Vivo Y78+ 5G: ಮಾರುಕಟ್ಟೆಗೆ ಎಂಟ್ರಿಕೊಟ್ಟ ವಿವೊ Y78+ 5G ಸ್ಮಾರ್ಟ್‌ಫೋನ್‌: ಏನು ವಿಶೇಷತೆ?, ಬೆಲೆ ಎಷ್ಟು?

ವಿವೋ ತನ್ನ ವೈ ಸರಣಿ ಅಡಿಯಲ್ಲಿ ಹೊಸ ವಿವೋ ವೈ78+ 5ಜಿ (Vivo Y78+ 5G) ಫೋನನ್ನು ಲಾಂಚ್ ಮಾಡಿದೆ. ಇದೊಂದು ಮಧ್ಯಮ ಬೆಲೆಯ ಫೋನಾಗಿದ್ದು ಆಕರ್ಷಕ ಕ್ಯಾಮೆರಾ, ಬಲಿಷ್ಠವಾದ ಬ್ಯಾಟರಿ ಸೇರಿದಂತೆ ಅತ್ಯುತ್ತಮ ಫೀಚರ್​ಗಳನ್ನು ಒಳಗೊಂಡಿದೆ.

Vivo Y78+ 5G: ಮಾರುಕಟ್ಟೆಗೆ ಎಂಟ್ರಿಕೊಟ್ಟ ವಿವೊ Y78+ 5G ಸ್ಮಾರ್ಟ್‌ಫೋನ್‌: ಏನು ವಿಶೇಷತೆ?, ಬೆಲೆ ಎಷ್ಟು?
Vivo Y78 Plus

Updated on: Apr 26, 2023 | 6:55 AM

ಜಾಗತಿಕ ಮಾರುಕಟ್ಟೆಯಲ್ಲಿ ಇಂದು ಒಂದರ ಹಿಂದೆ ಒಂದರಂತೆ ಹೊಸ ಹೊಸ ಸ್ಮಾರ್ಟ್​ಫೋನುಗಳು (Smartphone) ಬಿಡುಗಡೆ ಆಗುತ್ತಿದೆ. ಅತ್ಯುತ್ತಮ ಕ್ಯಾಮೆರಾ (Camera), ಬ್ಯಾಟರಿ, ಪ್ರೊಸೆಸರ್ ಇರುವ ಕಡಿಮೆ ಬೆಲೆಯ ಮೊಬೈಲ್​ಗಳು ಭರ್ಜರಿ ಸೇಲ್ ಆಗುತ್ತಿದೆ. ಇದೇ ಸಾಲಿನಲ್ಲಿ ಪ್ರಸಿದ್ಧ ವಿವೋ ಸಂಸ್ಥೆ ಹೊಸ ಮೊಬೈಲ್ ಒಂದನ್ನು ಅನಾವರಣ ಮಾಡಿದೆ. ಕೆಲವು ತಿಂಗಳ ತನ್ನ ವೈ ಸರಣಿಯಲ್ಲಿ ವಿವೋ Y100 ಎಂಬ ಬಣ್ಣ ಬದಲಾಯಿಸುವ ಫೋನ್ ಪರಿಚಯಿಸಿದ್ದ ಕಂಪನಿ ಇದೀಗ ಇದೇ ವೈ ಸರಣಿ ಅಡಿಯಲ್ಲಿ ಮತ್ತೊಂದು ಹೊಸ ವಿವೋ ವೈ78+ 5ಜಿ (Vivo Y78+ 5G) ಫೋನನ್ನು ಲಾಂಚ್ ಮಾಡಿದೆ. ಇದೊಂದು ಮಧ್ಯಮ ಬೆಲೆಯ ಫೋನಾಗಿದ್ದು ಆಕರ್ಷಕ ಕ್ಯಾಮೆರಾ, ಬಲಿಷ್ಠವಾದ ಬ್ಯಾಟರಿ ಸೇರಿದಂತೆ ಅತ್ಯುತ್ತಮ ಫೀಚರ್​ಗಳನ್ನು ಒಳಗೊಂಡಿದೆ. ಈ ಫೋನಿನ ಬೆಲೆ, ಸಂಪೂರ್ಣ ಫೀಚರ್ಸ್​ ಬಗ್ಗೆ ಮಾಹಿತಿ ಇಲ್ಲಿದೆ.

ಬೆಲೆ ಎಷ್ಟು?:

ವಿವೊ Y78+ ಸ್ಮಾರ್ಟ್‌ಫೋನ್‌ ಸದ್ಯಕ್ಕೆ ವಿದೇಶದಲ್ಲಿ ಮೂರು ಮಾದರಿಯ ಆಯ್ಕೆಯಲ್ಲಿ ಅನಾವರಣಗೊಂಡಿದೆ. ಇದರ 8GB RAM + 128GB ವೇರಿಯಂಟ್‌ ಬೆಲೆಯು CNY 1,599, ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜು 19,999 ರೂ. ಇರಬಹುದು. 8GB RAM + 256GB ಸ್ಟೋರೇಜ್ ಮಾದರಿಗೆ CNY 1,799 (ಭಾರತದಲ್ಲಿ 21,300 ರೂ.) ಹಾಗೂ 12GB RAM + 256GB ವೇರಿಯಂಟ್​ಗೆ CNY 1,999 (23,700 ರೂ.). ಸದ್ಯಕ್ಕೆ ಚೀನಾದಲ್ಲಿ ಅನಾವರಣಗೊಂಡಿರುವ ಈ ಫೋನ್ ಮುಂದಿನ ದಿನಗಳಲ್ಲಿ ಭಾರತಕ್ಕೂ ಬರಲಿದೆ ಎಂದು ಕಂಪನಿ ಹೇಳಿದೆ.

