OnePlus 9RT: ಭಾರತದಲ್ಲಿ ಒನ್‌ಪ್ಲಸ್ 9RT ಸ್ಮಾರ್ಟ್‌ಫೋನ್ ಬಿಡುಗಡೆ: ಈ ಫೋನ್ ಖರೀದಿಗೆ ಕ್ಯೂ ಗ್ಯಾರಂಟೆ
ಶುಕ್ರವಾರ ಸಂಜೆ ದೇಶದಲ್ಲಿ ಬಹುನಿರೀಕ್ಷಿತ ಒನ್‌ಪ್ಲಸ್ 9ಆರ್ಟಿ (OnePlus 9RT) ಫೋನ್ ಲಾಂಚ್ ಆಗಿದೆ. ಬಿಡುಗಡೆಗೂ ಮುನ್ನವೇ ಟೆಕ್ ಪ್ರಿಯರ ನಿದ್ದೆ ಕದ್ದಿದ್ದ ಈ ಫೋನ್ ಅಂದುಕೊಂಡಿದ್ದಕ್ಕಿಂತ ಸಖತ್ ಆಗಿದೆ. ಹೀಗಾಗಿ ಇದನ್ನು ಖರೀದಿಸಲು ಕ್ಯೂ ನಿಲ್ಲುವುದು ಗ್ಯಾರಂಟೆ.
ಸ್ಮಾರ್ಟ್‌ಫೋನ್ (Smartphone) ಮಾರುಕಟ್ಟೆಯಲ್ಲಿ ವಿಶೇಷ ಸ್ಥಾನ ಸಂಪಾದಿಸಿರುವ ಒನ್‌ಪ್ಲಸ್ ಕಂಪನಿ ಇದೀಗ ಭಾರತದಲ್ಲಿ 2022ರ ಮೊದಲ ಫೋನ್ ಅನ್ನು ಪರಿಚಯಿಸಿದೆ. ಶುಕ್ರವಾರ ಸಂಜೆ ದೇಶದಲ್ಲಿ ಬಹುನಿರೀಕ್ಷಿತ ಒನ್‌ಪ್ಲಸ್ 9ಆರ್ಟಿ (OnePlus 9RT) ಫೋನ್ ಲಾಂಚ್ ಆಗಿದೆ. ಬಿಡುಗಡೆಗೂ ಮುನ್ನವೇ ಟೆಕ್ ಪ್ರಿಯರ ನಿದ್ದೆ ಕದ್ದಿದ್ದ ಈ ಫೋನ್ ಅಂದುಕೊಂಡಿದ್ದಕ್ಕಿಂತ ಸಖತ್ ಆಗಿದೆ. ಹೀಗಾಗಿ ಇದನ್ನು ಖರೀದಿಸಲು ಕ್ಯೂ ನಿಲ್ಲುವುದು ಗ್ಯಾರಂಟೆ. ಇದರಲ್ಲಿರುವ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ನಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ನಿಂದ ಕೂಡಿದೆ. ಆಕ್ಟಾ ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ ಪ್ರೊಸೆಸರ್, 65W ಫಾಸ್ಟ್ ಚಾರ್ಜಿಂಗ್ ಸೇರಿದಂತೆ ಅಮೋಘ ಫೀಚರ್ಗಳಿಂದ ಒನ್‌ಪ್ಲಸ್ 9RT ಕೂಡಿದೆ.
ಬೆಲೆ ಎಷ್ಟು?:
ಒನ್‌ಪ್ಲಸ್ 9RT ಸ್ಮಾರ್ಟ್‌ಫೋನ್ ಒಟ್ಟು ಎರಡು ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ. ಇದರ 8GB RAM ಮತ್ತು 128GB ಇಂಟರ್ ಸ್ಟೋರೇಜ್ ಸಾಮರ್ಥ್ಯಕ್ಕೆ 42,999 ರೂ. ನಿಗದಿ ಮಾಡಲಾಗಿದೆ. 12GB RAM ಮತ್ತು 256GB ಇಂಟರ್ ಸ್ಟೋರೇಜ್ಗೆ 46,999 ರೂ. ಇದೆ. ಬ್ಲಾಕ್ ಮತ್ತು ಸಿಲ್ವರ್ನ ಎರಡು ಬಣ್ಣಗಳಲ್ಲಿ ಇದು ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಇದು ಜನವರಿ 17 ರಿಂದ ಅಮೆಜಾನ್ನಲ್ಲಿ ನಡೆಯಲಿರುವ ಗ್ರೇಟ್ ಇಂಡಿಯನ್ ರಿಪಬ್ಲಿಕ್ ಸೇಲ್ನಲ್ಲಿ (Amazon Great Indian Republic Day sale) ಖರೀದಿಗೆ ಸಿಗಲಿದೆ.
Geared to find greatness in everyday. Experience life in fast lane with Qualcomm Snapdragon 888, 600Hz Sampling Rate and much more with the new #OnePlus9RT5G
RCC Early access sale starts on 16th Jan, 12AM. Know more https://t.co/LmWJwNsEtg pic.twitter.com/Ol9AAyTPpI
— OnePlus India (@OnePlus_IN) January 14, 2022
ಏನು ವಿಶೇಷತೆ?:
ಮೂಲಗಳ ಪ್ರಕಾರ, ಒನ್‌ಪ್ಲಸ್ 9RT ಸ್ಮಾರ್ಟ್‌ಫೋನ್ 6.7 ಇಂಚಿನ ಫುಲ್ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದೆ. ಇದು 1300 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ಹೊಂದಿದ್ದು, 120Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿದೆ. ಆಕ್ಟಾ ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888 SoC ಪ್ರೊಸೆಸರ್ ಹೊಂದಿದೆ. ಇದು ಆಂಡ್ರಾಯ್ಡ್ 11 ನಲ್ಲಿ ಓಪೋನ ಕಲರ್‌ಓಎಸ್ 12 ಮೇಲೆ ಕಾರ್ಯನಿರ್ವಹಿಸುತ್ತದೆ.
ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಎರಡನೇ ಕ್ಯಾಮೆರಾ 16 ಮೆಗಾ ಪಿಕ್ಸೆಲ್ ಸೆನ್ಸಾರ್, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಇದಲ್ಲದೆ 16 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಕೂಡ ಒಳಗೊಂಡಿದೆ. ಇನ್ನು ರಿಯರ್ ಕ್ಯಾಮರಾ ಸೆಟಪ್ 4K ವೀಡಿಯೋ ರೆಕಾರ್ಡಿಂಗ್ ನೀಡುತ್ತದೆ ಮತ್ತು ಹೈಬ್ರಿಡ್ ಫೋಕಸ್ ಹೊಂದಿದೆ.
ಇನ್ನು ಈ ಸ್ಮಾರ್ಟ್‌ಫೋನ್ ಬಲಿಷ್ಠವಾದ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 65W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ v5.2, GPS/ A-GPS, NFC ಮತ್ತು USB Type-C ಪೋರ್ಟ್ ಬೆಂಬಲಿಸುತ್ತಿದೆ.