Amazon Great Republic Day Sale: ನಾಳೆಯಿಂದ ಅಮೇಜಾನ್ನಲ್ಲಿ ಶುರುವಾಗಲಿದೆ ಹೊಸ ಮೇಳ: ಈ ಆಫರ್ ಮಿಸ್ ಮಾಡ್ಲೇ ಬೇಡಿ
ಅಮೆಜಾನ್ನಲ್ಲಿ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಆರಂಭವಾಗುತ್ತಿದೆ. ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು, ಎಲೆಕ್ಟ್ರಾನಿಕ್ಸ್, ಮನೆ ಮತ್ತು ಅಡುಗೆ ಡಿವೈಸ್‌ಗಳ ಮೇಲೆ ಭರ್ಜರಿ ರಿಯಾಯಿತಿ ದೊರೆಯಲಿದೆ.
ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೇಜಾನ್ನಲ್ಲಿ ಹೊಸ ಮೇಳ ಆಯೋಜನೆಗೆ ಕ್ಷಣಗಣನೆ ಶುರುವಾಗಿದೆ. ನಾಳೆಯಿಂದ (ಜ. 16) ಗಣರಾಜ್ಯೋತ್ಸವದ ಪ್ರಯುಕ್ತ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ (Amazon Great Republic Day Sale) ಆರಂಭವಾಗುತ್ತಿದೆ. ಪ್ರೈಮ್ ಸದಸ್ಯರಿಗೆ ಸೇಲ್ ಪ್ರಾರಂಭವಾಗುವ 24 ಗಂಟೆಗಳ ಮುಂಚಿತವಾಗಿ ಅಂದರೆ ಈಗಾಗಲೇ ಲೈವ್ ಆಗಿದೆ. ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು (Smartphones), ಎಲೆಕ್ಟ್ರಾನಿಕ್ಸ್, ಮನೆ ಮತ್ತು ಅಡುಗೆ ಡಿವೈಸ್‌ಗಳ ಮೇಲೆ ಭರ್ಜರಿ ರಿಯಾಯಿತಿ ದೊರೆಯಲಿದೆ. ಹಾಗೆಯೇ ಟಿವಿಗಳು ಮತ್ತು ದೊಡ್ಡ ಎಲೆಕ್ಟ್ರಾನಿಕ್ಸ್ ವಸ್ತುಗಳ ಮೇಲೆ ಬಿಗ್‌ಗ ಡಿಸ್ಕೌಂಟ್ ದೊರೆಯಲಿದೆ. ಇದಲ್ಲದೆ ಗ್ರಾಹಕರು ಸ್ಮಾರ್ಟ್‌ಫೋನ್‌ಗಳಲ್ಲಿ 40% ರಷ್ಟು ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದ್ದು, ಕ್ಯಾಮೆರಾಗಳು ಮತ್ತು ಲ್ಯಾಪ್‌ಟಾಪ್‌ಗಳಲ್ಲಿ 70% ರಷ್ಟು ರಿಯಾಯಿತಿ ನೀಡಲಿದೆ. ಜೊತೆಗೆ ಅಮೆಜಾನ್ ಅಲೆಕ್ಸಾ, ಫೈರ್‌ಟಿವಿ ಮತ್ತು ಕಿಂಡಲ್ ಡಿವೈಸ್‌ಗಳ ಮೇಲೆ 50% ಡಿಸ್ಕೌಂಟ್ ಪಡೆಯಬಹುದು.
ಅಮೆಜಾನ್ ಸೇಲ್‌ನಲ್ಲಿ ಸ್ಮಾರ್ಟ್ ವಾಚ್‌ಗಳ ಮೇಲೆ ಬಿಗ್ ಡಿಸ್ಕೌಂಟ್ ನೀಡಲಿದೆ. ಅದರಲ್ಲೂ ಸ್ಮಾರ್ಟ್‌ವಾಚ್‌ಗಳಿಗೆ 60% ಡಿಸ್ಕೌಂಟ್ ದೊರೆಯಲಿದೆ. ಹಾಗೆಯೇ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ ಲ್ಯಾಪ್‌ಟಾಪ್‌ಗಳು 40,000 ರೂ. ವರೆಗೆ ರಿಯಾಯಿತಿಯನ್ನು ಪಡೆಯಲಿವೆ. ಇದರೊಂದಿಗೆ ನೀವು 55% ರಿಯಾಯಿತಿಯೊಂದಿಗೆ ಮಾರಾಟದಲ್ಲಿ ಕನ್ಸೋಲ್ ಮತ್ತು PC ಗಳನ್ನು ಖರೀದಿಸಬಹುದು. ಜನಪ್ರಿಯ ಸ್ಮಾರ್ಟ್‌ವಾಚ್ ಬ್ರ್ಯಾಂಡ್ ಅಮಾಜ್‌ಫಿಟ್ ಪ್ರಾಡಕ್ಟ್‌ಗಳು ವಿಶೇಷ ಆಫರ್ ಪಡೆದುಕೊಂಡಿವೆ.