ಇದನ್ನೂ ಓದಿ
Google Pixel 6a: ಕೇವಲ 749 ರೂ. ಗೆ ಗೂಗಲ್ ಪಿಕ್ಸೆಲ್ 6a ಸ್ಮಾರ್ಟ್​ಫೋನ್ ಖರೀದಿಸಿ: ಈ ಬಂಪರ್ ಆಫರ್ ಮಿಸ್ ಮಾಡ್ಬೇಡಿ
Tech Tips: ನಿಮ್ಮ ಆಧಾರ್ ಕಾರ್ಡ್ ಮೂಲಕ ಯಾರಾದರು ಸಿಮ್ ಖರೀದಿಸಿದ್ದಾರ?: ಹೇಗೆ ಕಂಡುಹಿಡಿಯುವುದು?
Tech Tips: ಇನ್​​ಸ್ಟಾಗ್ರಾಮ್ ಬಯೋದಲ್ಲಿ ಐದು ಲಿಂಕ್​ಗಳನ್ನು ಸೇರಿಸುವ ಟ್ರಿಕ್ ನಿಮಗೆ ಗೊತ್ತೇ?: ಇಲ್ಲಿದೆ ನೋಡಿ
Tech Tips: ವಾಟ್ಸ್​ಆ್ಯಪ್​ ಅನ್ನು​ ಕನ್ನಡ ಭಾಷೆಯಲ್ಲೂ ಬಳಸಿ: ಹೇಗೆ ಗೊತ್ತೇ?

OnePlus Nord 3: ರೋಚಕತೆ ಸೃಷ್ಟಿಸಿದ ಒನ್​ಪ್ಲಸ್ ನಾರ್ಡ್ 3 ಸ್ಮಾರ್ಟ್​ಫೋನ್: ಫೀಚರ್ಸ್ ಏನಿದೆ ನೋಡಿ

ಫೀಚರ್ಸ್ ಏನಿದೆ?:

ಇನ್ನು ಈ ಫೋನಿನ ವಿಶೇಷತೆ ಬಗ್ಗೆ ಗಮನಿಸುವುದಾದರೆ, ವಿವೊ Y78+ ಸ್ಮಾರ್ಟ್‌ಫೋನ್‌ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.78 ಇಂಚಿನ ಅಮೊಲೊಡ್ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 120Hz ರೀಫ್ರೇಶ್ ರೇಟ್​ನಿಂದ ಕೂಡಿದ್ದು ಆಕ್ಟಾ-ಕೋರ್ ಸ್ನಪ್​ಡ್ರಾಗನ್ 695 ಪ್ರೊಸೆಸರ್ ಅಳವಡಿಸಲಾಗಿದೆ. ಆಂಡ್ರಾಯ್ಡ್ 13 ಆಧಾರಿತ ಫನ್​ಟಚ್ 3 OS ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

ವಿವೋ Y78+ 5G ಸ್ಮಾರ್ಟ್‌ಫೋನ್‌ ಡ್ಯುಯಲ್‌ ಕ್ಯಾಮೆರಾ ರಚನೆಯನ್ನು ಒಳಗೊಂಡಿದೆ. ಆ ಪೈಕಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್​ನ ಪ್ರೈಮರಿ ಕ್ಯಾಮೆರಾ ಅಳವಡಿಸಲಾಗಿದೆ. ಎರಡನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಇದಲ್ಲದೆ 8 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ. ಇನ್ನು ಕ್ಯಾಮೆರಾ ಫೀಚರ್ಸ್​ನಲ್ಲಿ ನೈಟ್ ಮೋಡ್, ಪೋರ್ಟ್ರೇಟ್ ಲೈಟ್ ಎಫೆಕ್ಟ್, ವಿಡಿಯೋ ಫೇಸ್ ಬ್ಯೂಟಿ, ಸೇರಿದಂತೆ ಅನೇಕ ಎಡಿಟಿಂಗ್ ಆಯ್ಕೆಗಳನ್ನು ನೀಡಿರುವುದು ವಿಶೇಷ.

ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದೆ. ಇದು 44W ಫಾಸ್ಟ್‌ ಚಾರ್ಜಿಂಗ್‌ ಅನ್ನು ಬೆಂಬಲಿಸುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ ಬೆಂಬಲ ಪಡೆದುಕೊಂಡಿದೆ. ಜೊತೆಗೆ ಬ್ಲೂಟೂತ್ 5.0, 4ಜಿ ಎಲ್ ಟಿಇ, ವೈ-ಫೈ, 5 ಎಂಎಂ ಹೆಡ್‌ಫೋನ್ ಜ್ಯಾಕ್ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಒಳಗೊಂಡಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