ವಿವೋ ಕಂಪನಿಯು ಈಗೀಗ ಜಾಗತಿಕ ಮಾರುಕಟ್ಟೆಯಲ್ಲಿ ಪ್ರತಿ ವಾರ ಒಂದೊಂದು ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುತ್ತಿದೆ. ಇಂದು ಚೀನಾದಲ್ಲಿ ವಿವೋ Y78t ಫೋನ್ ಲಾಂಚ್ ಆಗಿದೆ. ಇದರ ಬೆನ್ನಲ್ಲೇ ಇತ್ತ ಭಾರತದಲ್ಲಿ ಕಂಪನಿ ತನ್ನ Y-ಸರಣಿಯ ಅಡಿಯಲ್ಲಿ ಬಹುನಿರೀಕ್ಷಿತ ವಿವೋ Y200 (Vivo Y200) ಫೋನ್ ಅನಾವರಣ ಮಾಡಿದೆ. ಇದು Y100 ನ ಮುಂದಿನ ಆವೃತ್ತಿಯಾಗಿದೆ. ಈ ಫೋನ್ನಲ್ಲಿ ಬಲಿಷ್ಠ ಪ್ರೊಸೆಸರ್, ಆಕರ್ಷಕ ಕ್ಯಾಮೆರಾ, ಉತ್ತಮ ಬ್ಯಾಟರಿ ಆಯ್ಕೆ ನೀಡಲಾಗಿದೆ. ವಿವೋ Y200 ಸ್ಮಾರ್ಟ್ಫೋನಿನ ಬೆಲೆ, ಫೀಚರ್ಸ್ ಕುರಿತ ಮಾಹಿತಿ ಇಲ್ಲಿದೆ.
ವಿವೋ Y200 ಸ್ಮಾರ್ಟ್ಫೋನ್ ಸದ್ಯಕ್ಕೆ ಒಂದು ಸ್ಟೋರೇಜ್ ಆಯ್ಕೆಯಲ್ಲಿ ಮಾತ್ರ ರಿಲೀಸ್ ಆಗಿದೆ. ಇದರ 8GB + 128GB ಸ್ಟೋರೇಜ್ ಮಾದರಿಗೆ 21,999 ರೂ. ನಿಗದಿ ಮಾಡಲಾಗಿದೆ. ಈ ಹ್ಯಾಂಡ್ಸೆಟ್ ಡೆಸರ್ಟ್ ಗೋಲ್ಡ್ ಮತ್ತು ಜಂಗಲ್ ಗ್ರೀನ್ ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ. ಇ ಕಾಮರ್ಸ್ ತಾಣವಾದ ಅಮೆಜಾನ್, ಫ್ಲಿಪ್‌ಕಾರ್ಟ್, ವಿವೋ ಇಂಡಿಯಾ ಇ-ಸ್ಟೋರ್ ಮತ್ತು ಚಿಲ್ಲರೆ ಅಂಗಡಿಗಳ ಮೂಲಕ ಖರೀದಿಗೆ ಲಭ್ಯವಿರುತ್ತದೆ. ಕಂಪನಿಯು ಎಸ್‌ಬಿಐ, ಇಂಡಸ್‌ಇಂಡ್, ಐಡಿಎಫ್‌ಸಿ ಫಸ್ಟ್, ಯೆಸ್ ಬ್ಯಾಂಕ್ ಕಾರ್ಡ್ ಮೂಲಕ ಪಡೆದುಕೊಂಡರೆ 2,500 ರೂ. ವರೆಗೆ ಕ್ಯಾಶ್‌ಬ್ಯಾಕ್ ಆಫರ್ ನೀಡುತ್ತಿದೆ.
ವಿವೋದ ಈ ಸ್ಮಾರ್ಟ್ಫೋನ್ ಬೆಲೆಯಲ್ಲಿ ಬರೋಬ್ಬರಿ 10,000 ರೂ. ಇಳಿಕೆ
ಡಿಸ್ ಪ್ಲೇ: ವಿವೋ Y200 ಸ್ಮಾರ್ಟ್ಫೋನ್ 2400 × 1080 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ 6.67-ಇಂಚಿನ FHD+ AMOLED ಡಿಸ್ಪ್ಲೇ, 120Hz ರಿಫ್ರೆಶ್ ದರ, 800 nits ಬ್ರೈಟ್ನೆಸ್ ಅನ್ನು ಹೊಂದಿದೆ.
ಪ್ರೊಸೆಸರ್: ಈ ಫೋನ್ ಅಡ್ರಿನೊ GPU ಜೊತೆಗೆ ಕ್ವಾಲ್ಕಂ ಸ್ನಾಪ್ಡ್ರಾಗನ್ 4 Gen 1 6nm ಪ್ರೊಸೆಸರ್ನಿಂದ ಚಾಲಿತವಾಗಿದೆ.
RAM ಮತ್ತು ಸ್ಟೋರೇಜ್: ಈ ಚಿಪ್‌ಸೆಟ್ ಅನ್ನು 8GB LPDDR4x RAM ಮತ್ತು 128GB UFS 2.2 ಸ್ಟೋರೇಜ್‌ನೊಂದಿಗೆ ಜೋಡಿಸಲಾಗಿದೆ. ಇದನ್ನು ಮೈಕ್ರೋ SD ಕಾರ್ಡ್ ಮೂಲಕ ಮತ್ತಷ್ಟು ವಿಸ್ತರಿಸಬಹುದಾಗಿದೆ.
ಓಎಸ್: ಆಂಡ್ರಾಯ್ಡ್ 13 ಆಧಾರಿತ ಫನ್‌ಟಚ್ ಓಎಸ್ 13 ಮೂಲಕ ರನ್ ಆಗುತ್ತದೆ.
ಕ್ಯಾಮೆರಾಗಳು: f/1.79 ದ್ಯುತಿರಂಧ್ರದೊಂದಿಗೆ 64MP ಪ್ರಾಥಮಿಕ ಕ್ಯಾಮೆರಾ ಮತ್ತು f/2.4 ದ್ಯುತಿರಂಧ್ರದೊಂದಿಗೆ 2MP ಕ್ಯಾಮೆರಾ ಮತ್ತು ಮುಂಭಾಗ f/2.0 ದ್ಯುತಿರಂಧ್ರದೊಂದಿಗೆ 16MP ಸೆಲ್ಫಿ ಶೂಟರ್ ಇದೆ.
ಬ್ಯಾಟರಿ-ಸಂಪರ್ಕ: 44W ಫಾಸ್ಟ್ ಚಾರ್ಜಿಂಗ್ ಜೊತೆಗೆ 4800mAh ಬ್ಯಾಟರಿ ಇದೆ. ಸಂಪರ್ಕ ಆಯ್ಕೆಯಲ್ಲಿ 5G, ಡ್ಯುಯಲ್ 4G VoLTE, Wi-Fi 802.11 ac, ಬ್ಲೂಟೂತ್ 5.1, GPS, ಮತ್ತು USB ಟೈಪ್-C ಪೋರ್ಟ್ ಇದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