ಭಾರತದಲ್ಲಿ ಧೂಳೆಬ್ಬಿಸಲು ಬರುತ್ತಿದೆ ಬಜೆಟ್ ಬೆಲೆಯ ರಿಯಲ್‌ ಮಿ ನಾರ್ಜೊ 50A ಪ್ರೈಮ್‌ ಫೋನ್

Realme Narzo 50A Prime: ನಾರ್ಜೊ 50Aಗೆ ಹೋಲಿಸಿದರೆ ರಿಯಲ್‌ ಮಿ ನಾರ್ಜೊ 50A ಪ್ರೈಮ್‌ ಫೋನ್​ನಲ್ಲಿ ಉತ್ತಮ-ನಿರ್ದಿಷ್ಟ ಪ್ರದರ್ಶನ, ವೇಗದ ಪ್ರೊಸೆಸರ್ ಮತ್ತು ಕ್ಯಾಮೆರಾಗಳಲ್ಲಿ ಕೆಲವು ಅಪ್ಡೇಟ್‌ಗಳನ್ನು ನಿರೀಕ್ಷಿಸಬಹುದು. ನಾರ್ಜೊ 50Aಗಿಂತ ಅಪ್ಡೇಟ್‌ ಫೀಚರ್ಸ್‌ ಹೊಂದಿರುವ ಸಾದ್ಯತೆ ಇದೆ.

ಭಾರತದಲ್ಲಿ ಧೂಳೆಬ್ಬಿಸಲು ಬರುತ್ತಿದೆ ಬಜೆಟ್ ಬೆಲೆಯ ರಿಯಲ್‌ ಮಿ ನಾರ್ಜೊ 50A ಪ್ರೈಮ್‌ ಫೋನ್
Realme Narzo 50A Prime

ಸ್ಮಾರ್ಟ್‌ಫೋನ್‌ (Smartphone) ಮಾರುಕಟ್ಟೆಯಲ್ಲಿ ಬಜೆಟ್ ಬೆಲೆಯಿಂದ ಹಿಡಿದು ಹೈರೇಂಜ್ ವರೆಗೆ ಫೋನ್​ಗಳನ್ನು ಬಿಡುಗಡೆ ಮಾಡಿ ಯಶಸ್ವಿಯಾಗಿರುವ ಪ್ರಸಿದ್ಧ ರಿಯಲ್‌ ಮಿ (Realme) ಕಂಪನಿ 2022ರ ಆರಂಭದಲ್ಲೇ ಆಕರ್ಷಕ ಮೊಬೈಲ್​ಗಳನ್ನು ಅನಾವರಣ ಮಾಡುವ ಪ್ಲಾನ್​ನಲ್ಲಿದೆ. ಈಗಾಗಲೇ ಸಾಲು ಸಾಲು ರಿಯಲ್ ಮಿ ಸ್ಮಾರ್ಟ್​ಫೋನ್​ಗಳು ಬಿಡುಗಡೆಗೆ ಸಜ್ಜಾಗಿವೆ ನಿಂತಿವೆ. ಈ ಪೈಕಿ ರಿಯಲ್‌ ಮಿ ನಾರ್ಜೊ 50A ಪ್ರೈಮ್‌ (Realme Narzo 50A Prime) ಫೋನ್‌ ಕೂಡ ಒಂದು. ಈ ಸ್ಮಾರ್ಟ್‌ಫೋನ್‌ ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ ನೀಡುವ ಸಾಧ್ಯತೆ ಇದೆ. ನಾರ್ಜೊ 50Aಗೆ ಹೋಲಿಸಿದರೆ ಈ ಫೋನ್​ನಲ್ಲಿ ಉತ್ತಮ-ನಿರ್ದಿಷ್ಟ ಪ್ರದರ್ಶನ, ವೇಗದ ಪ್ರೊಸೆಸರ್ ಮತ್ತು ಕ್ಯಾಮೆರಾಗಳಲ್ಲಿ ಕೆಲವು ಅಪ್ಡೇಟ್‌ಗಳನ್ನು ನಿರೀಕ್ಷಿಸಬಹುದು. ನಾರ್ಜೊ 50Aಗಿಂತ ಅಪ್ಡೇಟ್‌ ಫೀಚರ್ಸ್‌ ಹೊಂದಿರುವ ಸಾದ್ಯತೆ ಇದೆ.

