ಜನಪ್ರಿಯ ಸ್ಮಾರ್ಟ್‌ಫೋನ್ (Smartphone) ತಯಾರಕ ಸಂಸ್ಥೆ ವಿವೋ ಕಂಪನಿ ಹೊಸ ವರ್ಷದ ಮೊದಲ 15 ದಿನಗಳ ಒಳಗೆವೇ ಆಕರ್ಷಕ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಿದೆ. 2022 ರಲ್ಲಿ ಈಗಾಗಲೇ ಒಟ್ಟು 4 ಫೋನ್ಗಳನ್ನು ಪರಿಚಿಯಿಸಿರು ವಿವೋ ಇದೀಗ ಕಳೆದ ವರ್ಷ ರಿಲೀಸ್ ಮಾಡಿದ್ದ ವಿವೋ ವೈ72 5ಜಿ (Vivo Y72 5G) ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಕಡಿತ ಮಾಡಿದೆ. ಈ ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಮುಖ್ಯ ಕ್ಯಾಮೆರಾವು 48 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿದೆ. ಹಾಗೆಯೇ ಅಧಿಕ ಬ್ಯಾಟರಿ ಬಾಳಿಕೆಯನ್ನು ಹೊಂದಿರುವುದು ಆಕರ್ಷಕ ಎನಿಸಿಕೊಂಡಿದೆ. ಸದ್ಯಕ್ಕೆ ಈ ಫೋನಿನ ಬೆಲೆಯಲ್ಲಿ 1,000 ರೂ. ಇಳಕೆ ಮಾಡಲಾಗಿದೆ.
ನೂತನ ಬೆಲೆ?:
ವಿವೋ Y72 5G ಸ್ಮಾರ್ಟ್‌ಫೋನ್ ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಒಂದು ಮಾದರಿಯಲ್ಲಷ್ಟೆ ಲಭ್ಯವಿದೆ. ಬಿಡುಗಡೆಗೊಂಡಾಗ ಇದರ 8GB RAM ಮತ್ತು 128GB ಸ್ಟೋರೇಜ್ ವೇರಿಯಂಟ್‌ಗೆ 20,990 ರೂ. ನಿಗದಿ ಮಾಡಲಾಗಿತ್ತು. ಇದೀಗ ದರ ಕಡಿತಗೊಂಡು ಈ ಫೋನ್ 19,990 ರೂ. ಗೆ ಮಾರಾಟ ಆಗುತ್ತಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್, ಪ್ಲಿಪ್‌ಕಾರ್ಟ್, ಟಾಟಾಕ್ಲಿಕ್ ತಾಣಗಳಲ್ಲಿ ಈ ಫೋನನ್ನು ಖರೀದಿಸಬಹುದು.
ಏನು ವಿಶೇಷತೆ?:
ವಿವೋ Y72 5G ಸ್ಮಾರ್ಟ್‌ಫೋನ್ 1,080×2,408 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದ್ದು, 6.58-ಇಂಚಿನ ಪೂರ್ಣ-ಹೆಚ್‌ಡಿ + ಎಲ್‌ಸಿಡಿ ಐಪಿಎಸ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಫೋನಿನ ಡಿಸ್‌ಪ್ಲೇಯು 20: 9 ರಚನೆಯ ಅನುಪಾತ ಹೊಂದಿದೆ. ಸ್ನ್ಯಾಪ್‌ಡ್ರಾಗನ್ 480 SoC ಪ್ರೊಸೆಸರ್ ಅನ್ನು ಹೊಂದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಸಪೋರ್ಟ್ ಅನ್ನು ಪಡೆದಿದೆ. ಹಾಗೆಯೇ ಈ ಹ್ಯಾಂಡ್‌ಸೆಟ್ ಫಂಟೌಚ್ ಓಎಸ್ 11.1 ನಲ್ಲಿ ಕಾರ್ಯನಿರ್ವಹಿಸುತ್ತದೆ.
ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ f/2.4 ಅಪರ್ಚರ್ ನೊಂದಿಗೆ 2 ಮೆಗಾ ಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ.
5,000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದ್ದು, ಇದು 18W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, ಡ್ಯುಯಲ್ ಬ್ಯಾಂಡ್ ವೈ-ಫೈ, ಬ್ಲೂಟೂತ್ 5.1, ಯುಎಸ್‌ಬಿ ಟೈಪ್-ಸಿ, ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಅನ್ನು ಬೆಂಬಲಿಸಲಿದೆ. ಇದಲ್ಲದೆ ಈ ಹ್ಯಾಂಡ್‌ಸೆಟ್‌ನಲ್ಲಿ ಸ್ಪೀಕರ್ ಬೂಸ್ಟ್ 3.0 ತಂತ್ರಜ್ಞಾನದೊಂದಿಗೆ ಸೂಪರ್ ಲೀನಿಯರ್ ಸ್ಪೀಕರ್‌ಗಳೂ ಇದ್ದು, ಇದು ಸ್ಪಷ್ಟವಾದ ಧ್ವನಿಯನ್ನು ನೀಡುತ್ತದೆ.
OnePlus 9RT: ಭಾರತದಲ್ಲಿ ಒನ್ಪ್ಲಸ್ 9RT ಸ್ಮಾರ್ಟ್‌ಫೋನ್ ಬಿಡುಗಡೆ: ಈ ಫೋನ್ ಖರೀದಿಗೆ ಕ್ಯೂ ಗ್ಯಾರಂಟೆ