AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WhatsApp: ವಾಟ್ಸ್​ಆ್ಯಪ್​ ಪರಿಚಯಿಸಲಿರುವ ಹೊಸ ಫೀಚರ್​ ಬಗ್ಗೆ ಫಿದಾ ಆದ ಟೆಕ್ ಪ್ರಿಯರು

WhatsApp new feature: ವಾಟ್ಸ್​ಆ್ಯಪ್​ ನೂತನ ಅಪ್‌ಡೇಟ್‌ನಲ್ಲಿ ಬಳಕೆದಾರರು ಚಾಟ್‌ ವಿಂಡೋ ಅನ್ನು ಕ್ಲೋಸ್‌ ಮಾಡಿದ (ಚಾಟ್‌ ವಿಂಡೋದಿಂದ ಹೊರಬಂದ) ನಂತರವು, ವಾಯಿಸ್‌ ನೋಟ್‌ ಕೇಳಲು ಅನುಮತಿಸುತ್ತದೆ ಎಂದು ಹೇಳಲಾಗಿದೆ.

WhatsApp: ವಾಟ್ಸ್​ಆ್ಯಪ್​ ಪರಿಚಯಿಸಲಿರುವ ಹೊಸ ಫೀಚರ್​ ಬಗ್ಗೆ ಫಿದಾ ಆದ ಟೆಕ್ ಪ್ರಿಯರು
WhatsApp
TV9 Web
| Edited By: |

Updated on: Jan 16, 2022 | 3:31 PM

Share

ತನ್ನ ಬಳಕೆದಾರರಿಗೆ ಸದಾ ಒಂದಲ್ಲಾ ಒಂದು ಹೊಸ ಹೊಸ ಆಯ್ಕೆಗಳನ್ನು ಪರಿಚಯಿಸುತ್ತಿರುವ ಪ್ರಸಿದ್ಧ ಫೇಸ್​ಬುಕ್ (Facebook) ಒಡೆತನದ ವಾಟ್ಸ್​ಆ್ಯಪ್ (WhatsApp) ಮೆಸೇಜಿಂಗ್ ಅಪ್ಲಿಕೇಶನ್​ ಮುಂದಿನ ದಿನಗಳಲ್ಲಿ ಸಾಲು ಸಾಲು ಅಪ್ಡೇಟ್​ಗಳನ್ನು ನೀಡಲು ಸಜ್ಜಾಗಿದೆ. ಈಗಾಗಲೇ ವಾಟ್ಸ್​ಆ್ಯಪ್​ನಲ್ಲೇ ಫೋಟೋ ಎಡಿಟಿಂಗ್, ಲಾಗೌಟ್ ಫೀಚರ್, ಸ್ಟೇಟಸ್​ನಂತೆ ಪ್ರೊಫೈಲ್ ಪೋಟೋ ಕೂಡ ಕೆಲವರಿಗೆ ಮಾತ್ರ ಕಾಣಿಸುವಂತಹ ಆಯ್ಕೆ, ವಾಯ್ಸ್ ಮೆಸೇಜ್ ಕಳುಹಿಸುವ ಮುನ್ನ ಕೇಳುವ ಆಯ್ಕೆ  ಹೀಗೆ ಅನೇಕ ಹೊಸ ಹೊಸ ಫೀಚರ್​ಗಳು ಪರೀಕ್ಷಾ ಹಂತದಲ್ಲಿದೆ. ಹೀಗಿರುವಾಗ ವಾಟ್ಸ್​ಆ್ಯಪ್ ತನ್ನ ಗ್ರಾಹಕರಿಗೆ ಮತ್ತೊಂದು ಹೊಸ ಆಯ್ಕೆ ನೀಡಲು ಮುಂದಾಗಿದೆ. ಹೌದು, ವಾಟ್ಸ್​ಆ್ಯಪ್​ ಅಪ್ಲಿಕೇಶನ್ ಈಗ ಆಸಕ್ತಿದಾಯಕ ನವೀಕರಣಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಶೀಘ್ರದಲ್ಲೇ ವಾಯಿಸ್‌ ನೋಟ್‌ (voice notes) ಆಯ್ಕೆಯಲ್ಲಿ ಬದಲಾವಣೆ ತರಲಿದೆ.

ವಾಟ್ಸ್​ಆ್ಯಪ್​ ನೂತನ ಅಪ್‌ಡೇಟ್‌ನಲ್ಲಿ ಬಳಕೆದಾರರು ಚಾಟ್‌ ವಿಂಡೋ ಅನ್ನು ಕ್ಲೋಸ್‌ ಮಾಡಿದ (ಚಾಟ್‌ ವಿಂಡೋದಿಂದ ಹೊರಬಂದ) ನಂತರವು, ವಾಯಿಸ್‌ ನೋಟ್‌ ಕೇಳಲು ಅನುಮತಿಸುತ್ತದೆ ಎಂದು ಹೇಳಲಾಗಿದೆ. ವಾಟ್ಸ್​ಆ್ಯಪ್​ ಫೀಚರ್ಸ್‌ಗಳ ಟ್ರ್ಯಾಕರ್ Wabetanino ಪ್ರಕಾರ, ಬಳಕೆದಾರರು ಬೇರೆ ಚಾಟ್‌ಗೆ ಬದಲಾಯಿಸಿದಾಗ ವಾಯಿಸ್‌ ನೋಟ್ ಗಳನ್ನು ಕೇಳಲು ಅನುಮತಿಸುವ ಈ ಹೊಸ ಫೀಚರ್ ಅನ್ನು ಮೂರು ತಿಂಗಳ ಹಿಂದೆ ಐಒಎಸ್ ಬೀಟಾದಲ್ಲಿ ಗುರುತಿಸಲಾಗಿದೆ ಎನ್ನಲಾಗಿದೆ.

