Sign In

By signing in or creating an account, you agree with Associated Broadcasting Company's Terms & Conditions and Privacy Policy.

YouTube: ಯೂಟ್ಯೂಬ್​ನಲ್ಲಿ ವಿಡಿಯೋ ನೋಡುವಾಗ ಜಾಹೀರಾತು ಬಾರದಂತೆ ಮಾಡುವ ಟ್ರಿಕ್ ನಿಮಗೆ ಗೊತ್ತೇ?

How to Watch YouTube Without Ads: ವಿಡಿಯೋ ವೀಕ್ಷಣೆ ಮಾಡುವಾಗ ಜಾಹಿರಾತುಗಳು ಬಳಕೆದಾರರಿಗೆ ಕಿರಿ ಕಿರಿ ಎನಿಸುತ್ತದೆ. ಯೂಟ್ಯೂಬ್‌ನ ಆದಾಯದ ಪ್ರಮುಖ ಮೂಲ ಜಾಹೀರಾತುಗಳೇ. ಹಾಗಾದ್ರೆ ಯೂಟ್ಯೂಬ್‌ನಲ್ಲಿ ವಿಡಿಯೋ ವೀಕ್ಷಿಸುವಾಗ ಜಾಹೀರಾತು ಬಂದೇ ಇಲ್ಲ ಎಂದರೆ ಹೇಗೆ..?. ಇದಕ್ಕೆ ಇಲ್ಲಿದೆ ನೋಡಿ ಟ್ರಿಕ್.

YouTube: ಯೂಟ್ಯೂಬ್​ನಲ್ಲಿ ವಿಡಿಯೋ ನೋಡುವಾಗ ಜಾಹೀರಾತು ಬಾರದಂತೆ ಮಾಡುವ ಟ್ರಿಕ್ ನಿಮಗೆ ಗೊತ್ತೇ?
YouTube
Follow us
TV9 Web
| Updated By: Vinay Bhat

Updated on: Jan 15, 2022 | 3:41 PM

ಸಾಮಾನ್ಯವಾಗಿ ಯೂಟ್ಯೂಬ್‌ನಲ್ಲಿ (YouTube) ವಿಡಿಯೋಗಳನ್ನು ನೋಡುವುದು ಒಂದು ರೀತಿಯಲ್ಲಿ ಟಿವಿಯನ್ನು ನೋಡಿದ ಹಾಗೆ. ಏಕೆಂದರೆ ಅಷ್ಟೊಂದು ಜಾಹೀರಾತುಗಳು ಒಂದರ ಹಿಂದೆ ಒಂದರಂತೆ ಬರುತ್ತಾ ಇರುತ್ತವೆ. ವಿಡಿಯೋವನ್ನು ಸತತವಾಗಿ ನೋಡಲು ಸಾಧ್ಯವೇ ಇಲ್ಲ. ಏನಾದರು ಅಗತ್ಯವಾದ ಅಥವಾ ಕುತೂಹಲಕಾರಿ ವಿಡಿಯೋವನ್ನು ನೋಡುತ್ತಿರುವಾಗ ಜಾಹೀರಾತು (Advertisement) ಬಂದರೆ ಮೂಡ್‌ ಆಫ್‌ ಆಗುವುದು ಖಂಡಿತ. ವಿಡಿಯೋ ವೀಕ್ಷಣೆ ಮಾಡುವಾಗ ಈ ರೀತಿ ಜಾಹಿರಾತುಗಳು ಬಳಕೆದಾರರಿಗೆ ಕಿರಿ ಕಿರಿ ಎನಿಸುತ್ತದೆ. ಇಷ್ಟೇಲ್ಲಾ ಇರುವ ಯೂಟ್ಯೂಬ್‌ನ ಆದಾಯದ ಪ್ರಮುಖ ಮೂಲ ಜಾಹೀರಾತುಗಳೇ. ಹಾಗಾದ್ರೆ ಯೂಟ್ಯೂಬ್‌ನಲ್ಲಿ ವಿಡಿಯೋ ವೀಕ್ಷಿಸುವಾಗ ಜಾಹೀರಾತು ಬಂದೇ ಇಲ್ಲ ಎಂದರೆ ಹೇಗೆ..?. ಇದಕ್ಕೆ ಇಲ್ಲಿದೆ ನೋಡಿ ಟ್ರಿಕ್.