ಮೂಲಗಳ ಪ್ರಕಾರ, ರಿಯಲ್‌ಮಿ ನಾರ್ಜೊ 50A ಪ್ರೈಮ್‌ ಸ್ಮಾರ್ಟ್‌ಫೋನ್‌ 720 x 1560 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿರಲಿದೆಯಂತೆ. ಈ ಡಿಸ್‌ಪ್ಲೇ 264 ಪಿಪಿಐ ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿರುವ ಸಾಧ್ಯತೆ ಇದೆ. ಜೊತೆಗೆ ಈ ಡಿಸ್‌ಪ್ಲೇ ವಾಟರ್‌ಡ್ರಾಪ್ ನಾಚ್‌ ವಿನ್ಯಾಶವನ್ನು ಹೊಂದಿರಲಿದೆ. ಮೀಡಿಯಾ ಟೆಕ್ ಹಿಲಿಯೊ ಜಿ90 ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದಿರುವ ಸಾಧ್ಯತೆ ಇದೆ. ಇದು ಆಂಡ್ರಾಯ್ಡ್‌ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

ಇನ್ನು ಈ ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಪಡೆದುಕೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 16MP ಸೆನ್ಸಾರ್‌ ಸಾಮರ್ಥ್ಯವನ್ನು ಹೊಂದಿದೆ. ಎರಡನೇ ಕ್ಯಾಮೆರಾ 2MP ಸೆನ್ಸಾರ್‌ ಹೊಂದಿದೆ. ಇದಲ್ಲದೆ 16MP ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ವಿಶೇಷವಾಗಿ ರಿಯಲ್‌ಮಿ ನಾರ್ಜೊ 50A ಪ್ರೈಮ್‌ ಬಲಿಷ್ಠವಾದ 6000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರುವ ಸಾದ್ಯತೆ ಇದೆ. ಇದು ಕ್ವಿಕ್‌ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ಬ್ಲೂಟೂತ್‌, ವೈಫೈ ಮತ್ತು USB ಟೈಪ್-C ಪೋರ್ಟ್ ಅನ್ನು ಬೆಂಬಲಿಸಲಿದೆ. ಈ ಸ್ಮಾರ್ಟ್‌ಫೋನ್‌ ಯಾವಾಗ ಬಿಡುಗಡೆ ಆಗಲಿದೆ, ಇದರ ಬೆಲೆ ಎಷ್ಟು ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ಇದರ ಬೆಲೆ 10,000 ರೂ. ಆಸುಪಾಸಿನಲ್ಲಿ ಇರಬಹುದೆಂದು ಅಂದಾಜಿಸಲಾಗಿದೆ.

Vivo Y72 5G: 2022ರ ಮೊದಲ ಸ್ಮಾರ್ಟ್‌ಫೋನ್ ಬೆಲೆ ಕಡಿತ: ವಿವೋ Y72 5G ಫೋನ್ ಈಗ ಅತಿ ಕಡಿಮೆ ಬೆಲೆಗೆ ಲಭ್ಯ

OnePlus 9RT: ಭಾರತದಲ್ಲಿ ಒನ್​ಪ್ಲಸ್ 9RT ಸ್ಮಾರ್ಟ್​ಫೋನ್ ಬಿಡುಗಡೆ: ಈ ಫೋನ್ ಖರೀದಿಗೆ ಕ್ಯೂ ಗ್ಯಾರಂಟೆ

Click on your DTH Provider to Add TV9 Kannada