ಈ ಫೀಚರ್ ಆಂಡ್ರಾಯ್ಡ್ ನವೀಕರಣಗಳಲ್ಲಿಯೂ ಕಾಣಿಸಿಕೊಂಡಿತ್ತು. ಈಗ ಮತ್ತೊಮ್ಮೆ ಫೀಚರ್ ಗುರುತಿಸಿದೆ. ಹಾಗೆಯೇ ಸ್ಕ್ರೀನ್‌ಶಾರ್ಟ್ ಸಹ ಹಂಚಿಕೊಂಡಿದೆ. Wabetainfo ಹಂಚಿಕೊಂಡ ಸ್ಕ್ರೀನ್‌ಶಾಟ್‌ನಲ್ಲಿ, ಬಳಕೆದಾರರು ವಾಯಿಸ್‌ ನೋಟ್ ಕೇಳಲು ಪ್ರಾರಂಭಿಸಿದಾಗ, ಚಾಟ್‌ನಿಂದ ಹೊರಬಂದು ಇನ್ನೊಂದು ಚಾಟ್ ವಿಂಡೋವನ್ನು ತೆರೆದಾಗಲೂ, ವಾಯಿಸ್‌ ನೋಟ್ ಕೇಳಬಹುದಾಗಿದೆ. ಸ್ಕ್ರೀನ್‌ನ ಮೇಲ್ಭಾಗದಲ್ಲಿ ವಾಯಿಸ್‌ ನೋಟ್ ನಿಲ್ಲಿಸಲು pause ಬಟನ್ ಆಯ್ಕೆ ನೀಡಲಿದೆ. ಈ ಹೊಸ ಫೀಚರ್ ಪ್ರಸ್ತುತ ಅಭಿವೃದ್ಧಿ ಹಂತದಲ್ಲಿದೆ ಮತ್ತು ಅದರ ಬಗ್ಗೆ ವಾಟ್ಸ್​ಆ್ಯಪ್​ನಿಂದ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಇನ್ನು ವಾಟ್ಸ್​ಆ್ಯಪ್​ನಲ್ಲಿ ಈಗೀಗ ವಾಯ್ಸ್ ನೋಟ್ ಕಳುಹಿಸುವವರ ಸಂಖ್ಯೆ ಹೆಚ್ಚಾಗುತ್ತಿದೆಯಂತೆ. ಇದನ್ನೇ ಗಮನದಲ್ಲಿಟ್ಟುಕೊಂಡು ವಾಟ್ಸ್​ಆ್ಯಪ್ ವಾಯ್ಸ್ ಮೆಸೇಜ್ ಹೇಳಿ ಕಳುಹಿಸುವ ಮುನ್ನ ಕೇಳಲು ಅವಕಾಶ ಮಾಡಿಕೊಡುವ ಆಯ್ಕೆಯನ್ನು ಕೂಡ ಅಭಿವೃದ್ದಿ ಪಡಿಸುತ್ತಿದೆ. ಸದ್ಯದಲ್ಲೇ ಈ ಫೀಚರ್ ಬಳಕೆದಾರರಿಗೆ ಸಿಗಲಿದೆಯಂತೆ. ಇದರ ಜೊತೆಗೆ ನೀವು ವಾಯ್ಸ್ ಮೆಸೇಜ್ ಕಳುಹಿಸುವಾಗ ಪಾಜ಼್ (Pause) ಮಾಡುವ ಆಯ್ಕೆ ನೀಡುವ ಫೀಚರ್ ಬಗ್ಗೆಯೂ ವಾಟ್ಸ್​ಆ್ಯಪ್ ಕಾರ್ಯನಿರ್ವಹಿಸುತ್ತಿದೆ. ಅಂದರೆ ನೀವು ವಾಯ್ಸ್ ರೆಕಾರ್ಡಿಂಗ್ ಬಟನ್ ಪ್ರೆಸ್ ಮಾಡಿ ಅರ್ಧದಲ್ಲಿ ವಿರಾಮ ಪಡೆದು ನಂತರ ಅದನ್ನು ಮುಂದುವರೆಸಿ ಕಳುಹಿಸಬಹುದು. ಸದ್ಯ ಈ ಹೊಸ ಆಯ್ಕೆಗಳೆಲ್ಲ ಪರೀಕ್ಷಾ ಹಂತದಲ್ಲಿದ್ದು, ಸದ್ಯದಲ್ಲೇ ಆಂಡ್ರಾಯ್ಡ್ ಮತ್ತು ಐಒಸ್ ಬಳಕೆದಾರರಿಗೆ ಲಭ್ಯವಾಗಲಿದೆಯಂತೆ.

Tecno Pop 5 LTE: ಅತಿ ಕಡಿಮೆ ಬೆಲೆಯ ಟೆಕ್ನೋ ಪಾಪ್‌ 5 LTE ಫೋನ್ ಮೊದಲ ಸೇಲ್: ಇದರ ಬೆಲೆ ಕೇವಲ 6,299 ರೂ.

Amazon Great Republic Day Sale: ನಾಳೆಯಿಂದ ಅಮೇಜಾನ್​ನಲ್ಲಿ ಶುರುವಾಗಲಿದೆ ಹೊಸ ಮೇಳ: ಈ ಆಫರ್ ಮಿಸ್ ಮಾಡ್ಲೇ ಬೇಡಿ

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