ಆ್ಯಡ್ ಬ್ಲಾಕರ್ ಉಪಯೋಗಿಸಿ:

ಹೌದು, ಬ್ರೌಸರ್‌ನಲ್ಲಿ ಯೂಟ್ಯೂಬ್‌ ವಿಡಿಯೋಗಳನ್ನು ವೀಕ್ಷಿಸುತ್ತೀರಿ ಎಂದಾದರೆ ಗುಣಮಟ್ಟದ ಜಾಹೀರಾತು ಬ್ಲಾಕರ್‌ಗಳನ್ನು ಉಪಯೋಗಿಸಿದರೆ ನಿಮಗೆ ಆ್ಯಡ್‌ಫ್ರೀ ಯೂಟ್ಯೂಬ್‌ ವೀಕ್ಷಣೆ ಸಿಗುತ್ತದೆ. ಆಡ್‌ಬ್ಲಾಕ್‌, ಸ್ಟಾಪ್‌ ಆಡ್‌ಗಳಂತಹ ಆಡ್‌ ಬ್ಲಾಕರ್‌ಗಳು ಬ್ರೌಸರ್‌ ಎಕ್ಸಟೆನ್ಷನ್‌ ಆಗಿ ದೊರೆಯುತ್ತವೆ. ಇನ್‌ಸ್ಟಾಲ್‌ ಮಾಡಿಕೊಂಡು ನೀವು ಜಾಹೀರಾತು ಮುಕ್ತ ಯೂಟ್ಯೂಬ್‌ ಆನಂದಿಸಬಹುದು. ಆ್ಯಡ್‌ಬ್ಲಾಕರ್‌ಗಳಿಗಿಂತ ಬೇರೆ ಆಯ್ಕೆಗಳೂ ಕೂಡ ಇವೆ. ಆಡ್‌ಬ್ಲಾಕರ್‌ ಬಳಸಲು ಆಗಿಲ್ಲವೆಂದರೆ, ಯೂಟ್ಯೂಬ್‌ ವಿಡಿಯೋದ URL ಮತ್ತು ಪದಗಳ ಮೂಲಕ AdlessTube, ViewPure ಮತ್ತು Voilaದಂತಹ ಸರ್ಚ್‌ ಇಂಜಿನ್‌ಗಳಲ್ಲಿ ನೀವು ಜಾಹೀರಾತಯ ಮುಕ್ತ ವಿಡಿಯೋಗಳನ್ನು ನೋಡಬಹುದು.

ಯೂಟ್ಯೂಬ್ ಪರ್ಯಾಯ ಆ್ಯಪ್​ಗಳನ್ನು ಬಳಸಿ:

ಜಾಹೀರಾತು ಬೇಡ ಎಂದರೆ ಯೂಟ್ಯೂಬ್‌ನಂತೆಯೇ ಇರುವ ಪರ್ಯಾಯ ಆ್ಯಪ್‌ಗಳನ್ನು ಬಳಸಬಹುದು. OGYoutube, DNS66, NewPipe, YT Vanced, Ad Clearನಂತಹ ಆ್ಯಪ್‌ಗಳು ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದ್ದು, ಅವುಗಳನ್ನು ಇನ್‌ಸ್ಟಾಲ್‌ ಮಾಡಿಕೊಳ್ಳುವ ಮೂಲಕ ನೀವು ಜಾಹೀರಾತು ಮುಕ್ತ ಯೂಟ್ಯೂಬ್‌ ವಿಡಿಯೋಗಳನ್ನು ನೋಡಬಹುದು. ಬೇಕಾದಲ್ಲಿ ಡೌನ್‌ಲೋಡ್‌ ಮಾಡಿಕೊಂಡು ವೀಕ್ಷಿಸಬಹುದು. ಸ್ವತಃ ಯೂಟ್ಯೂಬ್ ಡೌನ್ಲೋಡ್ ಆಯ್ಕೆ ನೀಡಿದ್ದು, ನಿಮ್ಮ ಬಳಿ ಇಂಟರ್ನೆಟ್ ಕನೆಕ್ಷನ್ ಇಲ್ಲ ಎಂದಾದರು ಡೌನ್ಲೋಡ್ ಮಾಡಿದ್ದರೆ ಆರಾಮವಾಗಿ ಯಾವುದೇ ಜಾಹೀರಾತು ಇಲ್ಲದೆ ವೀಕ್ಷಿಸಬಹುದು.