ಕಳೆದ ವರ್ಷ ಅಮಾಜ್‌ಫಿಟ್ GT2 ಮಿನಿ ಸ್ಮಾರ್ಟ್‌ವಾಚ್ ಅನ್ನು ಬಿಡುಗಡೆ ಮಾಡಿತ್ತು. ಈ ಸ್ಮಾರ್ಟ್‌ವಾಚ್ ಅನ್ನು ಭಾರತದಲ್ಲಿ 6999 ರೂ.ಗಳಿಗೆ ಬಿಡುಗಡೆ ಮಾಡಲಾಗಿತ್ತು. ಇದೀಗ ನೀವು 5999 ರೂ. ಗಳಿಗೆ ಖರೀದಿಸಬಹುದಾಗಿದೆ. ಅಮಾಜ್‌ಫಿಟ್ ಬಿಪ್ ಯು ಪ್ರೊ ಕೂಡ ಭಾರತದಲ್ಲಿ 4999 ರೂ.ಗಳಿಗೆ ಬಿಡುಗಡೆಯಾಗಿತ್ತು. ಇದೀಗ ವಿಶೇಷ ಸೇಲ್‌ನಲ್ಲಿ ನಿಮಗೆ ಕೇವಲ 3999 ರೂ. ಗಳಿಗೆ ಲಭ್ಯವಾಗಲಿದೆ.
ಇನ್ನು ಅಮೆಜಾನ್ ಈ ಸೇಲ್‌ನಲ್ಲಿ SBI ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸುವ ಗ್ರಾಹಕರಿಗೆ 10% ಹೆಚ್ಚುವರಿ ಪ್ರಯೋಜನವನ್ನು ನೀಡಲಿದೆ. ಇದಲ್ಲದೆ ಹೆಚ್ಚುವರಿಯಾಗಿ, ಈ ಸೇಲ್ 80ಕ್ಕೂ ಹೆಚ್ಚು ಸ್ಯಾಮ್‌ಸಂಗ್, ಶವೋಮಿ ಮತ್ತು ಟೆಕ್ನೋ ಸ್ಮಾರ್ಟ್‌ಫೋನ್‌ಗಳ ಬಿಡುಗಡೆಯನ್ನು ಒಳಗೊಂಡಿರುತ್ತದೆ ಎನ್ನಲಾಗಿದೆ. ಇನ್ನು ಈ ಸೇಲ್‌ನಲ್ಲಿ ಬ್ಯಾಂಕ್ ಆಫರ್‌ಗಳನ್ನು ಸಹ ನೀಡುತ್ತದೆ. ಇದರಲ್ಲಿ SBI ಕಾರ್ಡ್‌ಗಳ ಮೇಲೆ ಹೆಚ್ಚುವರಿ ರಿಯಾಯಿತಿಗಳು, ಬಜಾಜ್ ಫಿನ್‌ಸರ್ವ್‌ನಲ್ಲಿ ನೋ ಕಾಸ್ಟ್ EMI ಆಫರ್ ಅನ್ನು ಸಹ ನೀಡಲಿದೆ ಎನ್ನಲಾಗಿದೆ. ಜೊತೆಗೆ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಟಿವಿಗಳಲ್ಲಿ 16,000 ರೂಪಾಯಿಗಳವರೆಗೆ ಎಕ್ಸ್‌ಚೇಂಜ್ ಆಫರ್ ಅನ್ನು ಸಹ ನೀಡುವುದಾಗಿ ಹೇಳಿದೆ.
YouTube: ಯೂಟ್ಯೂಬ್ನಲ್ಲಿ ವಿಡಿಯೋ ನೋಡುವಾಗ ಜಾಹೀರಾತು ಬಾರದಂತೆ ಮಾಡುವ ಟ್ರಿಕ್ ನಿಮಗೆ ಗೊತ್ತೇ?