ಮತದಾರರ ಬಳಿ ಇರಲೇಬೇಕಾದ ಕೆಲವು ಆಪ್ಗಳಿವು; ಮಾಹಿತಿ ಪಡೆದುಕೊಳ್ಳಿ
ಪ್ರಾದೇಶಿಕ ಭಾಷೆಯಲ್ಲೇ ಸೇವೆ ನೀಡುವ ಆಪ್ ಆಗಿ ಸುವಿಧಾ ಕ್ಯಾಂಡಿಡೇಟ್ ಎಂಬ ಅಪ್ಲಿಕೇಷನ್ ಖ್ಯಾತಿ ಪಡೆದಿದೆ. ನೋ ಯುವರ್ ಕ್ಯಾಂಡಿಡೇಟ್ ಕೂಡ ಜನರಿಗೆ ಮಾಹಿತಿ ನೀಡುತ್ತದೆ.
ಈಗಾಗಲೇ ಉತ್ತರ ಪ್ರದೇಶ, ಜಾರ್ಖಂಡ್, ಪಂಜಾಬ್, ಗೋವಾ, ಮಣಿಪುರ ಐದು ರಾಜ್ಯಗಳ ಚುನಾವಣಾ ದಿನಾಂಕ ಘೋಷಣೆ ಮಾಡಲಾಗಿದೆ. ದೇಶದಲ್ಲಿ ಚುನಾವಣೆಯ ಕಾವು ಮತ್ತೆ ಏರುತ್ತಿದೆ. ಮತಬೇಟೆಗೆ ರಾಜಕೀಯ ನಾಯಕರ ಕಸರತ್ತು ಕಂಡುಬರುತ್ತಿದೆ. ಈ ವೇಳೆ ಜವಾಬ್ದಾರಿಯುತ ಮತದಾರರಾದ ನಾಗರಿಕರ ಬಳಿ ಕೆಲವೊಂದು ಮಾಹಿತಿ ಇರಲೇಬೇಕಾದ ಮತ್ತು ಅದಕ್ಕಾಗಿ ಕೆಲವು ಅಪ್ಲಿಕೇಷನ್ ಇಟ್ಟುಕೊಳ್ಳಬಹುದಾದ ಆಯ್ಕೆ ಇದೆ. ಆ ಬಗ್ಗೆ ವಿವರ ಈ ವಿಡಿಯೋದಲ್ಲಿ ಇದೆ.
ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಯ ಮಾಹಿತಿ, ಸಂಪೂರ್ಣ ಬಯೋಡೇಟಾ ಈ ಆಪ್ಗಳ ಮೂಲಕ ಸಾರ್ವಜನಿಕರಿಗೆ ಲಭಿಸಲಿದೆ. ಅಭ್ಯರ್ಥಿಯ ಕ್ರೈಂ ರೆಕಾರ್ಡ್ನಿಂದ ಆಸ್ತಿ ವಿವರದವರೆಗೆ ಎಲ್ಲವೂ ಇಲ್ಲಿರಲಿದೆ. ಆಂಡ್ರಾಯ್ಡ್ ಹಾಗೂ ಐಒಎಸ್ ಸಿಸ್ಟಮ್ಗಳಲ್ಲಿ ಈ ಅಪ್ಲಿಕೇಷನ್ ನೋಡಬಹುದಾಗಿದೆ. ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಎಂದು ಕೂಡ ನೋಡಬಹುದು.
ಪ್ರಾದೇಶಿಕ ಭಾಷೆಯಲ್ಲೇ ಸೇವೆ ನೀಡುವ ಆಪ್ ಆಗಿ ಸುವಿಧಾ ಕ್ಯಾಂಡಿಡೇಟ್ ಎಂಬ ಅಪ್ಲಿಕೇಷನ್ ಖ್ಯಾತಿ ಪಡೆದಿದೆ. ನೋ ಯುವರ್ ಕ್ಯಾಂಡಿಡೇಟ್ ಕೂಡ ಜನರಿಗೆ ಮಾಹಿತಿ ನೀಡುತ್ತದೆ.
ಇದನ್ನೂ ಓದಿ: ಗೋವಾ ವಿಧಾನಸಭೆ ಚುನಾವಣೆ; ಮೈತ್ರಿ ಮಾಡಿಕೊಂಡು ಸ್ಪರ್ಧೆಗೆ ಇಳಿಯಲಿವೆ ಶಿವಸೇನೆ-ಎನ್ಸಿಪಿ
ಇದನ್ನೂ ಓದಿ: ಗುರು ರವಿದಾಸ ಜಯಂತಿ; ಚುನಾವಣೆ ಮುಂದೂಡುವಂತೆ ಚುನಾವಣಾ ಆಯೋಗಕ್ಕೆ ಪತ್ರ ಬರೆದ ಬಿಜೆಪಿ