ಯಾವುದೇ ಜಾಹೀರಾತುಗಳಿಲ್ಲದೆ ಯೂಟ್ಯೂಬ್ ವಿಡಿಯೋ ವೀಕ್ಷಣೆ ಮಾಡಲು ಬಳಕೆದಾರರು ಯೂಟ್ಯೂಬ್ ಪ್ರೀಮಿಯಂ (YouTube Premium) ಖರೀದಿಸಬಹುದು. ಯೂಟ್ಯೂಬ್ ಪ್ರೀಮಿಯಂ ಚಂದಾದಾರಿಕೆಯ ತಿಂಗಳ ಶುಲ್ಕ 129 ರೂ. ಆಗಿದೆ. ಈ ಚಂದಾದಾರಿಕೆಯು ಬಳಕೆದಾರರಿಗೆ ಯೂಟ್ಯೂಬ್ ನಲ್ಲಿ ಜಾಹೀರಾತು ಮುಕ್ತ ವಿಡಿಯೋ ಮತ್ತು ಮ್ಯೂಸಿಕ್ ಆಯ್ಕೆ ನೀಡುತ್ತದೆ. ಹಾಗೆಯೇ ಈ ಚಂದಾದಾರಿಕೆಯಲ್ಲಿ ಸ್ಕ್ರೀನ್ ಲಾಕ್ ಆಗಿರುವಾಗಲೂ ಬಳಕೆದಾರರು ವಿಡಿಯೋಗಳನ್ನು ವೀಕ್ಷಿಸಲು ಸಾಧ್ಯವಾಗುತ್ತದೆ.

ಭಾರತದಲ್ಲಿ ಧೂಳೆಬ್ಬಿಸಲು ಬರುತ್ತಿದೆ ಬಜೆಟ್ ಬೆಲೆಯ ರಿಯಲ್‌ ಮಿ ನಾರ್ಜೊ 50A ಪ್ರೈಮ್‌ ಫೋನ್

Vivo Y72 5G: 2022ರ ಮೊದಲ ಸ್ಮಾರ್ಟ್‌ಫೋನ್ ಬೆಲೆ ಕಡಿತ: ವಿವೋ Y72 5G ಫೋನ್ ಈಗ ಅತಿ ಕಡಿಮೆ ಬೆಲೆಗೆ ಲಭ್ಯ

