿದೆ ಎಂದು ವರದಿಯಾಗಿದೆ. ಇದು ಎರಡು ಸಿಮ್ ಬಳಸುವವರಿಗೆ ಮತ್ತಷ್ಟು ಹೊರೆಯಾಗಲಿದೆ. ಕಳೆದ ವರ್ಷ ನವೆಂಬರ್-ಡಿಸೆಂಬರ್‌ನಲ್ಲಿ ಟೆಲಿಕಾಂ ಕಂಪನಿಗಳು ತಮ್ಮ ರಿಚಾರ್ಜ್ ಯೋಜನೆಗಳ ಬೆಲೆಯನ್ನು ದಿಢೀರ್ ಹೆಚ್ಚಿಸಿದ್ದವು. ಈ ಬಾರಿ ಕೂಡ ಇದು ಮರುಕಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಅಲ್ಲದೆ ದೇಶದ ಕೆಲವು ಕಡೆಗಳಲ್ಲಿ 5ಜಿ ಸೇವೆ ಆರಂಭವಾಗಿದ್ದು ಟೆಲಿಕಾಂ ಕಂಪನಿಗಳು ತಮ್ಮ ಯೋಜನೆಯ ಬೆಲೆಗಳನ್ನು ಹೆಚ್ಚಳ ಮಾಡುವುದು ಬಹುತೇಕ ಖಚಿತ.

ಇತ್ತೀಚೆಗಷ್ಟೆ ಪ್ರಸಿದ್ಧ ಟೆಲಿಕಾಂ ಕಂಪನಿ ಏರ್ಟೆಲ್ ತನ್ನ ರಿಚಾರ್ಜ್ ಯೋಜನೆಗಳನ್ನು ಎರಡು ವಲಯಗಳಲ್ಲಿ ದುಬಾರಿ ಮಾಡಿದೆ. ವರದಿಗಳ ಪ್ರಕಾರ, ಈ ಹೆಚ್ಚಳವು ಕೇವಲ ಪ್ರಯೋಗವಂತೆ. ಆದರೆ, ಮುಂದಿನ ದಿನಗಳಲ್ಲಿ ಎಲ್ಲ ಕಡೆಗಳಲ್ಲಿ ಇದು ಜಾರಿಗೆ ಬರಬಹುದು. ಕಳೆದ ವರ್ಷ ಏರ್ಟೆಲ್ ತನ್ನ ರಿಚಾರ್ಜ್ ಯೋಜನೆಗಳನ್ನು ನವೆಂಬರ್-ಡಿಸೆಂಬರ್‌ನಲ್ಲಿ ದುಬಾರಿಗೊಳಿಸಿತ್ತು. ಆಗ 79 ರೂ. ಇದ್ದ ಕನಿಷ್ಠ ರೀಚಾರ್ಜ್ ಯೋಜನೆಯ ಬೆಲೆಯನ್ನು 99 ರೂ. ಹೆಚ್ಚಳ ಮಾಡಿತ್ತು. ಅದರಂತೆ ಈ ವರ್ಷ ಕೂಡ ರೀಚಾರ್ಜ್ ಯೋಜನೆಗಳಲ್ಲಿ 20 ರಿಂದ 25 ಪ್ರತಿಶತದಷ್ಟು ಹೆಚ್ಚಳವಾಗಬಹುದು ಎನ್ನಲಾಗಿದೆ. ಜೊತೆಗೆ ದೀರ್ಘಕಾಲದ ರೀಚಾರ್ಜ್ ಯೋಜನೆಗಳ ಬೆಲೆಗಳನ್ನು ಹೆಚ್ಚಿಸುವ ಬಗ್ಗೆಯೂ ಚರ್ಚೆ ನಡೆಯುತ್ತಿದೆಯಂತೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:25 pm, Mon, 5 December 22