ಜಾತಿಗಣತಿ ವರದಿ ಜಾರಿ ವಿಚಾರ: ಸ್ವಪಕ್ಷದ ವಿರುದ್ಧ ಶಾಮನೂರು ವಾಗ್ದಾಳಿ
ಜಾತಿಗಣತಿ ವರದಿ ಜಾರಿ ವಿಚಾರ: ಸ್ವಪಕ್ಷದ ವಿರುದ್ಧ ಶಾಮನೂರು ವಾಗ್ದಾಳಿ
28 ಸೆಕೆಂಡಲ್ಲಿ 20 ಹೊಡೆತ; ಉತ್ತರಾಖಂಡದ ಮೆಡಿಕಲ್ ಶಾಪ್ ಮಾಲೀಕರ ಮೇಲೆ ಹಲ್ಲೆ
28 ಸೆಕೆಂಡಲ್ಲಿ 20 ಹೊಡೆತ; ಉತ್ತರಾಖಂಡದ ಮೆಡಿಕಲ್ ಶಾಪ್ ಮಾಲೀಕರ ಮೇಲೆ ಹಲ್ಲೆ
ಕಾಮಿಡಿ ಶೋಗಳಲ್ಲಿ ಅಡಲ್ಟ್ ಭಾಷೆ ಯಾಕೆ? ಸಮರ್ಥನೆ ನೀಡಿದ ನಿರೂಪ್, ಶ್ರವಣ್
ಕಾಮಿಡಿ ಶೋಗಳಲ್ಲಿ ಅಡಲ್ಟ್ ಭಾಷೆ ಯಾಕೆ? ಸಮರ್ಥನೆ ನೀಡಿದ ನಿರೂಪ್, ಶ್ರವಣ್
ಲೋಕಾಯುಕ್ತ ಬಿ ರಿಪೋರ್ಟ್ ಸಲ್ಲಿಕೆ ಪ್ರಶ್ನಿಸಿ ದೂರುದಾರರಿಂದ ತಕರಾರು ಅರ್ಜಿ
ಲೋಕಾಯುಕ್ತ ಬಿ ರಿಪೋರ್ಟ್ ಸಲ್ಲಿಕೆ ಪ್ರಶ್ನಿಸಿ ದೂರುದಾರರಿಂದ ತಕರಾರು ಅರ್ಜಿ
ಗೃಹಲಕ್ಷ್ಮಿ ಹಣದಿಂದ ತೋಟದಲ್ಲಿ ಬೋರ್​ವೆಲ್ ಕೊರೆಸಿದ ದಂಪತಿ
ಗೃಹಲಕ್ಷ್ಮಿ ಹಣದಿಂದ ತೋಟದಲ್ಲಿ ಬೋರ್​ವೆಲ್ ಕೊರೆಸಿದ ದಂಪತಿ
ಸಿದ್ದರಾಮಯ್ಯ ದಲಿತರ ಕೈ ಬಿಟ್ಟು ಮುಸಲ್ಮಾನರ ಕೈ ಹಿಡಿದಿದ್ದಾರೆ: ಅಶೋಕ
ಸಿದ್ದರಾಮಯ್ಯ ದಲಿತರ ಕೈ ಬಿಟ್ಟು ಮುಸಲ್ಮಾನರ ಕೈ ಹಿಡಿದಿದ್ದಾರೆ: ಅಶೋಕ
ಸ್ಟ್ಯಾಂಡಪ್ ಕಾಮಿಡಿಯನ್ ನಿರೂಪ್ ಮೋಹನ್ ಬಗ್ಗೆ ನಿಮಗೆಷ್ಟು ಗೊತ್ತು?
ಸ್ಟ್ಯಾಂಡಪ್ ಕಾಮಿಡಿಯನ್ ನಿರೂಪ್ ಮೋಹನ್ ಬಗ್ಗೆ ನಿಮಗೆಷ್ಟು ಗೊತ್ತು?
ಮತೀಯ ಭಾವನೆಗಳನ್ನು ಯಾರೂ ಕೆರಳಿಸಬಾರದು: ಕೋಲಾರ ಮಸೀದಿಯೊಂದರ ಮೌಲ್ವಿ
ಮತೀಯ ಭಾವನೆಗಳನ್ನು ಯಾರೂ ಕೆರಳಿಸಬಾರದು: ಕೋಲಾರ ಮಸೀದಿಯೊಂದರ ಮೌಲ್ವಿ
ವರದಿ ಮೇಲಿನ ಚರ್ಚೆಗೆ ಸಿಎಂ ವಿಶೇಷ ಅಧಿವೇಶನ ಕರೆಯಲು ಮನವಿ: ಜಾರಕಿಹೊಳಿ
ವರದಿ ಮೇಲಿನ ಚರ್ಚೆಗೆ ಸಿಎಂ ವಿಶೇಷ ಅಧಿವೇಶನ ಕರೆಯಲು ಮನವಿ: ಜಾರಕಿಹೊಳಿ
ಮಧ್ಯಂತರ ವರದಿಯನ್ನು ಅಧಿಕಾರಿಗಳು ಅಂತಿಮ ವರದಿ ಅಂದಿದ್ದಾರೆ: ಸ್ನೇಹಮಯಿ
ಮಧ್ಯಂತರ ವರದಿಯನ್ನು ಅಧಿಕಾರಿಗಳು ಅಂತಿಮ ವರದಿ ಅಂದಿದ್ದಾರೆ: ಸ್ನೇಹಮಯಿ